ಟ್ವಿಟರ್‌ನ 10ನೇ ಹುಟ್ಟುಹಬ್ಬ: 10 ಕುತೂಹಲಕಾರಿ ವಿಷಯಗಳು

Written By:

ಇವತ್ತು ವಿಶೇಷತೆ ಏನು ಗೊತ್ತಾ? ಗೊತ್ತಿಲ್ಲಾ ಅಂದ್ರೆ ಪರವಾಗಿಲ್ಲ ನಾವ್ ಹೇಳ್ತಿವಿ. ಇವತ್ತು ಎರಡನೇ ದೈತ್ಯ ಸಾಮಾಜಿಕ ಜಾಲತಾಣ ಹಾಗೂ ಮೈಕ್ರೋ ಬ್ಲಾಗಿಂಗ್‌ ನೆಟ್‌ವರ್ಕ್‌ ಎಂದೇ ಹೆಸರುವಾಸಿಯಾದ "ಟ್ವಿಟರ್"ನ 10ನೇ ಹುಟ್ಟುಹಬ್ಬ (ಮಾರ್ಚ್‌ 21). ಅಂದಹಾಗೆ ಟ್ವಿಟರ್ ಅನ್ನು‌ ಮಾರ್ಚ್‌ 21, 2006 ರಲ್ಲಿ ಜಾಕ್‌ ಡಾರ್ಸೆ, ಎವನ್ ವಿಲಿಯಮ್ಸ್, ನೋಹಾ ಗ್ಲಾಸ್‌, ಬಿಜ್‌ ಸ್ಟೋನ್ ಎಂಬುವವರು ಸಂಸ್ಥಾಪಿಸಿದರು. ಇಂದು (ಮಾರ್ಚ್‌ 21)ಟ್ವಿಟರ್‌ಗೆ 10 ವರ್ಷಗಳು ತುಂಬಿದ್ದು ಟ್ವಿಟರ್‌ನ ಹುಟ್ಟುಹಬ್ಬದ ದಿನವಿದು. ನೀವು ಹೇಳಿ "ಹ್ಯಾಪಿ ಬರ್ತ್‌ಡೇ ಟ್ವಿಟರ್" ಎಂದು.

ನರೇಂದ್ರ ಮೋದಿ'ಯವರು ಭಾರತದ ದೇಶದ ಹೆಮ್ಮೆಯ ಪ್ರಧಾನಿಯಾಗುವ ಕನಸಿನ ಹಿಂದೆ ಟ್ವಿಟರ್ ಸಹಾಯ ಮಾಡಿದೆ. ಇನ್ನೊಂದು ವಿಶೇಷತೆ ಎಂದರೆ 2011ರಲ್ಲಿ ಅರಬ್‌ ಸ್ಟ್ರಿಂಗ್‌ನಲ್ಲಿ ಜನಗಳು ಸಂಘಟನೆಗೊಂಡು ರಾಜಕೀಯ ಬದಲಾವಣೆಗೆ ಟ್ವಿಟರ್‌ ಸಹಾಯವಾಗಿದೆ. 2012ರಲ್ಲಿ ಬರಾಕ್‌ ಒಬಾಮ'ರವರು ಮರುಚುನಾವಣೆಗಾಗಿ ಟ್ವಿಟರ್ ಬಳಸಿ ಕೇವಲ ಒಂದು ಟ್ವೀಟ್ ಮಾಡಿದ್ದಕ್ಕೆ ಹಲವು ರೀಟ್ವೀಟ್ ಆಗಿದ್ದವು. ಟ್ವಿಟರ್ ಒಬಾಮ'ರ ಪಾಲಿಗು ಸಹ ಅಚ್ಚು ಮೆಚ್ಚು. ಇಷ್ಟೆಲ್ಲಾ ವಿಶೇಷತೆ ಜೊತೆಗೆ ಟ್ವಿಟರ್‌ ಹುಟ್ಟುಹಬ್ಬದ ಪ್ರಯುಕ್ತ ಇಂದಿನ ಲೇಖನದಲ್ಲಿ ನಿಮಗೆ ಟ್ವಿಟರ್‌ನ 10 ರಿಯಲ್‌ ವಿಶೇಷತೆಗಳನ್ನು ತಿಳಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವಿಟರ್ ಕ್ಯಾಬ್‌ ರವಾನೆದಾರರಿಂದ ಸ್ಫೂರ್ತಿಗೊಂಡದ್ದು

