Subscribe to Gizbot

ಉಚಿತ ವೀಡಿಯೋ ಕರೆಗಾಗಿ ಟಾಪ್‌ 10 ಆಪ್‌ಗಳು

Written By:

ಕೇವಲ ಫೋನ್‌ನಲ್ಲಿ ಕರೆ ಮಾಡುತ್ತಾ, ಮೆಸೇಜ್‌ ಮಾಡುತ್ತಿದ್ದ ಜನತೆಗೆ ಈಗ ಟೆಕ್ನಾಲಜಿ ಇನ್ನೂ ಸುಲಭವಾಗಿ ತಮ್ಮನ್ನೂ ನೇರವಾಗಿ ಬೇಟಿಮಾಡಿದಂತೆ ಕಾಣುವ ವೀಡಿಯೋ ಕರೆ ಮಾಡುವ ಅವಕಾಶ ಕಲ್ಪಿಸಿದೆ. ಕರೆ ಮಾಡಲು ಸಹ ಹಣ ಖರ್ಚಾಗುತ್ತೆ. ಮೆಸೇಜ್‌ ಮಾಡಲು ಹಣ ಖರ್ಚಾಗುತ್ತೆ. ಆದ್ರೆ ಇಂದು ನಾವು ನಿಮಗೆ ಪರಿಚಯಿಸುತ್ತಿರುವ 10 ಪ್ರಖ್ಯಾತ ಆಪ್‌ಗಳಿಂದ ಸ್ಮಾರ್ಟ್‌ಫೋನ್‌ ಬಳಕೆದಾರರು ಉಚಿತ ವೀಡಿಯೋ ಕರೆ ಮಾಡಬಹುದಾಗಿದೆ. ತಡ ಮಾಡದೆ ಆ ಟಾಪ್‌ ಉಚಿತ ವೀಡಿಯೋ ಕರೆ ಮಾಡುವ ಆಪ್‌ಗಳು ಯಾವುವು ಎಂದು ಲೇಖನದ ಸ್ಲೈಡರ್‌ನಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಮೆಸೇಂಜರ್‌

1

ಫೇಸ್‌ಬುಕ್ ಮೆಸೇಂಜರ್‌ ಆಪ್‌ ಈಗಾಗಲೇ ಫೇಸ್‌ಬುಕ್‌ ಬಳಕೆದಾರರಿಗೆ ಚಿರಪರಿಚಿತ. ಆದರೆ ಇನ್ನು ಸಹ ಫೇಸ್‌ಬುಕ್‌ ಬಳಕೆ ಮಾಡದವರು ಸಹ ಈ ಆಪ್‌ ಅನ್ನು ಬಳಸಬಹುದಾಗಿದೆ. ಅಲ್ಲದೇ ಉಚಿತ ಕರೆ ಮಾಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಹ್ಯಾಂಗೌಟ್ಸ್‌

2

ಯಾವುದೇ ಖರ್ಚಿಲ್ಲದೇ ಈ ಆಪ್‌ ಅನ್ನು ಪಡೆಯಬಹುದು. ಪ್ರಾಥಮಿಕವಾಗಿ ಮೆಸೇಜಿಂಗ್ ಆಪ್‌ ಆದರೂ ಸಹ ಇದರಲ್ಲಿ ವಾಯ್ಸ್‌ ಕಾಲಿಂಗ್, ವೀಡಿಯೋ ಕಾಲಿಂಗ್ ಮಾಡುವ ಹಲವು ಫೀಚರ್‌ಗಳಿವೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ಐಸಿಕ್ಯೂ

3

ಈ ಆಪ್‌ ಅನ್ನು ಸಹ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಪಾಸ್‌ವರ್ಡ್‌ ಸುರಕ್ಷತೆ ಫೀಚರ್‌ ಹೊಂದಿದ್ದು ಉಚಿತ ಕರೆಯನ್ನು ಉತ್ತಮವಾಗಿ ನಿರ್ವಹಿಸಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಕಾಕೋ ಟಾಕ್‌

4

ಆಪ್‌ ಖರೀದಿಸುವಲ್ಲಿ ಯಾವುದೇ ವೆಚ್ಚವಾಗುವುದಿಲ್ಲ. ಅಂದಹಾಗೆ ಕಾಕೋ ಟಾಕ್‌ ಪ್ರಖ್ಯಾತ ಮೆಸೇಜಿಂಗ್ ಆಪ್‌ ಆಗಿದೆ. ಪ್ರಪಂಚದಾದ್ಯಂತ 150 ದಶಲಕ್ಷ ಬಳಕೆದಾರರನ್ನು ಹೊಂದಿದೆ. ಈ ಡಿಸೆಂಟ್‌ ಆಪ್‌ನಲ್ಲಿ ವೀಡಿಯೋ ಕಾರೆ ಸಹ ಮಾಡಬಹುದಾಗಿದೆ.

ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಲೈನ್‌

5

ಪ್ರಪಂಚದಾದ್ಯಂತ 600 ದಶಲಕ್ಷ ಬಳಕೆದಾರರನ್ನು ಹೊಂದಿದೆ. ಈ ಆಪ್‌ನಲ್ಲಿ ಸಹ ವೀಡಿಯೋ ಕರೆಯನ್ನು ಉಚಿತವಾಗಿ ಮಾಡಬಹುದು.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ooVoo

6

ಆಪ್‌ ಅನ್ನು ಉಚಿತವಾಗಿ ಗೂಗಲ್‌ ಪ್ಲೇ ಸ್ಟೋರ್‌ನಿಂದ ಪಡೆಯಬಹುದಾಗಿದೆ. ಇತರ ಆಪ್‌ಗಳಿಗಿಂತಲೂ ಹೆಚ್ಚು ಪ್ರಖ್ಯಾತವಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ಸ್ಕೈಪ್

7

ಬಹುಶಃ ಈ ವೀಡಿಯೋ ಕರೆ ಆಪ್‌ ಎಲ್ಲರಿಗೂ ಸಹ ತಿಳಿದಿರಬಹುದು. ಇದು ಆಂಡ್ರಾಯ್ಡ್‌ ಆಪ್‌ ಆಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಟಾಂಗೊ

8

ಟಾಂಗೊ ಮೊಟ್ಟ ಮೊದಲ ಉತ್ತಮ ವೀಡಿಯೋ ಚಾಟಿಂಗ್‌ ಆಪ್‌ ಆಗಿದೆ. ಇದು ಆಂಡ್ರಾಯ್ಡ್‌ಗಳಿಗೆ ಲಭ್ಯ. ಅಲ್ಲದೇ ವಾಯ್ಸ್ ಕರೆಗಾಗಿಯೂ ಸಹ ಬಳಸಬಹುದು.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 ವೈಬರ್‌

9

ವೈಬರ್‌ ಅನನ್ಯವಾದ ಅಪ್ಲಿಕೇಶನ್‌ ಆಗಿದ್ದು ಪ್ರಖ್ಯಾತ ಆಪ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ಮೆಸೇಜಿಂಗ್‌ ಆಪ್‌ ಮಾತ್ರವಲ್ಲದೇ ವೀಡಿಯೋ ಕಾಲಿಂಗ್ ಆಪ್‌ ಸಹ ಆಗಿದೆ. ವಿಶೇಷವೆಂದರೆ ಉಚಿತ ಫೋನ್ ಕರೆಮಾಡಲು ಸಹ ಇದು ಉಪಯೋಗವಾಗುತ್ತದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

 WeChat

10

WeChat ಆಪ್‌ 100 ದಶಲಕ್ಷಕ್ಕೂ ಹೆಚ್ಚು ಜನರು ಇನ್‌ಸ್ಟಾಲ್‌ ಮಾಡಿಕೊಂಡಿರುವ ಆಪ್‌.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಆಪಲ್‌ನಿಂದ 'ನ್ಯೂಸ್' ಆಪ್: ಪತ್ರಕರ್ತರಿಗೆ ಚಿಂತೆ

ಫೇಸ್‌ಬುಕ್‌'ಗೆ ಎದುರಾಳಿಯಾಗಿ ಬರಲಿದೆ ಗೂಗಲ್‌ ಮೆಸೇಜಿಂಗ್ ಆಪ್‌

ಅಪಘಾತದಿಂದ ಪ್ರಾಣ ಉಳಿಸಲು 'ಟೇಲ್‌ ಲೈಟ್‌ ರೈಡರ್‌'

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 best Free video calling apps for Android. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot