ಸುಳ್ಳು ಸುದ್ದಿ ಹರಡುವ ಫೇಸ್ಬುಕ್ ಫೇಜ್ಗಳಿಗೆ ಆಗಲಿದೆ ಜಾಹೀರಾತು ಸೇವೆ ಬಂದ್!

ಫೇಸ್ಬುಕ್ ಫೇಜ್ಗಳಲ್ಲಿ ಸುಳ್ಳು ವದಂತಿಗಳ ಹರಡುವಿಕೆಯನ್ನು ತಡೆಗಟ್ಟಲು ಹೊಸ ಸುಧಾರಣೆಗಳನ್ನು ತರಲಾಗಿದೆ. ಸುಳ್ಳು ಸುದ್ದಿಯನ್ನು ಹರಡುವ ಫೇಸ್ಬುಕ್ ಪೇಜ್ಗಳು ಇನ್ನು ಮುಂದೆ ಪೇಸ್ಬುಕ್ ನ ಜಾಹೀರಾತು ಸೇವೆಯನ್ನು ಬಳಸಲು ಸಾಧ್ಯವಿರುವುದಿಲ್ಲ.

By Tejaswini P G
|

ಫೇಸ್ಬುಕ್ ತನ್ನ ಸಾಮಾಜಿಕ ಜಾಲತಾಣಕ್ಕೆ ಮತ್ತಷ್ಟು ಸುಧಾರಣೆಗಳನ್ನು ತರುತ್ತಿದೆ. ಸುಳ್ಳು ವದಂತಿಗಳನ್ನು ಹಬ್ಬಿಸುವುದನ್ನು ತಡೆಗಟ್ಟಲು ಫೇಸ್ಬುಕ್ ಈ ಪ್ರಯತ್ನ ಮಾಡುತ್ತಿದೆ. ಸತತವಾಗಿ ಸುಳ್ಳು ಸುದ್ದಿ ಹರಡುವ ಫೇಸ್ಬುಕ್ ಪೇಜ್ಗಳಿಗೆ ಜಾಹೀರಾತು ಸೇವೆಯನ್ನು ಫೇಸ್ಬುಕ್ ನಿಲ್ಲಿಸಲಿದೆ.

ಸುಳ್ಳು ಸುದ್ದಿ ಹರಡುವ ಫೇಸ್ಬುಕ್ ಫೇಜ್ಗಳಿಗೆ ಆಗಲಿದೆ ಜಾಹೀರಾತು ಸೇವೆ ಬಂದ್!

ಫೇಸ್ಬುಕ್ ತನ್ನ ಬ್ಲಾಗ್ ಪೋಸ್ಟ್ನಲ್ಲಿ ಹೀಗೆ ಹೇಳಿದೆ "ಫೇಸ್ಬುಕ್ ಪೇಜ್ಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿ ಹಣ ಸಂಪಾದಿಸುವವರಿಗೆ ಕಡಿವಾಣ ಹಾಕಲು ನಾವು ಪ್ರಯತ್ನಿಸುತ್ತಿದ್ದೇವೆ. ಈಗ ಬರುತ್ತಿರುವ ಹೊಸ ಸುಧಾರಣೆಯೊಂದಿಗೆ ಸುಳ್ಳು ಸುದ್ದಿಯ ಹರಡುವಿಕೆಯನ್ನು ನಿಯಂತ್ರಿಸಲಾಗುತ್ತದೆ. ಫೇಸ್ಬುಕ್ ಪೇಜ್ಗಳಲ್ಲಿ ಫೇಸ್ಬುಕ್ ಜಾಹೀರಾತುಗಳನ್ನು ಬಳಸಿ ಹಚ್ಚಿನ ಪ್ರೇಕ್ಷಕರನ್ನು ಸೆಳೆದು ಸುಳ್ಳು ವದಂತಿಗಳನ್ನು ಹೆಚ್ಚಿನ ಜನರಿಗೆ ಹರಡುವ ಹಲವಾರು ನಿದರ್ಶನಗಳು ನಮ್ಮ ಗಮನಕ್ಕೆ ಬಂದಿದೆ.ಸುಳ್ಳು ಸುದ್ದಿಗಳನ್ನು ಗುರುತಿಸಲು ಥರ್ಡ್ ಪಾರ್ಟಿ ಫ್ಯಾಕ್ಟ್-ಚೆಕರ್ಗಳನ್ನು ನೇಮಿಸಲಾಗಿದೆ. ಇವರು ಸುಳ್ಳು ಎಂದು ಗುರುತಿಸಿರುವ ಮಾಹಿತಿಯನ್ನು ನಿರಂತರವಾಗಿ ಹರಡುವ ಪೇಜ್ಗಳು ಇನ್ನು ಮುಂದೆ ಫೇಸ್ಬುಕ್ ಜಾಹೀರಾತುಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ."

