ಫೇಸ್‌ಬುಕ್, ವಾಟ್ಸ್‌ಆಪ್‌ಗೆ ಪರ್ಯಾಯ ಆಪ್ ಸೃಷ್ಟಿಸಿದ ಕನ್ನಡಿಗರು!..ವೈರಲ್ ಆಯ್ತು ಆಪ್!!

ಭಾರತದಲ್ಲಿನ ಮೊದಲ ಸಾಮಾಜಿಕ ನೆಟ್‌‌ವರ್ಕಿಂಗ್ ಮತ್ತು ಸಾಮಾಜಿಕ ಡಿಸ್ಕವರಿ ಆಪ್ ಇದು.!!

|

ಫೇಸ್‌ಬುಕ್ ಮತ್ತು ಟ್ವಿಟ್ಟರ್‌ ಮತ್ತು ವಾಟ್ಸ್‌ಆಪ್‌ಗಳನ್ನು ಎಲ್ಲರೂ ಬಳಸುವವರೇ ಆದರೆ, ಕೆಲವರು ಮಾತ್ರ ವಿಭಿನ್ನವಾಗಿ ಯೋಚಿಸುತ್ತಾರೆ.! ಇದಕ್ಕೆ ಉದಾಹರಣೆ ಸಾಮಾಜಿಕ ತಾಲಜಾಣಗಳಾದ ವಾಟ್ಸಪ್, ಟ್ವಿಟರ್ ಹಾಗೂ ಫೇಸ್‌ಬುಕ್‌ಗೆ ಪರ್ಯಾಯವಾದ 'ಅಮೇಝ್ವಿಂಗ್' ಎಂಬ ಕನ್ನಡಿಗರು ರೂಪಿಸಿರುವ ಹೊಸ ಆಪ್!!

ಹೌದು, ನೀವು ನಂಬಲೇಬೇಕು.!! ಧಾರವಾಡದ ಮೂವರು ಎಂಜಿನಿಯರ್‌‌ಗಳು ಸೇರಿ ಆಂಡ್ರಾಯ್ಡ್ ಫೋನ್‌ಗಳಿಗಾಗಿ ಒಂದೂವರೆ ವರ್ಷ ಶ್ರಮಿಸಿ 'ಅಮೇಝ್ವಿಂಗ್' ಎಂಬ ಹೊಸ ಆಪ್ ಅನ್ನು ಅಭಿವೃದ್ದಿಪಡಿಸಿದ್ದು, ಭಾರತದಲ್ಲಿನ ಮೊದಲ ಸಾಮಾಜಿಕ ನೆಟ್‌‌ವರ್ಕಿಂಗ್ ಮತ್ತು ಸಾಮಾಜಿಕ ಡಿಸ್ಕವರಿ ಆಪ್ ಇದು ಎಂದು ತಿಳಿಸಿದ್ದಾರೆ.!!

ವಿದೇಶಿ ಬೃಹತ್ ಕಂಪೆನಿಗಳಾದ ಫೇಸ್‌ಬುಕ್, ವಾಟ್ಸ್‌ಆಪ್‌ ಮತ್ತು ಟ್ವಿಟರರ್‌ಗಳಿಗೆಲ್ಲಾ ಪರ್ಯಾಯವಾಗಿ ಸ್ವದೇಶಿ ಸಾಮಾಜಿಕ ಜಾಲತಾಣವನ್ನು ರೂಪಿಸುವ ಚಲಹೊತ್ತಿದ್ದ ಯುವಕರು ಕಳೆದ ಒಂದೂವರೆ ವರ್ಷ ಈ ಆಪ್ ರೂಪಿಸಲು ಶ್ರಮಿಸಿದ್ದು, ಆಪ್ ಹೇಗೆ ಕಾರ್ಯನಿರ್ವಹಿಸಲಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಏನಿದು ''ಅಮೇಝ್ವಿಂಗ್' ಆಪ್?

ಏನಿದು ''ಅಮೇಝ್ವಿಂಗ್' ಆಪ್?

ಅಪ್ಲಿಕೇಶನ್ ಮಲ್ಟಿಲೆವೆಲ್ ಟ್ರೇಡಿಂಗ್ ಚಾರ್ಟ್‌ ವಿಶೇಷತೆ ಹೊಂದಿರುವ 'ಅಮೇಜಿಂಗ್ ಆಪ್ ಒಂದು ಸಾಮಾಜಿಕ ಜಾಲತಾಣ ಮತ್ತು ಅದಕ್ಕಿಂತಲೂ ಹೆಚ್ಚು ಫೀಚರ್ ಹೊಂದಿರುವ ಆಪ್‌ ಆಗಿದೆ. ಇದು ಫೇಸ್‌ಬುಕ್, ವಾಟ್ಸ್‌ಆಪ್‌ ಎಲ್ಲವನ್ನು ಸೇರಿದಂತೆ ರೂಪುಗೊಂಡಿದ್ದು, ಎಲ್ಲರನ್ನು ಅಚ್ಚರಿಗೆ ಕೆಡವಿದೆ.!!

