ಗೂಗಲ್‌ ಮ್ಯಾಪ್‌ ಬರೀ ದಾರಿ ಹುಡುಕೋಕಿಲ್ಲ..! ಮತ್ತೇಕೆ ಅಂತಿರಾ..?

By Gizbot Bureau
|

ಹಿಂದೆಲ್ಲಾ ಬೆಂಗಳೂರಿನಂಥ ಮಹಾನಗರವಲ್ಲದೇ, ಸಣ್ಣ ತಾಲೂಕು ಕೇಂದ್ರದಲ್ಲೂ ಅಡ್ರೆಸ್ ಹುಡುಕೋಕೆ ಪರದಾಡಿದ್ದು ಎಲ್ಲರಿಗೂ ನೆನಪಿದ್ದೆ ಇರುತ್ತೆ. ಸದ್ಯ ಈಗಿನ ಜನಾಂಗಕ್ಕೆ ಆ ಕಷ್ಟ ಇಲ್ಲ. ಯಾಕಂದ್ರೆ ಗೂಗಲ್ ಮ್ಯಾಪ್‌ ಬಂದು ಹಳ್ಳಿಯಿಂದ ದಿಲ್ಲಿವರೆಗೆ, ಕಾಡಿನಿಂದ ಸಮುದ್ರದವರೆಗೂ ಎಲ್ಲನೂ ತೋರಿಸುವಾಗ ಕಷ್ಟ ಎಲ್ಲಿಂದ ಬರುತ್ತೆ ಅಲ್ವಾ. ಈಗಂತೂ ಯಾರನ್ನು ಯಾರು ವಿಳಾಸ ಕೇಳೋಕೆ ಹೋಗಲ್ಲ.

ಕುಳಿತಲ್ಲಿಯೇ ವಿಶ್ವದ ಪ್ರತಿ ಬೀದಿಯ ಮಾಹಿತಿ ನೀಡುವ ಗೂಗಲ್ ಮ್ಯಾಪ್ ಆಪ್ ಒಂದಿದ್ದರೆ ಇಡೀ ಜಗತ್ತನ್ನೇ ಗೆದ್ದ ಭಾವ ಎಲ್ಲರಲ್ಲೂ ಮೂಡುವುದು ಖಂಡಿತ. ಗೂಗಲ್‌ ಮ್ಯಾಪ್‌ನ್ನು ಸಾಮಾನ್ಯವಾಗಿ ಎಲ್ಲರೂ ಅಡ್ರಸ್ ಹುಡುಕಲು ಬಳಸ್ತಾರೆ. ಆದ್ರೆ, ಗೂಗಲ್‌ ಮ್ಯಾಪ್‌ನಲ್ಲಿ ಬೇರೆ ಆಯ್ಕೆಗಳು ಸಹ ಇದ್ದು, ಬಳಕೆದಾರರಿಗೆ ಉಪಯುಕ್ತವಾದ ಅನೇಕ ವಿಶೇಷತೆಗಳನ್ನು ಹೊಂದಿವೆ. ಈ ಕೆಳಗಿನ 15 ಅಂಶಗಳನ್ನು ನೀವು ಗಮನಿಸಿದ್ರೆ ಖಂಡಿತ ನೀವು ಬೆರಗಾಗುತ್ತೀರಿ.. ಹಾಗಿದ್ರೆ, ಒಂದ್ಸಲ ಗೂಗಲ್‌ ಮ್ಯಾಪ್‌ನಲ್ಲಿ ಜರ್ನಿ ಮಾಡ್ಬನ್ನಿ..

ಪ್ರಯಾಣದಲ್ಲಿ ನಿಲುಗಡೆ..?

ಪ್ರಯಾಣದಲ್ಲಿ ನಿಲುಗಡೆ..?

