ಈ ಟೂಲ್ ಮೂಲಕ ಫೇಸ್ ಬುಕ್ ಬಳಕೆದಾರರಿಗೆ ಇನ್ನಷ್ಟು ಗೌಪ್ಯತೆ ನೀಡಲು ಬಯಸುತ್ತದೆ

By Gizbot Bureau
|

ಕಳೆದ ವರ್ಷ ಮೇ ತಿಂಗಳಲ್ಲಿ ಅಂದರೆ ಅಂದಾಜು ಕೇಂಬ್ರಿಜ್ ಅನಲಿಟಿಕಾ ಸ್ಕ್ಯಾಂಡಲ್ ಹೊರಬಂದ ನಂತರ ಫೇಸ್ ಬುಕ್ ಸಿಇಏ ಮಾರ್ಕ್ ಜ್ಯೂಕ್ ಬರ್ಗ್ ತಮ್ಮ ಪರ್ಸನಲ್ ಪೋಸ್ಟ್ ಒಂದರಲ್ಲಿ ಹೀಗೆ ಬರೆದುಕೊಂಡಿದ್ದರು “ನಿಮ್ಮ ವೆಬ್ ಬ್ರೌಸರ್ ನಲ್ಲಿ ಕುಕ್ಕೀಸ್ ಮತ್ತು ಹಿಸ್ಟರಿಯನ್ನು ಕ್ಲಿಯರ್ ಮಾಡುವುದಕ್ಕೆ ಒಂದು ಸರಳ ಮಾರ್ಗವಿದೆ. ಹೆಚ್ಚಿನ ಸೈಟ್ ಗಳು ಕೆಲಸ ಮಾಡುವುದಕ್ಕೆ ಕುಕ್ಕೀಸ್ ಬೇಕಾಗುತ್ತದೆ ಆದರೆ ನಿಮಗೆ ಅಗತ್ಯವೆನಿಸಿದಾಗ ನಿಮ್ಮ ಹಿಸ್ಟರಿಯನ್ನು ಹೊರತೆಗೆದುಹಾಕುವುದಕ್ಕೆ ಸಾಧ್ಯವಿದೆ.

ಈ ಟೂಲ್ ಮೂಲಕ ಫೇಸ್ ಬುಕ್ ಬಳಕೆದಾರರಿಗೆ ಇನ್ನಷ್ಟು ಗೌಪ್ಯತೆ ನೀಡಲು ಬಯಸುತ್ತದೆ

ನಾವು ಈ ವರ್ಷನ್ ನ್ನು ಫೇಸ್ ಬುಕ್ ಗೂ ಕೂಡ ಡೆವಲಪ್ ಮಾಡಲಿದ್ದೇವೆ. ಸರಳವಾಗಿ ಫೇಸ್ ಬುಕ್ ನಲ್ಲಿ ಬ್ರೌಸಿಂಗ್ ಹಿಸ್ಟರಿಯನ್ನು ಕ್ಲಿಯರ್ ಮಾಡುವುದಕ್ಕೆ ಇದು ನೆರವಾಗುತ್ತದೆ. ಅಂದರೆ ನೀವೇನು ಕ್ಲಿಕ್ ಮಾಡಿದ್ದಿರೋ, ಯಾವ ವೆಬ್ ಸೈಟ್ ಗೆ ವಿಸಿಟ್ ಮಾಡಿದ್ದೀರೋ ಅಥವಾ ಇತ್ಯಾದಿ ವಿಚಾರಗಳನ್ನು ಕ್ಲಿಯರ್ ಮಾಡಬಹುದು” ಎಂದಿದ್ದರು.

ಕ್ಲಿಯರ್ ಹಿಸ್ಟರಿ ಫೀಚರ್:

ಕ್ಲಿಯರ್ ಹಿಸ್ಟರಿ ಫೀಚರ್:

ಇದು ಫೇಸ್ ಬುಕ್ ನಲ್ಲಿ ಅಂದರೆ ತಮ್ಮ ಸೋಷಿಯಲ್ ಮೀಡಿಯಾ ನೆಟ್ ವರ್ಕ್ ನಲ್ಲಿ ಬಳಕೆದಾರರು ತಮ್ಮ ಪ್ರೈವೆಸಿ ಕಾಪಾಡಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿತ್ತು. ಇದೀಗ ಅಂತಿಮವಾಗಿ ಫೇಸ್ ಬುಕ್ ಕ್ಲಿಯರ್ ಹಿಸ್ಟರಿ ಫೀಚರ್ ನ್ನು ಬಿಡುಗಡೆಗೊಳಿಸಿದೆ.