ಟ್ವಿಟರ್ ಕ್ಯಾಬ್‌ ರವಾನೆದಾರರಿಂದ ಸ್ಫೂರ್ತಿಗೊಂಡದ್ದು

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಟ್ವಿಟರ್‌ ಅನ್ನು‌ ಮಾರ್ಚ್‌ 21, 2006 ರಲ್ಲಿ ಜಾಕ್‌ ಡಾರ್ಸೆ, ಎವನ್ ವಿಲಿಯಮ್ಸ್, ನೋಹಾ ಗ್ಲಾಸ್‌, ಬಿಜ್‌ ಸ್ಟೋನ್ ಎಂಬುವವರು ಸಂಸ್ಥಾಪಿಸಿದರು.ಇವರ ತಂಡವು ಸಾರ್ವಜನಿಕ ಮೆಸೇಜಿಂಗ್‌ ಸೇವೆ ಸ್ಥಾಪಿಸಲು ಕ್ಯಾಬ್ ಡ್ರೈವರ್‌ ಮತ್ತು ರವಾನೆದಾರರ ಸಂವಹನ ಸ್ಫೂರ್ತಿ ಎಂದು ಸಿಎನ್‌ಇಟಿ ಪ್ರಕಾರ ಹೇಳಲಾಗಿದೆ.

ಮೊದಲ ಟ್ವೀಟ್‌

ಮೊದಲ ಟ್ವೀಟ್‌

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಅಂದಹಾಗೆ ಟ್ವಿಟರ್‌ನ ಮೊದಲ ಟ್ವೀಟ್ ಅನ್ನು ಸಿಇಓ ಜಾಕ್‌ ಡಾರ್ಸೆ'ಯವರು Twitter ಅನ್ನು Vowels ಇಲ್ಲದೇ ಚಿತ್ರದಲ್ಲಿರುವಂತೆ ಟ್ವೀಟ್‌ ಮಾಡಿದರು.

ಟ್ವಿಟರ್‌ ಸಾರ್ವಜನಿಕರಿಗಾಗಿ

ಟ್ವಿಟರ್‌ ಸಾರ್ವಜನಿಕರಿಗಾಗಿ

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಟ್ವಿಟರ್‌ ಮೊದಲು ಸಾರ್ವಜನಿಕರಿಗಾಗಿ ಲಭ್ಯವಿರಲ್ಲಿಲ್ಲ. ಜಾಕ್‌ ಡಾರ್ಸೆ'ಯವರು ಮೊದಲ ಟ್ವೀಟ್‌ ಮಾಡಿದ ಹಲವು ತಿಂಗಳ ನಂತರದಲ್ಲಿ ಸಾರ್ವಜನಿಕರಿಗೆ ಲಭ್ಯವಾಯಿತು.

ಓಪನ್‌ ಮಾಹಿತಿ ಹ್ಯಾಶ್‌ಟ್ಯಾಗ್‌

ಓಪನ್‌ ಮಾಹಿತಿ ಹ್ಯಾಶ್‌ಟ್ಯಾಗ್‌

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಸಿಎನ್‌ಇಟಿ ಪ್ರಕಾರ ಕ್ರಿಶ್‌ ಮೆಸ್ಸಿನ'ರವರು ಹ್ಯಾಶ್‌ಟ್ಯಾಗ್‌ ಅನ್ನು ಬಳಸುವಂತೆ ಪ್ರಸ್ತಾಪವಿತ್ತರು.

3 ಹಾಡುಗಾರರು ಮತ್ತು ಒಬ್ಬ ಅಧ್ಯಕ್ಷರು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ

3 ಹಾಡುಗಾರರು ಮತ್ತು ಒಬ್ಬ ಅಧ್ಯಕ್ಷರು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಟ್ವಿಟರ್‌ ಕೌಂಟರ್‌ ಪ್ರಕಾರ ಕೇಟಿ ಪೆರಿ'ಯವರು ಅತಿ ಹೆಚ್ಚು 84 ದಶಲಕ್ಷ ಫಾಲೋವರ್‌ಗಳನ್ನು ಹೊಂದಿದ್ದಾರೆ.ಇವರನ್ನು ಪಾಪ್‌ ಸ್ಟಾರ್ ಜಸ್ಟಿನ್‌ ಬೈಬರ್ ಸಹ ಫಾಲೋ ಮಾಡುತ್ತಿದ್ದಾರೆ. ಅಮೇರಿಕದ ಅಧ್ಯಕ್ಷರಾದ ಬರಾಕ್‌ ಒಬಾಮ'ರವರು ಸಹ ಅತಿ ಹೆಚ್ಚು ಫಾಲೋವರ್‌ಗಳನ್ನು ಟ್ವಿಟರ್‌ನಲ್ಲಿ ಹೊಂದಿದ್ದಾರೆ.