ಸಬಹುದು. ಸಾಮಾನ್ಯವಾಗಿ ದೂರದ ಸ್ಥಳಗಳಿಗೆ ಪ್ರಯಾಣ ಮಾಡಬೇಕಾದ್ರೆ ನಾವು ಅಲ್ಲಿ, ಇಲ್ಲಿ ಊಟಕ್ಕೆ, ಫ್ಯೂಯೆಲ್ ತುಂಬಿಸಲು, ರೆಸ್ಟ್‌ಗಾಗಿ ವಾಹನವನ್ನು ನಿಲ್ಲಿಸಿಯೇ ನಿಲ್ಲಿಸುತ್ತೇವೆ. ಅದಕ್ಕಾಗಿಯೇ ನೀವು ನಿಮ್ಮ ಪ್ರಯಾಣವನ್ನು ಪ್ಲಾನ್ ಮಾಡುವಾಗಲೇ, ನಿಲುಗಡೆಗಳನ್ನು ಸೇರಿಸಬಹುದು ಅದಕ್ಕಾಗಿ ಗೂಗಲ್ ಆಯ್ಕೆಗಳನ್ನು ನೀಡಿದ್ದು, ನಿಮ್ಮ ಪ್ರಯಾಣದ ದಾರಿಯ ಬೆಸ್ಟ್ ಮತ್ತು ಟಾಪ್‌ ರೇಟೆಡ್ ಫ್ಯೂಯೆಲ್ ಸ್ಟೇಷನ್, ರೆಸ್ಟೋರೆಂಟ್‌ಗಳು, ಕಾಫೀ ಶಾಫ್‌ಗಳನ್ನು ನಿಮ್ಮ ಮುಂದಿಡುತ್ತದೆ.

ಸದ್ಯ ಹಾಗೂ ಭವಿಷ್ಯದ ಟ್ರಾಫಿಕ್ ಮಾಹಿತಿ..!

ಸದ್ಯ ಹಾಗೂ ಭವಿಷ್ಯದ ಟ್ರಾಫಿಕ್ ಮಾಹಿತಿ..!

ನಿಮ್ಮ ಪ್ರದೇಶದ ಟ್ರಾಫಿಕ್‌ ಬಗ್ಗೆ ತಿಳಿದುಕೊಳ್ಳಬೇಕೆಂದರೆ ನೀವು ಟ್ರಾಫಿಕ್‌ ಆಯ್ಕೆಯನ್ನು ಆನ್ ಮಾಡಬೇಕಾಗುತ್ತದೆ. ನಿಮ್ಮ ಆಪ್‌ನಲ್ಲಿ ವಜ್ರಾಕಾರದ ಲೇಯರ್ ಟ್ಯಾಪ್‌ ಮಾಡಿದರೆ ನಿಮಗೆ ಟ್ರಾಫಿಕ್‌ ಆಯ್ಕೆ ಸಿಗುತ್ತದೆ. ಕಂಪ್ಯೂಟರ್‌ನಲ್ಲಿ ಲೈವ್‌ ಟ್ರಾಫಿಕ್‌ವೀಕ್ಷಿಸಬಹುದಾಗಿದೆ. ಅದಲ್ಲದೇ ಟಿಪಿಕಲ್ ಟ್ರಾಫಿಕ್ ಎಂಬ ಆಯ್ಕೆಯನ್ನು ಆಯ್ದುಕೊಂಡರೆ ಸಾಮಾನ್ಯವಾಗಿ ಆ ಪ್ರದೇಶದಲ್ಲಿ ಯಾವಾಗಲೂ ಇರುವ ಟ್ರಾಫಿಕ್‌ನ್ನು ನಿಮ್ಮ ಮುಂದೆ ಗೂಗಲ್ ಮ್ಯಾಪ್‌ ಇಡುತ್ತದೆ.

ದಿಕ್ಕು ಈಗ ಸರಳ..!

ದಿಕ್ಕು ಈಗ ಸರಳ..!

