ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನ ಜೈಲು!!

ಫೇಸ್‌ಬುಕ್‌ನಲ್ಲಿ ಕಾಮೆಂಟ್‌ಗಳಿಂದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣಗಳಲ್ಲಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ಗಳನ್ನು ಮಾಡಿ ಜೈಲು ಶಿಕ್ಷೆ ಅನುಭವಿಸಿದ ಮೊದಲು ಪ್ರಕರಣ ಇದಾಗಿದೆ.!!

|

ಸಾಮಾಜಿಕ ಜಾಲತಾಣ ಫೇಸ್‌ಬುಕ್ ಇದೀಗ ಜನರ ಕಾಮೆಂಟ್‌ಗಳ ಸಮರಕ್ಕೆ ಸಜ್ಜಾಗಿ ನಿಂತಿರುವುದು ನಿಮಗೆಲ್ಲಾ ಗೊತ್ತೇ ಇದೆ.! ಫೇಸ್‌ಬುಕ್‌ನಲ್ಲಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಭರದಲ್ಲಿ ಅಶ್ಲೀಲ ಮತ್ತು ಸುಳ್ಳು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದು, ಇದು ಅವ್ಯಾಹತವಾಗಿ ಬೆಳೆಯುತ್ತಿದೆ.!!

ಇಂತಹುದೇ ಕಾರ್ಯಕ್ಕೆ ಯುವಕನೋರ್ವನು 42 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.! ಭಾರತದಲ್ಲಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ಗಳಿಂದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಪ್ರಕರಣಗಳಲ್ಲಿ ಫೇಸ್‌ಬುಕ್‌ನಲ್ಲಿ ಕಾಮೆಂಟ್‌ಗಳನ್ನು ಮಾಡಿ ಜೈಲು ಶಿಕ್ಷೆ ಅನುಭವಿಸಿದ ಮೊದಲು ಪ್ರಕರಣ ಇದಾಗಿದೆ.!!

ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನ ಜೈಲು!!

ಜಕೀರ್ ಆಲೀ ತ್ಯಾಗಿ (18) ಎಂಬ ಯುವಕನೋರ್ವ ಫೇಸ್‌ಬುಕ್‌ನಲ್ಲಿ ಗಂಗಾನದಿ, ರಾಮ ಮಂದಿರ ನಿರ್ಮಾಣ, ಮುಸ್ಲಿಮರ ಹಜ್ ಸಬ್ಸಿಡಿ ಮುಂತಾದ ವಿಷಯಗಳ ಬಗ್ಗೆ ಅನುಚಿತವಾದ ಕಾಮೆಂಟ್ ಮಾಡಿದ್ದಕ್ಕೆ ಐಪಿಸಿ 420 ಹಾಗೂ ಐಟಿ ನಿಯಮಗಳ ಪ್ರಕಾರ ಆತನನ್ನು ಪೊಲೀಸರು ಅರೆಸ್ಟ್ ಮಾಡಿ ಕೇಸ್ ದಾಖಲಿಸಿದ್ದಾರೆ.!!

ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನ ಜೈಲು!!

ವಿಚಾರಣೆಗಾಗಿ 42 ದಿನಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ ಜಕೀರ್ ಆಲೀ ತ್ಯಾಗಿ ಇದೀಗ ಜಾಮೀನಿನ ಮೇಲೆ ಮುಜಫರ್ ನಗರ್ ಜೈಲಿನಿಂದ ಬಿಡುಗಡೆ ಹೊಂದಿದ್ದು, ಕೆಲವರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರೆ, ಇನ್ನು ಇಂತವರ ವಿರುದ್ದ ಕಾನೂನಿಕ ಕ್ರಮಕ್ಕೆ ಹಲವರಿಂದ ಪ್ರಶಂಸೆ ಕೂಡ ವ್ಯಕ್ತವಾಗಿದೆ.!!

ಫೇಸ್‌ಬುಕ್‌ನಲ್ಲಿ ಕಾಮೆಂಟ್ ಮಾಡಿದ್ದಕ್ಕೆ 42 ದಿನ ಜೈಲು!!

ನಾವೆಲ್ಲ ನೋಡುವಂತೆಯೇ ಫೇಸ್‌ಬುಕ್‌ನಲ್ಲಿ ಅಶ್ಲೀಲ, ದಾರ್ಮಿಕ ಸ್ವಾಸ್ಥ ಕೆಡಿಸುವಂತಹ ವಿಷಯಗಳ ಬಗ್ಗೆ ಹಲವು ಕಾಮೆಂಟ್‌ಗಳು ಹರಿದಾಡುತ್ತಿವೆ. ಇದು ಇನ್ನೊಬ್ಬರ ಭಾವನೆಗಳಿಗೆ ನೊವ್ವುಂಟು ಮಾಡುವುದು ಸಹಜವೇ ಆಗಿದ್ದು, ತಪ್ಪು ಯಾರದ್ದೇ ಆಗಿದ್ದರು ಅವರಿಗೆ ಶಿಕ್ಷೆಯಾಗಬೇಕು.!! ಹಾಗಾಗಿ, ನೀವು ಕಾಮೆಂಟ್ ಬರೆಯುವಾಗ ಹುಷಾರು!!

ಓದಿರಿ: 'ಪ್ರೈವೇಟ್ ವಿಂಡೋ' ಬಳಸಿದರೆ ಇಂಟರ್‌ನೆಟ್ ಪ್ರಪಂಚದಲ್ಲಿ ಸೇಫ್‌!..ಆದರಿದು ಯಾರಿಗೂ ಗೊತ್ತಿಲ್ಲಾ!!

Best Mobiles in India

English summary
For his social media commentary, which the Uttar Pradesh Police considered criminal, Zakir Ali Tyagi. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X