ಟಾಪ್‌ ಟ್ವೀಟರ್‌ 37.8 ದಶಲಕ್ಷ ಟ್ವೀಟ್‌ ಮಾಡಿದ್ದಾರೆ

ಟಾಪ್‌ ಟ್ವೀಟರ್‌ 37.8 ದಶಲಕ್ಷ ಟ್ವೀಟ್‌ ಮಾಡಿದ್ದಾರೆ

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಟ್ವಿಟರ್ ಅಂಕಿ ಅಂಶಗಳ ಪ್ರಕಾರ @VENETHIS ಎಂಬುವವರು ಅತಿ ಹೆಚ್ಚು ಟ್ವೀಟ್‌(37.8 ದಶಲಕ್ಷ ಟ್ವೀಟ್‌) ಮಾಡಿದ್ದಾರೆ.

ಒಸಾಮಾ ಬಿನ್ ಲಾಡೆನ್ ಕಾರ್ಯಾಚರಣೆ ನೇರ ಟ್ವೀಟ್‌

ಒಸಾಮಾ ಬಿನ್ ಲಾಡೆನ್ ಕಾರ್ಯಾಚರಣೆ ನೇರ ಟ್ವೀಟ್‌

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಸಿಎನ್‌ಇಟಿ ಪ್ರಕಾರ, ಪಾಕಿಸ್ತಾನದ ಒಬ್ಬ ಐಟಿ ಕನ್ಸಲ್ಟಂಟ್‌ ಟ್ವೀಟ್‌ಗೆ ಜವಾಬ್ದಾರರು ಎಂದು ಹೇಳಲಾಗಿದೆ.

ಟ್ವಿಟರ್ ಪ್ರಖ್ಯಾತತೆ ಕಲಾ ಹಬ್ಬದಲ್ಲಿ

ಟ್ವಿಟರ್ ಪ್ರಖ್ಯಾತತೆ ಕಲಾ ಹಬ್ಬದಲ್ಲಿ

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಟ್ವಿಟರ್‌ನ ಪ್ರಖ್ಯಾತತೆ 2007 ರಲ್ಲಿ ಸೌತ್‌ವೆಸ್ಟ್‌ನ ಕಲಾ ಹಬ್ಬದಲ್ಲಿ ಹೆಚ್ಚಿತ್ತು ಎನ್ನಲಾಗಿದೆ.

ಎಲ್ಲೆನ್‌ ಅಧಿಕ ರೀಟ್ವೀಟ್‌

ಎಲ್ಲೆನ್‌ ಅಧಿಕ ರೀಟ್ವೀಟ್‌

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಎಲ್ಲೆನ್‌ ಎಂಬುವವರು ಅತಿ ಹೆಚ್ಚು ರೀಟ್ವೀಟ್‌ ಮಾಡಿದವರು ಎಂದು ಟ್ವಿಟರ್‌ ಅಂಕಿ ಅಂಶ ಹೇಳಿದೆ.

 ಅತಿ ಸರಳ

ಅತಿ ಸರಳ

ಟ್ವಿಟರ್‌ ವಿಶೇಷತೆ ಮತ್ತು ಬರ್ತ್‌ಡೇ

ಟ್ವಿಟರ್‌ ಸಂಸ್ಥಾಪಕರು ಟ್ವಿಟರ್‌ ಬಳಕೆದಾರರಿಗೆ ಅತಿ ಸರಳ ಮಾರ್ಗವನ್ನು ಏನನ್ನೇ ಮಾಹಿತಿ ನೀಡಲು, ಯಾರಿಗೆ ಮಾಹಿತಿ ನೀಡಲು, ಯಾರಾದರು ಸಹ ಆ ಮಾಹಿತಿ ನೋಡಲು ಅವಕಾಶ ನೀಡಿದ್ದಾರೆ. ಅದು ಅವರ ಆಕಾಂಕ್ಷೆಯು ಸಹ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Twitter 10th Birthday: 10 ‘Surprising’ Facts You Should Know! Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot