ಜಾಲತಾಣಗಳ ಸಮಸ್ಯೆಗೆ ಸಿಲುಕಿರುವವರು ಯುವಕರೋ ಅಥವಾ ಯುವತಿಯರೋ?..ಇಲ್ಲಿದೆ ಉತ್ತರ!!

|

ಇಂದಿನ ಹದಿಹರೆಯದ ಯುವಕ, ಯುವತಿಯರು ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿರುವುದು ನಿಮಗೀಗಾಲೇ ತಿಳಿಸಿದೆ. ಆದರೆ, ಈ ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಯುವಕರು ಹೆಚ್ಚು ಒಳಗಾಗಿದ್ದಾರೋ ಅಥವಾ ಯುವತಿಯರು ಹೆಚ್ಚು ಒಳಗಾಗಿದ್ದರೋ ಎಂಬುದು ಒಂದು ಸಣ್ಣ ಕುತೋಹಲದ ಪ್ರಶ್ನೆ ಇದೆ. ವಿಶೇಷವೆಂದರೆ ಅದಕ್ಕೀಗ ಒಂದು ಉತ್ತರ ಸಿಕ್ಕಿದೆ.

ಹೌದು, ಸೋಷಿಯಲ್ ಮೀಡಿಯಾಗಳು ಹುಡುಗರಿಗಿಂತ ಹುಡುಗಿಯರ ಮೇಲೆ ಹೆಚ್ಚ ಪ್ರಭಾವ ಬೀರುತ್ತಿದೆ ಎಂದು ಇ ಕ್ಲಿನಿಕಲ್​ ಮೆಡಿಸಿನ್​ ಜರ್ನಲ್​​ ಇತ್ತೀಚಿನ ಅಧ್ಯಯನವೊಂದು ಪ್ರಕಟಿಸಿದೆ. ಜಾಲತಾಣಗಳು ಹುಡುಗಿಯರ ಮೇಲೆಯೇ ಹೆಚ್ಚು ಪರಿಣಾಮ ಬೀರುತ್ತಿದೆ ಎಂದು ಲಂಡನ್​ ಯೂನಿವರ್ಸಿಟಿ ಕಾಲೇಜು ನಡೆಸಿದ ಅಧ್ಯಯನವನ್ನು ಇ-ಕ್ಲಿನಿಕಲ್ ಜರ್ನಲ್​ ಬಹಿರಂಗ ಪಡಿಸಿದೆ.

ಜಾಲತಾಣಗಳ ಸಮಸ್ಯೆಗೆ ಸಿಲುಕಿರುವವರು ಯುವಕರೋ ಅಥವಾ ಯುವತಿಯರೋ?..ಇಲ್ಲಿದೆ ಉತ್ತರ!!

ಈ ಅಧ್ಯಯನದ ವರದಿಯಲ್ಲಿ ತಿಳಿಸಿರುವಂತೆ, ಸಾಮಾಜಿಕ ಜಾಲತಾಣಗಳನ್ನು ಹದಿಹರೆಯದ ಹುಡುಗಿಯರು ಐದು ಗಂಟೆಗೂ ಅಧಿಕ ಸಮಯದವರೆಗೂ ಬಳಸುತ್ತಿದ್ದರೆ, ಹುಡುಗರು ಮೂರು ಗಂಟೆಗಳ ಕಾಲ ಜಾಲತಾಣಗಳಲ್ಲಿ ಮಗ್ನರಾಗಿರುತ್ತಾರೆ. ಜೊತೆಗ ಸ್ನೇಹಿತರನ್ನು ಪರಸ್ಪರ ಸಂಪರ್ಕಿಸಲು, ಅತಿಯಾದ ಫೋಟೋ ಮತ್ತು ಸೆಲ್ಫೀ ಹುಚ್ಚು ಹುಡುಗಿಯರಿಗೆ ಹೆಚ್ಚು ಎಂದು ಹೇಳಿದೆ.

ಇನ್ನು ಜಾಲತಾಣಗಳ ಹೆಚ್ಚು ಬಳಕೆಯಿಂದಾಗಿ 14 ವರ್ಷ ಒಳಗಿನ ವಯೋಮಾನದವರಲ್ಲಿ ಕಂಡುಬರುವ ಖಿನ್ನತೆ ನಡುವೆ ಸಂಬಂಧವಿದೆ ಎಂದು ಮತ್ತೆ ಸಾಬೀತಾಗಿದೆ. ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಹದಿಹರೆಯದವರ ಖಿನ್ನತೆಯ ಪ್ರಮಾಣ ಹೆಚ್ಚುತ್ತಿದ್ದು, ಇದರಲ್ಲಿ ಯುವತಿಯರ ಪಾಲು ಶೇ 50ರಷ್ಟು ಇದ್ದರೆ, ಯುವಕರ ಪ್ರಮಾಣ ಶೇ 35ರಷ್ಟಿದೆ ಎಂದು ಅಧ್ಯಯನ ತಿಳಿಸಿದೆ.

ಜಾಲತಾಣಗಳ ಸಮಸ್ಯೆಗೆ ಸಿಲುಕಿರುವವರು ಯುವಕರೋ ಅಥವಾ ಯುವತಿಯರೋ?..ಇಲ್ಲಿದೆ ಉತ್ತರ!!

ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿರುವ ಖಿನ್ನತೆಯ ಪ್ರಮಾಣ ಹೆಚ್ಚುತ್ತಿದ್ದು, ಇದರಲ್ಲಿ ಯುವತಿಯರ ಪಾಲು ಶೇ 50ರಷ್ಟು ಇದ್ದರೆ, ಯುವಕರ ಪ್ರಮಾಣ ಶೇ 35ರಷ್ಟಿದೆ. ಇದರಿಂದ ಅತೃಪ್ತಿಯ ಮನೋಭಾವ, ಚಡಪಡಿಕೆ, ಒಂಟಿತನ, ನಿದ್ರೆಯ ಕೊರತೆ ಹಾಗೂ ಸೈಬರ್ ಬೆದರಿಕೆಗೆ ಒಳಗಾಗುತ್ತಿದ್ದಾರೆ ಎಂಬುದು ಜರ್ನಲ್​ನಲ್ಲಿ ಉಲ್ಲೇಖಗೊಂಡಿದೆ.

Most Read Articles
Best Mobiles in India

English summary
Link Between Social Media And Depression Stronger In Teen Girls Than Boys, Study Says. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X