Subscribe to Gizbot

ಫೇಸ್ ಬುಕ್ ನಿಂದ ಮತ್ತೊಂದು ಹೊಸ ಆಪ್ ಲಾಂಚ್

Written By: Lekhaka

ಫೇಸ್ ಬುಕ್ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಇದಕ್ಕಾಗಿ ಡೆಸ್ಕ್ ಟಾಪ್ ಆಪ್ ವೊಂದನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ವರ್ಕ್ ಪ್ಲೇಸ್ ಚಾಟ್ ಎಂದು ನಾಮಕರಣವನ್ನು ಮಾಡಿದೆ. ಈ ಆಪ್ ವಿಂಡೋಸ್ ಮತ್ತು ಮ್ಯಾಕ್ ಗಳಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ.

ಫೇಸ್ ಬುಕ್ ನಿಂದ ಮತ್ತೊಂದು ಹೊಸ ಆಪ್ ಲಾಂಚ್

ಈ ಆಪ್ ನಲ್ಲಿ ನೀವು ನಡೆಸಿದ ಚಾಟಿಂಗ್ ನಲ್ಲಿ ಟೆಕ್ಸ್ ಸರ್ಚ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ ಎನ್ನಲಾಗಿದೆ. ಇಲ್ಲಿ ವಿಡಿಯೋ, ಫೋಟೋ, ಎಮೋಜಿ, ಜಿಫ್ ಗಳನ್ನು ಶೇರ್ ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ವಿಂಡೋಸ್ 7 ಹಾಗೂ ಮ್ಯಾಕ್ 10.9ಗೂ ಸಹ ಇದು ಸಫೋರ್ಟ್ ಮಾಡಲಿದೆ.

ಇದು ಸ್ಲ್ಯಾಕ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇಲ್ಲಿ ಫೇಸ್ ಬುಕ್ ಗ್ರೂಪ್ ಮೆಂಬರ್ ಗಳೋಂದಿಗೆ ಚಾಟ್ ಮಾಡಲು ಜೊತೆಗೆ ಕೆಲಸವನ್ನು ಮಾಡಲು ಸಹಾಯ ಮಾಡಲಿದೆ. ಇದು ಪ್ರೋಫೇಷನಲ್ ಮತ್ತು ಪರ್ಸನಲ್ ಆಕೌಂಟ್ ಗಳನ್ನು ಬೇರೆ ಬೇರೆ ಮಾಡಲಿದೆ.

ಬೇರೆ ಚಾಟ್ ಆಪ್ ಮಾದರಿಯಲ್ಲಿಯೇ ನೋಟಿಫಿಕೆಷನ್ ಸಹ ಬರಲಿದೆ. ಅಲ್ಲದೇ ವಿಡಿಯೋ ಮತ್ತು ಆಡಿಯೋ ಕಾಲ್ ಮಾಡುವ ಅವಕಾಶವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ 360 ಡಿಗ್ರಿ ವಿಡಿಯೋವನ್ನು ಇದರಲ್ಲಿ ಮಾಡಬಹುದಾಗಿದೆ.

ದೀಪಾವಳಿ ಹಬ್ಬಕ್ಕೆ 'ಜಿಯೋ' ಭರ್ಜರಿ ಗಿಫ್ಟ್!..399ಕ್ಕೆ ಡಬಲ್ ಆಫರ್!!

ಈ ಆಪ್ ಸದ್ಯ ಉಚಿತವಾಗಿದ್ದು, ಆದರೆ ಪ್ರಿಮಿಯಮ್ ಆವೃತ್ತಿ ಬಳಕೆಗೆ ಹಣವನ್ನು ನೀಡಬೇಕಾಗಿದೆ. ಈಗಾಗಲೇ ಇದು ಬೀಟಾ ಆವೃತ್ತಿಯ ಬಳಕೆ ಶುರುವಾಗಿದ್ದು, ಶೀಘ್ರವೇ ಸಾಮಾನ್ಯ ಆವೃತ್ತಿಯೂ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಶೀಘ್ರವೇ ನಿಮ್ಮ ಕಚೇರಿಯಲ್ಲಿಯೂ ಫೇಸ್ ಬುಕ್ ಬಳಕೆ ಮಾಡಿಕೊಳ್ಳಬಹುದಾಗಿದೆ.

Read more about:
English summary
Facebook Workplace Chat desktop app has been launched for the Windows and Mac systems.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot