ಇನ್​​​ಸ್ಟಾಗ್ರಾಂನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಈತ ಯಾರು ಗೊತ್ತೇ?

|

ಪ್ರಖ್ಯಾತ ಚಿತ್ರ ಜಾಲತಾಣ ಇನ್​​​ಸ್ಟಾಗ್ರಾಂನಲ್ಲಿ ಕೊರಿಯನ್​​-ಪಾಪ್​ ಸ್ಟಾರ್​ ಕಾಂಗ್​ ಡೇನಿಯಲ್ ಅವರು ಹೊಸದೊಂದು ವಿಶ್ವ ದಾಖಲೆ ಬರೆದಿದ್ದಾರೆ. ಇನ್​​​ಸ್ಟಾಗ್ರಾಂ ಖಾತೆ ತೆರೆದ ಕಾಂಗ್ ಡೇನಿಯಲ್​​​​​​ ಅವರು ಕೆಲವೇ ಗಂಟೆಗಳಲ್ಲಿ 10 ಲಕ್ಷ ಫಾಲೋವರ್ಸ್​​ ಪಡೆದು, ಅತೀ ಕಡಿಮೆ ಅವಧಿಯಲ್ಲಿ 10 ಲಕ್ಷ ಇನ್​​ಸ್ಟಾಗ್ರಾಂ ​ಫಾಲೋವರ್ಸ್​ ಪಡೆದ ಸೆಲೆಬ್ರಿಟಿ ಎಂಬ ಖ್ಯಾತಿ ಪಡೆದಿದ್ದಾರೆ.

ಹೌದು, ಹೊಸ ವರ್ಷದ ದಿನವಷ್ಟೇ ಹೊಸದಾಗಿ ಇನ್​​​ಸ್ಟಾಗ್ರಾಂ ಖಾತೆ ತೆರೆದ ಡೇನಿಯಲ್​​​​​​ ಕೆಲವೇ ಗಂಟೆಗಳಲ್ಲಿ 10 ಲಕ್ಷ ಫಾಲೋವರ್ಸ್​​ ಪಡೆದು ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಮೂಲಕ ಕೇವಲ 12 ಗಂಟೆಗಳಲ್ಲಿ 10 ಲಕ್ಷ ಫಾಲೋವರ್​​ಗಳನ್ನ ಪಡೆದಿದ್ದ​ ಪೋಪ್​ ಫ್ರಾನ್ಸಿಸ್​ ಅವರ ದಾಖಲೆಯನ್ನು ಕಾಂಗ್​ ಡೇನಿಯಲ್ ಅವರು ಅಳಿಸಿಹಾಕಿದ್ದಾರೆ.

ಇನ್​​​ಸ್ಟಾಗ್ರಾಂನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಈತ ಯಾರು ಗೊತ್ತೇ?

2016ರಲ್ಲಿ ಪೋಪ್​​ ಫ್ರಾನ್ಸಿಸ್​​ ಅವರ ಹೆಸರಿನ ಖಾತೆ​​​ ಕೇವಲ 12 ಗಂಟೆಗಳಲ್ಲಿ 10 ಲಕ್ಷ ಫಾಲೋವರ್​​ಗಳನ್ನ ಪಡೆದಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಆದರೆ, ಈಗ ​​ಪಾಪ್​ ಸ್ಟಾರ್ ಡೇನಿಯಲ್​ ಪೋಪ್​ ಫ್ರಾನ್ಸಿಸ್​ ಅವರು ಇನ್​​​ಸ್ಟಾಗ್ರಾಂ ಖಾತೆ ತೆರೆದ ಕೇವಲ 11 ಗಂಟೆ 36 ನಿಮಿಷಗಳಲ್ಲಿ 10 ಲಕ್ಷ ಇನ್​​ಸ್ಟಾಗ್ರಾಂ ​ಫಾಲೋವರ್ಸ್​ ಪಡೆದು ಹೊಸ ವಿಶ್ವ ದಾಖಲೆ ಬರೆದಿದ್ದಾರೆ.

22 ವರ್ಷದ ಕೊರಿಯನ್​​-ಪಾಪ್​ ಸ್ಟಾರ್​ ಕಾಂಗ್ ಡೇನಿಯಲ್​​ ಜನವರಿ 1ರಂದು ರಾತ್ರಿ 10 ಗಂಟೆಗೆ ಸೆಲ್ಫಿಯೊಂದನ್ನು ಪೋಸ್ಟ್​ ಮಾಡಿ ಹೆಲೋ ಎಂದು ಬರೆದಿದ್ದರು. ಜನವರಿ 2ರಂದು ಬೆಳಗ್ಗೆ 9.36ರ ವೇಳೆಗೆ ಡೇನಿಯಲ್ ಅವ​​​ರನ್ನು 10 ಲಕ್ಷ ಜನ ಫಾಲೋ ಮಾಡಿದ್ದಾಗಿ ತಿಳಿದುಬಂದಿದೆ. ಅಂದರೆ ಕೇವಲ 11 ಗಂಟೆ 36 ನಿಮಿಷಗಳಲ್ಲಿ ಡೇನಿಯಲ್​​​ 10 ಲಕ್ಷ ಫಾಲೋವರ್ಸ್​ ಪಡೆದಿದ್ದಾರೆ.

ಇನ್​​​ಸ್ಟಾಗ್ರಾಂನಲ್ಲಿ ವಿಶ್ವ ದಾಖಲೆ ಸೃಷ್ಟಿಸಿದ ಈತ ಯಾರು ಗೊತ್ತೇ?

ದಕ್ಷಿಣ ಕೊರಿಯಾದ ಟ್ಯಾಲೆಂಟ್​ ಶೋ ಪ್ರೊಡ್ಯೂಸ್​ 101 ಮೂಲಕ ಬೆಳಕಿಗೆ ಬಂದ 'Wanna One' ಎಂಬ 11 ಜನರ ಬ್ಯಾಂಡ್​​ನಲ್ಲಿದ್ದ ಕಾಂಗ್​ ಡೇನಿಯಲ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು​​ ಜನಪ್ರಿಯತೆ ಗಳಿಸಿದ್ದರು. ಇನ್​ಸ್ಟಾಗ್ರಾಂನಲ್ಲಿ ಈವರೆಗೆ ಡೇನಿಯಲ್​​ ಹಲವಾರು ಸೆಲ್ಫಿ ಹಾಗೂ ತನ್ನ ಬೆಕ್ಕಿನ ವಿಡಿಯೋಗಳನ್ನ ಹಂಚಿಕೊಂಡಿದ್ದು, ಲಕ್ಷಾಂತರ ಲೈಕ್ಸ್ ಕೂಡ​ ಗಿಟ್ಟಿಸಿದ್ದಾರೆ.

Best Mobiles in India

Read more about:
English summary
K-Pop star Kang Daniel has achieved a new record for the Fastest time to gain one million followers on Instagram after joining the social media platform on New Year's Day. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X