ಎಚ್ಚರ ವಹಿಸಲೇಬೇಕಾದ ವಾಟ್ಸಾಪ್‌ನಲ್ಲಿನ 10 ಮೆಸೇಜ್‌ಗಳು

By Suneel
|

ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ಮೆಸೇಜಿಂಗ್‌ ಆಪ್‌ ಕಳೆದ ದಿನಗಳ ಹಿಂದಷ್ಟೇ ತನ್ನ ಬಳಕೆದಾರರ ವಯಕ್ತಿಕ ಮಾಹಿತಿ ಸುರಕ್ಷತೆ ದೃಷ್ಟಿಯಿಂದ "ಎಂಡ್‌-ಟು ಎಂಡ್ ಗೂಢಲೀಪಿಕರಣ" ಜಾರಿಗೆ ತಂದಿದ್ದು ವಾಟ್ಸಾಪ್‌ ಬಳಕೆ ಮಾಡುವ ಬಹುಸಂಖ್ಯಾತರಿಗೆ ತಿಳಿದಿದೆ. ಇದವರೆಗೂ ಇನ್ನೂ ಸಹ "ಎಂಡ್‌-ಟು ಎಂಡ್ ಗೂಢಲೀಪಿಕರಣ" ಬಗ್ಗೆ ಮಾಹಿತಿ ತಿಳಿದಿಲ್ಲಾ ಅಂದ್ರೆ "ಸಂವಹನ ಸುರಕ್ಷತೆಗೆ "ಎಂಡ್‌-ಟು-ಎಂಡ್‌ ಗೂಢಲಿಪೀಕರಣ" ಜಾರಿ ಮಾಡಿದ ವಾಟ್ಸಾಪ್‌" ಕ್ಲಿಕ್‌ ಮಾಡಿ ಓದಿರಿ. ವಾಟ್ಸಾಪ್‌ ತನ್ನ ಬಳಕೆದಾರರ ಡೇಟಾ ಸುರಕ್ಷತೆಗಾಗಿ ಜಾರಿ ಮಾಡಿದ ಫೀಚರ್ ಡೇಟಾ ಸುರಕ್ಚತೆಗಾಗಿ ಎಂಬುದನ್ನು ಮಾತ್ರ ಮರೆಯದಿರಿ. ಆದ್ರೆ ಇಂದಿಗೂ ಸಹ ವಾಟ್ಸಾಪ್‌ ಬಳಕೆದಾರರು ಹಲವಾರು ವಂಚನೆ, ಚೇಷ್ಟೆಗಳ ಮೆಸೇಜ್‌ಗಳನ್ನು ಎದುರಿಸುತ್ತಿರುವುದು ನಿಂತಿಲ್ಲ. ಇತರ ಸಾಮಾಜಿಕ ಜಾಲತಾಣಗಳಿಗಿಂತ ವಾಟ್ಸಾಪ್‌ನಲ್ಲೇ ಹೆಚ್ಚು ವಂಚನಾತ್ಮಕ ಮೆಸೇಜ್‌ಗಳು ಹರಿದಾಡುತ್ತಿದ್ದು, ಮೋಸ ಹೋಗುವವರು ಹೆಚ್ಚಾಗುತ್ತಿದ್ದಾರೆ. ಅಂದಹಾಗೆ ವಾಟ್ಸಾಪ್‌ನಲ್ಲಿ ಮೋಸಗೊಳಿಸುವ, ವಂಚಿಸುವ, ಚೇಷ್ಟೆಗಳ ಮೆಸೇಜ್‌ಗಳು ಯಾವುವು ಎಂದು ಗಿಜ್‌ಬಾಟ್‌ನ ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ವಾಟ್ಸಾಪ್‌ ಬಳಕೆದಾರರು ನೀವು ತಿಳಿದು ಇತರರಿಗೂ ಸಹ ಈ ಮಾಹಿತಿಯ ಅರಿವು ಮೂಡಿಸಿ.

ವಾಟ್ಸಾಪ್‌ನಿಂದ ಯಾವುದೇ ಸಂದೇಶ ಬರುವುದಿಲ್ಲ

ವಾಟ್ಸಾಪ್‌ನಿಂದ ಯಾವುದೇ ಸಂದೇಶ ಬರುವುದಿಲ್ಲ

ವಾಟ್ಸಾಪ್‌ ತನ್ನ ಅಧಿಕೃತ ಬ್ಲಾಗ್‌ನಲ್ಲಿ ತನ್ನ ಯಾವುದೇ ಗ್ರಾಹಕರಿಗೂ ಸಹ ಮೆಸೇಜ್‌ ಕಳುಹಿಸುವುದಿಲ್ಲ ಹಾಗೂ ಯಾರನ್ನು ಸಂಪರ್ಕಿಸುವುದಿಲ್ಲ ಎಂದು ಹೇಳಿದೆ.

