4G ಸಪೋರ್ಟ್ ಮಾಡುವ ಟ್ಯಾಬ್‌ಗಳನ್ನು ಬಿಡುಗಡೆ ಮಾಡಿದ ಲಿನೊವೊ
ಟ್ಟು ನಾಲ್ಕು ಆವೃತ್ತಿಯ ಟ್ಯಾಬ್ 4 ಅನ್ನು ಲಾಂಚ್ ಮಾಡಲಿದೆ. ಟ್ಯಾಬ್ 4 8. ಟ್ಯಾಬ್ 4 8 ಪ್ಲಸ್, ಟ್ಯಾಬ್ 4 10 ಮತ್ತು ಟಾಬ್ 4 10 ಪ್ಲಸ್ ಟ್ಯಾಬ್‌ಗಳು ಮಾರುಕಟ್ಟೆಗೆ ಕಾಲಿಡಲಿವೆ.
ಲಿನೊವೊ ಭಾರತೀಯ ಮಾರುಕಟ್ಟೆಯಲ್ಲಿ ಹೊಸದೊಂದು ಟ್ಯಾಬ್ ಅನ್ನು ಬಿಡುಗಡೆ ಮಾಡಲಿದೆ. ಒಟ್ಟು ನಾಲ್ಕು ಆವೃತ್ತಿಯ ಟ್ಯಾಬ್ 4 ಅನ್ನು ಲಾಂಚ್ ಮಾಡಲಿದೆ. ಟ್ಯಾಬ್ 4 8. ಟ್ಯಾಬ್ 4 8 ಪ್ಲಸ್, ಟ್ಯಾಬ್ 4 10 ಮತ್ತು ಟಾಬ್ 4 10 ಪ್ಲಸ್ ಟ್ಯಾಬ್‌ಗಳು ಮಾರುಕಟ್ಟೆಗೆ ಕಾಲಿಡಲಿವೆ.

ಈ ಟ್ಯಾಬ್‌ಗಳು MWC 2017 ಕಾರ್ಯಕ್ರಮದಲ್ಲಿ ಲಾಂಚ್ ಆಗಿದ್ದವು, ಇವುಗಳ ಬೆಲೆಯೂ ರೂ.12,990 ರಿಂದ ರೂ.29,990ರ ವರೆಗೆ ಇರಲಿದೆ. ಅಲ್ಲದೇ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ದೊರೆಯಲಿದೆ. ಆದರೆ ಎಂದಿನಿಂದ ಎನ್ನುವುದನ್ನು ಇನ್ನು ತಿಳಿಸಿಲ್ಲ.

ಲೆನೊವೊ ಟ್ಯಾಬ್ 4 8
ಲೆನೊವೊ ಟ್ಯಾಬ್ 4 8 ನಲ್ಲಿ 8 ಇಂಚಿನ 1280 x 800 ಪಿಕ್ಸೆಲ್ ಗುಣಮಟ್ಟದ HD ಐಪಿಎಸ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 1.4GHz ಕ್ವಾಡ್-ಕೋರ್ ಸ್ನಾಪ್ ಡ್ರಾಗನ್ 425 ಪ್ರೊಸೆಸರ್ ಜೊತೆಗೆ ಅಡ್ರಿನೋ 308 ಜಿಪಿಯು ಅನ್ನು ಅಳವಡಿಸಲಾಗಿದೆ. 2 ಜಿಬಿ RAM ಮತ್ತು 16 ಜಿಬಿ ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಬದಿಯಲ್ಲಿ 5MP ಆಟೋ ಫೋಕಸ್ ಕ್ಯಾಮೆರಾ ಮತ್ತು 2MP ಸೆಲ್ಫಿ ಕ್ಯಾಮರಾ ಇದೆ. 4G LTE, ವೈ-ಫೈ, ಬ್ಲೂಟೂತ್ 4.0 ಮತ್ತು ಜಿಪಿಎಸ್. 4,850mAh ಬ್ಯಾಟರಿಯನ್ನು ಈ ಟ್ಯಾಬ್ಲೆಟ್ ಒಳಗೊಂಡಿದೆ. ಇದು ಸ್ಲೇಟ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ ಬೆಲೆ ರೂ. 12,99೦ ಆಗಿದೆ.