ಮೊದಲು ಯಾವ ಕಡೆ ಹೋಗುತ್ತೇವೆ ಎಂಬ ಗೊಂದಲ ಕಾಡುತ್ತಿರುತ್ತೆ. ಈ ಸಮಸ್ಯೆಯನ್ನು ಅರಿತಿರುವ ಗೂಗಲ್ ಮ್ಯಾಪ್‌ ಪರಿಹಾರ ಕಂಡುಕೊಂಡಿದ್ದು, ನೀವು ಹೋಗುವ ದಾರಿ ತಪ್ಪಿದ್ದರೆ, ಹೋಗುವ ದಾರಿ ಕಡೆ ಬಾಣದ ಗುರುತನ್ನು ತೋರಿಸುತ್ತದೆ. ಇಷ್ಟು ದಿನ ನಾವು ದಿಕ್ಸೂಚಿ ಗುರುತನ್ನು ಮಾತ್ರ ನೋಡುತ್ತಿದ್ದೇವು, ಇನ್ಮೇಲೆ ಬಾಣದ ಗುರುತನ್ನು ಸಹ ಗೂಗಲ್ ಮ್ಯಾಪ್‌ನಲ್ಲಿ ಕಾಣಬಹುದಾಗಿದೆ.

ಕಟ್ಟಡದ ಒಳಗಡೆಯೂ ಮ್ಯಾಪ್‌..!

ಕಟ್ಟಡದ ಒಳಗಡೆಯೂ ಮ್ಯಾಪ್‌..!

ನೀವು ಕ್ರಿಕೆಟ್‌ಅಥವಾ ಫುಟ್ಬಾಲ್ ನೋಡಲು ದೊಡ್ಡ ಮೈದಾನಕ್ಕೆ ಹೋಗಿರುತ್ತೀರಿ ಆಗ ನಿಮ್ಮ ಸೀಟ್‌ ನಂಬರ್ ಹುಡುಕೋದು ಕಷ್ಟ. ಅದರಂತೆಯೇ ಮಾಲ್‌ಗಳಲ್ಲಿ ನಿಮ್ಮ ಫೇವರಿಟ್ ಸ್ಟೋರ್ ಹುಡುಕಲು ಕಷ್ಟವಾಗಬಹುದು. ಅದಕ್ಕಾಗಿಯೇ ಗೂಗಲ್ ಮ್ಯಾಪ್‌ ಕಟ್ಟಡದ ಒಳಗಡಯೂ ನ್ಯಾವಿಗೇಷನ್ ಆಯ್ಕೆಯನ್ನು ನೀಡಿದ್ದು, ಸುಲಭವಾಗಿಯೇ ನಿಮ್ಮ ಸೀಟು ಮತ್ತು ನೆಚ್ಚಿನ ಸ್ಟೋರ್‌ ಕೂಡ ಸಿಗುತ್ತದೆ.

ಕಟ್ಟಡದೊಳಗಿನ ಸ್ಥಳಗಳನ್ನು ನೋಡಿ..!

ಕಟ್ಟಡದೊಳಗಿನ ಸ್ಥಳಗಳನ್ನು ನೋಡಿ..!

ಈಗಾಗಲೇ ಮೇಲೆ ತಿಳಿಸಿದಂತೆ ಕಟ್ಟಡದ ಒಳಗಡೆಯೂ ಗೂಗಲ್ ಮ್ಯಾಪ್‌ ಕಾರ್ಯನಿರ್ವಹಿಸುತ್ತದೆ. ಆದ್ರೆ, ಅದಲ್ಲ ವಿಷಯ ಗೂಗಲ್‌ ಮ್ಯಾಪ್ಸ್‌ನಲ್ಲಿ ಪ್ರಸಿದ್ಧ ಕಟ್ಟಡಗಳ ಒಳಗಿನ ಸ್ಥಳಗಳನ್ನು ನೋಡಬಹುದು. ಹೌದು, ಮ್ಯೂಸಿಯಂ, ಏರ್‌ಪೋರ್ಟ್‌, ಪ್ರಮುಖ ಕಟ್ಟಡದೊಳಗಿನ ಸ್ಥಳಗಳನ್ನು 360 ಡಿಗ್ರಿ ಪನೋರಮಾ ಎಫೆಕ್ಟ್‌ನಲ್ಲಿ ನೋಡಬಹುದಾಗಿದೆ. ಇದರಿಂದ ಯಾವ ಸ್ಥಳ ಹೇಗಿದೆ..? ಎಂಬುದನ್ನು ಕುಳಿತಲ್ಲಿಯೇ ತಿಳಿದುಕೊಳ್ಳಬಹುದು.