ಇಂತಹ ಫೇಸ್ಬುಕ್ ಪೇಜ್ಗಳು ಸುಳ್ಳು ವದಂತಿಗಳನ್ನು ಹಬ್ಬುವುದನ್ನು ನಿಲ್ಲಿಸದರೆ ಮತ್ತೆ ಫೇಸ್ಬುಕ್ ಜಾಹೀರಾತುಗಳನ್ನು ಖರೀದಿಸಲು ಅರ್ಹರಾಗುತ್ತಾರೆ ಎಂದಿದೆ ಫೇಸ್ಬುಕ್. ಫೇಸ್ಬುಕ್ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿ ಮತ್ತು ಲೇಖನಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಹೊಣೆಯನ್ನು ಥರ್ಡ್ ಪಾರ್ಟಿ ಸಂಸ್ಥೆಗಳಿಗೆ ನೀಡಿದೆ. ಸುಳ್ಳು ಸುದ್ದಿಗಳನ್ನು ಗುರುತಿಸಿ ಅವುಗಳು ಸಾಮಾಜಿಕ ಜಾಲತಾಣದಲ್ಲಿ ಬರದಂತೆ ತಡೆಗಟ್ಟಲಾಗುತ್ತದೆ.

ಫೇಸ್ಬುಕ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿಗಳು ಹರಡುವುದನ್ನು ತಡೆಗಟ್ಟಲು 2016ರ ಯುಎಸ್ ನ ರಾಷ್ಟ್ರಪತಿ ಚುನಾವಣೆಯ ಸಮಯದಿಂದಲೂ ಕೆಲಸ ಮಾಡುತ್ತಿದೆ.

ಫೇಸ್ಬುಕ್ ಈಗ ಸುಳ್ಳು ಸುದ್ದಿ ಹರಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಫೇಸ್ಬುಕ್ ಅಕೌಂಟ್ಗಳನ್ನು ಗಮನಿಸುತ್ತಿರುತ್ತದೆ. ಅಲ್ಲದೆ ಯುಕೆನಲ್ಲಿ ಪ್ರಿಂಟ್ ಆಡ್ ಗಳನ್ನು ಪ್ರಕಟಿಸುವ ಮೂಲಕ ಸುಳ್ಳು ಸುದ್ದಿಯನ್ನು ಗುರುತಿಸುವ ಪ್ರಯತ್ನವನ್ನು ಕೂಡ ಫೇಸ್ಬುಕ್ ಮಾಡಿದೆ.ಫೇಸ್ಬುಕ್ ಈ ಕೆಳಗಿನ ಮೂರು ಮುಖ್ಯ ವಿಷಯಗಳ ಮೇಲೆ ಕೆಲಸಮಾಡಲಿದೆ ಎಂದು ತನ್ನ ಬ್ಲಾಗ್ ಪೋಸ್ಟ್ನಲ್ಲಿ ಹೇಳಿದೆ.

• ಸುಳ್ಳು ಸುದ್ದಿ ಸೃಷ್ಟಿಸುವವರಿಗೆ ಹಣಕಾಸಿಗೆ ಸಂಬಂಧಿಸಿದ ಪ್ರೋತ್ಸಾಹವನ್ನು ತಡೆಗಟ್ಟುವುದು.

• ಸುಳ್ಳು ಸುದ್ದಿಯ ಹರಡುವಿಕೆಯನ್ನು ತಡೆಗಟ್ಟಲು ಹೊಸ ಉತ್ಪನ್ನಗಳ ತಯಾರಿ

• ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಂಡಾಗ ಹೇಗೆ ಪ್ರತಿಕ್ರಯಿಸಬೇಕೆಂದು ಜನರಿಗೆ ನಿರ್ಧರಿಸಲು ಸಹಾಯ ಮಾಡುವುದು

ಮಾಲ್ವೇರ್ ದಾಳಿಯಿಂದ ನಿಮ್ಮ ಹೋಮ್ ನೆಟ್ ವರ್ಕ್ ಅನ್ನು ಸುಕ್ಷಿತವಾಗಿಸುವುದು ಹೇಗೆ?ಮಾಲ್ವೇರ್ ದಾಳಿಯಿಂದ ನಿಮ್ಮ ಹೋಮ್ ನೆಟ್ ವರ್ಕ್ ಅನ್ನು ಸುಕ್ಷಿತವಾಗಿಸುವುದು ಹೇಗೆ?

Best Mobiles in India

Read more about:
English summary
Facebook has announced today that it will stop pages from using advertisement service that spread false news.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X