Just In
Don't Miss
- Sports
ಭಾರತ vs ಇಂಗ್ಲೆಂಡ್: ತವರಿನಲ್ಲಿ ಅಕ್ಷರ್ ಪಟೇರ್ ಸ್ಮರಣೀಯ ಆರಂಭ
- Movies
ಹೈದರಾಬಾದ್ ಬಳಿಕ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ನಟಿ ರಶ್ಮಿಕಾ ಮಂದಣ್ಣ
- News
ಜಯಲಲಿತಾ ಹುಟ್ಟುಹಬ್ಬದಂದು ಶಶಿಕಲಾ ನಟರಾಜನ್ ಮಾಡಿದ ಹೊಸ ಶಪಥ
- Automobiles
ಅಲ್ಕಾಜರ್ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ ಹ್ಯುಂಡೈ ಹೊಸ 7 ಸೀಟರ್ ಎಸ್ಯುವಿ
- Finance
ಹ್ಯುಂಡೈ ಐಯಾನಿಕ್ 5 ಇವಿ ಕಾರು ಬಿಡುಗಡೆ: ಪ್ರತಿ ಚಾರ್ಜ್ಗೆ 470 ಕಿ.ಮೀ ಮೈಲೇಜ್
- Lifestyle
ಪ್ರತಿದಿನ ಸೇವಿಸುವ ಈ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತೆ ಹುಷಾರ್!
- Education
NPCIL Recruitment 2021: 200 ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2018 ರಲ್ಲಿ ನೋಡಬಹುದಾದ ಬೆಸ್ಟ್ ಟ್ಯಾಬ್ಲೆಟ್ ಗಳಿವು
ಮಾರುಕಟ್ಟೆಯಲ್ಲಿ ಟ್ಯಾಬ್ಲೆಟ್ ಗಳು ಅಂದರೆ ದೊಡ್ಡ ಡಿಸ್ಪ್ಲೇ ಜೊತೆಗೆ ಮೊಬೈಲ್ ಆಪರೇಟಿಂಗ್ ಸಿಸ್ಟ್ ಮ್ ಹೊಂದಿರುವ ಡಿವೈಸ್ ಟ್ರೆಂಡ್ ಅನ್ನಿಸಿಕೊಂಡಿದೆ. ನೀವು ದೊಡ್ಡ ಡಿಸ್ಪ್ಲೇ ಹೊಂದಿರುವ ಪೊರ್ಟೇಬಲ್ ಡಿವೈಸ್ ನ್ನು ಬಳಸಲು ಇಚ್ಛಿಸುತ್ತೀರಾದರೆ ಖಂಡಿತ ಇದು ಬೆಸ್ಟ್ ಆಯ್ಕೆಯಾಗಲಿದೆ. ಮೊಬೈಲ್ ಮತ್ತು ಲ್ಯಾಪ್ ಟಾಪ್ ಎರಡರಲ್ಲೂ ಇರುವ ಫಂಕ್ಷನಾಲಿಟಿಗಳನ್ನು ಒಳಗೊಂಡಿರುವ ಕೆಲವು ಬೆಸ್ಟ್ ಟ್ಯಾಬ್ಲೆಟ್ ಗಳು ಮಾರುಕಟ್ಟೆಯಲ್ಲಿ ಈ ವರ್ಷ ಬಿಡುಗಡೆಗೊಂಡಿವೆ . ಅವುಗಳಲ್ಲಿ ಯಾವುದು ಬೆಸ್ಟ್ ಎಂಬ ಪಟ್ಟಿಯೊಂದು ಇಲ್ಲಿದೆ ನೋಡಿ.
