Subscribe to Gizbot

ಫೇಸ್ ಬುಕ್ ನಿಂದ ಆಯಾ ದೇಶಗಳಲ್ಲೇ ತೆರಿಗೆ ಪಾವತಿ

Written By: Lekhaka

ಜಾಗತೀಕವಾಗಿ ಸಾಕಷ್ಟು ಹೆಸರು ಮಾಡುತ್ತಿರುವ ಫೇಸ್ ಬುಕ್ ಹಣಕಾಸಿನ ಗಳಿಕೆಯಲ್ಲಿ ಮುಂದಿದೆ. ಇದೆ ಮಾದರಿಯಲ್ಲಿ ಫೇಸ್ ಬುಕ್ ತೆರಿಗೆಯನ್ನು ಕಟ್ಟುವ ವಿಚಾರದಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದೆ. ಈ ಹಿನ್ನಲೆಯಲ್ಲಿ ಇನ್ನು ಮುಂದೆ ಲೋಕಲ್ ನಲ್ಲೇ ತೆರಿಗೆಯನ್ನ ಕಟ್ಟಲಿದೆ. ಯಾವ ದೇಶದಲ್ಲಿ ಹೆಚ್ಚು ಗಳಿಸಲಿದೆಯೋ ಅಲ್ಲಿಯೇ ಅದರ ತೆರಿಗೆಯನ್ನು ಕಟ್ಟಲಿದೆ.

ಫೇಸ್ ಬುಕ್ ನಿಂದ ಆಯಾ ದೇಶಗಳಲ್ಲೇ ತೆರಿಗೆ ಪಾವತಿ

ಈಗಾಗಲೇ ತೆರಿಗೆ ವಿಚಾರವಾಗಿ ಫೇಸ್ ಬುಕ್ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ತನ್ನ ಜಾಹಿರಾತುಗಳಿಂದ ಸಂಗ್ರಹಿಸಿದ ಹಣದಲ್ಲಿ ಲಾಭದ ಪ್ರಮಾಣಕ್ಕೆ ಸರಿಯಾಗಿ ಆಯಾ ದೇಶಗಳಲ್ಲಿ ಇರುವ ತೆರಿಗೆಯನ್ನು ಪಾವತಿ ಮಾಡಿಕೊಂಡು ಹೋಗಲು ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ.

ವಿಶ್ವದ ಎಲ್ಲಾ ದೇಶಗಳಲ್ಲಿಯೂ ಫೇಸ್ ಬುಕ್ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದರಿಂದಾಗಿ ಎಲ್ಲಾ ಕಡೆಯಿಂದಲೂ ಆದಾಯವು ಹರಿದು ಬರುತ್ತಿದೆ. ಇದಕ್ಕಾಗಿ ಯಾವ ದೇಶದಲ್ಲಿ ಆದಾಯ ಬರುತ್ತಿದೆಯೋ ಅದಕ್ಕೇ ಅಲ್ಲಿಯೇ ಟ್ಯಾಕ್ಸ್ ಕಟ್ಟಿ ಯಾವುದೇ ತೊಂದರೆಯನ್ನು ಎದುರಿಸದೆ ನಿರಳವಾಗಿ ಇರಲು ಮುಂದಾಗಿದೆ.

ಪೇಟಿಎಂ ಮಾಲ್‌ನಲ್ಲಿ ಬೈಕ್‌ ಬುಕ್‌ ಮಾಡಿ: ಕ್ಯಾಷ್ ಬ್ಯಾಕ್‌ ಜೊತೆ ಮಾರುಕಟ್ಟೆಗಿಂತ ಅತೀ ಕಡಿಮೆ ಬೆಲೆ..!

ಫೇಸ್ ಬುಕ್ ತನ್ನ ಒಡೆತನದಲ್ಲಿ ಹಲವರು ಆಪ್ ಗಳನ್ನ ಒಳಗೊಂಡಿದ್ದು, ಇವುಗಳ ಸಹಾಯದಿಂದ ಅತೀ ಹೆಚ್ಚು ಆದಾಯವನ್ನು ಗಳಿಕೆ ಮಾಡುತ್ತಿದೆ. ಇದರಿಂದಾಗಿ ತೆರಿಗೆ ವಿಷಯದಲ್ಲಿ ಹೆಚ್ಚು –ಕಡಿಮೆಯಾದರೆ ಕಷ್ಟವಾಗಲಿದೆ ಇದರಿಂದಾಗಿ ತನ್ನ ತೆರಿಗೆ ಪಾಲಿಸಿಯನ್ನು ಪಾರದರ್ಶಕವಾಗಿ ಇಟ್ಟುಕೊಂಡಿದೆ.

ಇದಲ್ಲದೇ ವಾಟ್ಸ್ ಆಪ್ ಬಿಸ್ನೆಸ್ ಆಪ್ ಸಹ ಬಿಡುಗಡೆ ಮಾಡುತ್ತಿದ್ದು, ಇದರಿಂದ ಹೆಚ್ಚಿನ ಆದಾಯವನ್ನು ಗಳಿಸಲು ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಫೇಸ್ ಬುಕ್ ಟ್ಯಾಕ್ ಪಾವತಿ ಸದ್ಯ ಚರ್ಚೆಯ ವಿಷಯವಾಗಿದೆ.

English summary
Amid high government pressure, Facebook has announced it plans to move to a local selling structure in countries where it has an office.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot