ನೂತನ ಆಪಲ್ 9.7 ಇಂಚ್ ಐಪ್ಯಾಡ್ ಫ್ಲಿಪ್ಕಾರ್ಟ್ ನಲ್ಲಿ ಪ್ರೀ-ಆರ್ಡರ್ ಗೆ ಲಭ್ಯ; ಬೆಲೆ ರೂ 28000
ಮಾರ್ಚ್ ತಿಂಗಳಾಂತ್ಯದಲ್ಲಿ ಶಿಕಾಗೋ ದಲ್ಲಿ ಕ್ರಿಯೇಟಿವ್ ಎಜುಕೇಶನ್ ಸಮಾರಂಭವೊಂದನ್ನು ಆಯೋಜಿಸಿದ ಆಪಲ್, ಅದೇ ಸಂದರ್ಭದಲ್ಲಿ ಆಪಲ್ ಪೆನ್ಸಿಲ್ ಸಪೋರ್ಟ್ ಹೊಂದಿರುವ ನೂತನ 9.7 ಇಂಚ್ ಐಪ್ಯಾಡ್ ಒಂದನ್ನು ಲಾಂಚ್ ಮಾಡಿತ್ತು. ಈ ಐಪ್ಯಾಡ್ ಭಾರತದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಲಾಂಚ್ ಆಗಲಿದೆ ಎಂದು ಆಪಲ್ ತಿಳಿಸಿತ್ತು. ಅಲ್ಲದೆ ದೇಶದ ಅಧಿಕೃತ ಆಪಲ್ ರಿಸೆಲ್ಲರ್ಸ್ ಬಳಿ ಕೂಡ ಈ ಸಾಧನ ಖರೀದಿಗೆ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.

