ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

By Ashwath
|

ನೀವು ವಾಸಿಸುತ್ತಿರುವ ಸ್ಥಳದಲ್ಲಿ ಮೊಬೈಲ್‌ ಸಿಗ್ನಲ್‌ ಸರಿಯಿಲ್ಲ ಅಥವಾ ನೀವು ಬಳಸುತ್ತಿರುವ ಮೊಬೈಲ್‌ ಸೇವಾ ಸಂಸ್ಥೆಯ ಸೇವೆಯಿಂದ ಬೇಸತ್ತು ಹೋಗಿ ಬೇರೆ ಕಂಪೆನಿಯ ಹೊಸ ಸಿಮ್‌ ಖರೀದಿ ಮಾಡಬೇಕು ಎಂದು ಚಿಂತಿಸುತ್ತಿದ್ದೀರಾ? ನೀವು ಚಿಂತೆ ಮಾಡಬೇಕಾಗಿಲ್ಲ. ನೀವು ಈಗ ಬಳಸುವ ಸಿಮ್‌ ನಂಬರ್‌ನ್ನು ಬದಲಾಯಿಸದೇ ಸೇವಾ ಕಂಪೆನಿಯನ್ನು ಬದಲಾಯಿಸಿ ಅದೇ ನಂಬರ್‌ನ್ನು ಉಳಿಸಿಕೊಳ್ಳಬಹುದು.

ಕೇವಲ 19 ರೂಪಾಯಿ ಖರ್ಚು ಮಾಡಿದ್ರೆ ನೀವು ಮೊಬೈಲ್ ನಂಬರ್‌ ಪೋರ್ಟೆಬಿಲಿಟಿ ಮಾಡಬಹುದು. ಮೊಬೈಲ್‌ ನಂಬರ್‌ ಪೋರ್ಟೆಬಿಲಿಟಿ ವ್ಯವಸ್ಥೆಗೆ ಎರಡು ವರ್ಷಗಳಾದ್ರೂ ಕೆಲ ಜನರು ಈ ವಿಚಾರದ ಬಗ್ಗೆ ಇನ್ನೂ ಗೊಂದಲದಲ್ಲಿದ್ದಾರೆ. ಹೀಗಾಗಿ ಪೋರ್ಟೆಬಿಲಿಟಿ ಪ್ರಕ್ರಿಯೆ ಹೇಗೆ ಮಾಡಬೇಕು ಎಂಬುದನ್ನು ಮುಂದಿನ ಪುಟಗಳಲ್ಲಿ ವಿವರಿಸಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ನಿಮಗಿಷ್ಟವಾದ ಸೇವಾ ಕಂಪೆನಿಗೆ ಸಿಮ್‌ನ್ನು ಪೋರ್ಟೆಬಿಲಿಟಿ ಮಾಡಿಕೊಳ್ಳಿ.

ಇದನ್ನು ಓದಿ : ಆನ್‌ಲೈನ್‌ಲ್ಲಿ ಸುಲಭವಾಗಿ ಶಾಪಿಂಗ್‌ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ನೀವು ಈಗ ಬಳಸುತ್ತಿರುವ ಮೊಬೈಲ್‌ನಿಂದ PORT ಎಂದು ಟೈಪಿಸಿ ಒಂದು ಸ್ಪೇಸ್‌ ಬಿಟ್ಟು ನಿಮ್ಮ ಹತ್ತು ಅಂಕೆಯ ಮೊಬೈಲ್‌ ಸಂಖ್ಯೆಯನ್ನು ಬರೆದು 1900 ಸಂಖ್ಯೆಗೆ ಮೆಸೇಜ್‌ ಕಳುಹಿಸಿ ಬಿಡಿ.

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೆಸೇಜ್‌ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಪ್ರಸ್ತುತ ನೀವು ಬಳಸುತ್ತಿರುವ ಮೊಬೈಲ್‌ ಸೇವಾದಾರ ಕಂಪೆನಿಯಿಂದ ಒಂದು ಪೋರ್ಟಿಂಗ್‌ ಕೋಡ್‌(Unique Porting Code) ಎಸ್‌ಎಂಎಸ್‌ ರೂಪದಲ್ಲಿ ಬರುತ್ತದೆ.

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ಗೆ ಬಂದಿರುವ ಪೋರ್ಟಿಂಗ್‌ ಕೋಡ್‌ಗೆ 15 ದಿನಗಳ ಅವಧಿ ಇರುತ್ತದೆ. ಈ ಅವಧಿಯ ಒಳಗಡೆ ನಿಮ್ಮ ಹತ್ತಿರದ ಸೇವಾದಾರ ಕಂಪೆನಿಯ ಅಂಗಡಿಗೆ ಹೋಗಿ ನಿಗದಿತ ಅರ್ಜಿಯಲ್ಲಿ ಮಾಹಿತಿಗಳನ್ನು ತುಂಬಿಸಿ.

