2018 ರಲ್ಲಿ ಅತೀ ಹೆಚ್ಚು ಹೆಸರು ಗಳಿಸಿದ ಆಪ್‌ಗಳು ಇವು!

|

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ಅದೆಷ್ಟೋ ಆಪ್ ಗಳು ಮಿಲಿಯನ್ ಗಟ್ಟಲೆ ಡೌನ್ ಲೋಡ್ ನ್ನು ಕೂಡ ಕಂಡಿರುತ್ತದೆ. 2018 ರಲ್ಲಿ ಹಲವಾರು ಆಪ್ ಗಳು ಗ್ರಾಹಕರ ಮನಸ್ಸನ್ನು ಗೆದ್ದಿವೆ. ಸ್ಟೋರ್ ನಲ್ಲಿ ಹಲವು ಆಪ್ ಗಳಿದ್ದರು ಬಳಕೆದಾರರ ಮನಸ್ಸನ್ನು ಗೆಲುವಲ್ಲಿ ಯಶಸ್ವಿಯಾಗುವ ಆಪ್ ಗಳು ಕೆಲವು ಮಾತ್ರ.ಹಾಗಾದ್ರೆ 2018 ರಲ್ಲಿ ಬಳಕೆದಾರರ ಮೆಚ್ಚುಗೆಯನ್ನು ಗಳಿಸಿದ ಆಪ್ ಗಳು ಯಾವುವು? ಯಾವ ಆಪ್ ಗಳಿಗೆ ಜನಮನ್ನಣೆ ಅಧಿಕವಾಗಿದೆ ಎಂಬ ವಿವರ ಇಲ್ಲಿದೆ ನೋಡಿ.

ಟಿಕ್ ಟಾಕ್

ಟಿಕ್ ಟಾಕ್

ಆಂಡ್ರಾಯ್ಡ್ ಮತ್ತು ಐಓಎಸ್ ಆಪರೇಟಿಂಗ್ ಸಿಸ್ಟಮ್ ಎರಡರಲ್ಲೂ ಕೂಡ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಆಪ್ ಎಂದರೆ ಅದು ಟಿಕ್ ಟಾಕ್(ಮ್ಯೂಸಿಕಲ್.ಲೀ). ಇದೊಂದು ಸೋಷಿಯಲ್ ಮೀಡಿಯಾ ಆಪ್ ಆಗಿದ್ದು ಶಾರ್ಟ್ ವೀಡಿಯೋಗಳನ್ನು ಸೃಷ್ಟಿಸಿ ಹಂಚಿಕೊಳ್ಳುವುದಕ್ಕಾಗಿ ನಿರ್ಮಿಸಲಾಗಿದೆ. ಎರಡೂ ಫ್ಲ್ಯಾಟ್ ಫಾರ್ಮ್ ನಲ್ಲಿ ಈ ಆಪ್ ಉಚಿತವಾಗಿ ಲಭ್ಯವಾಗುತ್ತದೆ.

ಗೂಗಲ್ ಪೇ

ಗೂಗಲ್ ಪೇ

ಗೂಗಲ್ ಪೇ (Tez) ಗೂಗಲ್ ನಿಂದ ನಿರ್ಮಿತವಾಗಿರುವ ಒಂದು ಯುಪಿಐ(ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್) ಮೂಲದ ಪೇಮೆಂಟ್ ಆಪ್ ಆಗಿದೆ.ಆನ್ ಲೈನ್ ನಲ್ಲಿ ಹಣದ ವರ್ಗಾವಣೆ, ಪಾವತಿ ಇತ್ಯಾದಿ ಕೆಲಸಗಳಿಗೆ ಇದು ಬಳಕೆಯಾಗುತ್ತದೆ(ಯುಪಿಐ ನಿಂದ ಯುಪಿಐಗೆ, ಯುಪಿಐ ನಿಂದ ಬ್ಯಾಂಕ್ ಅಕೌಂಟ್ ಗೆ ಸೇರಿದಂತೆ ಹಲವು ಕಡೆ). ಕ್ಯಾಷ್ ಪ್ರೈಸ್ ಜೊತೆಗೆ ಗೂಗಲ್ ಪೇ ಕೆಲವು ಸ್ಕ್ಯ್ರಾಚೇಬಲ್ ಕೂಪನ್ ಗಳನ್ನು ಕೂಡ ನೀಡುತ್ತದೆ.

ವಾಟ್ಸ್ ಆಪ್ ಬ್ಯುಸಿನೆಸ್

ವಾಟ್ಸ್ ಆಪ್ ಬ್ಯುಸಿನೆಸ್

ವಾಟ್ಸ್ ಆಪ್ ಬ್ಯುಸಿನೆಸ್ ಒಂದು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಬಳಕೆಯಾಗುವ ಆಪ್ ಆಗಿದ್ದು, ಇದು ಬ್ಯುಸಿನೆಸ್ ಗಾಗಿ ತಯಾರಿಸಲಾಗಿರುವ ಆಪ್ ಆಗಿದೆ.ವಾಟ್ಸ್ ಆಪ್ ನಲ್ಲಿರುವ ಎಲ್ಲಾ ಫೀಚರ್ ಗಳೂ ವಾಟ್ಸ್ ಆಪ್ ಬ್ಯುಸಿನೆಸ್ ನಲ್ಲಿದ್ದು ನಿಮ್ಮದೇ ಸ್ವಂತ ಬ್ಯುಸಿನೆಸ್ ಪ್ರೊಫೈಲ್ ಸೃಷ್ಟಿಸುವುದಕ್ಕೆ ಇದರಲ್ಲಿ ಅವಕಾಶವಿರುತ್ತದೆ.

ಅಮೇಜಾನ್ ಪ್ರೈಮ್ ವೀಡಿಯೋ

ಅಮೇಜಾನ್ ಪ್ರೈಮ್ ವೀಡಿಯೋ

ಅಮೇಜಾನ್ ಪ್ರೈಮ್ ವೀಡಿಯೋ ಚಂದಾದಾರಿಕೆ ಆಧಾರದ ವೀಡಿಯೋ ಸ್ಟ್ರೀಮಿಂಗ್ ಸೇವೆಯಾಗಿದ್ದು ಅಮೇಜಾನ್ ಪ್ರೈಮ್ ಸದಸ್ಯರಿಗೆ ಇದು ಲಭ್ಯವಾಗುತ್ತದೆ. ಅಮೇಜಾನ್ ನ ಈ ವೀಡಿಯೋ ಸ್ಟ್ರೀಮಿಂಗ್ ಸೇವೆಯು ಹಲವು ಭಾಷೆಗಳ ಕಟೆಂಟ್ ಗಳನ್ನು ಒಳಗೊಂಡಿದ್ದು ಕೆಲವು ಎಕ್ಸ್ ಕ್ಲೂಸೀವ್ ವೆಬ್ ಸರಣಿ ಮತ್ತು ಚಲನಚಿತ್ರಗಳನ್ನು ಹೊಂದಿರುತ್ತದೆ.

ಜಿಯೋ ಟಿವಿ

ಜಿಯೋ ಟಿವಿ

ಜಿಯೋ ಟಿವಿ ಲೈವ್ ಟೆಲಿವಿಷನ್ ಸ್ಟ್ರೀಮಿಂಗ್ ಸೇವೆಯಾಗಿದ್ದು ರಿಲಯನ್ಸ್ ಜಿಯೋ ಇದನ್ನು ನೀಡುತ್ತದೆ.ಜಿಯೋ ಸಿಮ್ ಕಾರ್ಡ್ ಬಳಕೆದಾರರಿಗೆ ಉಚಿತವಾಗಿ ಈ ಸೇವೆಯು ಎಕ್ಸ್ ಕ್ಲೂಸೀವ್ ಆಗಿ ಲಭ್ಯವಾಗುತ್ತದೆ.

ಡೈಲಿ ಹಂಟ್

ಡೈಲಿ ಹಂಟ್

ಡೈಲಿ ಹಂಟ್ ಸ್ಥಳೀಯ ಭಾಷೆಯ ಆಪ್ ಆಗಿದ್ದು ಇಂಗ್ಲೀಷ್, ಹಿಂದಿ, ತಮಿಳು, ಮಳಯಾಳಂ, ಕನ್ನಡ, ತೆಲುಗು, ಮರಾಠಿ, ಬೆಂಗಾಳಿ, ಗುಜರಾತಿ, ಉರ್ದು, ಓರಿಯಾ ಮತ್ತು ಪಂಜಾಬಿ ಭಾಷೆಗಳಲ್ಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತದೆ. ಇದೊಂದು ಮೊಬೈಲ್ ಸುದ್ದಿಜಾಲವಾಗಿದೆ.

ಫೈಲ್ಸ್ ಬೈ ಗೂಗಲ್

ಫೈಲ್ಸ್ ಬೈ ಗೂಗಲ್

ಫೈಲ್ಸ್ ಬೈ ಗೂಗಲ್ ಒಂದು ಫೈಲ್ ಮ್ಯಾನೇಜ್ ಮೆಂಟ್ ಆಪ್ ಆಗಿದ್ದು ಇದು ಸ್ಪೇಸ್ ನ್ನು ಫ್ರೀ ಮಾಡಲು ನೆರವಾಗುತ್ತದೆ ಮತ್ತು ಒಂದು ಫೋನಿನಿಂದ ಮತ್ತೊಂದು ಫೋನಿಗೆ ಡಾಟಾಗಳನ್ನು ಮೂವ್ ಮಾಡಲು ಸಹಕಾರಿಯಾಗಿದೆ.

ಡುಯಲ್ ಸ್ಪೇಸ್

ಡುಯಲ್ ಸ್ಪೇಸ್

ಡುಯಲ್ ಸ್ಪೇಸ್ ಆಪ್ ಮೂಲಕ ಸ್ಮಾರ್ಟ್ ಫೋನ್ ನಲ್ಲಿ ಸಮನಾಂತರ ಸ್ಥಳವನ್ನು ರಚಿಸುವ ಮೂಲಕ ಮಲ್ಟಿ-ಅಕೌಂಟ್ ಗಳನ್ನು ಒಂದೇ ಆಪ್ ನಲ್ಲಿ ಏಕಕಾಲದಲ್ಲಿ ರನ್ ಮಾಡಲು ಸಹಾಯ ಮಾಡುತ್ತದೆ. ಒಂದೇ ಫೋನ್ ನಲ್ಲಿ ಎರಡು ವಾಟ್ಸ್ ಆಪ್ ಅಕೌಂಟ್ ನ್ನು ರನ್ ಮಾಡಲು ಡುಯಲ್ ಸ್ಪೇಸ್ ನೆರವಾಗುತ್ತದೆ.

ಯುಟ್ಯೂಬ್ ಗೋ

ಯುಟ್ಯೂಬ್ ಗೋ

ಯುಟ್ಯೂಬ್ ಗೋ ಯುಟ್ಯೂಬ್ ಆಪ್ ಲೈಟ್ ವರ್ಷನ್. ಇದು ಎಂಟ್ರಿ ಲೆವೆಲ್ ಫೋನ್ ಗಳಿಗೆ ನೆರವಾಗುತ್ತದೆ.ಯುಟ್ಯೂಬ್ ಗೋ ಒಂದು ಕಾಂಪ್ಯಾಕ್ಟ್ ಆಪ್ ಆಗಿದೆ. ಇದು ಕಡಿಮೆ ಡಾಟಾವನ್ನು ಪಡೆಯುತ್ತದೆ ಮತ್ತು ಕಡಿಮೆ ಇಂಟರ್ನೆಟ್ ನಲ್ಲೂ ಕೂಡ ಕಾರ್ಯ ನಿರ್ವಹಿಸುತ್ತದೆ.

ಜಿಯೋಸಾವನ್

ಜಿಯೋಸಾವನ್

ಜಿಯೋ ಸಾವನ್ ಒಂದು ಮ್ಯೂಸಿಕ್ ಸ್ಟ್ರೀಮಿಂಗ್ ಆಪ್ ಆಗಿದೆ. ಬಾಲಿವುಡ್. ಇಂಗ್ಲೀಷ್ , ಕನ್ನಡ ಮತ್ತು ಭಾರತದ ಇತರೆ ಸ್ಥಳೀಯ ಭಾಷೆಯಗಳ ಹಾಡುಗಳನ್ನು ಇದರಲ್ಲಿ ಸ್ಟ್ರೀಮ್ ಮಾಡುವುದಕ್ಕೆ ಅವಕಾಶವಿದೆ.

Best Mobiles in India

English summary
10 apps which hit limelight in 2018

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X