2000 ರೂ.ಇದ್ದರೆ ನಿಮ್ಮ ಮನೆಯನ್ನು “ಸ್ಮಾರ್ಟ್” ಹೋಮ್ ಆಗಿಸುವ ಡಿವೈಸ್‌ಗಳು!

|

ಇತ್ತೀಚೆಗೆ ಭಾರತೀಯರು ತಮ್ಮ ಕೆಲಸಗಳಿಗೆ ಹೆಚ್ಚೆಚ್ಚು ಗೆಜೆಟ್ ಗಳನ್ನು ಬಳಸಲು ಆರಂಭಿಸುತ್ತಿದ್ದಾರೆ. ಹಾಗಂತ ಅದು ಕೇವಲ ಸ್ಮಾರ್ಟ್ ಫೋನ್ ಗಳಿಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ. ಇನ್ನಷ್ಟು ಸ್ಮಾರ್ಟ್ ಗೆಜೆಟ್ ಗಳ ಅವಲಂಬನೆಗೆ ಅವರು ತೊಡಗಿದ್ದಾರೆ. ಆದರೆ, ಹೋಮ್ ಆಟೋಮೇಷನ್ ಅನ್ನುವುದು ಭಾರತೀಯ ಮಾರುಕಟ್ಟೆಯಲ್ಲಿ ಇನ್ನಷ್ಟೇ ಪ್ರಚಲಿತಕ್ಕೆ ಬರಬೇಕಿದೆ.ಎಲ್ಲರೂ ಇನ್ನೂ ಇದನ್ನು ಪ್ರಯತ್ನಿಸುತ್ತಿಲ್ಲ.

2000 ರೂ.ಇದ್ದರೆ ನಿಮ್ಮ ಮನೆಯನ್ನು “ಸ್ಮಾರ್ಟ್” ಹೋಮ್ ಆಗಿಸುವ ಡಿವೈಸ್‌ಗಳು!

ಹೆಚ್ಚಿನ ಗ್ರಾಹಕರು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿಲ್ಲ ಮತ್ತು ಅಂತಹ ಡಿವೈಸ್ ಗಳನ್ನು ಕೊಂಡುಕೊಳ್ಳಲು ಸ್ವಲ್ಪ ಹಿಂದೇಟು ಹಾಕುವುದಿದೆ. ಯಾರು ಮೊದಲ ಬಾರಿಗೆ ಈ ರೀತಿ ಸ್ಮಾರ್ಟ್ ಗೆಜೆಟ್ ಗಳನ್ನು ತಮ್ಮ ಮನೆಗೆ ಆಯ್ಕೆ ಮಾಡಿಕೊಳ್ಳಲು ಬಯಸುತ್ತೀರೋ ಅವರಿಗಾಗಿ ನಾವಿಲ್ಲಿ 2000 ರುಪಾಯಿ ಒಳಗಿನ ಸ್ಮಾರ್ಟ್ ಗೆಜೆಟ್ ಗಳನ್ನು ತಿಳಿಸುತ್ತಿದ್ದೇವೆ ಮತ್ತು ಇವುಗಳನ್ನು ನಿಮ್ಮ ಮನೆಯಲ್ಲಿ ಅಳವಡಿಸುವ ಮೂಲಕ ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಬದಲಾಯಿಸಲು ಸಾಧ್ಯವಿದೆ.

Cacazi LED ಸ್ಮಾರ್ಟ್ ಡೋರ್ ಬೆಲ್ - ರುಪಾಯಿ 1,503.99

Cacazi LED ಸ್ಮಾರ್ಟ್ ಡೋರ್ ಬೆಲ್ - ರುಪಾಯಿ 1,503.99

ಈ ಸ್ಮಾರ್ಟ್ ಡೋರ್ ಬೆಲ್ ವಾಟರ್ ಪ್ರೂಫ್ ಆಗಿದೆ ಮತ್ತು ಕಡಿಮೆ ತೂಕದ್ದಾಗಿದೆ. ಈ ಡಿವೈಸ್ ನ ರೇಂಜ್ 300m ವರೆಗೂ ಇದೆ ಮತ್ತು ಕೆಲವು ಡೆಡಿಕೇಟೆಟ್ ಬಟನ್ ಗಳು ವಾಲ್ಯೂಮ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ. ಟ್ರೆಡಿಷನಲ್ ವಯರಿನ ಡೋರ್ ಬೆಲ್ ಗಳನ್ನು ಕನೆಕ್ಟ್ ಮಾಡುವುದಕ್ಕಿಂತ ಇದು ಬಹಳ ಸುಲಭದಲ್ಲಿ ಸಾಕೆಟ್ ಗೆ ಪ್ಲಗ್ ಇನ್ ಮಾಡುವಂತಿದೆ.