ಕೊನೆ ರೈಲು ಯಾವುದು..?

ಕೊನೆ ರೈಲು ಯಾವುದು..?

ಹಲವು ನಗರಗಳಲ್ಲಿ ಸಾರ್ವಜನಿಕ ಸಾರಿಗೆ ಸೇವೆಯಾಘಿರುವ ಬಸ್ ಮತ್ತು ರೈಲು ರಾತ್ರಿ ಪೂರ್ತಿ ಕಾರ್ಯನಿರ್ವಹಿಸುವುದಿಲ್ಲ. ಅದಕ್ಕಾಗಿಯೇ ಗೂಗಲ್ ಮ್ಯಾಪ್ ನಿಮಗೆ ಕೊನೆ ರೈಲು ಎಷ್ಟು ಗಂಟೆಗೆ ಬರುತ್ತೆ ಎಂಬುದನ್ನು ತೋರಿಸಿ ನಿಮ್ಮನ್ನು ಚಿಂತೆಯಿಂದ ದೂರವಿಡುತ್ತದೆ. ಅದಕ್ಕಾಗಿ ನೀವು ಮಾಡಬೇಕಾಗಿದ್ದು ಇಷ್ಟೇ, ಟ್ರಿಪ್ ರೂಟ್ ಆಯ್ಕೆ ಮಾಡುವಾಗ ರೈಲಿನ ಚಿಹ್ನೆ ಮೇಲೆ ಕ್ಲಿಕ್ ಮಾಡಿ ಡಿಪಾರ್ಟ್ ಆಯ್ಕೆಯನ್ನು ಆಯ್ದುಕೊಂಡು ಲಾಸ್ಟ್ ಮತ್ತು ಡೋನ್ ಆಪ್ಷನ್ ಕ್ಲಿಕ್ ಮಾಡಿದ್ರೆ ಸಾಕು. ಆಗ ಗೂಗಲ್ ಮ್ಯಾಪ್ ನಿಮಗೆ ಕೊನೆ ಬಸ್ ಮತ್ತು ರೈಲು ಯಾವುದೆಂದು ತಿಳಿಸುತ್ತದೆ.

ಒಂದೇ ಕೈಯಲ್ಲಿ ಜೂಮ್..!

ಒಂದೇ ಕೈಯಲ್ಲಿ ಜೂಮ್..!

ನಾವೆಲ್ಲಾ ಸ್ಮಾರ್ಟ್‌ಫೋನ್‌ನಲ್ಲಿ ಎರಡು ಬೆರಳುಗಳ ಮೂಲಕ ಜೂಮ್‌ ಮಾಡುವುದನ್ನು ಬಹಳ ಕರಗತ ಮಾಡಿಕೊಂಡಿದ್ದೇವೆ. ಆದರೆ, ಗೂಗಲ್ ಮ್ಯಾಪ್‌ ಇನ್ನಷ್ಟು ಸರಳವಾಗಿರುವ ಜೂಮ್ ಆಯ್ಕೆಯನ್ನು ನೀಡಿದ್ದು, ಸ್ಕ್ರೀನ್‌ನ್ನು ಜಸ್ಟ್‌ ಡಬಲ್‌ ಟ್ಯಾಪ್ ಮಾಡಿ ಸ್ವೈಪ್ ಮಾಡಿದ್ರೆ ಸಾಕು ಜೂಮ್ ಇನ್‌ ಮತ್ತು ಜೂಮ್‌ ಔಟ್ ಸುಲಭವಾಗಿ ಆಗುತ್ತದೆ.