ಬ್ಯಾಂಕ್‌ ಖಾತೆ ನಂಬರ್‌

ಬ್ಯಾಂಕ್‌ ಖಾತೆ ನಂಬರ್‌

ವಾಟ್ಸಾಪ್ ಯಾರಲ್ಲಿಯೂ ಸಹ ಬ್ಯಾಂಕ್‌ ಖಾತೆ ನಂಬರ್‌ ಕೇಳುವುದಿಲ್ಲ. ಅಲ್ಲದೇ ಯಾವುದೇ ಇತರ ಮಾಹಿತಿಯನ್ನು ಸಹ ಕೇಳುವುದಿಲ್ಲಾ. ಯಾವುದೇ ವ್ಯಕ್ತಿ ವಾಟ್ಸಾಪ್‌ನಿಂದ ಸಂಪರ್ಕಿಸುತ್ತಿರುವುದಾಗಿ ಹೇಳಿ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್ ಬಗ್ಗೆ ಮಾಹಿತಿ ಕೇಳಿದರೆ ಅವರು ನಿಮಗೆ ಮೋಸ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಥ. ಆದರಿಂದ ಯಾವುದೇ ಮಾಹಿತಿ ತಿಳಿಸಬೇಡಿ.

ವಾಟ್ಸಾಪ್ ನಿಂದ ಯಾವುದೇ ಉಚಿತ ಸೇವೆ ಇಲ್ಲ

ವಾಟ್ಸಾಪ್ ನಿಂದ ಯಾವುದೇ ಉಚಿತ ಸೇವೆ ಇಲ್ಲ

ಕೆಲದಿನಗಳ ಹಿಂದೆ ಹಲವು ಬಳಕೆದಾರರು ವಾಟ್ಸಾಪ್ ಉಚಿತ ಎಂಬ ಮೆಸೇಜ್‌ ಸ್ವೀಕರಿಸಿದ್ದರು. ಅದೇ ಮೆಸೇಜ್‌ ಅನ್ನು ಹಲವರು ತಮ್ಮ ಗೆಳೆಯರಿಗೆ ಹಂಚಿದ್ದರು. ಆದರೆ ವಾಟ್ಸಾಪ್‌ ವಾರ್ಷಿಕವಾಗಿ ಅಂತವರಿಗೆ ಶುಲ್ಕ ವಿಧಿಸುತ್ತದೆ. ಅದು ಕೇವಲ ಚೇಷ್ಟೆ ಮಾಡುವಂತ ಸಂದೇಶವಾಗಿದೆ.

ಆಕ್ಟಿವೇಟ್‌ ವಾಟ್ಸಾಪ್‌ ಕರೆ

ಆಕ್ಟಿವೇಟ್‌ ವಾಟ್ಸಾಪ್‌ ಕರೆ

ವಾಟ್ಸಾಪ್‌ ಕರೆಯ ಫೀಚರ್‌ ಅನ್ನು ಆಕ್ಟಿವೇಟ್‌ ಮಾಡಿ ಎಂದು ವಾಟ್ಸಾಪ್‌ ನಿಂದ ಮೆಸೇಜ್‌ ಬರುತ್ತವೆ. ಅದು ಮೋಸದ ಮೆಸೇಜ್‌ ಆಗಿದೆ. ವಾಟ್ಸಾಪ್‌ ಕಾಲಿಂಗ್‌ ಫೀಚರ್‌ ಆಪ್‌ನಲ್ಲಿಯೇ ಉಚಿತವಾಗಿರುತ್ತದೆ.

ಚೇಷ್ಟೆಯ ಮೆಸೇಜ್‌ಗಳು

ಚೇಷ್ಟೆಯ ಮೆಸೇಜ್‌ಗಳು

ಚೇಷ್ಟೆಯ ಮೆಸೇಜ್‌ಗಳು ಉದಾಹರಣೆಗೆ ಚಿತ್ರದಂತೆ ಇರುತ್ತವೆ.
ಚಿತ್ರ ಕೃಪೆ : Quickheal

ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ

ನಿಮ್ಮ ಖಾತೆಯನ್ನು ಅಮಾನತುಗೊಳಿಸಲಾಗಿದೆ

ವಾಟ್ಸಾಪ್‌ ಯಾವುದೇ ಕಾರಣವಿಲ್ಲದೇ ನಿಮ್ಮ ಖಾತೆಯನ್ನು ಅಮಾನತುಗೊಳಿಸುವುದಿಲ್ಲಾ. ಒಂದು ವೇಳೆ ಯಾರಾದರೂ ಚೇಷ್ಟೆಯ ಮೆಸೇಜ್‌ಗಳನ್ನು ಕಳುಹಿಸಿದಲ್ಲಿ ಮಾತ್ರ ಅಂತಹ ಖಾತೆಗಳನ್ನು ಪರಿಶೀಲಿಸಿ ಅಮಾನತು ಮಾಡುತ್ತದೆ.

