ಸೋಷಿಯಲ್ ಮೀಡಿಯಾದಿಂದ 'ಮೆಂಟಲ್' ಆಗುತ್ತಿದ್ದಾರೆ ಹುಡುಗಿಯರು!

|

ಹೆಚ್ಚು ಸೋಷಿಯಲ್ ಮೀಡಿಯಾ ಬಳಕೆಯಿಂದ ಹದಿಹರೆಯದ ಯುವತಿಯರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಇತ್ತೀಚಿನ ಅಧ್ಯಯನ ಸಂಶೋಧನೆಯೊಂದು ತಿಳಿಸಿದೆ. ಬಾಲಕರು ಮತ್ತು ಕಿಶೋರರೂ ಸಹ ಸೋಷಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸುತ್ತಾರೆಯಾದರೂ, ಅವರಲ್ಲಿ ಈ ದುಷ್ಪರಿಣಾಮ ಹುಡುಗಿಯರಿಗೆ ಹೋಲಿಸಿದರೆ ಕಡಿಮೆ ಇದೆ ಎಂಬ ಅಂಶವನ್ನು ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೋಷಿಯಲ್ ಮೀಡಿಯಾದಿಂದ 'ಮೆಂಟಲ್' ಆಗುತ್ತಿದ್ದಾರೆ ಹುಡುಗಿಯರು!

ಹೌದು, ಸಾಮಾನ್ಯವಾಗಿ ಬಾಲಕರು ಮತ್ತು ತರುಣರಿಗಿಂತ ಬಾಲಕಿಯರು ಮತ್ತು ಕಿಶೋರಿಯರೇ ಹೆಚ್ಚಾಗಿ ಸೋಷಿಯಲ್ ಮೀಡಿಯಾವನ್ನು ಬಳಸುತ್ತಾರೆ. ಆತಂಕಕಾರಿ ಸಂಗತಿ ಎಂದರೆ, ಅತಿಯಾದ ಸ್ಮಾರ್ಟ್ ಫೋನ್ ಮತ್ತು ಸೋಷಿಯಲ್ ಮೀಡಿಯಾಗೆ ಹೆಚ್ಚಾಗಿ ಅಂಟಿಕೊಂಡಿರುವ ಹುಡುಗಿಯರಲ್ಲಿ ಮೂರು ಪ್ರಮುಖ ಅಂಶಗಳಿಂದ ಹಾನಿಕಾರಕ ಪರಿಣಾಮಗಳಾಗುತ್ತವೆ ಎಂದು ಲಾನ್ಸೆಟ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವೊಂದು ವಿವರಿಸಿದೆ.

ಈ ಸಂಬಂಧ ಲಂಡನ್ ಯೂನಿವರ್ಸಿಟಿ ಕಾಲೇಜಿನ ಸಂಶೋಧಕರು ಇಂಗ್ಲೆಂಡ್‍ನಲ್ಲಿ ಸುಮಾರು 13,000 ಹದಿಹರೆಯದವರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಸೌಖ್ಯತೆ, ನಿದ್ರಿಸುವ ಅವಧಿ, ದೈಹಿಕ ಚಟುವಟಿಕೆ ಮತ್ತು ಸೈಬಲ್ ಬುಲ್ಲಿಂಗ್ ಈ ಅಂಶಗಳ ಬಗ್ಗೆ ಅಪ್ರಾಪ್ತರು ಮತ್ತು ಹದಿಹರೆಯದವರಿಂದ ವಿವರ ಪಡೆಯಲಾಗಿದೆ. ಹಾಗಾದರೆ, ಸೋಷಿಯಲ್ ಮೀಡಿಯಾ ಬಳಕೆಯಿಂದ ಹದಿಹರೆಯದ ಯುವಕ ಯುವತಿಯರ ಮೇಲಾಗುತ್ತಿರುವ ಪರಿಣಾಮಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಏನಿದು ಸಂಶೋಧನೆ?

ಏನಿದು ಸಂಶೋಧನೆ?

13 ರಿಂದ 16 ವರ್ಷ ವಯಸ್ಸಿನ ಸುಮಾರು 13,000 ಹದಿಹರೆಯದವರನ್ನು ಅತಿಹೆಚ್ಚು ಸೋಷಿಯಲ್ ಮೀಡಿಯಾ ಬಳಸುವ ಪರಿಣಾಮಗಳ ಬಗ್ಗೆ ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಸಮೀಕ್ಷೆಯಿಂದ ತಿಳಿದುಬಂದ ಸಂಗತಿ ಏನೆಂದರೆ ಅತಿಹೆಚ್ಚು ಸೋಷಿಯಲ್ ಮೀಡಿಯಾ ಬಳಸುವ ಅಪ್ರಾಪ್ತರು/ಹದಿಹರೆಯದವರಲ್ಲಿ ಶೇ.27ರಷ್ಟು ಬಾಲೆಯರು ಅಧಿಕ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ. ತರುಣಿಯರು ನಿದ್ರಾಹೀನತೆ, ಅಸಮರ್ಪಕ ದೈಹಿಕ ಚಟುವಟಿಕೆ ಮತ್ತು ಸೈಬಲ್ ಬುಲ್ಲಿಂಗ್ ನಂತಹ ಮೂರು ಸಮಸ್ಯೆಗಳಿಗೆ ಒಳಗಾಗುತ್ತಾರೆ.