Sonoff ಸ್ಮಾರ್ಟ್ ವೈ-ಫೈ ಸ್ವಿಚ್ - ರುಪಾಯಿ 498

Sonoff ಸ್ಮಾರ್ಟ್ ವೈ-ಫೈ ಸ್ವಿಚ್ - ರುಪಾಯಿ 498

ನೀವು ಈ ಸ್ಮಾರ್ಟ್ ಸ್ವಿಚ್ ನ್ನು ಆಫ್/ ಆನ್ ಮಾಡಲು ಆಂಡ್ರಾಯ್ಡ್ ಅಥವಾ ಐಓಎಸ್ ಆಪ್ ನ್ನು ಬಳಕೆ ಮಾಡಬಹುದು ಮತ್ತು ಆಫ್/ಆನ್ ಮಾಡಲು ಸಮಯವನ್ನು ನಿಗದಿಗೊಳಿಸುವ ಅವಕಾಶವಿರುತ್ತದೆ. ಇದು ಅಮೇಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಗೆ ನೆರವು ನೀಡುತ್ತದೆ.

Anycast ವಯರ್ ಲೆಸ್ ಸ್ಮಾರ್ಟ್ ಸ್ಟ್ರೀಮಿಂಗ್ ಡಿವೈಸ್ – ರುಪಾಯಿ 999

Anycast ವಯರ್ ಲೆಸ್ ಸ್ಮಾರ್ಟ್ ಸ್ಟ್ರೀಮಿಂಗ್ ಡಿವೈಸ್ – ರುಪಾಯಿ 999

ನೀವು ಎನಿಕಾಸ್ಟ್ ಸ್ಟ್ರೀಮಿಂಗ್ ಡಾಂಗಲ್ ನ್ನು ಆಪಲ್ ಏರ್ ಪ್ಲೇ, ಮಿರಾಕಾಸ್ಟ್, DLNA ಮತ್ತು ಇತರೆಡೆಗಳಲ್ಲಿ ಕಾಂಟಾಕ್ಟ್ ವ್ಯೂ ಮಾಡಲು ಬಳಸಬಹುದು.ಇದು ನಿಮ್ಮ ಡಿವೈಸ್ ನ ಸ್ಕ್ರೀನಿನ ಮಿರರ್ ಇಮೇಜ್ ನ್ನು ದೊಡ್ಡ ಪರದೆಗಳಲ್ಲಿ ಉದಾಹರಣೆಗೆ ಟಿವಿಯಲ್ಲಿ ತೋರಿಸುವುದಕ್ಕೆ ನೆರವು ನೀಡುತ್ತದೆ.

ಗ್ಲೋಬಲ್ ಟೆಕ್ ವೈ-ಫೈ ಅನೇಬಲ್ಡ್ LED ಸ್ಟ್ರಿಪ್ - ರುಪಾಯಿ 1,380

ಗ್ಲೋಬಲ್ ಟೆಕ್ ವೈ-ಫೈ ಅನೇಬಲ್ಡ್ LED ಸ್ಟ್ರಿಪ್ - ರುಪಾಯಿ 1,380

ನಿಮ್ಮ ಸ್ಮಾರ್ಟ್ ಫೋನ್ ಅಥವಾ ವಾಯ್ಸ್ ಕಮಾಂಡ್ ಗಳನ್ನು ಉದಾಹರಣೆಗೆ ಅಮೇಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬಳಸಿ ನೀವು ಈ ಲೈಟ್ ಮತ್ತು ಅದರ ಬಣ್ಣವನ್ನು ಕಂಟ್ರೋಲ್ ಮಾಡಲು ವೈ-ಫೈ ಎಲ್ಇಡಿ ಸ್ಟ್ರಿಪ್ ನೆರವು ನೀಡುತ್ತದೆ.