ನಿಮ್ಮ ಇಷ್ಟದ ಸ್ಥಳಗಳನ್ನು ಉಳಿಸಿ

ನಿಮ್ಮ ಇಷ್ಟದ ಸ್ಥಳಗಳನ್ನು ಉಳಿಸಿ

ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸ್ಥಳಗಳನ್ನು ಗುರುತಿಸಿಟ್ಟುಕೊಳ್ಳಬಹುದು. ನಿಮ್ಮ ಫ್ರೇಂಡ್ ಹೋಮ್, ರೆಸ್ಟೋರೆಂಟ್ ಮುಂತಾದ ಸ್ಥಳಗಳನ್ನು ಗೂಗಲ್ ಮ್ಯಾಪ್‌ನಲ್ಲಿ ಲೇಬಲ್ ಮಾಡಿ ಇಟ್ಟುಕೊಳ್ಳಬಹುದು. ಇದು ಪ್ರತಿ ಬಾರಿ ವಿವರವಾದ ವಿಳಾಸವನ್ನು ಟೈಪ್ ಮಾಡುವುದನ್ನು ತಪ್ಪಿಸುತ್ತದೆ. ಲೋಕೆಷನ್ ಸರ್ಚ್‌ನಲ್ಲಿ ಅಡ್ರೆಸ್ ಹಾಕುವ ಮೂಲಕ ಅಥವಾ ಸ್ಕ್ರೀನ್ ಮೇಲೆ ಲಾಂಗ್ ಪ್ರೆಸ್ ಮಾಡುವ ಮೂಲಕ ಮ್ಯಾಪ್‌ನಲ್ಲಿ ಪಿನ್ ಮಾಡಬಹುದಾಗಿದೆ.

ಆಫ್‌ಲೈನ್ ಮ್ಯಾಪ್ಸ್‌ ಸೃಷ್ಟಿಸಿ

ಆಫ್‌ಲೈನ್ ಮ್ಯಾಪ್ಸ್‌ ಸೃಷ್ಟಿಸಿ

ಗೂಗಲ್ ಮ್ಯಾಪ್‌ನಿಂದ ಮತ್ತೊಂದು ಉಪಯೋಗವೆನೆಂದರೆ ನೀವು ಮ್ಯಾಪ್‌ನ ಒಂದು ಭಾಗವನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಇದರ ಮೂಲಕ ನಿಮ್ಮ ಹಳೆಯ ಸ್ಮಾರ್ಟ್‌ಪೋನ್ ಅನ್ನು ಜಿಪಿಎಸ್‌ ಡಿವೈಸ್ ಆಗಿ ಬೈಕ್ ಮತ್ತು ಕಾರ್‌ಗಳಲ್ಲಿ ಬಳಸಬಹುದು. ಆಫ್‌ಲೈನ್ ಮ್ಯಾಪ್ಸ್‌ ಆಯ್ಕೆಯಲ್ಲಿ ಆಪ್ ಹಾರಿಜಂಟಲ್ ಸೆಲೆಕ್ಷನ್ ಟೂಲ್ ನೀಡುತ್ತದೆ ಮತ್ತು ಎಷ್ಟು ಸ್ಥಳಾವಕಾಶ ಬೇಕು ಎಂಬುದನ್ನು ಕೇಳುತ್ತದೆ. ವೈ-ಫೈ ಸಂಪರ್ಕವಾದಾಗ ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಿರುವ ಮ್ಯಾಪ್ ಅಪ್‌ಡೇಟ್‌ ಆಗುತ್ತದೆ.