ಲೆನೊವೊ ಟ್ಯಾಬ್ 4 8 ಪ್ಲಸ್
ಲೆನೊವೊ ಟ್ಯಾಬ್ 4 8 ಪ್ಲಸ್‌ನಲ್ಲಿ 8 ಇಂಚಿನ 1920 x 1200 ಪಿಕ್ಸೆಲ್ ಗುಣಮಟ್ಟದ FHD ಐಪಿಎಸ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 2GHz ಒಕ್ಟಾ-ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಜೊತೆಗೆ 3GB / 4GB RAM ಮತ್ತು 16GB / 64GB ಇಂಟರ್ನಲ್ ಮೊಮೆರಿಯೊಂದಿಗೆ ದೊರೆಯಲಿದ್ದು, 128GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಹಿಂಬದಿಯಲ್ಲಿ 8MP ಆಟೋ ಫೋಕಸ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MP ಕ್ಯಾಮೆರಾವನ್ನು ಒಳಗೊಂಡಿದೆ. ಈ ಮಾದರಿಯು 4G LTE, ವೈ-ಫೈ, ಬ್ಲೂಟೂತ್ 4.2, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಲಭ್ಯವಿದೆ. ಟ್ಯಾಬ್ 4 8 ನಂತೆ 4850mAh ಬ್ಯಾಟರಿಯನ್ನು ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಆಯ್ಕೆ ಇದೆ. ಟ್ಯಾಬ್ 4 8 ಪ್ಲಸ್ ಅರೋರಾ ಬ್ಲಾಕ್ ಬಣ್ಣದಲ್ಲಿ ಲಭ್ಯವಿದ್ದು, ಬೆಲೆ ರೂ. 16,990 ಗಳಾಗಿಲಿದೆ.

ಲೆನೊವೊ ಟ್ಯಾಬ್ 4 10:
ಲೆನೊವೊ ಟ್ಯಾಬ್ 4 10ನಲ್ಲಿ 10.1 ಇಂಚಿನ ಇಂಚಿನ 1280 x 800 ಪಿಕ್ಸೆಲ್ ಗುಣಮಟ್ಟದ HD ಐಪಿಎಸ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 1.4GHz ಕ್ವಾಡ್-ಕೋರ್ ಸ್ನಾಪ್ ಡ್ರಾಗನ್ 425 ಪ್ರೊಸೆಸರ್ ಜೊತೆಗೆ ಅಡ್ರಿನೋ 308 ಜಿಪಿಯು ಅನ್ನು ಅಳವಡಿಸಲಾಗಿದೆ. 2 ಜಿಬಿ RAM ಮತ್ತು 16 ಜಿಬಿ ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದ್ದು, ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. ಹಿಂಬದಿಯಲ್ಲಿ 5MP ಆಟೋ ಫೋಕಸ್ ಕ್ಯಾಮೆರಾ ಮತ್ತು 2MP ಸೆಲ್ಫಿ ಕ್ಯಾಮರಾ ಇದೆ. 4G LTE, ವೈ-ಫೈ, ಬ್ಲೂಟೂತ್ 4.0 ಮತ್ತು ಜಿಪಿಎಸ್. 7000mAh ಬ್ಯಾಟರಿಯನ್ನು ಈ ಟ್ಯಾಬ್ಲೆಟ್ ಒಳಗೊಂಡಿದೆ. ಇದು ಸ್ಲೇಟ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ ಬೆಲೆ ರೂ.24,99೦ ಆಗಿದೆ.

ಲೆನೊವೊ ಟ್ಯಾಬ್ 4 10 ಪ್ಲಸ್
ಲೆನೊವೊ ಟ್ಯಾಬ್ 4 10 ಪ್ಲ ಸ್‌ನಲ್ಲಿ 10 ಇಂಚಿನ 1920 x 1200 ಪಿಕ್ಸೆಲ್ ಗುಣಮಟ್ಟದ FHD ಐಪಿಎಸ್ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. 2GHz ಒಕ್ಟಾ-ಕೋರ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಜೊತೆಗೆ 3GB / 4GB RAM ಮತ್ತು 16GB / 64GB ಇಂಟರ್ನಲ್ ಮೊಮೆರಿಯೊಂದಿಗೆ ದೊರೆಯಲಿದ್ದು, 128GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. ಹಿಂಬದಿಯಲ್ಲಿ 8MP ಆಟೋ ಫೋಕಸ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5MPಕ್ಯಾಮೆರಾವನ್ನು ಒಳಗೊಂಡಿದೆ. ಈ ಮಾದರಿಯು 4G LTE, ವೈ-ಫೈ, ಬ್ಲೂಟೂತ್ 4.2, ಜಿಪಿಎಸ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಫಿಂಗರ್ ಪ್ರಿಂಟ್ ಸ್ಕ್ಯಾನರ್ ಜೊತೆಗೆ ಲಭ್ಯವಿದೆ. 7000mAh ಬ್ಯಾಟರಿಯನ್ನು ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಆಯ್ಕೆ ಇದೆ. ಬೆಲೆ ರೂ. 29,990 ಗಳಾಗಿಲಿದೆ.


Click it and Unblock the Notifications








