ಭಾರತದ ಜನತೆಗೆ ಸೂಕ್ತ ಈ 10 ಗೂಗಲ್ ಹೋಮ್ ಕಮಾಂಡ್ಗಳು

By Tejaswini P G

  ಗೂಗಲ್ ಇತ್ತೀಚೆಗೆ ಭಾರತದಲ್ಲಿ ಬಹು ನಿರೀಕ್ಷಿತ ಗೂಗಲ್ ಎಐ ಫೀಚರ್ ಸ್ಮಾರ್ಟ್ ಸ್ಪೀಕರ್ ಅನ್ನು ಲಾಂಚ್ ಮಾಡಿದೆ. "ಓಕೆ ಗೂಗಲ್" ಎಬ ವಾಯ್ಸ್ ಕಮಾಂಡ್ಗಳ ಮೂಲಕ ಈ ಸ್ಮಾರ್ಟ್ ಸ್ಪೀಕರ್ಗಳನ್ನು ಸಕ್ರಿಯಗೊಳಿಸಬಹುದಾಗಿದೆ. ಬಳಕೆದಾರರು ಈ ಸ್ಮಾರ್ಟ್ ಸ್ಪೀಕರ್ ಗೆ ಅನೇಕ ಪ್ರಶ್ನೆಗಳನ್ನು ಕೇಳಬಹುದಾಗಿದ್ದು, ಇದರ ಎಐ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರವನ್ನೇ ನೀಡುತ್ತದೆ. ಬಳಕೆದಾರರು ಹವಮಾನ ವರದಿ, ವಾರ್ತೆಗಳು, ಒಂದು ಸ್ಥಳ ಅಥವಾ ಶಿಕ್ಷಣ ಇತ್ಯಾದಿಗಳ ಕುರಿತು ಮಾಹಿತಿ ಹೀಗೆ ವಿಭಿನ್ನ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಬಹುದು.

  ಭಾರತದ ಜನತೆಗೆ ಸೂಕ್ತ ಈ 10 ಗೂಗಲ್ ಹೋಮ್ ಕಮಾಂಡ್ಗಳು

  ಈ ಸ್ಮಾರ್ಟ್ ಸ್ಪೀಕರ್ಗಳು ಗೂಗಲ್ ಅಸಿಸ್ಟೆಂಟ್ ನ ಬೆಂಬಲ ಹೊಂದಿದ್ದು, ಇದರ ಮೂಲಕ ಟಿವಿ ಯಲ್ಲಿ ಕ್ರೋಮ್ಕಾಸ್ಟ್ ಮತ್ತು ನೆಟ್ಫ್ಲಿಕ್ಸ್ ಗಳನ್ನು ನಿಯಂತ್ರಿಸಬಹುದಾಗಿದೆ. ಅಲೆಕ್ಸಾ ಸ್ಕಿಲ್ಸೆಟ್ ಹೊಂದಿರುವ ಅಮೇಜಾನ್ ಇಖೋ ಸಾಧನಗಳಿಗೆ ನೇರ ಪ್ರತಿಸ್ಪರ್ಧಿ ಈ ಗೂಗಲ್ ಹೋಮ್ ಸ್ಮಾರ್ಟ್ ಸ್ಫೀಕರ್ಗಳು. ಅಮೇಜಾನ್ ಅಲೆಕ್ಸಾ ಕೆಲವು ಅನನ್ಯ ಮತ್ತು ಆಕರ್ಷಕ ಸ್ಕಿಲ್ ಸೆಟ್ ಗಳನ್ನು ಹೊಂದಿದ್ದು, ಗೂಗಲ್ ಗೆ ತೀವ್ರ ಪೈಪೋಟಿ ನೀಡುತ್ತದೆ. ಗೂಗಲ್ ಕೂಡ ಇದಕ್ಕೆ ತಕ್ಕ ತಯಾರಿಯನ್ನು ನಡೆಸಿದ್ದು ಗೂಗಲ್ ಹೋಮ್ ಗೆ ಹಲವು ಆಕರ್ಷಕ ಸ್ಕಿಲ್ ಗಳನ್ನು ನೀಡಿದೆ. ಈ ಲೇಖನದಲ್ಲಿ ನಾವು ಭಾರತೀಯ ಜನತೆಗೆ ಸೂಕ್ತವೆನಿಸುವ ಕೆಲವು ಗೂಗಲ್ ಹೋಮ್ ಕಮಾಂಡ್ ಗಳನ್ನು ಸಂಪಾದಿಸಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  1.ಸ್ಥಳೀಯ ಸುದ್ದಿ ಪ್ರಕಾಶಕರಿಂದ ಸುದ್ದಿ ಪಡೆಯಿರಿ

  ತಮ್ಮ ಆಯ್ಕೆಯ ಸುದ್ದಿಪ್ರಕಾಶಕರಿಂದ ಸುದ್ದಿ ಪಡೆಯುವ ಮೂಲಕ ತಮ್ಮ ಸುತ್ತಮತ್ತ ಏನು ನಡೆಯುತ್ತಿದೆ ಎಂದು ತಿಳಿಯಲು ಈ ಆಪ್ ಬಹಳ ಉಪಯುಕ್ತವಾಗಿದೆ. ಉದಾಹರಣೆಗೆ : "ಓಕೆ ಗೂಗಲ್, ಗೆಟ್ ಮಿ ನ್ಯೂಸ್ ಫ್ರಂ ಗಿಜ್ಬಾಟ್" ಎಂದು ಹೇಳಿದರೆ ಆಪ್ ಸೂಕ್ತ ಫಲಿತಾಂಶ ನೀಡುತ್ತದೆ.

  2. ಇತ್ತೀಚಿನ ಟ್ರಾಫಿಕ್ ಮಾಹಿತಿ ಪಡೆಯಿರಿ

  ಗೂಗಲ್ ನ ಲೊಕೇಶನ್ ಆಧಾರಿತ ಮ್ಯಾಪ್ಸ್ ಸೇವೆಯನ್ನು ನಾವೆಲ್ಲರೂ ಬಳಸಿರುತ್ತೇವೆ. ಗೂಗಲ್ ಹೋಮ್ ಕೂಡ ಈ ಫೀಚರ್ ಅನ್ನು ಹೊಂದಿದ್ದು, ಈ ಕೆಳಗಿನ ವಾಯ್ಸ್ ಕಮಾಂಡ್ ನೀಡುವ ಮೂಲಕ ಟ್ರಾಫಿಕ್ ಮಾಹಿತಿ ಮತ್ತು ತಮ್ಮ ಗುರಿ ತಲುಪಲು ಬೇಕಾಗುವ ಸಮಯ ಇತ್ಯಾದಿಗಳನ್ನು ತಿಳಿದುಕೊಳ್ಳಬಹುದು.

  "ಓಕೆ ಗೂಗಲ್, ಹೌ ಇಸ್ ದಿ ಟ್ರಾಫಿಕ್ ಎರೌಂಡ್"

  "ಓಕೆ ಗೂಗಲ್, ಹೌ ಲಾಂಗ್ ಇಟ್ ವಿಲ್ ಟೇಕ್ ಮಿ ಟು ರೀಚ್"

  ಅಲ್ಲದೆ, ಗೂಗಲ್ ತನ್ನ ಬಳಕೆದಾರರಿಗೆ ಹೋಮ್ ಮತ್ತು ಆಫೀಸ್ ಲೊಕೇಶನ್ ಅನ್ನು ಸೆಟ್ ಮಾಡುವ ಅವಕಾಶ ನೀಡುತ್ತದಲ್ಲದೆ ಈ ಮೂಲಕ ಸುಲಭವಾಗಿ ನ್ಯಾವಿಗೇಟ್ ಮಾಡಲು ಅನುವು ಮಾಡಿಕೊಡುತ್ತದೆ.

  3. ಸಾವನ್,ವಿಂಕ್ ಇತ್ಯಾದಿಗಳ ಮೂಲಕ ಭಾರತೀಯ ಮ್ಯೂಸಿಕ್ ಆಲಿಸಿ

  "ಓಕೆ ಗೂಗಲ್ , ಪ್ಲೇ" ಅಥವಾ "ಓಕೆ ಗೂಗಲ್, ಪ್ಲೇ ಆನ್ ಗಾನಾ/ಸಾವನ್/ವಿಂಕ್" ಇತ್ಯಾದಿ ಕಮಾಂಡ್ಗಳ ಮೂಲಕ ಬಳಕೆದಾರರು ತಮ್ಮ ಆಯ್ಕೆಯ ಹಾಡುಗಳನ್ನು ಆಲಿಸಬಹುದು.