ಟ್ರಕ್ಕಿಂಗ್‌ಗೂ ಆಯ್ಕೆ

ಟ್ರಕ್ಕಿಂಗ್‌ಗೂ ಆಯ್ಕೆ

ನೀವು ಬಿಡುವಿನ ಸಮಯದಲ್ಲಿ ಟ್ರಕ್ಕಿಂಗ್ ಮತ್ತು ಕಾಡುಗಳಲ್ಲಿ ಅಲೆದಾಡುವ ಹವ್ಯಾಸ ಹೊಂದಿದ್ದರೆ, ನಿಮಗೆ ಖಂಡಿತ ಗೂಗಲ್‌ ಮ್ಯಾಪ್ಸ್‌ ಸಹಾಐ ಮಾಡುತ್ತದೆ. ಹೌದು, ಗೂಗಲ್‌ ಮ್ಯಾಪ್ಸ್‌ನಲ್ಲಿ ಪ್ರಮುಖ ಟ್ರಕ್ಕಿಂಗ್ ಸ್ಪಾಟ್ ಮತ್ತು ಕಾಡುಗಳ ನಕ್ಷೆ ಲಭ್ಯವಿದ್ದು, ಅದರ ಮೂಲಕ ನೀವು ಯಶಸ್ವಿಯಾಗಿ ಸುತ್ತಾಡಬಹುದು. ಆದರೆ, ಟ್ರಕ್ಕಿಂಗ್‌ ಸ್ಪಾಟ್‌ ಹಾಗೂ ಅರಣ್ಯದಲ್ಲಿ ನೆಟ್‌ವರ್ಕ್‌ ಸಮಸ್ಯೆ ಇರುವುದರಿಂದ ಮ್ಯಾಪ್‌ನ್ನು ಆಫ್‌ಲೈನ್‌ನಲ್ಲಿ ಸೇವ್‌ ಮಾಡಿಕೊಳ್ಳುವುದು ಮರೆಯಬೇಡಿ.

ಟೋಲ್‌ ಹಣ ಉಳಿಸಿ..!

ಟೋಲ್‌ ಹಣ ಉಳಿಸಿ..!

ಬೆಂಗಳೂರಿನಿಂದ ತೂಮಕೂರಿಗೆ ಹೋಗಬೇಕೆಂದರೂ 2 ರಿಂದ 3 ಟೋಲ್‌ ಪ್ಲಾಜಾಗಳು ನಮಗೆ ಸಿಗುತ್ತವೆ. 3 ಅಲ್ಲ ಅಂದ್ರೂ ಎರಡರಲ್ಲಿ ಟೋಲ್‌ ಹಣ ಪಾವತಿಸಲೇಬೇಕಾಗಿದೆ. ಅದಕ್ಕಾಗಿಯೇ ಗೂಗಲ್ ಮ್ಯಾಪ್‌ನಲ್ಲಿ ಆಯ್ಕೆಯೊಂದು ಲಭ್ಯವಿದ್ದು, ಟೋಲ್‌ ಮುಕ್ತ ರಸ್ತೆಗಳಲ್ಲಿ ಪ್ರಯಾಣಿಸಬಹುದು. ಹೌದು, ಗೂಗಲ್‌ ಮ್ಯಾಪ್‌ನಲ್ಲಿ ಕೇವಲ ಉಚಿತ ರಸ್ತೆಗಳನ್ನು ತೋರಿಸುವ ಆಯ್ಕೆ ಮಾಡಿಕೊಂಡ್ರೆ ಮುಗಿತು. ರೂಟ್‌ ಆಯ್ಕೆಯ ಮೇಲೆ ಜಸ್ಟ್ ಟ್ಯಾಪ್‌ ಮಾಡಿ ನಂತರ ಟೋಲ್‌ ಆಯ್ಕೆಯನ್ನು ಆಫ್ ಮಾಡಿದರೆ ಮುಗಿತು. ಎಲ್ಲಿವರೆಗಾದ್ರೂ ಟೋಲ್‌ ಮುಕ್ತವಾಗಿ ಪ್ರಯಾಣಿಸಬಹುದು.

