ಫೇಸ್‌ಬುಕ್‌ನಲ್ಲಿ ಮತ್ತೊಂದು ಲವ್‌ ದೋಖಾ..! ಯುಪಿ ಟೂ ಬೆಂಗಳೂರು ಲವ್‌ ಸ್ಟೋರಿ..!

|

ಫೇಸ್‌ಬುಕ್‌ನಿಂದ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದ್ದು, ಫೇಸ್‌ಬುಕ್‌ನಿಂದ ಸೃಷ್ಟಿಯಾದ ಪ್ರೀತಿ ಈಗ ನೋವಿನಲ್ಲಿ ಅಂತ್ಯವಾಗುವ ತರ ಕಾಣ್ತಿದೆ. ಹೌದು, ಯುವಜನಕ್ಕೆ ಸಾಮಾಜಿಕ ಜಾಲತಾಣಗಳ ಹುಚ್ಚು ಬಂದಿದ್ದು, ಅಲ್ಲಿರುವುದನ್ನೆಲ್ಲ ಸತ್ಯವೆಂದೂ ಬಹಳಷ್ಟು ಜನ ನಂಬುತ್ತಾರೆ.

ಫೇಸ್‌ಬುಕ್‌ನಲ್ಲಿ ಮತ್ತೊಂದು ಲವ್‌ ದೋಖಾ..! ಯುಪಿ ಟೂ ಬೆಂಗಳೂರು ಲವ್‌ ಸ್ಟೋರಿ..!

ಹೌದು, ಈಗ ಅದರಂತೆ, ಫೇಸ್‌ಬುಕ್‌ನಲ್ಲಿ ಬೆಂಗಳೂರಿನ ಯುವಕ ಒಂದು ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿ ಒಂದು ತಿಂಗಳು ಜೊತೆಯಿದ್ದು, ಕೈಕೊಟ್ಟಿದ್ದಾನೆ. ಫೇಸ್‌ಬುಕ್‌ನಲ್ಲಿ ಹುಡುಗಿಗೆ ಸುಳ್ಳಿನ ಮಂಟಪ ಕಟ್ಟಿದ್ದ ಯುವಕ ತನ್ನ ವಯಸ್ಸು, ವೃತ್ತಿ ಸೇರಿ ಎಲ್ಲಾ ವಿಚಾರಗಳನ್ನು ಮುಚ್ಚಿಟ್ಟಿದ್ದ ಹುಡುಗ ಹುಡುಗಿಯನ್ನು ಪ್ರೇಮದ ಬಲೆಯೊಳಗೆ ಹಾಕಿಕೊಂಡು ಮೋಸ ಮಾಡಿದ್ದು, ವಿಚಾರಣೆಯ ನಂತರ ಜೀವನದಲ್ಲಿ ಸೆಟಲ್‌ ಆದಮೇಲೆ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದಾನೆ.

ಹುಡುಗನಿಗೆ ಮದುವೆ ವಯಸ್ಸಾಗಿಲ್ಲ

ಹುಡುಗನಿಗೆ ಮದುವೆ ವಯಸ್ಸಾಗಿಲ್ಲ

ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ಹುಡುಗಿಯನ್ನು ಬಣ್ಣದ ಮಾತುಗಳಿಂದ ಮರುಳು ಮಾಡಿ, ಮದುವೆಯ ನಾಟಕವಾಡಿದ ಯುವಕನಿಗೆ ಕಾನೂನು ಪ್ರಕಾರ ಮದುವೆಯ ವಯಸ್ಸೇ ಆಗಿಲ್ಲ. ಆ ಯುವಕನಿಗೆ ಈಗಿನ್ನು 20 ವರ್ಷ.

ಮೋಸ ಹೋದವಳು ಶಿಕ್ಷಕಿ

ಮೋಸ ಹೋದವಳು ಶಿಕ್ಷಕಿ

ಬೆಂಗಳೂರಿನ ಹುಡುಗನ ಮಾತುಗಳಿಗೆ ಮೋಸ ಹೋದ ಹುಡುಗಿಗೆ ಈಗ 23 ವರ್ಷ ವಯಸ್ಸು, ವೃತ್ತಿಯಲ್ಲಿ ಶಿಕ್ಷಕಿ. ಆದರೆ, ಯುವಕನಿಗೆ ಸರಿಯಾದ ಕೆಲಸವೂ ಇಲ್ಲ. ಇಬ್ಬರ ನಡುವೆ ಆರು ತಿಂಗಳಿನ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು.

ಫೇಸ್‌ಬುಕ್‌ನಲ್ಲಿ ಸುಳ್ಳಿನ ಮಂಟಪ

ಫೇಸ್‌ಬುಕ್‌ನಲ್ಲಿ ಸುಳ್ಳಿನ ಮಂಟಪ

ಫೇಸ್‌ಬುಕ್‌ನಲ್ಲಿ ಹುಡುಗಿಗೆ ಸುಳ್ಳಿನ ಮಂಟಪ ಕಟ್ಟಿದ್ದ ಯುವಕ ತನ್ನ ವಯಸ್ಸು, ವೃತ್ತಿ ಸೇರಿ ಎಲ್ಲಾ ವಿಚಾರಗಳನ್ನು ಮುಚ್ಚಿಟ್ಟಿದ್ದ. ಖಾಸಗಿ ಕಂಪನಿ ಉದ್ಯೋಗಿ ಎಂದು ಹೇಳಿದ್ದ ಯುವಕ ಬೆಂಗಳೂರಿಗೆ ಬಂದರೆ ನಿನ್ನನ್ನು ಮದುವೆಯಾಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ.

ಉತ್ತರಪ್ರದೇಶ ಟೂ ಬೆಂಗಳೂರು

ಉತ್ತರಪ್ರದೇಶ ಟೂ ಬೆಂಗಳೂರು

ಫೇಸ್‌ಬುಕ್‌ನಲ್ಲಿ ಪರಿಚಯವಾದ ಹುಡುಗಿ ಇಲ್ಲಿಯೇ ಹತ್ತಿರದದವಳಲ್ಲ. ಬದದಲಿಗೆ ಉತ್ತರ ಪ್ರದೇಶದವಳು. ಈ ಕಥೆ ಉತ್ತರಪ್ರದೇಶ ಟೂ ಬೆಂಗಳೂರು ಆಗಿದೆ. ಯುವಕನ ಬಣ್ಣದ ಮಾತುಗಳನ್ನು ನಂಬಿದ ಯುವತಿ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ದಿಲ್ಲಿಗೆ ಬಂದು, ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದಾಳೆ.

ಒಂದು ತಿಂಗಳು ಜೊತೆಯಲ್ಲಿದ್ದ

ಒಂದು ತಿಂಗಳು ಜೊತೆಯಲ್ಲಿದ್ದ

ಉತ್ತರಪ್ರದೇಶದಿಂದ ಬಂದ ಹುಡುಗಿ ಜತೆ ದೇವಸ್ಥಾನದಲ್ಲಿ ಹಾರ ಬದಲಿಸಿಕೊಂಡು ಮದುವೆ ಶಾಸ್ತ್ರ ಮುಗಿಸಿದ್ದಾನೆ. ಸುಮಾರು ಒಂದು ತಿಂಗಳ ಕಾಲ ಲಾಡ್ಜ್‌, ಪಿಜಿಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಮನೆಗೆ ಕರೆದೊಯ್ದಿದ್ದಾನೆ. ಆದರೆ, ಮನೆಯವರು ಮದುವೆಯನ್ನು ಒಪ್ಪುವುದಿಲ್ಲ ಎಂದು ಇಬ್ಬರನ್ನು ಮನೆಯಿಂದ ಹೊರ ಹಾಕಿದ್ದಾರೆ. ಅದಲ್ಲದೇ, ಉತ್ತರಪ್ರದೇಶದಿಂದ ಆಕೆಯ ಪೋಷಕರನ್ನು ಕರಸಿಕೊಂಡು ಮಗಳನ್ನು ಕರೆದೊಯ್ಯುವಂತೆ ಸೂಚಿಸಿದ್ದಾರೆ.

