ವಿದ್ಯಾರ್ಥಿಗಳಿಗಾಗಿ ಕಡಿಮೆ ಬೆಲೆಗೆ ಐಪ್ಯಾಡ್ ಲಾಂಚ್: ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ...!

|

ತೀವ್ರಗತಿಯಲ್ಲಿ ಬೆಳವಣಿಗೆಯನ್ನು ಸಾಧಿಸುತ್ತಿರುವ ಭಾರತೀಯ ಮಾರುಕಟ್ಟೆ ಕಡೆಗೆ ಜಾಗತಿಕವಾಗಿ ಹೆಚ್ಚು ಸದ್ದು ಮಾಡುತ್ತಿರುವ ದೈತ್ಯ ಟೆಕ್ ಕಂಪನಿಗಳ ಒಲವು ಹೆಚ್ಚಾಗುತ್ತಿದೆ. ಗೂಗಲ್ ಭಾರತೀಯರಿಗಾಗಿಯೇ ನಿರ್ಮಿಸುವ ಯೋಜನೆಯನ್ನು ರೂಪಿಸಿಕೊಂಡಿರುವ ಮಾದರಿಯಲ್ಲಿಯೇ, ಆಪಲ್ ಸಹ ಇದೇ ಹಾದಿಯಲ್ಲಿ ಸಾಗಲು ಮುಂದಾಗಿದೆ.

ವಿದ್ಯಾರ್ಥಿಗಳಿಗಾಗಿ ಕಡಿಮೆ ಬೆಲೆಗೆ ಐಪ್ಯಾಡ್ ಲಾಂಚ್: ಏಪ್ರಿಲ್‌ನಲ್ಲಿ ಮಾರುಕಟ್ಟೆಗ

ಭಾರತೀಯರಿಗೆ ಕಡಿಮೆ ಬೆಲೆಗೆ ಐಫೋನ್ ನೀಡಬೇಕು ಎನ್ನುವ ಕಾರಣಕ್ಕೆ ಭಾರತದಲ್ಲಿಯೇ ನಿರ್ಮಾಣ ಘಟಕವನ್ನು ತೆರೆದ ರೀತಿಯಲ್ಲಿ, ಭಾರತೀಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಬೆಲೆಯ ಐಪ್ಯಾಡ್ ವೊಂದನ್ನು ಮಾರುಟಕ್ಟೆಗೆ ಲಾಂಚ್ ಮಾಡಲು ಮುಂದಾಗಿದೆ.

ಈ ಕುರಿತು ಮಾಹಿತಿಯೂ ಲಭ್ಯವಾಗಿದ್ದು, ಏಪ್ರಿಲ್‌ನಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುವ ಆಪಲ್‌ನ ಹೊಸ ಐಪ್ಯಾಡ್, 9.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, Wi-Fi ಕನೆಕ್ಟಿವಿಟಿಯೊಂದಿಗೆ ಲಭ್ಯವಿರಲಿದ್ದು, ರೂ.28,000ದ ಅಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದೆ. ಇದು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿರಲಿದೆ. ಇದೇ ಮಾದರಿಯಲ್ಲಿ 9.7 ಇಂಚಿನ ಡಿಸ್‌ಪ್ಲೇಯೊಂದಿಗೆ Wi-Fi ಮತ್ತು ಸೆಲೆಲ್ಯೂರ್ ಕೆನೆಕ್ಟಿವಿಟಿಯನ್ನು ಹೊಂದಿರುವ ಮತ್ತೊಂದು ಆವೃತ್ತಿಯ ಐಪ್ಯಾಡ್ ರೂ.38,600ಕ್ಕೆ ಮಾರಾಟವಾಗಲಿದೆ.

ಏಪ್ರಿಲ್ ನಿಂದ ಮಾರಾಟವಾಗಲಿರುವ ಈ ಐಪ್ಯಾಡ್‌ನೊಂದಿಗೆ ಆಪಲ್ ಪೆನ್ಸಿಲ್ ಸಹ ದೊರೆಯಲಿದ್ದು, ರೂ.7,600ಕ್ಕೆ ಮಾರಾಟವಾಗುವ ಸಾಧ್ಯತೆ ಇದೆ. ಈ ಐಪ್ಯಾಡ್, ಸಿಲ್ವರ್, ಸ್ಪೇಸ್ ಗ್ರೇ ಮತ್ತು ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ. ಈ ಪ್ಯಾಡ್ ಅಮೆರಿಕಾ ಸೇರಿದಂತೆ 24 ದೇಶಗಳಲ್ಲಿ ಮಾರಾಟವಾಗಲಿದೆ ಎನ್ನಲಾಗಿದ್ದು, ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ನಿರ್ಮಾಣವಾಗಿದೆ.

ವಿದ್ಯಾರ್ಥಿಗಳಿಗಾಗಿ ಕಡಿಮೆ ಬೆಲೆಗೆ ಐಪ್ಯಾಡ್ ಲಾಂಚ್: ಏಪ್ರಿಲ್‌ನಲ್ಲಿ ಮಾರುಕಟ್ಟೆಗ

ಈ ಹೊಸ ಐಪ್ಯಾಡಿನಲ್ಲಿ ಆಪಲ್ A 10 ಪ್ರೋಸೆಸರ್ ಅನ್ನು ಬಳಕೆ ಮಾಡಿಕೊಂಡಿದೆ ಎನ್ನಲಾಗಿದ್ದು, ರೆಟಿನಾ ಡಿಸ್‌ ಪ್ಲೇಯನ್ನು ಹೊಂದಿದೆ. ಉತ್ತಮವಾದ ಕ್ಯಾಮೆರಾವನ್ನು ಸೆನ್ಸಾರ್ ಗಳನ್ನು ಇದರಲ್ಲಿ ಕಾಣಬಹುದಾಗಿದೆ. ಇದಲ್ಲದೇ ಆಪಲ್ ಪೆನ್ಸಿಲ್ ಸಹ ಇದಕ್ಕೆ ಸಫೋರ್ಟ್ ಮಾಡಲಿದ್ದು, ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯವನ್ನು ಮಾಡಲಿದೆ.

Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಸದ್ಯ ಮಾರುಕಟ್ಟೆಯಲ್ಲಿ ಗೂಗಲ್ ಕ್ರೋಮ್ ಬುಕ್ ಹೆಚ್ಚಿನ ಮಂದಿ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ತನ್ನೆಡೆಗೆ ಸೆಳೆಯುವ ಸಲುವಾಗಿ ಆಪಲ್ ಈ ಕಡಿಮೆ ಬೆಲೆಯ ಐಪ್ಯಾಡ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಆಪಲ್ ದಿನ ಕಳೆದಂತೆ ಕಡಿಮೆ ಬೆಲೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯ ಮಾಡುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ.

Best Mobiles in India

English summary
Apple iPad 9.7-inch with Pencil support launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X