 ದೈಹಿಕ ಸಕ್ರಿಯತೆ ಕುಂಠಿತ

ದೈಹಿಕ ಸಕ್ರಿಯತೆ ಕುಂಠಿತ

ಬಾಲ್ಯ ಮತ್ತು ಹದಿಹರೆಯದಲ್ಲಿ ಕ್ರೀಟಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬಹುದಾದ ಬಾಲಕಿಯರು ಮತ್ತು ಕಿಶೋರಿಯರು ಆ ಸಮಯವನ್ನು ಸೋಷಿಯಲ್ ಮೀಡಿಯಾದಲ್ಲಿ ಮನರಂಜನೆಗಾಗಿ ವಿನಿಯೋಗಿಸುತ್ತಾರೆ. ಇದರಿಂದ ಅವರ ದೈಹಿಕ ಸಕ್ರಿಯತೆ ಕುಂಠಿತಗೊಂಡು ಜಡತ್ವ ಉಂಟಾಗುತ್ತದೆ. ಇದು ಕೂಡ ಭವಿಷ್ಯದಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಅವರು ವೈದ್ಯಕೀಯ ಬಾತ್ಮೀದಾರೆ ಡಾ. ಜೆನ್ನಿಫರ್ ಆಶ್ಟೋನ್ ಅವರು ಆತಂಕ ವ್ಯಕ್ತಪಡಿಸಿದ್ಧಾರೆ.

ಸೈಬರ್ ಬೆದರಿಕೆಗೆ ಒಳಗಾಗುತ್ತಾರೆ.

ಸೈಬರ್ ಬೆದರಿಕೆಗೆ ಒಳಗಾಗುತ್ತಾರೆ.

ಬಾಲಕಿಯರು ಮತ್ತು ಅಗಷ್ಟೇ ಯೌವ್ವನದ ಹೊಸ್ತಿಲಲ್ಲಿ ಇರುವವರ ಮತ್ತೊಂದು ಮುಖ್ಯ ಸಮಸ್ಯೆ ಎಂದರೆ, ಸಾಮಾಜಿಕ ಜಾಲತಾಣದ ಅವ್ಯಾಹತ ಬಳಕೆಯಿಂದ ತಮಗೆ ಅರಿವಿಲ್ಲದಂತೆ ಸೈಬರ್ ಬೆದರಿಕೆಗೆ ಒಳಗಾಗುತ್ತಾರೆ.ಇಂಥ ಸನ್ನಿವೇಶವನ್ನು ದುರುಪಯೋಗ ಮಾಡಿಕೊಳ್ಳಲು ಕಾಯುತ್ತಿರುವ ಸಮಯ ಸಾಧಕರು ಮುಗ್ಧ ಬಾಲಕಿಯನ್ನು ತಮ್ಮ ದುಷ್ಟ ಜಾಲದಲ್ಲಿ ಬೀಳಿಸಿಕೊಳ್ಳುತ್ತಾರೆ. ಅವರಿಗೆ ಬ್ಲಾಕ್‌ ಮೇಲ್ ರೀತಿಯ ಬೆದರಿಕೆ ಹಾಕಿ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಅಪಾಯವೂ ಹೆಚ್ಚು ಎಂಬ ಆಘಾತಕಾರಿ ಸಂಗತಿಯೂ ಈ ಅಧ್ಯಯನ ವರದಿಯಲ್ಲಿದೆ.

 ಡಿಜಿಟಲ್ ವ್ಯಸನ ಆತಂಕಕಾರಿ!

ಡಿಜಿಟಲ್ ವ್ಯಸನ ಆತಂಕಕಾರಿ!

ಡಿಜಿಟಲ್ ತಂತ್ರಜಾನದಿಂದ ಕಮ್ಯೂನಿಕೇಷನ್‍ನಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಕಂಡುಬಂದಿದೆ. ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ಇಂದಿನ ಅತ್ಯಾಧುನಿಕ ಯುಗದಲ್ಲಿ ಜಾಲತಾಣಗಳು ಹೆಚ್ಚುತ್ತಿವೆ. ಸಂವಹನ ಮತ್ತು ಸಂಪರ್ಕ ಅತಿ ಮುಖ್ಯವಾಗಿರುವ ಸೋಷಿಯಲ್ ಮೀಡಿಯಾ ಇಲ್ಲದ ಇಂದಿನ ಬದುಕನ್ನು ಊಹಿಸಿಕೊಳ್ಳುವುದೂ ಕೂಡ ಕಷ್ಟ. ಆದರೆ ಇದರಿಂದ ಒಳಿತಿನಷ್ಟೇ ಕೆಡುಕು ಸಹ ಇದೆ. ಡಿಜಿಟಲ್ ವ್ಯಸನದಿಂದ ಹದಿಹರೆಯದವರನ್ನು ಪಾರು ಮಾಡಲು ಪ್ರಯತ್ನಗಳು ವಿಫಲವಾಗುತ್ತಿರುವುದು ಆತಂಕಕಾರಿಯಾಗಿದೆ.

Best Mobiles in India

English summary
The study found that 27% of the teens who were frequent users of social media reported high psychological stress. Among the teens who were infrequent users, only 17% reported high psychological stress. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X