ಪಾರ್ಕಿಂಗ್ ಸ್ಥಳ ಉಳಿಸಿ

ಪಾರ್ಕಿಂಗ್ ಸ್ಥಳ ಉಳಿಸಿ

ನಿಮಗೆ ಪಾರ್ಕಿಂಗ್ ಸ್ಥಳ ಮರೆಯುವ ಅಭ್ಯಾಸ ಇದ್ದರೆ ಇನ್ಮುಂದೆ ಚಿಂತಿಸುವ ಅಗತ್ಯವಿಲ್ಲ. ಯಾಕೆಂದರೆ ಗೂಗಲ್ ಮ್ಯಾಪ್ ಬಳಸಿಕೊಂಡು ನಿಮ್ಮ ಪಾರ್ಕಿಂಗ್ ಸ್ಥಳವನ್ನು ಪಿನ್ ಮಾಡಿದರೆ ಸಾಕು. ಗೂಗಲ್ ಮ್ಯಾಪ್ ಲೋಕೆಷನ್ ಸೆಟ್ಟಿಂಗ್ಸ್‌ ಆಧಾರದಲ್ಲಿ ಪಾರ್ಕಿಂಗ್ ಲೋಕೆಷನ್‌ನ್ನು ಗುರುತಿಸುತ್ತದೆ. ವಾಹನವನ್ನು ನಿಲ್ಲಿಸಿದ ನಂತರ ನೀಲಿ ಚುಕ್ಕೆಯ ಮೇಲೆ ಟ್ಯಾಪ್ ಮಾಡಿ ಸೇವ್ ಯುವರ್ ಪಾರ್ಕಿಂಗ್ ಆಯ್ಕೆಯನ್ನು ಆಯ್ದುಕೊಳ್ಳಿ. ಅದಲ್ಲದೇ ಗೂಗಲ್ ಅಸಿಸ್ಟಂಟ್‌ಗೂ ಪಾರ್ಕಿಂಗ್ ಲೋಕೆಷನ್ ಉಳಿಸಲು ಹೇಳುವ ಆಯ್ಕೆ ನೀಡಲಾಗಿದೆ.

ಲೊಕೇಷನ್ ಶೇರ್ ಮಾಡಿ

ಲೊಕೇಷನ್ ಶೇರ್ ಮಾಡಿ

ವಾಟ್ಸ್‌ಆಪ್‌ನಂತೆಯೇ ಗೂಗಲ್‌ ಮ್ಯಾಪ್ಸ್‌ನಲ್ಲಿಯೂ ಲೊಕೇಷನ್ ಹಂಚಿಕೊಳ್ಳುವ ಆಯ್ಕೆ ಲಭ್ಯವಿದೆ. ಯಾರಿಗಾದ್ರೂ ನೀವು ಸಿಗಬೇಕೆಂದರೆ ನಿಮ್ಮ ಸ್ಥಳವನ್ನು ಶೇರ್ ಮಾಡಬಹುದಾಗಿದ್ದು, ಒಂದಿಷ್ಟು ಸಮಯದ ಮಿತಿಯೊಂದಿಗೆ ಲೊಕೇಷನ್ ಶೇರಿಂಗ್ ವ್ಯವಸ್ಥೆಯನ್ನು ಗೂಗಲ್ ನೀಡಿದ್ದು, ನೀವು ಲೊಕೇಶನ್‌ ಆಫ್‌ ಮಾಡುವವರೆಗೂ ಲಭ್ಯವಿರುತ್ತದೆ. ಅದಲ್ಲದೇ ಡ್ರೈವ್ ಮಾಡಬೇಕಾದ್ರೂ ಲೊಕೇಷನ್ ಶೇರ್ ಮಾಡಬಹುದಾಗಿದ್ದು, ನಿಮ್ಮ ಪ್ರವಾಸ ಪ್ರಗತಿಯಲ್ಲಿರುವಾಗಲೇ ಅಪ್‌ಡೇಟೆಡ್‌ ಲೊಕೇಷನ್ ನಿಮ್ಮ ಸ್ನೇಹಿತರಿಗೆ ತಲುಪುತ್ತದೆ.