ಸಿಸ್ಕಾ ಸ್ಮಾರ್ಟ್ ಬಲ್ಬ್ - ರುಪಾಯಿ 1,706

ಸಿಸ್ಕಾ ಸ್ಮಾರ್ಟ್ ಬಲ್ಬ್ - ರುಪಾಯಿ 1,706

ಈ ಸ್ಮಾರ್ಟ್ ಬಲ್ಟ್ ಗಳನ್ನು ಕೇವಲ ನಿಮ್ಮ ಸ್ಮಾರ್ಟ್ ಫೋನ್ ನಿಂದ ಮಾತ್ರವಲ್ಲ ಬದಲಾಗಿ ಅಮೇಜಾನ್ ಅಲೆಕ್ಸಾದಿಂದ ಕೂಡ ಕಂಟ್ರೋಲ್ ಮಾಡಲು ಅವಕಾಶವಿರುತ್ತದೆ.ಇದು 2 ಮಿಲಿಯನ್ ಕಲರ್ ಆಯ್ಕೆಗಳಿಗೆ ಬೆಂಬಲ ನೀಡುತ್ತದೆ ಮತ್ತು ಆಂಡ್ರಾಯ್ಡ್ ಜೊತೆಗೆ ಐಓಎಸ್ ನಲ್ಲೂ ಬೆಂಬಲ ನೀಡುತ್ತದೆ.

ಫಿಲಿಪ್ಸ್ ಹ್ಯೂ ಸ್ಮಾರ್ಟ್ ಬಲ್ಬ್ - ರುಪಾಯಿ 1,915

ಫಿಲಿಪ್ಸ್ ಹ್ಯೂ ಸ್ಮಾರ್ಟ್ ಬಲ್ಬ್ - ರುಪಾಯಿ 1,915

ಈ ಸ್ಮಾರ್ಟ್ ಬಲ್ಬ್ ಗಳು ಅಮೇಜಾನ್ ಇಕೋ, ಆಪಲ್ ಹೋಮ್ ಕಿಟ್ ಮತ್ತು ಗೂಗಲ್ ಹೋಮ್ ಗಳಲ್ಲಿ ಕೆಲಸ ಮಾಡುತ್ತದೆ. ಸುಮಾರು 3000K (Warm White) ನಿಂದ 6500K (Cool Day Light)ವರೆಗಿನ ಬಣ್ಣಗಳ ಆಯ್ಕೆಯನ್ನು ಇದು ಒದಗಿಸುತ್ತದೆ.

Eufy Genie ಸ್ಮಾರ್ಟ್ ಸ್ಪೀಕರ್ – ಅಂದಾಜು ರುಪಾಯಿ Rs 2,000

Eufy Genie ಸ್ಮಾರ್ಟ್ ಸ್ಪೀಕರ್ – ಅಂದಾಜು ರುಪಾಯಿ Rs 2,000

ಈ ಸ್ಮಾರ್ಟ್ ಸ್ಪೀಕರ್ ಅಮೇಜಾನ್ ಅಲೆಕ್ಸಾ ಅನೇಬಲ್ ಆಗಿರುವ ಸ್ಪೀಕರ್ ಆಗಿದೆ. ಇದರಲ್ಲಿ ಸುಮಾರು 10000+ ಸ್ಕಿಲ್ಸ್ ಮತ್ತು ಸೇವೆಗಳಿಗೆ ಆಕ್ಸಿಸ್ ಇದೆ.ಇದು 2.4GHz ವೈ-ಫೈ ನ್ನು ಬೆಂಬಲಿಸುತ್ತದೆ ಮತ್ತು ಇರದರಲ್ಲಿ 2W ಸ್ಪೀಕರ್ ಗಳಿವೆ.