ಲ್ಯಾಪ್ ಟಾಪ್ ಗಳ ಬದಲಿ ಬಳಕೆಗೆ ಖಂಡಿತ ಟ್ಯಾಬ್ಲೆಟ್ ಗಳು ಅಧ್ಬುತ ಆಯ್ಕೆ. ಇದನ್ನು ಸುಲಭದಲ್ಲಿ ಕೊಂಡೊಯ್ಯಬಹುದು ಮತ್ತು ಹೆಚ್ಚು ಸಮಸ್ಯೆಗಳಿಲ್ಲದೆ ಇವುಗಳನ್ನು ಆಪರೇಟ್ ಮಾಡಬಹುದು. ಇದು ಖಂಡಿತ ನಮ್ಮ ಕೆಲಸವನ್ನು ಸರಳಗೊಳಿಸುತ್ತದೆ ಮತ್ತು ಈ ಹಿಂದೆ ಲ್ಯಾಪ್ ಟಾಪ್, ಡೆಸ್ಕ್ ಟಾಪ್ ನಲ್ಲಿ ಮಾಡಬಹುದಾದ ಕೆಲವು ಕೆಲಸವನ್ನು ಇದೀಗ ಟ್ಯಾಬ್ಲೆಟ್ ನಲ್ಲಿ ಮಾಡಿ ಮುದಗಿಸುವುದಕ್ಕೆ ಸಾಧ್ಯವಾಗುತ್ತದೆ. 2018 ರಲ್ಲಿ ಬಿಡುಗಡೆಗೊಂಡಿರುವ ಕೆಲವು ಉತ್ತಮ ಪ್ರದರ್ಶನ ಮತ್ತು ಆಕರ್ಷಕ ಡಿಸ್ಪ್ಲೇ ಪೆನಲ್ ಜೊತೆಗೆ ಉತ್ತಮ ಬ್ಯಾಟರಿ ಲೈಫ್ ಹೊಂದಿರುವ ಟ್ಯಾಬ್ಲೆಟ್ ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಮುಂದೆ ಓದಿ.

ಆಪಲ್ ಐಪ್ಯಾಡ್ 9.7 (2018)
ಟ್ಯಾಬ್ಲೆಟ್ ಗಳ ವಿಚಾರಕ್ಕೆ ಬಂದಾಗ ಆಪಲ್ ಅತ್ಯುತ್ತಮವಾಗಿರುತ್ತದೆ. ಆಪಲ್ ಸಂಸ್ಥೆಯ ಐಪ್ಯಾಡ್ ಗಳು ಕಳೆದ ಕೆಲವು ವರ್ಷಗಳಿಂದ ಇಂಡಸ್ಟ್ರಿಯನ್ನು ಆಳುತ್ತಿವೆ ಮತ್ತು ಇತ್ತೀಚೆಗೆ ಆಪಲ್ ಸಂಸ್ಥೆಯಿಂದ ಬಿಡುಗಡೆಗೊಂಡಿರುವುದೆಂದರೆ ಅದು ಐಪ್ಯಾಡ್ 9.7 (2018). ಈ ವರ್ಷದ ಮಾರ್ಚ್ ನಲ್ಲಿ ಇದನ್ನು ಪ್ರಕಟಿಸಲಾಯಿತು ಮತ್ತು ಕೆಲವು ಅಧ್ಬುತ ಫೀಚರ್ ಮತ್ತು ವೈಶಿಷ್ಟ್ಯತೆಗಳು ಇದರಲ್ಲಿ ಅಡಕವಾಗಿದೆ.ಈ ಐಪ್ಯಾಡ್ 9.7-ಇಂಚಿನ LED ಬ್ಯಾಕ್ಲಿಟ್ IPS LCD ಡಿಸ್ಪ್ಲೇಯನ್ನು ಹೊಂದಿದ್ದು ಇದರ ಸ್ಕ್ರೀನ್ ರೆಸಲ್ಯೂಷನ್ 1536 x 2048 ಪಿಕ್ಸಲ್ ಆಗಿದೆ. ಈ ಟ್ಯಾಬ್ಲೆಟ್ ಆಪಲ್ ಫ್ಯೂಷ್ 10 ಪ್ರೊಸೆಸರ್ ನ್ನು ಹೊಂದಿದ್ದು 2.3GHz ಸಾಮರ್ಥ್ಯದ್ದಾಗಿದೆ. ಚಿಪ್ ಸೆಟ್ ನಲ್ಲಿ 2GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ.