ಏಪ್ರಿಲ್ 11 ರಂದು ಈ ನೂತನ 9.7 ಇಂಚ್ ಐಪ್ಯಾಡ್ ಆನ್ಲೈನ್ ರೀಟೈಲರ್ ಆದ ಫ್ಲಿಪ್ಕಾರ್ಟ್ ನಲ್ಲಿ ಪ್ರೀ-ಆರ್ಡರ್ ಗೆ ಲಭ್ಯವಾಗಿದ್ದು, ಬೆಲೆ ರೂ 28000 ಆಗಿದೆ. ಪ್ರೀ-ಆರ್ಡರ್ ಮಾಡಲಾದ ಸಾಧನಗಳ ಶಿಪ್ಪಿಂಗ್ ಏಪ್ರಿಲ್ 20 ರಿಂದ ಪ್ರಾರಂಭವಾಗಲಿದೆ. ಈ ಐಪ್ಯಾಡ್ ಗೋಲ್ಡ್, ಸ್ಪೇಸ್ ಗ್ರೇ ಮತ್ತು ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಾಗಲಿದೆ.
ಆಪಲ್ ಸಂಸ್ಥೆಯು ಈಗಾಗಲೇ ತಿಳಿಸಿರುವಂತೆ ನೂತನ 9.7 ಇಂಚ್ ಐಪ್ಯಾಡ್ ನ 32GB ವೈಫೈ ಆವೃತ್ತಿಯ ಬೆಲೆ ರೂ 28,000 ಆಗಿದ್ದು, ವೈಫೈ-ಸೆಲ್ಯುಲಾರ್ ಆವೃತ್ತಿಯ ಬೆಲೆ ರೂ 35,000 ಎಂದು ನಿಗದಿಪಡಿಸಲಾಗಿದೆ. ಅಂತೆಯೇ ಇದರ 128GB ಯ ವೈಫೈ ಆವೃತ್ತಿಯ ಬೆಲೆ ರೂ 38,600 ಆಗಿದ್ದು, ವೈಫೈ-ಸೆಲ್ಯುಲಾರ್ ಆವೃತ್ತಿಯ ಬೆಲೆ ರೂ 46,300 ಆಗಿದೆ.
ಈ ನೂತನ ಆಪಲ್ ಐಪ್ಯಾಡ್ 9.7 ಇಂಚ್ (2018) ನ ಫೀಚರ್ಗಳ ಕುರಿತು ಹೇಳುವುದಾದರೆ ಇದರಲ್ಲಿದೆ 9.7 ಇಂಚ್ ಫುಲ್ಲಿ ಲ್ಯಾಮಿನೇಟೆಡ್ ರೆಟಿನಾ ಡಿಸ್ಪ್ಲೇ 2048X1536 ಪಿಕ್ಸೆಲ್ ರೆಸೊಲ್ಯೂಶನ್ ನೊಂದಿಗೆ. ಅಲ್ಲದೆ ಇದರ ಸ್ಕ್ರೀನ್ ಫಿಂಗರ್ಪ್ರಿಂಟ್-ರೆಸಿಸ್ಟೆಂಟ್ ಓಲಿಯೋಫೋಬಿಕ್ ಕೋಟಿಂಗ್ ಹೊಂದಿದ್ದು ಆಪಲ್ ಪೆನ್ಸಿಲ್ ಅನ್ನು ಬೆಂಬಲಿಸುತ್ತದೆ. ಈ ನೂತನ ಐಪ್ಯಾಡ್ A10 ಫ್ಯೂಶನ್ ಚಿಪ್ ಹೊಂದಿದ್ದು ಜೊತೆಗೆ M10 ಮೋಶನ್ ಕೋ-ಪ್ರಾಸೆಸರ್ ಕೂಡ ಹೊಂದಿದೆ. ಈ ಟ್ಯಾಬ್ಲೆಟ್ ಎರಡು ವಿಭಿನ್ನ ಸ್ಟೋರೇಜ್ ಆವೃತ್ತಿಗಳಲ್ಲಿ ಲಭ್ಯವಿದೆ- ಒಂದು 32GB ಆವೃತ್ತಿಯಾದರೆ ಮತ್ತೊಂದು 128GB ಆವೃತ್ತಿಯಾಗಿದೆ.
ಈ ನೂತನ ಐಪ್ಯಾಡ್ iOS 11 ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು ಟಚ್ ಐಡಿ ಫಿಂಗರ್ಪ್ರಿಂಟ್ ಸೆನ್ಸರ್ ಹೊಂದಿದೆ. ಅಲ್ಲದೆ ಇದರಲ್ಲಿದೆ 8MP ರೇರ್ ಕ್ಯಾಮೆರಾ f/2.4 ಅಪರ್ಚರ್ ಮತ್ತು ಪನೋರಮಾ ಮೋಡ್ ಸಹಿತ. ಇನ್ನು ಐಪ್ಯಾಡ್ ನ ಮುಂಭಾಗದಲ್ಲಿ 1.2MP HD ಫೇಸ್ ಟೈಮ್ ಕ್ಯಾಮೆರಾ ಇದ್ದು f/2.2 ಅಪರ್ಚರ್ ಹೊಂದಿದೆ. 4G LTE, ಡ್ಯುಯಲ್ ಚ್ಯಾನಲ್ ವೈಫೈ, HT80 ವಿದ್ MIMO, ಬೂಟೂತ್ 4.2 ಇತ್ಯಾದಿ ಕನೆಕ್ಟಿವಿಟಿ ಫೀಚರ್ಗಳು ಇದರಲ್ಲಿದೆ.ಅಲ್ಲದೆ ಈ ಐಪ್ಯಾಡ್ನಲ್ಲಿದೆ 32.4 ವ್ಯಾಟ್-ಹವರ್ ರೀಚಾರ್ಜೇಬಲ್ ಲಿ-ಪೋ ಬ್ಯಾಟರಿ . ಈ ಬ್ಯಾಟರಿ 10 ಘಂಟೆಗಳ ಕಾಲ ವೈಫೈ ಮೂಲಕ ಇಂಟರ್ನೆಟ್ ಬ್ರೌಸಿಂಗ್, ಮ್ಯೂಸಿಕ್, ವೀಡಿಯೋ ಪ್ಲೇಬ್ಯಾಕ್ ನೀಡುವ ಸಾಮರ್ಥ್ಯ ಹೊಂದಿದೆ.

ಈ ಎಜುಕೇಶನ್-ಸೆಂಟ್ರಿಕ್ ಟ್ಯಾಬ್ಲೆಟ್ ಅನ್ನು ಲಾಂಚ್ ಮಾಡುವ ಸಂದರ್ಭದಲ್ಲಿ ಆಪಲ್ ಇದರೊಂದಿಗೆ ಲಾಜಿಟೆಕ್ ಕ್ರೇಯಾನ್ ಸ್ಟೈಲಸ್, ರಗ್ಗ್ಡ್ ಕೀಬೋರ್ಡ್ ಕೇಸ್, ಮತ್ತು ಆಪಲ್ ಪೆನ್ಸಿಲ್ ಮೊದಲಾದ ಆಕ್ಸೆಸರೀಸ್ ಲಭಿಸಲಿದೆ ಎಂದು ಹೇಳಿತ್ತು. ಆದರೆ ಭಾರತದಲ್ಲಿ ಗ್ರಾಹಕರಿಗೆ ಈ ಆಕ್ಸೆಸರೀಸ್ ಯಾವಾಗ ಲಭ್ಯವಾಗಲಿದೆ ಎನ್ನುವ ಮಾಹಿತಿ ಸಧ್ಯಕ್ಕೆ ಲಭ್ಯವಿಲ್ಲ. ಆದರೆ ಈ ಐಪ್ಯಾಡ್ ಮೇಲೆ ವಿಶೇಷ ವಿದ್ಯಾರ್ಥಿ ರಿಯಾಯಿತಿ ಅನ್ವಯವಾಗುವ ಸಾಧ್ಯತೆ ಇದೆ.


Click it and Unblock the Notifications








