ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಐಪ್ಯಾಡ್ ಲಭ್ಯ..! ಸಿಗುವುದು ಎಲ್ಲಿ..?

|

ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಆಪಲ್ ಮಾರುಕಟ್ಟೆಗೆ ಲಾಂಚ್ ಮಾಡಿದ್ದ ಐಪ್ಯಾಡ್ (2018) ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ. ಆನ್‌ಲೈನ್ ಮೂಲಕ ಲಭ್ಯವಿರುವ ಐಪ್ಯಾಡ್ (2018), ಫ್ಲಿಪ್‌ಕಾರ್ಟ್‌ ನಲ್ಲಿ ದೊರೆಯುತ್ತಿದೆ. ಎರಡು ಆವೃತ್ತಿಯಲ್ಲಿ ಕಾಣಿಸಿಕೊಂಡಿರುವ ಐಪ್ಯಾಡ್ (2018), Wi-Fi ಕನೆಕ್ಟಿವಿಟಿ ಹೊಂದಿರುವ ಆವೃತ್ತಿಯೂ ರೂ.28,00೦ಕ್ಕೆ ಲಭ್ಯವಿದ್ದು, Wi-Fi ಮತ್ತು ಸೆಲೆಲ್ಯೂರ್ ಕೆನೆಕ್ಟಿವಿಟಿಯನ್ನು ಹೊಂದಿರುವ ಮತ್ತೊಂದು ಆವೃತ್ತಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ.

ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಐಪ್ಯಾಡ್ ಲಭ್ಯ..! ಸಿಗುವುದು ಎಲ್ಲಿ..?

ಇದಲ್ಲದೇ ಐಪ್ಯಾಡ್ (2018)ಅನ್ನು ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಮಿಸಲಿದ್ದು, ಹಾಗಾಗಿ ಆಪಲ್ ಪೆನ್ಸಿಲ್‌ಗೆ ಸಫೋರ್ಟ್ ಮಾಡಲಿದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಸಹಾಯವಾಗಲಿದೆ. ಆದರೆ ಪೆನ್ಸಿಲ್‌ಅನ್ನು ಹೆಚ್ಚುವರಿಯಾಗಿ ಕೊಳ್ಳಬೇಕಾಗಿದ್ದು, ರೂ.7600ಕ್ಕೆ ದೊರೆಯುತ್ತಿದೆ. ಇದಲ್ಲದೇ ಐಪ್ಯಾಡ್ (2018) ಖರೀದಿಯ ಮೇಲೆ ಫ್ಲಿಪ್‌ಕಾರ್ಟ್ ಆಫರ್ ಅನ್ನು ಸಹ ನೀಡಿದೆ.

ಫ್ಲಿಪ್‌ಕಾರ್ಟ್‌ ಆಫರ್:

ಫ್ಲಿಪ್‌ಕಾರ್ಟ್‌ ಆಫರ್:

ಐಪ್ಯಾಡ್ (2018) ಕೊಂಡುಕೊಳ್ಳುವವರಿಗೆ ಫ್ಲಿಪ್‌ಕಾರ್ಟ್ನಲ್ಲಿ 5% ಇನ್‌ಸ್ಟೆಂಟ್ ಡಿಸ್ಕೌಂಟ್ ಲಭ್ಯವಿದ್ದು, ಇದಲ್ಲದೇ ನೋಕಾಸ್ಟ್ EMI ಆಯ್ಕೆಯನ್ನು ನೀಡಿದೆ. ರೂ.3112ರಿಂದ ಆರಂಭವಾಗಲಿದೆ. ಐಪ್ಯಾಡ್ (2018) ಸಿಲ್ವರ್, ಗೋಲ್ಡ್, ಸ್ಪೇಸ್ ಗ್ರೇ ಬಣ್ಣಗಳಲ್ಲಿ ಮಾರಾಟವಾಗುತ್ತಿದೆ.

ವಿಶೇಷತೆ:

ವಿಶೇಷತೆ:

ಐಪ್ಯಾಡ್ (2018) 9.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, Wi-Fi ಕನೆಕ್ಟಿವಿಟಿಯೊಂದಿಗೆ ಲಭ್ಯವಿದೆ. ಅಲ್ಲದೇ ಇದರಲ್ಲಿ 32GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. ಫುಲ್ಲಿ ಲ್ಯಾಮಿನೇಟೆಡ್ ರೆಟಿನಾ ಡಿಸ್‌ಪ್ಲೇಯನ್ನು ನೀಡಲಾಗಿದ್ದು, 2048X1536 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿದೆ.

A10 ಫ್ಯೂಶನ್ ಚಿಪ್

A10 ಫ್ಯೂಶನ್ ಚಿಪ್

ಐಪ್ಯಾಡ್ (2018)ನಲ್ಲಿ A10 ಫ್ಯೂಶನ್ ಚಿಪ್ ಕಾಣಬಹುದಾಗಿದ್ದು, iOS 11 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು ಟಚ್ ಐಡಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ:

ಕ್ಯಾಮೆರಾ:

ಐಪ್ಯಾಡ್ (2018) ನಲ್ಲಿ 8MP ಹಿಂಬದಿ ಕ್ಯಾಮೆರಾವನ್ನು ಕಾಣಬಹುದಾಗಿದ್ದು, f/2.4 ಅಪರ್ಚರ್ ಮತ್ತು ಪನೋರಮಾ ಮೋಡ್ ಸೇರಿದಂತೆ ಇನ್ನು ಹಲವು ಆಯ್ಕೆಗಳಿದೆ. ಐಪ್ಯಾಡ್ ನ ಮುಂಭಾಗದಲ್ಲಿ 1.2MP ಕ್ಯಾಮೆರಾ ನೀಡಲಾಗಿದ್ದು, HD ಫೇಸ್ ಟೈಮ್ ಕ್ಯಾಮೆರಾ ಇದಾಗಿದ್ದು, f/2.2 ಅಪರ್ಚರ್ ಹೊಂದಿದೆ.

ಇತರೆ ಅಂಶಗಳು:

ಇತರೆ ಅಂಶಗಳು:

ಡ್ಯುಯಲ್ ಚ್ಯಾನಲ್ ವೈಫೈ, HT80 ವಿದ್ MIMO, ಬೂಟೂತ್ 4.2 ಇತ್ಯಾದಿ ಕನೆಕ್ಟಿವಿಟಿ ಫೀಚರ್ ಗಳು ಇದರಲ್ಲಿದೆ.ಅ ಲ್ಲದೆ ಈ ಐಪ್ಯಾಡ್ನಲ್ಲಿದೆ 32.4 ವ್ಯಾಟ್-ಹವರ್ ರೀಚಾರ್ಜೇಬಲ್ ಲಿ-ಪೋ ಬ್ಯಾಟರಿ ನೀಡಲಾಗಿದ್ದು, 10 ಘಂಟೆಗಳ ಕಾಲ ವೈಫೈ ಮೂಲಕ ಇಂಟರ್ನೆಟ್ ಬ್ರೌಸಿಂಗ್, ಮ್ಯೂಸಿಕ್, ವೀಡಿಯೋ ಪ್ಲೇಬ್ಯಾಕ್ ನೀಡುವ ಸಾಮರ್ಥ್ಯ ಹೊಂದಿದೆ.

Best Mobiles in India

English summary
iPad (2018) Now Available in India: Price, Specifications. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X