ಲಾಟರಿ ವಿನ್‌

ಲಾಟರಿ ವಿನ್‌

ನಿಮಗೆ ಕೆಲವೊಮ್ಮೆ "ನೀವು ಲಾಟರಿಯಲ್ಲಿ ಬಹುಮಾನ ಗೆದ್ದಿದ್ದೀರಿ" ಎಂದು ಸಂದೇಶ ಬರಬಹುದು. ಅದು ಸಂಪೂರ್ಣ ಮೋಸದ ಸಂದೇಶವಾಗಿರುತ್ತದೆ.

ವಾಟ್ಸಾಪ್‌ ಸಂದೇಶಕ್ಕೆ ಶುಲ್ಕ

ವಾಟ್ಸಾಪ್‌ ಸಂದೇಶಕ್ಕೆ ಶುಲ್ಕ

ವಾಟ್ಸಾಪ್‌ ಎಂದಿಗೂ ನೀವು ಕಳುಹಿಸುವ ಸಂದೇಶಕ್ಕೆ ಶುಲ್ಕ ವಿಧಿಸುವುದಿಲ್ಲ. ಆದರೆ ಹಿಂದೆ ಇದು ಪ್ರತಿಯೊಬ್ಬ ಬಳಕೆದಾರನಿಗೆ $1 (ರೂ.67.93) ಶುಲ್ಕ ವಿಧಿಸಿತ್ತು. ಆದರೆ ಇಂದು ಸಂಪೂರ್ಣ ಉಚಿತವಾಗಿದೆ.

ವಾಟ್ಸಾಪ್‌ ನಿಷೇಧಿಸಲಾಗುತ್ತಿದೆ

ವಾಟ್ಸಾಪ್‌ ನಿಷೇಧಿಸಲಾಗುತ್ತಿದೆ

ವಾಟ್ಸಾಪ್‌ ನಿಜವಾಗಿಯೂ ನಿಷೇಧವಾಗಿಲ್ಲ. ಅಥವಾ ಮುಚ್ಚಲಾಗುತ್ತಿಲ್ಲ. ಆ ರೀತಿ ಸಂದೇಶ ಓದಿದಲ್ಲಿ ನಂಬದಿರಿ.

ವಾಟ್ಸಾಪ್‌ ಮೂಲ ಆವೃತ್ತಿ ಮಾತ್ರ ಇನ್ಸ್ಟಾಲ್‌ ಮಾಡಿ

ವಾಟ್ಸಾಪ್‌ ಮೂಲ ಆವೃತ್ತಿ ಮಾತ್ರ ಇನ್ಸ್ಟಾಲ್‌ ಮಾಡಿ

ವಾಟ್ಸಾಪ್‌ ಅನ್ನು ಕೇವಲ ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಇತರೆ ವೇದಿಕೆಗಳಲ್ಲಿ ಇನ್ಸ್ಟಾಲ್‌ ಮಾಡಿ. ಯಾವುದೇ ಮೂರನೇ ವ್ಯಕ್ತಿಯಿಂದ ಇನ್ಸ್ಟಾಲ್‌ ಮಾಡಿಕೊಳ್ಳಬೇಡಿ. ಕಾರಣ ಎಂದಿಗೂ ಅಸುರಕ್ಷಿತ ಚಟುವಟಿಕೆ.ನೀವು ಇನ್‌ಸ್ಟಾಲ್ ಮಾಡುತ್ತಿರುವ ಅಪ್ಲಿಕೇಶನ್‌ ವೆಬ್‌ಸೈಟ್‌ URLನಲ್ಲಿ ಮೊದಲು https:// ನಿಂದ ಪ್ರಾರಂಭವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.

ಗಿಜ್‌ಬಾಟ್‌

ಗಿಜ್‌ಬಾಟ್‌

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ಸಂವಹನ ಸುರಕ್ಷತೆಗೆ ಸಂವಹನ ಸುರಕ್ಷತೆಗೆ "ಎಂಡ್‌-ಟು-ಎಂಡ್‌ ಗೂಢಲಿಪೀಕರಣ" ಜಾರಿ ಮಾಡಿದ ವಾಟ್ಸಾಪ್‌

ಫೇಸ್‌ಬುಕ್‌ ಬಳಕೆದಾರರಿಗೆ ಬಂಪರ್‌ ಕೊಡುಗೆ: ಅಚ್ಚರಿ ಹೊಸ ಟೂಲ್‌ಗಳುಫೇಸ್‌ಬುಕ್‌ ಬಳಕೆದಾರರಿಗೆ ಬಂಪರ್‌ ಕೊಡುಗೆ: ಅಚ್ಚರಿ ಹೊಸ ಟೂಲ್‌ಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Whatsapp user should avoid these 10 Hoax messages and Scams. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X