  4. ಕ್ರಿಕೆಟ್ ಸ್ಕೋರ್, ಮುಂದಿನ ಗೇಮ್ ನ ಮಾಹಿತಿ, ಗೇಮ್ ನ ಫಲಿತಾಂಶ ಪಡೆಯಿರಿ

  ಕ್ರೀಡಾ ಅಭಿಮಾನಿಗಳು ನಿರಾಶರಾಗದಂತೆ ಗೂಗಲ್ ಹೋಮ್ ನಲ್ಲಿ ವಾಯ್ಸ್ ಕಮಾಂಡ್ಗಳ ಮೂಲಕ ಕ್ರಿಕೆಟ್ ಸ್ಕೋರ್, ಮುಂದಿನ ಗೇಮ್ ನ ಮಾಹಿತಿ, ಗೇಮ್ ನ ಫಲಿತಾಂಶ ಮುಂತಾದವುಗಳನ್ನು ತಿಳಿಯುವ ಅವಕಾಶವನ್ನು ನೀಡಲಾಗಿದೆ.

  ಉದಾಹರಣೆಗೆ

  "ಓಕೆ ಗೂಗಲ್, ಟೆಲ್ ಮಿ ಅಬೌಟ್ ಲಾಸ್ಟ್ ಗೇಮ್/ಅಪ್ಕಮಿಂಗ್ ಗೇಮ್"

  "ಓಕೆ ಗೂಗಲ್, ಟೆಲ್ ಮಿ ಅಬೌಟ್ ಅಪ್ಕಮಿಂಗ್ ಐಪಿಎಲ್ ಗೇಮ್ಸ್"

  5. ಭಾರತೀಯ ಖಾದ್ಯಗಳ ರೆಸೀಪಿ ಪಡೆಯಿರಿ

  ಗೂಗಲ್ ಹೋಮ್ ನ ಮತ್ತೊಂದು ಆಕರ್ಷಕ ಫೀಚರ್ ಎಂದರೆ ನೀವು ಗೂಗಲ್ ಹೋಮ್ ಮೂಲಕ ನಿಮ್ಮ ನೆಚ್ಚಿನ ಭಾರತೀಯ ಖಾದ್ಯಗಳ ರೆಸೀಪಿ ಹುಡುಕಬಹುದು.

  ಉದಾಹರಣೆಗೆ,

  "ಓಕೆ ಗೂಗಲ್, ಟೆಲ್ ಮಿ ರೆಸೀಪಿ ಫಾರ್ XXXX ಡಿಶ್"

  ಈ ಕಮಾಂಡ್ ಮೂಲಕ ನಿಮಗೆ ಬೇಕಾದ ಖಾದ್ಯಗಳ ರೆಸೀಪಿ ಪಡೆಯಬಹುದು

  6.ನಿಮ್ಮ ಸ್ಮಾರ್ಟ್ಫೋನ್ ಸೈಲೆಂಟ್ ಮೋಡ್ ನಲ್ಲಿದ್ದರೂ ಅದನ್ನು ಹುಡುಕಬಹುದು

  ಎಷ್ಟೋ ಬಾರಿ ನಾವು ನಮ್ಮ ಸ್ಮಾರ್ಟ್ಫೋನ್ ಅನ್ನು ಎಲ್ಲೋ ಇಟ್ಟು ಮತ್ತೆಲ್ಲೋ ಹುಡುಕುತ್ತೇವೆ. ಇಂತಹ ಸಂದರ್ಭದಲ್ಲಿ ಗೂಗಲ್ ಹೋಮ್ ನಿಮ್ಮ ಸಹಾಯಕ್ಕೆ ಬರುತ್ತದೆ. "ಓಕೆ ಗೂಗಲ್, ರಿಂಗ್ ಮೈ ಫೋನ್" ಎಂಬ ವಾಯ್ಸ್ ಕಮಾಂಡ್ ನೀಡಿದರೆ ಸ್ಮಾರ್ಟ್ಫೋನ್ ಸೈಲೆಂಟ್ ಮೋಡ್ ನಲ್ಲಿದ್ದರೂ ರಿಂಗ್ ಆಗುತ್ತದೆ.

  ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಅಮೆಜಾನ್ ನಲ್ಲಿ ಮಾರಾಟ..!

  7. ಸ್ಮಾರ್ಟ್ ಲೈಟ್ಗಳನ್ನು ನಿಯಂತ್ರಿಸಿ

  ಸ್ಮಾರ್ಟ್ಲೈಟ್ ಗಳು ಇತ್ತೀಚೆಗೆ ಭಾರತದಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಗೂಗಲ್ ಹೋಮ್ ನಲ್ಲಿ ವಾಯ್ಸ್ ಕಮಾಂಡ್ ಮೂಲಕ ಈ ಸ್ಮಾರ್ಟ ಲೈಟ್ ಗಳನ್ನು ನಿಯಂತ್ರಿಸಬಹುದಾಗಿದ್ದು, ಅದಕ್ಕಾಗಿ ಈ ಕೆಳಗಿನ ವಾಯ್ಸ್ ಕಮಾಂಡ್ಗಳನ್ನು ಬಳಸಬಹುದು