ರೀಡಿಸೈನ್ ಮಾಡಲಾಗಿರುವ ಕ್ಯಾಮರಾ ವ್ಯವಸ್ಥೆ ಇದರಲ್ಲಿದ್ದು ಅಧ್ಬುತ ಫೋಟೋ ಮತ್ತು ವೀಡಿಯೋ ಚಿತ್ರೀಕರಣಕ್ಕೆ ನೆರವು ನೀಡುತ್ತದೆ. ಆಪಲ್ ನ ಹೈ ಡೈನಾಮಿಕ್ ರೇಂಜಿನ ಫೋಟೋ ಮೋಡ್ ನ್ನು ಇದು ಬೆಂಬಲಿಸುತ್ತದೆ.
ಕನೆಕ್ಟಿವಿಟಿ ವಿಚಾರಕ್ಕೆ ಬಂದಾಗ ಐಪ್ಯಾಡ್ 9.7 (2018) ಟೈಪ್ -ಸಿ USB ಪೋರ್ಟ್ ನ್ನು ಚಾರ್ಜಿಂಗ್ ಮತ್ತು ಡಾಟಾ ಟ್ರಾನ್ಫರ್ ಗೆ ಬಳಕೆ ಮಾಡುತ್ತದೆ. ಈ ಡಿವೈಸ್ 18W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

ಆಪಲ್ ಐಪ್ಯಾಡ್ ಪ್ರೋ (2018)
ಈ ಲಿಸ್ಟ್ ನಲ್ಲಿರುವ ಮತ್ತೊಂದು ಡಿವೈಸ್ ಕೂಡ ಆಪಲ್ ಸಂಸ್ಥೆಯದ್ದೇ ಆಗಿದೆ. ಆಪಲ್ ಐಪ್ಯಾಡ್ ಪ್ರೋ 2018 ರ ಟ್ಯಾಬ್ಲೆಟ್ ಲಿಸ್ಟ್ ನ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಹೆಚ್ಚು ಪ್ರಭಾವಶಾಲಿಯಾಗಿರುವ ಮತ್ತು ದುಬಾರಿಯಾಗಿರುವ ಟ್ಯಾಬ್ಲೆಟ್ ಇದಾಗಿದೆ.
ಆಪಲ್ ಐಪ್ಯಾಡ್ ಪ್ರೋ 4GB RAM ಜೊತೆಗೆ ಮೂರು ವಿಭಿನ್ನ ಸ್ಟೋರೇಜ್ ವ್ಯವಸ್ಥೆಯ ಆಯ್ಕೆಯನ್ನು ಹೊಂದಿದೆ. ಅವುಗಳೆಂದರೆ 64GB, 256GB,ಮತ್ತು 512GB.
ಈ ಡಿವೈಸ್ ಆಪಲ್ ನ ಐಕಾನಿಕ್ A12X ಬಯೋನಿಕ್ ಚಿಪ್ ಸೆಟ್ ನ್ನು ಹೊಂದಿದ್ದು 7nm ಪ್ರೊಸೆಸ್ ನಿಂದ ತಯಾರಿಸಲಾಗಿದೆ ಮತ್ತು ಮೊದಲ ಆಕ್ಟಾ-ಕೋರ್ ಪ್ರೊಸೆಸರ್ ಇದಾಗಿದೆ. ಈ ಚಿಪ್ ಸೆಟ್ ಇಂಟೆಲ್ ಕೋರ್ ಐ5 ಮತ್ತು ಇಂಟೆಲ್ ಕೋರ್ ಐ7 ಪ್ರೊಸೆಸರ್ ನಷ್ಟು ಶಕ್ತಿಶಾಲಿಯಾಗಿರುವ ಪ್ರದರ್ಶನವನ್ನು ನೀಡುವುದಕ್ಕೆ ಸಮರ್ಥವಾಗಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್4
ಈ ಲಿಸ್ಟ್ ನ ಮುಂದಿನ ಆಯ್ಕೆ ಸ್ಯಾಮ್ ಸಂಗ್. ಸೌತ್ ಕೊರಿಯಾದ ಟೆಕ್ ಸಂಸ್ಥೆ ಮಾರುಕಟ್ಟೆಯಲ್ಲಿ ಬಳಕೆದಾರರಿಗೆ ಉಥ್ತಮ ಅನುಭವ ಮತ್ತು ಕೈಗೆಟುಕುವ ಬೆಲೆಯಲ್ಲಿ ಟ್ಯಾಬ್ಲೆಟ್ ನ್ನು ಒದಗಿಸುವಲ್ಲಿ ಯಶಸ್ಸು ಗಳಿಸಿದೆ. 