ಫೋನ್‌ನಿಂದ ಫೇಸ್‌ಬುಕ್ ಅಪ್ಲಿಕೇಶನ್ ಅಳಿಸಿ ಬ್ಯಾಟರಿ ಉಳಿಸಿ

By Shwetha
|

ನಿಮ್ಮ ಫೋನ್ ಅನ್ನು ಆಗಾಗ್ಗೆ ಚಾರ್ಜ್ ಮಾಡುವ ಸಂಕಷ್ಟ ನಿಮಗಿದೆಯೇ? ಆದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿ ಖಾಲಿಯಾಗುವುದರ ಕಾರಣವನ್ನು ನೀವು ಕಂಡುಹುಡುಕಿದರೆ ಇದಕ್ಕೆ ಕಾರಣ ನೀವು ಬಳಸುತ್ತಿರುವ ಅಪ್ಲಿಕೇಶನ್ ಆಗಿದೆ. ಅದೂ ನೀವು ಹೆಚ್ಚು ಬಳಸುತ್ತಿರುವ ಫೇಸ್‌ಬುಕ್ ಮತ್ತು ಇನ್ನಿತರ ಅಪ್ಲಿಕೇಶನ್ ಆಗಿದೆ ಎಂಬ ಸತ್ಯವನ್ನು ನೀವು ಕಂಡುಕೊಳ್ಳಲೇಬೇಕು.

ಫೇಸ್‌ಬುಕ್ ಅಪ್ಲಿಕೇಶನ್ ಮೊಬೈಲ್‌ನ ಹೆಚ್ಚು ಚಾರ್ಜ್ ಅನ್ನು ನುಂಗಲು ಕಾರಣವಾಗಿದ್ದು ನಿಮ್ಮ ಫೋನ್ ನಿಧಾನವಾಗುವುದಕ್ಕೆ ಇದೂ ಒಂದು ಕಾರಣವಾಗಿದೆ. ಫೇಸ್‌ಬುಕ್ ಅನ್ನು ಇನ್‌ಸ್ಟಾಲ್ ಮಾಡಿದಾಗ ಡಿವೈಸ್ 15% ನಿಧಾನವಾಗುತ್ತದೆ ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದೇವೆ.

#1

#1

ಫೇಸ್‌ಬುಕ್ ಅನ್ನು ಡಿವೈಸ್ ಬಳಕೆದಾರರು ಹೆಚ್ಚು ಬಳಸುತ್ತಿದ್ದು ಇದು ಬ್ಯಾಟರಿ ಸಮಸ್ಯೆಗೆ ಮುಖ್ಯ ಕಾರಣ ಎಂದೆನಿಸಿದೆ.

#2

#2

ಫೇಸ್‌ಬುಕ್ ಅನ್ನು ಇನ್‌ಸ್ಟಾಲ್ ಮಾಡಿದಾಗ ಫೋನ್ ಕಾರ್ಯಕ್ಷಮತೆ 15% ದಷ್ಟು ಕಡಿಮೆಯಾಗುತ್ತದೆ. ಅದೂ ಅಲ್ಲದೆ ಆಂಡ್ರಾಯ್ಡ್ ಡಿವೈಸ್ ಮೇಲೆ ಇದು ಪರಿಣಾಮ ಬೀರುವುದು ಹೆಚ್ಚು.

#3

#3

ಸ್ವಲ್ಪ ದಿನಗಳ ಹಿಂದೆಯಷ್ಟೇ, ಆಂಡ್ರಾಯ್ಡ್ ಸೆಂಟ್ರಲ್ ಬ್ಲಾಗರ್ ರುಸ್ಸೇಲ್ ಹಾಲಿ ಫೇಸ್‌ಬುಕ್ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಿದ ನಂತರ ತಮಗೆ ಒದಗಿ ಬಂದ ಪ್ರಯೋಜನಗಳೇನು ಎಂಬುದನ್ನು ತಿಳಿಸಿದ್ದಾರೆ.

#4

#4

ಅಂತೆಯೇ ಫೇಸ್‌ಬುಕ್ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡುವ ಪ್ರಕ್ರಿಯೆಯನ್ನು ಎಲ್‌ಜಿ ಜಿ4 ನಲ್ಲಿ ನಡೆಸಲಾಗಿದೆ.

#5

#5

ಈ ಪರೀಕ್ಷೆಯು ಹೇಗಿತ್ತೆಂದರೆ ಫೇಸ್‌ಬುಕ್ ಜೊತೆಗೆ ಮೆಸೆಂಜರ್ ಅಪ್ಲಿಕೇಶನ್ ಅಂತೆಯೇ ಕೆಲವೊಂದು ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಲಾಯಿತು. ನಂತರ ಪುನಃ ಹದಿನೈದು ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಲಾಯಿತು.

#6

#6

ಫೇಸ್‌ಬುಕ್ ಮತ್ತು ಮೆಸೆಂಜರ್ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಿದ ನಂತರ 15% ಸುಧಾರಣೆಯನ್ನು ಕಂಡುಕೊಳ್ಳಲಾಗಿದೆ.

#7

#7

ಹಾಗಿದ್ದರೆ ನಿಮ್ಮ ಫೋನ್‌ನಲ್ಲಿ ಫೇಸ್‌ಬುಕ್ ಮತ್ತು ಮೆಸೆಂಜರ್ ಅಪ್ಲಿಕೇಶನ್ ಯಾವ ರೀತಿಯ ಪರಿಣಾಮವನ್ನು ಉಂಟುಮಾಡಲಿವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

#8

#8

ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಉಳಿಸಬೇಕು ಎಂದಾದಲ್ಲಿ ಫೇಸ್‌ಬುಕ್ ಮತ್ತು ಮೆಸೆಂಜರ್ ಅಪ್ಲಿಕೇಶನ್‌ ಅನ್ನು ನೀವು ಅಳಿಸಲೇಬೇಕಾಗುತ್ತದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ? </a><br /><a href=ಫೇಸ್‌ಬುಕ್ ಅಜ್ಞಾತ ಸ್ನೇಹಿತ ಕೋರಿಕೆ ನೀವು ಅಪಾಯದಲ್ಲಿ ಖಂಡಿತ
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು " title="ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಫೇಸ್‌ಬುಕ್ ಅಜ್ಞಾತ ಸ್ನೇಹಿತ ಕೋರಿಕೆ ನೀವು ಅಪಾಯದಲ್ಲಿ ಖಂಡಿತ
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು " loading="lazy" width="100" height="56" />ಫೇಸ್‌ಬುಕ್‌ ಹ್ಯಾಕ್ ಆಗಿರುವುದನ್ನು ಕಂಡುಹಿಡಿಯುವುದು ಹೇಗೆ? ಸುರಕ್ಷತೆ ಹೇಗೆ?
ಫೇಸ್‌ಬುಕ್ ಅಜ್ಞಾತ ಸ್ನೇಹಿತ ಕೋರಿಕೆ ನೀವು ಅಪಾಯದಲ್ಲಿ ಖಂಡಿತ
ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್

ಇನ್ನಷ್ಟು ಲೇಖನಗಳಿಗಾಗಿ ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Facebook is the most power-hungry app and the major culprit behind your phone’s slow performance.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X