  "ಓಕೆ ಗೂಗಲ್ , ಸ್ವಿಚ್ ಆಫ್ ಬೆಡ್ರೂಮ್ ಲೈಟ್ಸ್", "ಓಕೆ ಗೂಗಲ್, ಸ್ವಿಚ್ ಆನ್ ಬೆಡ್ರೂಮ್ ಲೈಟ್ಸ್", "ಓಕೆ ಗೂಗಲ್, ಟರ್ನ್ ದಿ ಡೆಸ್ಕ್ ಲೈಟ್ ಕಲರ್ ಟು ರೆಡ್" ಮೊದಲಾದ ವಾಯ್ಸ್ ಕಮಾಂಡ್ಗಳನ್ನು ಬಳಸಬಹುದು.

  8. ಫ್ಲೈಟ್ ಸ್ಟೇಟಸ್ ತಿಳಿಯಿರಿ

  "ಓಕೆ ಗೂಗಲ್, ವಾಟ್ ಇಸ್ ದಿ ಸ್ಟೇಟಸ್ ಆಫ್ ಫ್ಲೈಟ್ ನಂಬರ್ XXXX" ಎಂಬ ವಾಯ್ಸ್ ಕಮಾಂಡ್ ಮೂಲಕ ಬಳಕೆದಾರರು ಗೂಗಲ್ ಹೋಮ್ ಮೂಲಕ ತಮ್ಮ ಫ್ಲೈಟ್ ನ ಸ್ಟೇಟಸ್ ತಿಳಿಯಬಹುದಾಗಿದೆ.

  How To Link Aadhaar With EPF Account Without Login (KANNADA)
  9. ಸಮೀಪದ ರೀಟೈಲ್ ಮಳಿಗೆ ಹುಡುಕಿರಿ

  9. ಸಮೀಪದ ರೀಟೈಲ್ ಮಳಿಗೆ ಹುಡುಕಿರಿ

  ಗೂಗಲ್ ಹೋಮ್ ಮೂಲಕ ಬಳಕೆದಾರರು ತಮ್ಮ ಸಮೀಪದ ರೀಟೈಲ್ ಮಳಿಗೆ ಎಲ್ಲಿದೆ ಎಂಬ ಮಾಹಿತಿ ಪಡೆಯಬಹುದು. ಇದಕ್ಕಾಗಿ "ಓಕೆ ಗೂಗಲ್, ವೇರ್ ಇಸ್ ದಿ ನಿಯರೆಸ್ಟ್ ಜನರಲ್ ಸ್ಟೋರ್?" ಎಂಬ ವಾಯ್ಸ್ ಕಮಾಂಡ್ ಬಳಸಿದರೆ ಗೂಗಲ್ ನಿಮ್ಮ ಸಮೀಪದ ರೀಟೈಲ್ ಮಳಿಗೆಯನ್ನು ಹುಡುಕಿ ಕೊಡುತ್ತದೆ.

  10. ಭಾರತದ ಬಗ್ಗೆ ಕುತೂಹಲಕಾರಿ ಮಾಹಿತಿ ತಿಳಿಯಿರಿ

  ಭಾರತದ ಸಂಸ್ಕೃತಿ ಮತ್ತು ಇತಿಹಾಸ ಎಷ್ಟು ವಿಶೇಷವಾಗಿದೆ ಎಂಬುದು ನಮಗೆ ತಿಳಿದೇ ಇದೆ. ಗೂಗಲ್ ನಮಗೆ ನಮ್ಮ ದೇಶದ ಭವ್ಯತೆಯನ್ನು ತಿಳಿಸುವ ಯೋಜನೆ ಹೊಂದಿದ್ದು ಅದಕ್ಕಾಗಿ ನಾವು ಈ ಕೆಳಗಿನ ವಾಯ್ಸ್ ಕಮಾಂಡ್ ಬಳಸಬಹುದಾಗಿದೆ.

  "ಓಕೆ ಗೂಗಲ್, ಟೆಲ್ ಮೆ ಸಮ್ಥಿಂಗ್ ಇಂಟ್ರೆಸ್ಟಿಂಗ್ ಅಬೌಟ್ ಇಂಡಿಯಾ"

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Google has recently launched the much anticipated Google AI feature smart speaker in India. The smart speakers can be activated by using a voice commands 'Ok Google'. A user can ask 'n' number of questions and the AI is said to answer most of them correctly. A user can ask for weather reports, news updates, and details about a place, location, education and more.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more