ಪಾರ್ಟಿ, ಟೂರ್‌ ಪ್ಲಾನ್‌ ಮಾಡಿ

ಪಾರ್ಟಿ, ಟೂರ್‌ ಪ್ಲಾನ್‌ ಮಾಡಿ

ನೀವು ನಿಮ್ಮ ಸ್ನೇಹಿತರೊಂದಿಗೆ ನೈಟ್‌ಔಟ್‌ ಪ್ಲಾನ್ ಮಾಡ್ತಿದ್ದೀರಾ..? ಆಗಾದ್ರೆ, ನಿಮಗೆ ಗೂಗಲ್‌ ಮ್ಯಾಪ್ಸ್ ಒಂದೊಳ್ಳೆ ಮಾರ್ಗದರ್ಶಿ ಆಗಬಹುದು. ನಿಮ್ಮ ಆಯ್ಕೆಯ ಸ್ಥಳಗಳನ್ನು ಪಟ್ಟಿ ಮಾಡಿ ಮ್ಯಾಪ್‌ನಲ್ಲಿಯೇ ಶೇರ್‌ ಮಾಡಿ ನಿಮ್ಮ ಸ್ನೇಹಿತರ ಅಭಿಪ್ರಾಯ ಕೇಳಬಹುದಾಗಿದೆ. ಮೊದಲು ಲೊಕೇಷನ್ ಸರ್ಚ್ ಮಾಡಿ ಶೇರ್ ಆಯ್ಕೆ ಕ್ಲಿಕ್ ಮಾಡಿ, ನಂತರ ಆಡ್‌ ಟು ಶಾರ್ಟ್‌ಲಿಸ್ಟ್‌ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ್ರೆ ನಿಮಗೆ ಹೊಸ ಶಾರ್ಟ್‌ಲಿಸ್ಟ್ ಆಡ್ ಆಗಿರುತ್ತದೆ. ನೀವು ಬೇರೆ ಬೇರೆ ಸ್ಥಳಗಳನ್ನು ಇದರಲ್ಲಿ ಸೇರಿಸಿಕೊಳ್ಳುತ್ತಾ ಹೋಗಬಹುದು. ಆಗೆಯೇ ನಿಮ್ಮ ಸ್ನೇಹಿತರಿಗೆ ಅಭಿಪ್ರಾಯ ತಿಳಿಸಲು ಶೇರ್ ಮಾಡಬಹುದು.

ಕಾರ್ ಸ್ಪೀಕರ್‌ನಲ್ಲಿ ವಾಯ್ಸ್‌ ನ್ಯಾವಿಗೇಷನ್‌

ನೀವು ಬ್ಲೂಟೂಥ್‌ ಮೂಲಕ ನಿಮ್ಮ ಕಾರಿಗೆ ನಿಮ್ಮ ಸ್ಮಾರ್ಟ್‌ಫೋನ್‌ನ್ನು ಕನೆಕ್ಟ್ ಮಾಡಿದ್ದರೆ, ಸುಲಭವಾಗಿಯೇ ನೀವು ನಿಮ್ಮ ಕಾರ್‌ ಸ್ಪೀಕರ್‌ನಲ್ಲಿ ವಾಯ್ಸ್‌ ನ್ಯಾವಿಗೇಷನ್‌ ಕೇಳಬಹುದಾಗಿದೆ. ಇದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ. ಸೆಟ್ಟಿಂಗ್ಸ್‌ಗೆ ಹೋಗಿ, ನಂತರ ನ್ಯಾವಿಗೇಷನ್ ಸೆಟ್ಟಿಂಗ್ಸ್‌ ಆಯ್ಕೆ ಮಾಡಿ, ಅಲ್ಲಿ ಪ್ಲೇ ಆಸ್ ಬ್ಲೂಟೂಥ್ ಫೋನ್‌ ಕಾಲ್‌ ಎಂಬ ಆಪ್ಶನ್ ಕ್ಲಿಕ್ ಮಾಡಿ.

Best Mobiles in India

Read more about:
English summary
16 Useful Things To Do With Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X