ಫೇಸ್‌ಬುಕ್‌ಗೆ ಸೆಡ್ಡು ಹೊಡೆಯಲು ಬಂದಿದೆ ಸ್ವದೇಶಿ ಜಾಲತಾಣ!!..ಯಾವುದು ಗೊತ್ತಾ?

ವಿದೇಶಿ ವಸ್ತುಗಳನ್ನು ನಾವು ನಿಷೇಧ ಮಾಡಬೇಕು ಎಂದು ಹೇಳುತ್ತೇವೆ. ಆದರೆ, ಸೂಕ್ತ ದೇಶಿಯ ಪರ್ಯಾಯಗಳಿಲ್ಲದ ಕಾರಣ ಬಹುತೇಕ ವಸ್ತುಗಳಿಗಾಗಿ ನಾವು ವಿದೇಶೀ ಕಂಪೆನಿಗಳನ್ನೇ ಅವಲಂಬಿಸಿದ್ದೇವೆ.

|

ವಿದೇಶಿ ವಸ್ತುಗಳನ್ನು ನಾವು ನಿಷೇಧ ಮಾಡಬೇಕು ಎಂದು ಹೇಳುತ್ತೇವೆ. ಆದರೆ, ಸೂಕ್ತ ದೇಶಿಯ ಪರ್ಯಾಯಗಳಿಲ್ಲದ ಕಾರಣ ಬಹುತೇಕ ವಸ್ತುಗಳಿಗಾಗಿ ನಾವು ವಿದೇಶೀ ಕಂಪೆನಿಗಳನ್ನೇ ಅವಲಂಬಿಸಿದ್ದೇವೆ. ಇದಕ್ಕೆ ಉದಾಹರಣೆ ಎಂದರೆ ಭಾರತವೊಂದರಲ್ಲೇ 30 ಕೋಟಿಗೂ ಅಧಿಕ ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್ !!

ಹೌದು, ಎಲ್ಲದರಲ್ಲಿಯೂ ಸ್ವದೇಶಿ ಕಲ್ಪನೆ ಹೊಂದಿರುವ ನಮಗೆ ಅತ್ಯುತ್ತಮ ತಂತ್ರಜ್ಞಾನ ಮತ್ತು ಮಾರುಕಟ್ಟೆ ಹಾಗೂ ಬಂಡವಾಳ ಕೊರತೆಯ ಅನಿವಾರ್ಯತೆಯಿಂದ ಫೇಸ್‌ಬುಕ್ ಬಳಕೆ ಮಾಡಲೇಬೇಕಾದ ಪರಿಸ್ಥಿತಿ ಇದೆ.! ಆದರೆ, ಇನ್ನು ಹಾಗಾಗುವುದಿಲ್ಲ.!! ಭಾರತೀಯರೋರ್ವರು ಫೆಸ್‌ಬುಕ್‌ಗೆ ಸೆಡ್ಡುಹೊಡೆಯಲು ಸ್ವದೇಶಿ ಸಾಮಾಜಿಕ ಜಾಲತಾಣವನ್ನು ರೂಪಿಸಿದ್ದಾರೆ.!!

ಸ್ವದೇಶೀ ಪ್ರಿಯರಿಗಾಗಿಯೇ "ಮೂಷಕ" ಎಂಬ ಹೊಸ ಸಾಮಾಜಿಕ ಜಾಲತಾಣ ಶುರುವಾಗಿದ್ದು, ಅನುರಾಗ್ ಗೌಡ ಎಂಬುವವರು ಹೊಸ ಸ್ವದೇಶಿ ಸಾಮಾಜಿಕ ಜಾಲತಾಣವನ್ನು ಹುಟ್ಟಿಹಾಕಿದ್ದಾರೆ.! ಹಾಗಾದರೆ, ಸ್ವದೇಶಿ ಸಾಮಾಜಿಕ ಜಾಲತಾಣ "ಮೂಷಕ" ಜಾಲತಾಣ ಹೇಗಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

'ಮೂಷಕ' ಹುಟ್ಟಿದ್ದು ಹೇಗೆ?

'ಮೂಷಕ' ಹುಟ್ಟಿದ್ದು ಹೇಗೆ?

ಸುಮಾರು ಎರಡು ವರ್ಷಗಳ ,ಸ್ವದೇಶೀ ಸೋಶಿಯಲ್ ಮೀಡಿಯಾ ನಿರ್ಮಿಸುವ ಬಗ್ಗೆ ಮೂಷಕದ CEO ಅನುರಾಗ್ ಗೌಡ ಪುಣೆಯ ಇಂದಿರಾ ಕಾಲೇಜ್ ವಿದ್ಯಾರ್ಥಿ ಪ್ರಾಚೀರ್ ಅವರನ್ನು ಪ್ರಸ್ತಾಪಿಸಿದ್ದಾರೆ. ನಂತರ ಇವರ ಜೊತೆಗೆ ಪುನೀತ್ ಶರ್ಮಾ ಎಂಬುವವರು ಸೇರಿಕೊಂಡು ಮೊದಲ ಸ್ವದೇಶಿ ಸೋಶಿಯಲ್ ಮೀಡಿಯಾ ಹುಟ್ಟಿಕೊಂಡಿದೆ.