2-ಇನ್-1 ಆಂಡ್ರಾಯ್ಡ್ ಟ್ಯಾಬ್ಲೆಟ್ ನ್ನು ಸ್ಯಾಮ್ ಸಂಗ್ ಸಂಸ್ಥೆ ಅಗಸ್ಟ್ ನಲ್ಲಿ ಪ್ರಕಟಿಸಿತ್ತು ಮತ್ತು ಇದರಲ್ಲಿ ಡೆಸ್ಕ್ ಟಾಪ್ ನಲ್ಲಿರುವಂತ ಕೆಲವು ಫಂಕ್ಷನಾಲಿಟಿಯನ್ನು ಅಳವಡಿಸಲಾಗಿದೆ. ಅಂದರೆ ನೀವು ಈ ಟ್ಯಾಬ್ ಗೆ ಕೀಬೋರ್ಡ್, ಮೌಸ್ ಮತ್ತು ಇತರೆ ಡಿವೈಸ್ ಗಳನ್ನು ಡೆಸ್ಕ್ ಟಾಪ್ ಗೆ ಅಳಡಿಸಿಕೊಳ್ಳುವಂತೆ ಅಳವಡಿಸಿಕೊಂಡು ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ.
ಎಕ್ಸ್ಟ್ರಾ ಮಾನಿಟರ್ ನ್ನು ಕಂಪ್ಯಾಟಿಬಲ್ HDMI ನಿಂದ USB-C ಮಲ್ಟಿಪೋರ್ಟ್ ಎಡಾಪ್ಟರ್ ಗೆ ಕನೆಕ್ಟ್ ಮಾಡಿಕೊಳ್ಳಬಹುದು. ಗ್ಯಾಲಕ್ಸಿ
ಟ್ಯಾಬ್ ಎಸ್ 4 ಟ್ರ್ಯಾಕ್ ಪ್ಯಾಡ್ ಅಥವಾ ಸ್ಕೆಚ್ ಪ್ಯಾಟ್ ನಂತೆ ಆಕ್ಟ್ ಮಾಡುತ್ತದೆ ಮತ್ತು ಇದು ಫಂಕ್ಷನಲ್ ಆಂಡ್ರಾಯ್ಡ್ ಟ್ಯಾಬ್ಲೆಟ್ ನಂತೆ ಕೆಲಸ ಮಾಡುತ್ತದೆ. ಎಕ್ಸ್ ಟರ್ನಲ್ ಮಾನಿಟರ್ ನ್ನು ಕನೆಕ್ಟ್ ಮಾಡಿದಾಗ ಬಳಕೆದಾರರಿಗೆ ಡುಯಲ್ ಡಿಸ್ಪ್ಲೇ ಫಂಕ್ಷನಾಲಿಟಿಯಂತೆ ಇದು ಬಳಕೆಯಾಗುತ್ತದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 4 10.5- ಇಂಚಿನ ಸೂಪರ್ AMOLED ಡಿಸ್ಪ್ಲೇ ಪೆನಲ್ ಹೊಂದಿದ್ದು ಅದರ ಸ್ಕ್ರೀನ್ ರೆಸಲ್ಯೂಷನ್ 1600 x 2560 ಪಿಕ್ಸಲ್ ಆಗಿದೆ. ಆಂಡ್ರಾಯ್ಡ್ ಟ್ಯಾಬ್ಲೆಟ್ ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಚಿಪ್ ಸೆಟ್ ನ್ನು ಹೊಂದಿದ್ದು ಇದು Adreno 540 GPU ಜೊತೆಗೆ ಗ್ರಾಫಿಕ್ಸ್ ಗಾಗಿ ಪೇರ್ ಆಗಿದೆ. ಮಲ್ಟಿ ಟಾಸ್ಕ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಇದು 4GB RAM ನೊಂದಿಗೆ 64/256GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. ಬಳಕೆದಾರಪು ಇದನ್ನು ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 400GB ವರೆಗೆ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.