'ಅಮೇಝ್ವಿಂಗ್' ಆಪ್ ಹುಟ್ಟಿಹಾಕಿದ್ದು ಯಾರು?

'ಅಮೇಝ್ವಿಂಗ್' ಆಪ್ ಹುಟ್ಟಿಹಾಕಿದ್ದು ಯಾರು?

ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಧಾರವಾಡ ಮೂಲದ ಶಾನವಾಝ್ ಶೇಖರ್, ಅಫ್ಹಲ್‍ಹುಸೇನ್ ಮತ್ತು ಬುರ್ಹನ್ ಅಹ್ಮದ್‌ ಎಂಬ ಮೂವರು ಯುವಕರು 10 ಲಕ್ಷ ರೂ.ಗೂ ಹೆಚ್ಚು ವೆಚ್ಚ ಮಾಡಿ ''ಅಮೇಝ್ವಿಂಗ್' ಆಪ್ ಹುಟ್ಟಿಹಾಕಿದ್ದಾರೆ. ಒಂದೇ ಆಪ್‌ನಲ್ಲಿ ಫೇಸ್‌ಬುಕ್, ವಾಟ್ಸ್‌ಆಪ್‌ ಸೇವೆಗಳನ್ನು ತರಲು ಒಂದೂವರೆ ವರ್ಷ ಶ್ರಮಿಸಿದ್ದಾರೆ.

ಹೇಗೆ ವರ್ಕ್ ಆಗುತ್ತೆ ''ಅಮೇಝ್ವಿಂಗ್' ಆಪ್?

ಹೇಗೆ ವರ್ಕ್ ಆಗುತ್ತೆ ''ಅಮೇಝ್ವಿಂಗ್' ಆಪ್?

ಫೇಸ್‌ಬುಕ್, ಟ್ವಿಟರ್‌ನಂತೆ ಚಿತ್ರ, ವಿಡಿಯೋ ಹಾಗೂ ಆಡಿಯೋ ಸಂದೇಶಗಳನ್ನು ಶೇರ್ ಮಾಡುವ ಹಾಗೂ ವಾಟ್ಸ್‌ಆಪ್‌ನಂತೆ ಚಾಟ್ ಮಡಬಹುದಾದ ಆಯ್ಕೆ ಈ ಆಪ್‌ನಲ್ಲಿದೆ ಎಂದು ಯುವಕರು ಹೇಳಿದ್ದಾರೆ. ಫೇಸ್‌ಬುಕ್ ಕಾರ್ಯನಿರ್ವಹಣೆಗಿಂತ ವಿಭಿನ್ನವಾದ ಸಾಮಾಜಿಕ ಜಾಲತಾಣ ಇದಾಗಿದೆ ಎಂದು ಆಪ್ ಹರಿಕಾರರು ಹೇಳಿದ್ದಾರೆ.!!

ಪ್ರಮುಖ ವೈಶಿಷ್ಟ್ಯ ಹೊಂದಿದೆ ಆಪ್!!

ಪ್ರಮುಖ ವೈಶಿಷ್ಟ್ಯ ಹೊಂದಿದೆ ಆಪ್!!

ಕೇವಲ ಸಾಮಾಜಿಕ ಜಾಲತಾಣ ಮಾತ್ರವಾಗದೇ ಸಾಮಾಜಿಕ ಬದ್ದತೆಗೂ 'ಅಮೇಜಿಂಗ್ ಆಪ್ ತಂಡ ಮುಂದಾಗಿದೆ.! ತುರ್ತು ಸಮಯದಲ್ಲಿ ಸಹಾಯ ಬೇಕಾದರೆ 10 ಕಿ.ಮೀ.ಒಳಗೆ ನಿಮ್ಮ ಇತರ ಅಪ್ಲಿಕೇಶನ್ ಬಳೆಕೆದಾರರಿಗೆ ಈ ಬಗ್ಗೆ ಮಾಹಿತಿ ನೀಡುತ್ತದೆ.! ಸಹಾಯ ಮಾಡುವವರಿಗೆ ಘನತೆ ಹೆಚ್ಚಿಸುವ ಕೆಲಸವನ್ನು ಈ ಆಪ್‌ ತಂಡ ಮಾಡಲಿದೆ.!!

ಬೇಗ ಡೌನ್‌ಲೋಡ್ ಮಾಡಿ.!!

ಬೇಗ ಡೌನ್‌ಲೋಡ್ ಮಾಡಿ.!!

ಕನ್ನಡಿಗರೇ ತಯಾರಿಸಿರುವ ಈ ಆಪ್ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಳಕೆದಾರರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಈ ಅಮೇಝ್ವಿಂಗ್ ಆಪ್‌ ಅನ್ನು ಡೌನ್‌ಲೋಡ್ ಮಾಡಿ, ನಮ್ಮದೇ ಸ್ವದೇಶಿ ಮತ್ತು ಹೆಚ್ಚಾಗಿ ಕನ್ನಡಿಗರ ಆಪ್ ಅನ್ನು ಬಳಸಿ.!!

Best Mobiles in India

English summary
amazwing.! the new social networking app developed by dharwad engineers!.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X