ಫೇಸ್‌ಬುಕ್ VS ಮೂಷಕ

ಫೇಸ್‌ಬುಕ್ VS ಮೂಷಕ

ಸ್ವದೇಶಿ ಸೋಶಿಯಲ್ ಮೀಡಿಯಾ ಮೂಷಕದಲ್ಲಿ ನೀವು ಮಾಡುವ ಪೋಸ್ಟ್ ಗಳನ್ನು 'ಮೂಷ' ಎನ್ನಲಾಗುತ್ತದೆ. ಇತರರ ಮೂಷಗಳನ್ನು ಲೈಕ್ ಮಾಡಬಹುದು ಮತ್ತು ಪುನರ್ಮೂಷಿಸಬಹುದು.!! ಇಲ್ಲಿ ಹ್ಯಾಶ್‍ಟ್ಯಾಗ್‍ಗಳನ್ನು 'ಮೂಶಬ್ದ' ಎಂದು ಕರೆಯಲಾಗುತ್ತದೆ. ವೆರಿಫೈಡ್ (ಪರಿಶೀಲಿತ) ಪ್ರೊಫೈಲ್ ಸೌಲಭ್ಯ ಕೂಡ ಇದೆ.!!

ಮೊಬೈಲ್ ನಂಬರ್ ಕಡ್ಡಾಯ!!

ಮೊಬೈಲ್ ನಂಬರ್ ಕಡ್ಡಾಯ!!

ಮೂಷಕದ ಖಾತೆ ತೆರೆಯಲು ಮೊಬೈಲ್ ನಂಬರ್ ಕಡ್ಡಾಯವಾಗಿದೆ. ನಕಲಿ ಪ್ರೊಫೈಲುಗಳ ಹಾವಳಿ ಕಡಿಮೆ ಮಾಡಲು ಮೂಷಕವು ಮೊಬೈಲ್‌ ನಂಬರ್‌ಗನ್ನು ವೆರಿಫೈ ಮಾಡಿ ಅಕೌಂಟ್ಸ್ ತೆರೆಯಲು ಬಿಡುತ್ತದೆ. ಹಾಗಾಗಿ, ಮೂಷಕದಲ್ಲಿ ನಕಲಿ ಪ್ರೊಫೈಲುಗಳ ಹಾವಳಿ ಕಡಿಮೆ ಎನ್ನಬಹುದು.

ಪರೀಕ್ಷೆ (ಬೀಟಾ) ಹಂತದಲ್ಲಿದೆ ಮೂಷಕ!!

ಪರೀಕ್ಷೆ (ಬೀಟಾ) ಹಂತದಲ್ಲಿದೆ ಮೂಷಕ!!

ಮೊದಲ ಸ್ವದೇಶಿ ಸೋಶಿಯಲ್ ಮೀಡಿಯಾ ಈಗಿನ್ನು ಪರೀಕ್ಷಾ ಹಂತದಲ್ಲಿದ್ದು, ಹೆಚ್ಚು ಹೆಚ್ಚು ಅಭಿವೃದ್ದಿಯಾಗುತ್ತಿದೆ.ಹಾಗಾಗಿ, ಸ್ಥಿರವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ. ಟ್ವಿಟರ್‍ನಂತೆ ಇತರರನ್ನು ಹಿಂಬಾಲಿವಂತೆ ಇಲ್ಲಿಯೂ ಕೂಡ ಇತರರನ್ನು ಹಿಂಬಾಲಿಸಬಹುದಾಗಿದೆ.

Facebook !! ಕೆಲವೊಂದು ಸಿಂಪಲ್ ಫೇಸ್‌ಬುಕ್ ಟ್ರಿಕ್ಸ್....ಜಸ್ಟ್ ಸಿಂಪಲ್!!
ಮೂಷಕದ ಭಾಷೆ!!

ಮೂಷಕದ ಭಾಷೆ!!

ಆರಂಭಿಕ ಹಂತದಲ್ಲಿ ಮೂಷಕವನ್ನು ಹಿಂದಿ ಭಾಷೆಯಲ್ಲಿ ಆರಂಭಿಸಲಾಗಿದ್ದು, ಸದ್ಯದಲ್ಲೇ ಕನ್ನಡ ಸೇರಿದಂತೆ ಭಾರತದ ಬಹುತೇಕ ಭಾಷೆಗಳನ್ನು ಮೂಷಕದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮೂಷಕದ ಸಿಇಒ ಅನುರಾಗ್ ಗೌಡ ಟ್ವಿಟ್ ಮಾಡಿದ್ದಾರೆ,

Best Mobiles in India

English summary
networking site 'Mooshak' envisaged on the lines of popular English social media platform.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X