ಗ್ಯಾಲಕ್ಸಿ ಟ್ಯಾಬ್ ಎಸ್4 ಆಫರ್ ಮಾಡುವ ಇತರೆ ಕೆಲವು ಫೀಚರ್ ಗಳೆಂದರೆ S-ಪೆನ್, ಫೇಸ್ ಅನ್ ಲಾಕ್, ಕ್ವಿಕ್ ಚಾರ್ಜಿಂಗ್ ಸಪೋರ್ಟ್ ಮತ್ತು ಇತ್ಯಾದಿ. ಸೆನ್ಸರ್ ಆನ್ ಬೋರ್ಡ್ ನಲ್ಲಿ ಪ್ರಾಕ್ಸಿಮಿಟಿ, ಎಕ್ಸಲರೋಮೀಟರ್, ಕಂಪಾಸ್ ಮತ್ತು ಗೈರೋಸ್ಕೋಪ್ ಗಳಿವೆ.

ಅಮೇಜಾನ್ ಫೈಯರ್ HD ಟ್ಯಾಬ್ಲೆಟ್ (2018)
ಈ ಲಿಸ್ಟ್ ನಲ್ಲಿರುವ 4ನೇ ಬೆಸ್ಟ್ ಟ್ಯಾಬ್ಲೆಟ್ ಅಂದರೆ ಅದು ಅಮೇಜಾನ್ ಸಂಸ್ಥೆಯ ಅಮೇಜಾನ್ ಫೈಯರ್ HD ಟ್ಯಾಬ್ಲೆಟ್ (2018). ಅಕ್ಟೋಬರ್ ನಲ್ಲಿ ಬಿಡುಗಡೆಗೊಂಡಿರುವ ಇದು $79.99 ಬೆಲೆಯನ್ನು ಹೊಂದಿದೆ ಅಂದರೆ ಅಂದಾಜು 6,000 ರುಪಾಯಿಗಳು.
ಇದು 8.0- ಇಂಚಿನ IPS LCD ಡಿಸ್ಪ್ಲೇ ಪೆನಲ್ ನ್ನು ಹೊಂದಿದ್ದು ಸ್ಕ್ರೀನ್ ರೆಸಲ್ಯೂಷನ್ 800 x 1280 ಪಿಕ್ಸಲ್ ಗಳಾಗಿವೆ. ಟ್ಯಾಬ್ಲೆಟ್ ಡುಯಲ್-ಕೋರ್ ಪ್ರೊಸೆಸರ್ ನ್ನು ಹೊಂದಿದ್ದು ಅದರ 1.3GHz ಸಾಮರ್ಥ್ಯದ್ದಾಗಿದೆ. ಇದರಲ್ಲಿ 1.5GB RAM ಇದ್ದು ಮಲ್ಟಿಟಾಸ್ಕಿಂಗ್ ಗೆ ನೆರವು ನೀಡುತ್ತದೆ. ಎರಡು ಸ್ಟೋರೇಜ್ ಆಯ್ಕೆಗಳಿವೆ- 16GB/32GB. ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಹಿಗ್ಗಿಸಿಕೊಳ್ಳುವುದಕ್ಕೆ ಬಳಕೆದಾರರಿಗೆ ಅವಕಾಶವಿದೆ. ಆಂಡ್ರಾಯ್ಡ್ v7.0 Nougat ಜೊತೆಗೆ ಫೈಯರ್ OS 6 UI ನ್ನು ಇದು ಹೊಂದಿದೆ. ಅಲೆಕ್ಸಾಗೆ ಇದು ಬೆಂಬಲ ನೀಡುತ್ತದೆ. ಚಾರ್ಜಿಂಗ್ ಮತ್ತು ಡಾಟಾ ಟ್ರಾನ್ಸ್ಫರ್ ಗಾಗಿ ಮೈಕ್ರೋ USB v2.0 ಪೋರ್ಟ್ ಇದೆ.

