ಡಿಸೆಂಬರ್‌ 31 ರಂದು ವಾಟ್ಸ್‌ಆಪ್‌ನಲ್ಲಿ ದಾಖಲೇ ನಿರ್ಮಿಸಿದ ಭಾರತೀಯರು!! ಏನದು ಗೊತ್ತಾ?

ಡಿಸೆಂಬರ್ 31 ನೇ ತಾರೀಖಿನಂದು ಕೇವಲ ಒಂದೇ ದಿನದಲ್ಲಿ 14 ಬಿಲಿಯನ್ ಮೆಸೇಜ್‌ಗಳನ್ನು ಭಾರತೀಯರು ವಿನಿಮಯ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ.

|

ಪ್ರಪಂಚದಲ್ಲಿಯೇ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಂಜರ್ ಆಪ್‌ "ವಾಟ್ಸ್‌ಆಪ್" ಮೂಲಕ ಭಾರತೀಯರು ಹೊಸವರ್ಷದ ಸಂಭ್ರಮವನ್ನು ಜೋರಾಗಿಯೇ ಆಚರಿಸಿದ್ದಾರೆ.!! ಹೌದು, ಡಿಸೆಂಬರ್ 31 ನೇ ತಾರೀಖಿನಂದು ಕೇವಲ ಒಂದೇ ದಿನದಲ್ಲಿ 14 ಬಿಲಿಯನ್ ಮೆಸೇಜ್‌ಗಳನ್ನು ಭಾರತೀಯರು ವಿನಿಮಯ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ.

ಫೇಸ್‌ಬುಕ್ ಮಾಲಿಕತ್ವದ ಮೆಸೇಂಜಿಗ್ ಆಪ್ ವಾಟ್ಸ್‌ಆಪ್ ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿದ್ದು, ದೀಪಾವಳಿ ಹಬ್ಬದ ನಂತರ ಭಾರತೀಯರು ಹೆಚ್ಚು ಮೆಸೇಜ್‌ಗಳನ್ನು ಹೊಸವರ್ಷದ ಸಂಭ್ರಮಕ್ಕೆ ವಿನಿಮಯ ಮಾಡಿದ್ದಾರೆ ಎಂದು ತಿಳಿಸಿದೆ. ಕೇವಲ ಒಂದೇ ದಿನದಲ್ಲಿ 14 ಬಿಲಿಯನ್ ಮೆಸೇಜ್‌, 3.1 ಬಿಲಿಯನ್ ಫೋಟೊ, 700 ಮಿಲಿಯನ್ GIF ಇಮೇಜ್‌ ಮತ್ತು 610 ಮಿಲಿಯನ್ ವಿಡಿಯೋಗಳು ವಾಟ್ಸ್‌ಆಪ್‌ನಲ್ಲಿ ಹರಿದಾಡಿವೆ. ಎಂದು ವಾಟ್ಸ್‌ಆಪ್ ತಿಳಿಸಿದೆ.

ಡಿಸೆಂಬರ್‌ 31 ರಂದು ವಾಟ್ಸ್‌ಆಪ್‌ನಲ್ಲಿ ದಾಖಲೇ ನಿರ್ಮಿಸಿದ ಭಾರತೀಯರು!! ಏನದು?

2017 ರಲ್ಲಿ ಫೇಸ್‌ಬುಕ್ ಸಂಸ್ಥಾಪಕನ ಗುರಿಯೇನು? ಏನಾದರೂ ಸಾಧಿಸಬೇಕೆ ಈ ಲೇಖನ ಓದಿ!!

ಹೊಸ ವರ್ಷದ ಸಂಭ್ರಮಕ್ಕೆ ಭಾರತೀಯರು ವಿನಿಮಯ ಮಾಡಿರುವ ಮೆಸೇಜ್‌ಗಳ ಸಂಖ್ಯೆ, ಈ ಮೊದಲು ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಾಖಲಾಗಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವಾಟ್ಸ್‌ಆಪ್ ಹೇಳಿದೆ. ದೀಪಾವಳಿ ಹಬ್ಬದ ಸಂಭ್ರಮಕ್ಕೆ ಭಾರತೀಯರು 8 ಬಿಲಿಯನ್‌ ಮೆಸೇಜ್‌ಗಳನ್ನು ವಿನಿಮಯ ಮಾಡಿಕೊಂಡಿದ್ದರು ಎಂದು ಮಾಹಿತಿ ಬಿಡುಗಡೆ ಮಾಡಿದೆ.

ಡಿಸೆಂಬರ್‌ 31 ರಂದು ವಾಟ್ಸ್‌ಆಪ್‌ನಲ್ಲಿ ದಾಖಲೇ ನಿರ್ಮಿಸಿದ ಭಾರತೀಯರು!! ಏನದು?

ಸ್ಮಾರ್ಟ್‌ಫೋನ್‌ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ವಾಟ್ಸ್‌ಆಪ್‌ ಬಳಸುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ವಾಟ್ಸ್‌ಆಪ್‌ನಲ್ಲಿ ವಿನಿಮಯವಾಗುತ್ತಿರುವ ಮೇಸೆಜ್‌ಗಳ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ.ಇನ್ನು ವಾಟ್ಸ್‌ಆಪ್ ಇತ್ತೀಚಿಗಷ್ಟೆ ಪರಿಚಯಿಸಿರುವ GIF ಇಮೇಜ್‌ಗಳು ವಿಡಿಯೋಗಳು ಹೆಚ್ಚು ವಿನಿಮಯವಾಗಿರುವುದು ವಾಟ್ಸ್‌ಆಪ್‌ ಸಂಸ್ಥೆಗೆ ಅಚ್ಚರಿಗೊಳಿಸಿದೆ.

Best Mobiles in India

English summary
ndians hit a record high in WhatsApp's India history by sending 14 billion messages on December 31, 2016, the New Year eve.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X