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ದಾಖಲೆಗಳನ್ನು ತುಂಬಿದ ಬಳಿಕ ಆಪರೇಟರ್‌ ಬದಲಾದ ಸೇವಾ ಕಂಪೆನಿಯ ಒಂದು ಸಿಮ್‌ ಕಾರ್ಡ್ ನೀಡಲಾಗುತ್ತದೆ. ಸೇವಾದಾರ ಕಂಪೆನಿಯ ಅಂಗಡಿಗೆ ಹೋಗುವ ಸಂದರ್ಭದಲ್ಲಿ ಫೋಟೋ, ಗುರುತಿನ ಚೀಟಿ (ಐಡಿ) ಹಾಗೂ ವಿಳಾಸದ ಸಾಕ್ಷಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ. ಪೋಸ್ಟ್‌ಪೇಯ್ಡ್ ಸಿಮ್ ಕಾರ್ಡ್ ಆಗಿದ್ದರೆ, ಅದರ ಹಿಂದಿನ ಬಿಲ್ ಪಾವತಿಸಿದ ರಶೀದಿಯನ್ನೂ ತೆಗೆದುಕೊಂಡು ಹೋಗಿ. ಬಾಕಿ ಉಳಿದಿರುವ ಬಿಲ್ ಪಾವತಿಸಬೇಕಾಗುತ್ತದೆ.

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಪೋರ್ಟಿಂಗ್ ಪ್ರಕ್ರಿಯೆಗೆ ಏಳು ದಿನಗಳು ಬೇಕಾಗಬಹುದು. ಜಮ್ಮು ಕಾಶ್ಮೀರ ಮತ್ತು ಈಶಾನ್ಯ ಭಾರತದಲ್ಲಿ 15ದಿನಗಳ ಕಾಲ ಬೇಕಾಗಬಹುದು. ಅಲ್ಲಿಯವರೆಗೆ ಈಗ ಬಳಸುತ್ತಿರುವ ಸಿಮ್‌ ಬಳಸಿ ಕರೆ ಮಾಡಬಹುದು. ಪ್ರಿಪೇಯ್ಡ್‌ ಸಿಮ್‌ ಆಗಿದ್ರೆ ಅದರಲ್ಲಿರುವ ಕರೆನ್ಸಿಯನ್ನು ಖಾಲಿ ಮಾಡಿಬಿಡಿ. ಯಾಕೆಂದರೆ ಪೋರ್ಟಿಂಗ್ ಆದ ಬಳಿಕ ಉಳಿದಿರುವ ಕರೆನ್ಸಿಯಲ್ಲಿರುವ ಹಣ ವರ್ಗಾವಣೆಯಾಗುವುದಿಲ್ಲ.

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ನಿಮ್ಮ ನಂಬರ್‌ ಪೋರ್ಟ್ ಆಗಿರುವ ಬಗ್ಗೆ ಹೊಸ ಆಪರೇಟರ್‌ ತಿಳಿಸುತ್ತಾರೆ. ಆಗ ಈಗಿನ ಸಿಮ್‌ ತೆಗೆದು ಆಪರೇಟರ್‌ ನೀಡಿರುವ ಸಿಮ್‌ನ್ನು ಮೊಬೈಲ್‌ಗೆ ಅಳವಡಿಸಿ.

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಮೊಬೈಲ್‌ ನಂಬರ್ ಪೋರ್ಟೆಬಿಲಿಟಿ ವಿಧಾನ ಹೇಗೆ ?

ಸಿಮ್‌ ಬದಲಾಯಿಸಿದ ಮೇಲೆ ಬೇರೆ ಯಾವ ಪ್ರಕ್ರಿಯೆ ಮಾಡಬೇಕಾದ ಅವಶ್ಯಕತೆಯಿಲ್ಲ. ಒಂದು ವೇಳೆ ಹೊಸ ಮೊಬೈಲ್‌ ಸೇವೆಯೂ ಸರಿ ಇಲ್ಲ ಅಂತ ಅನಿಸಿದರೆ 90 ದಿನಗಳ ಬಳಿಕ ಬೇರೆ ಕಂಪೆನಿಯ ಹೊಸ ಸಿಮ್‌ಗೆ ಬದಲಾಯಿಸಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X