ಕೌನ್ಸಿಲಿಂಗ್‌ನಿಂದ ಪ್ರಕರಣ ಬೆಳಕಿಗೆ

ಕೌನ್ಸಿಲಿಂಗ್‌ನಿಂದ ಪ್ರಕರಣ ಬೆಳಕಿಗೆ

ತಮ್ಮ ಮಗಳಿಗೆ ಮೋಸವಾಗಿದ್ದು ತಿಳಿದು ಮಗಳನ್ನು ಕರೆದೊಯ್ಲು ಉತ್ತರಪ್ರದೇಶದಿಂದ ತಂದೆ-ತಾಯಿ ಬಂದಿದ್ದರು. ಆದರೆ, ಯುವತಿ ಯುವಕನೊಂದಿಗೆ ಇರುತ್ತೇನೆ ಎಂದು ಹಠ ಮಾಡಿದಾಗ ಆಕೆಯ ತಂದೆ ರೈಲ್ವೇ ನಿಲ್ದಾಣದಲ್ಲಿಯೇ ಹೊಡೆದಿದ್ದಾರೆ. ಇದನ್ನು ಗಮನಿಸಿದ ರೈಲ್ವೇ ಪೊಲೀಸರು ವನಿತಾ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ. ಯುವತಿಯನ್ನು ರಕ್ಷಿಸಿ ಕೌನ್ಸಿಲಿಂಗ್‌ ಮಾಡಿದಾಗ ಫೇಸ್‌ಬುಕ್‌ ಪ್ರೇಮ ಬಯಲಿಗೆ ಬಂದಿದೆ.

ಯುವಕನಿಂದ ಭರವಸೆ

ಯುವಕನಿಂದ ಭರವಸೆ

ವನಿತಾ ಸಹಾಯವಾಣಿ ಸಿಬ್ಬಂದಿ ಯುವಕನನ್ನು ಕರೆಸಿ ವಿಚಾರಣೆ ನಡೆಸಿದಾಗ ನನಗಿನ್ನು 20 ವರ್ಷ. ಉದ್ಯೋಗ ತೆಗೆದುಕೊಂಡು ಚೆನ್ನಾಗಿ ಸೆಟಲ್‌ ಆದ್ಮೇಲೆ ಯುವತಿಯನ್ನು ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದಾನೆ. ಇನ್ನು ಯುವತಿ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತೇನೆ ಎಂದಿದ್ದು, ಫೇಸ್‌ಬುಕ್‌ ಲವ್ ಪ್ರಕರಣ ಒಂದು ಹಂತಕ್ಕೆ ಸುಖಾಂತ್ಯ ಕಂಡಿದೆ.

ಫಾರೀನ್‌ ಹುಡುಗಿಯನ್ನು ಯಾಮಾರಿಸಿದ್ದ ಗ್ಯಾರೇಜ್ ಬಾಯ್‌

ಫಾರೀನ್‌ ಹುಡುಗಿಯನ್ನು ಯಾಮಾರಿಸಿದ್ದ ಗ್ಯಾರೇಜ್ ಬಾಯ್‌

ಬೆಂಗಳೂರಿನ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬ ವಿದೇಶಿ ಯುವತಿಯನ್ನು ಫೇಸ್‌ಬುಕ್‌ನಲ್ಲಿ ಪರಿಚಯ ಮಾಡಿಕೊಂಡು ಯಾಮಾರಿಸಿದ ಪ್ರಕರಣವೂ ನಡೆದಿದೆ. ಆತನಿಗೆ ಇನ್ನು 18 ವರ್ಷ ತುಂಬಿರಲಿಲ್ಲ ಎನ್ನುವುದನ್ನು ನಂಬಬೇಕು ಎಂದು ವನಿತಾ ಸಹಾಯವಾಣಿ ಸಂಯೋಜಕಿ ರಾಣಿಶೆಟ್ಟಿ ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿರುವುದು ಎಲ್ಲಾ ನಿಜವಲ್ಲ

ಫೇಸ್‌ಬುಕ್‌ನಲ್ಲಿರುವುದು ಎಲ್ಲಾ ನಿಜವಲ್ಲ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವನಿತಾ ಸಹಾಯವಾಣಿಯ ಸಂಯೋಜಕಿ ರಾಣಿಶೆಟ್ಟಿ, ಫೇಸ್‌ಬುಕ್‌ನಲ್ಲಿ ಹಾಕಿರುವ ಎಲ್ಲಾ ಮಾಹಿತಿ ನೈಜವಾಗಿರುವುದಿಲ್ಲ, ಫೇಸ್‌ಬುಕ್‌ನಲ್ಲಿ ಯಾರನ್ನೇ ನಂಬುವ ಮುನ್ನ ಹೆಣ್ಣುಮಕ್ಕಳು ಸಾಕಷ್ಟು ಬಾರಿ ಯೋಚಿಸಬೇಕು ಎಂದು ತಿಳಿಸಿದ್ದಾರೆ.

Most Read Articles
Best Mobiles in India

English summary
Uttarpradesh to Bengaluru love story on facebook. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more