ಮೈಕ್ರೋಸಾಫ್ಟ್
2-ಇನ್-1 ಟ್ಯಾಬ್ಲೆಟ್ ಲ್ಯಾಪ್ ಟಾಪ್ ಪ್ರೊಬಾಬ್ಲಿಟಿಯನ್ನು ಹೆಚ್ಚಿಸುವ ಮಾರುಕಟ್ಟೆಯಲ್ಲಿ ಬೆಸ್ಟ್ ಡಿವೈಸ್ ಎಂದರೆ ಅದು ಮೈಕ್ರೋ ಸಾಫ್ಟ್. ಸ್ಲೀಕ್ ಡಿಸೈನ್ ನ್ನು ಇದು ಹೊಂದಿದ್ದರೂ ಕೂಡ ಉತ್ತಮ ಪ್ರದರ್ಶನವನ್ನು ನೀಡುತ್ತದೆ. ಈ ವರ್ಷದ ಅಕ್ಟೋಬರ್ ನಲ್ಲಿ ಪ್ರಕಟಿಸಲ್ಪಟ್ಟ ಈ ಡಿವೈಸ್ ವಿಂಡೋಸ್ ಫ್ಲ್ಯಾಟ್ ಫಾರ್ಮ್ ನಲ್ಲಿ ರನ್ ಆಗುತ್ತದೆ.
ಡಿಸ್ಪ್ಲೇ ವಿಚಾರದಲ್ಲಿ ಮೈಕ್ರೋಸಾಫ್ಟ್ ಸರ್ಫೇಸ್ ಪ್ರೋ 12.3- ಇಂಚಿನ 3:2 ಪಿಕ್ಸಲ್ ಸೆನ್ಸ್ 10 ಪಾಯಿಂಟ್ ಮಲ್ಟಿ-ಟಚ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ಸ್ಕ್ರೀನ್ ರೆಸಲ್ಯೂಷನ್ 1824 x 2736 ಪಿಕ್ಸಲ್ ಗಳಾಗಿದೆ.
ಇದು ಕ್ವಾಡ್-ಕೋರ್ 8ನೇ ಜನರೇಷನ್ನಿನ ಇಂಟೆಲ್ ಕೋರ್ i5/i7 ಪ್ರೊಸೆಸರ್ ನ್ನು ಹೊಂದಿದ್ದು UHD ಗ್ರಾಫಿಕ್ಸ್ 620ಯನ್ನು ಒಳಗೊಂಡಿದೆ.
ಸರ್ಫೇಸ್ ಪ್ರೋ 6 ಎರಡು ಮೆಮೊರಿ ಮತ್ತು ನಾಲ್ಕು ಸ್ಟೋರೇಜ್ ಅವಕಾಶಗಳನ್ನು ನೀಡುತ್ತದೆ. 8GB/16GB RAM ಮತ್ತು 128GB/256GB/512GB/1TB SSD ಸ್ಟೋರೇಜ್. ನಿಮ್ಮ ಡಾಟಾ ಸ್ಟೋರ್ ಮಾಡುವುದಕ್ಕೆ ಇದರಲ್ಲಿ ಬಹಳ ಜಾಗವಿರುತ್ತದೆ.
ತೀರ್ಪು:
2018 ರಲ್ಲಿ ಆಯ್ಕೆ ಮಾಡಬಹುದಾದ ಬೆಸ್ಟ್ ಟ್ಯಾಬ್ಲೆಟ್ಸ್ ಗಳಿವು. ಈ ಎಲ್ಲಾ ಟ್ಯಾಬ್ಲೆಟ್ ಗಳು ಉತ್ತಮ ಪ್ರದರ್ಶನ ಮತ್ತು ಆಕರ್ಷಕ ಹಾರ್ಡ್ ವೇರ್ ಗಳು ಮತ್ತು ಕೆಲವು ಅತ್ಯುತ್ತಮ ಫೀಚರ್ ಗಳನ್ನು ಒಳಗೊಂಡಿದೆ. ಒಂದು ವೇಳೆ ನೀವು ಉತ್ತಮ ಪ್ರದರ್ಶನದ ಲ್ಯಾಪ್ ಟಾಪ್ ನ್ನು ಹುಡುಕುತ್ತಿದ್ದರೆ ಖಂಡಿತ ಮೇಲಿನದ್ದು ಯಾವುದನ್ನಾದರೂ ಆಯ್ಕೆ ಮಾಡಬಹುದು.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190