ಫೇಸ್ ಬುಕ್ ಆದಾಯಕ್ಕೆ ಪೆಟ್ಟು:

ಫೇಸ್ ಬುಕ್ ಆದಾಯಕ್ಕೆ ಪೆಟ್ಟು:

ಸಿಎನ್ ಬಿಸಿಯ ವರದಿಯ ಪ್ರಕಾರ ಫೇಸ್ ಬುಕ್ ನ ಫೈನಾನ್ಶಿಯಲ್ ಆಫೀಸರ್ ಡೆವಿನ್ ವಾಲ್ಹ್ನರ್ ಟೆಕ್ ಕಾನ್ಫರೆನ್ಸ್ ನಲ್ಲಿ ಇದನ್ನು ಪ್ರಕಟಿಸಿದ್ದಾರೆ. ಕ್ಲಿಯರ್ ಹಿಸ್ಟರಿ ಟೂಲ್ ಥರ್ಡ್ ಪಾರ್ಟಿ ಆಪ್ಸ್ ಗಳಿಂದ ಫೇಸ್ ಬುಕ್ ನಲ್ಲಿ ಕಲೆಕ್ಟ್ ಆಗುವ ಎಲ್ಲಾ ಮಾಹಿತಿಗಳನ್ನು ಕ್ಲಿಯರ್ ಮಾಡುವುದಕ್ಕೆ ಇದು ನೆರವು ನೀಡುತ್ತದೆ.ಆದರೆ ಖಂಡಿತವಾಗಲೂ ಇದು ಫೇಸ್ ಬುಕ್ ನ ಆದಾಯಕ್ಕೆ ಪೆಟ್ಟು ನೀಡುತ್ತದೆ.

ಗೌಪ್ಯತೆ ತಜ್ಞರ ಅಭಿಪ್ರಾಯ:

ಗೌಪ್ಯತೆ ತಜ್ಞರ ಅಭಿಪ್ರಾಯ:

ಕಳೆದ ವರ್ಷ ಜ್ಯೂಕ್ ಬರ್ಗ್ ಮಾಡಿರುವ ಪೋಸ್ಟ್ ನಲ್ಲಿ ಈ ಇದಕ್ಕಾಗಿ ಗೌಪ್ಯತೆ ತಜ್ಞರು ಬೇಕಾಗುತ್ತಾರೆ ಮತ್ತು ಇದು ನಾವು ಬಯಸುವ ಕಂಟ್ರೋಲ್ ನೀಡುವುದಕ್ಕೆ ಸಾಧ್ಯವಾಗುತ್ತದೆ. ನಾವು ಅವರೊಂದಿಗೆ ಕಾರ್ಯ ನಿರ್ವಹಿಸಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದರು.

ವರ್ಷಾಂತ್ಯದಲ್ಲಿ ಬಿಡುಗಡೆ:

ವರ್ಷಾಂತ್ಯದಲ್ಲಿ ಬಿಡುಗಡೆ:

ಸದ್ಯಕ್ಕೆ ಯಾವಾಗ ಈ ಕ್ಲಿಯರ್ ಹಿಸ್ಟರಿ ಟೂಲ್ ಎಲ್ಲರಿಗೂ ಲಭ್ಯವಾಗಲಿದೆ ಎಂಬುದು ತಿಳಿದಿಲ್ಲ. ಆದರೆ ಈ ವರ್ಷಾಂತ್ಯದ ಒಳಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಗೌಪ್ಯತೆ ತಂಡ ಏನನ್ನು ಬಯಸುತ್ತಿದೆ ಎಂಬುದರ ಬಗ್ಗೆ ಇನ್ನಷ್ಟು ಮಾಹಿತಿ ಸಿಗಬೇಕಿದೆ. ಈ ಟೂಲ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದು ತಿಳಿಯಬೇಕಾಗಿದೆ. ಯಾಕೆಂದರೆ ಫೇಸ್ ಬುಕ್ ನಲ್ಲಿ ಬಳಕೆದಾರರ ವಯಕ್ತಿಕ ಮಾಹಿತಿ ಸೋರಿಕೆಯಾಗುವ ವಿಚಾರ ದೊಡ್ಡ ಚರ್ಚೆಯಲ್ಲಿರುವ ಸಂಗತಿಯಾಗಿದೆ. ಹಾಗಿರುವಾಗ ನಿಜಕ್ಕೂ ಇದು ಗೌಪ್ಯತೆ ಕಾಪಾಡುತ್ತದೆಯೇ ಎಂಬುದು ಸದ್ಯಕ್ಕಿರುವ ಪ್ರಶ್ನೆಯಾಗಿದೆ.

Best Mobiles in India

English summary
Facebook wants to give users more privacy with this tool

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X