ಫಿನೋವಾ ಮೋಷನ್ ಸೆನ್ಸರ್ ಲ್ಯಾಂಪ್ - ರುಪಾಯಿ 520

ಫಿನೋವಾ ಮೋಷನ್ ಸೆನ್ಸರ್ ಲ್ಯಾಂಪ್ - ರುಪಾಯಿ 520

ಈ ಮೋಷನ್ ಸೆನ್ಸರ್ ಲ್ಯಾಂಪ್ ನ ತೂಕ 45ಗ್ರಾಂ ಮತ್ತು ಇದನ್ನು ಆಪರೇಟ್ ಮಾಡಲು ಯಾವುದೇ ಬ್ಯಾಟರಿಯ ಅಗತ್ಯವಿಲ್ಲ. ಇದು ಸ್ವಯಂಚಾಲಿತವಾಗಿ ಚಲಿಸುತ್ತಿರುವ ವಸ್ತುವನ್ನು ಡಿಟೆಕ್ಟ್ ಮಾಡುತ್ತದೆ ಮತ್ತು ಒಂದು ನಿರ್ಧಿಷ್ಟ ರೇಂಜ್ ನಲ್ಲಿ ಅದರ ಮೂವ್ಮೆಂಟ್ ನ್ನು ಆಫ್/ಅನ್ ಆಗುತ್ತದೆ.

ಶಿಯೋಮಿ ವೈ-ಫೈ ಪವರ್ ಸ್ಟ್ರಿಪ್ - ರುಪಾಯಿ 1794.48

ಶಿಯೋಮಿ ವೈ-ಫೈ ಪವರ್ ಸ್ಟ್ರಿಪ್ - ರುಪಾಯಿ 1794.48

ಈ ಸ್ಮಾರ್ಟ್ ವೈ-ಫೈ ಪವರ್ ಸ್ಟ್ರಿಪ್ ನ್ನು ರಿಮೋಟ್ ನಲ್ಲಿ ಕಂಟ್ರೋಲ್ ಮಾಡಲು ಸಾಧ್ಯವಿದೆ. ಅಷ್ಟೇ ಪವರ್ ಉಳಿತಾಯಕ್ಕೆ ಇದು ನೆರವಾಗುತ್ತದೆ.ನೀವು ಸರಳವಾಗಿ ಎಂಐ ಹೋಮ್ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡು ಪವರ್ ಸ್ಟ್ರಿಪ್ ನ್ನು ಕಂಟ್ರೋಲ್ ಮಾಡಬಹುದು. ಸ್ಟ್ರಿಪ್ ಆಕ್ಟಿವೇಟ್ ಆಗಿರುವವರೆಗೆ ಟೈಮರ್ ಸೆಟ್ ಮಾಡಿ ಇಡುವುದಕ್ಕೂ ಇದು ಸಹಾಯಕ.

ಐಬಿಎಸ್ ವೈ-ಫೈ ಕ್ಯಾಮರಾ - ರುಪಾಯಿ 1,999

ಐಬಿಎಸ್ ವೈ-ಫೈ ಕ್ಯಾಮರಾ - ರುಪಾಯಿ 1,999

ಈ ಟೇಬಲ್ ಮೌಂಟೆಡ್ ಕ್ಯಾಮರಾವು ಆಂಡ್ರಾಯ್ಡ್, ಐಓಎಸ್, ವಿಂಡೋಸ್ ಹಾಗೂ ಇತರೆ ಪ್ರಸಿದ್ಧ ಫ್ಲಾಟ್ ಫಾರ್ಮ್ ಗಳಲ್ಲಿ ಬಳಸಲು ಅನುಕೂಲವಾಗಿದೆ. ಈ ವೈ-ಫೈ ಬೇಸ್ಡ್ ಕ್ಯಾಮರಾವು 5ಎಂಪಿ ಸೆನ್ಸರ್ ನ್ನು ಹೊಂದಿದ್ದು ಮೋಷನ್ ಸೆನ್ಸರ್ ರೆಕಾರ್ಡಿಂಗ್ ಗೆ ಬೆಂಬಲ ನೀಡುತ್ತದೆ.

Most Read Articles
Best Mobiles in India

English summary
As more customers in India get tech-savvy and depend on several gadgets to get the job done, it is natural that they are not just limited to smartphones but also to other connected gadgets to make their lives easier.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more