ಫೈರ್ಫಾಕ್ಸ್ ಗೌಪ್ಯತೆ ಮತ್ತು ಭದ್ರತೆಯನ್ನು ಖಚಿತಪಡಿಸುವಂ ಮೊಬೈಲ್ ಎಕ್ಸಟೆನ್ಶನ್ಸ್!!

By Shayista Suman
|

ಇಂಟರ್ನೆಟ್ ಸೌಲಭ್ಯ ಹೆಚ್ಚಿದಂತೆ ಅದರಿಂದಾಗುವ ಅಪಾಯಗಳು ಕಡಿಮೆ ಏನಿಲ್ಲ. ಜಾಲತಾಣಗಳಲ್ಲಿ ನಾವು ಹಂಚಿಕೊಳ್ಳುವ ಖಾಸಗಿ ವಿಚಾರಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುವುದು ಸಾಮಾನ್ಯ. ಏಕೆಂದರೆ ಇಂಟರ್ನೆಟ್ನಿಂದ ಎಷ್ಟೋಂದು ಅನುಕೂಲಗಳಿವೆಯೋ ಹಾಗೆಯೇ ಅಷ್ಟೇ ಅಪಾಯವೂ ಇದೆ. ಕೆಲವೊಮ್ಮೆ ತಿಳಿದು ತಿಳಿಯದಯೋ ಬಳಕೆದಾರರ ಮಾಹಿತಿಗಳು ಸೋರಿಕೆಯಾಗಿ ಅಪಾಯಗಳು ಎದುರಾಗಿರುವುದನ್ನ ನಾವು ಆಗಾಗ್ಗ ನೋಡುತ್ತಿರುತ್ತೇವೆ. ಈ ಸಮಸ್ಯೆಗೆ ಪರಿಹಾರ ಏನು ಎಂಬ ಪ್ರಶ್ನೆಗಳಿಗೆ ಫೈರ್ಫಾಕ್ಸ್ ಮೊಬೈಲ್ನಲ್ಲಿ ಕೆಲವು ಐಡಿಯಾಗಳಿವೆ ಅವು ಏನು ಎಂಬುದು ನೋಡೋಣ ಬನ್ನಿ..

ಫೈರ್ಫಾಕ್ಸ್ ಗೌಪ್ಯತೆ ಮತ್ತು ಭದ್ರತೆಯನ್ನು ಖಚಿತಪಡಿಸುವಂ ಮೊಬೈಲ್ ಎಕ್ಸಟೆನ್ಶನ್ಸ್!

ಎಕ್ಸ್ಟೆನ್ಸ್ಷನ್ಸ್ ಅಥವಾ ವಿಸ್ತರಣೆಗಳ ಮೂಲಕ ಹೆಸರುವಾಸಿಯಾಗಿರುವ ಸರ್ಚ್ ಎಂಜಿನ್ ಎಂದರೆ ಅದು ಫೈರ್ಫಾಕ್ಸ್. ಬಳಕೆದಾರರು ಹಾಗೂ ಬ್ರೌಸರ್ ನಡುವೆ ಉತ್ತಮ ಸಂಬಂಧ ಹೊಂದಿರುವ ಫೈರ್ಫಾಕ್ಸ್ ಬಳಕೆದಾರರಿಗೆ ಗೌಪ್ಯತೆ ಹಾಗೂ ಭದ್ರತೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಫೈರ್ಫಾಕ್ಸ್ ತಮ್ಮ ಬಳಕೆದಾರರ ಭದ್ರತೆ ಮತ್ತು ಪ್ರೈವೆಸಿಗಾಗಿ ನೀಡಿರುವ ಪ್ರಮುಖ ಆಡ್-ಆನ್ಗಳನ್ನು ಈ ಕೆಳಕಂಡಂತೆ ಕಾಣಬಹುದಾಗಿದೆ.

ಎಚ್ಟಿಟಿಪಿಎಸ್ ಎನಿವೆರ್

ಎಚ್ಟಿಟಿಪಿಎಸ್ ಎನಿವೆರ್

ಇದು ಫೈರ್ಫಾಕ್ಸ್ ಮೊಬೈಲ್ನ ಬಹುಮುಖ್ಯ ಎಕ್ಸ್ಟೆನ್ಶನ್ ಆಗಿದೆ. ಎಚ್ಟಿಟಿಪಿಎಸ್ ಎಂಬುದು ಎಫೆಎಫ್ಇ(ಇಲೆಕ್ಟ್ರಾನಿಕ್ ಫ್ರಾಂಟಿಯರ್ ಫೌಂಡೇಶನ್)ನ ವಿಸ್ತರಣೆಯಾಗಿದೆ. ಯಾವ ವೆಬ್ಸೈಟ್ಸ್ ಎಚ್ಟಿಟಿಪಿಎಸ್ ಸಪೋರ್ಟ್ ಮಾಡುತ್ತದೆ ಆ ವೆಬ್ಸೈಟ್ ಸುರಕ್ಷಿತವಾಗಿರುತ್ತವೆ. ಹಲವಾರು ವೆಬ್ಸೈಟ್ಗಳಲ್ಲಿ ಈ ಸಮಸ್ಯೆಯಿದೆ. ಹೀಗಾಗಿ ಫೈರ್ಫಾಕ್ಸ್ ಭದ್ರತೆ ದೃಷ್ಟಿಯಿಂದ ತಮ್ಮ ಬಳಕೆದಾರರಿಗೆ ಈ ಸೌಲಭ್ಯ ನೀಡಿದೆ. ಇದ್ರಿಂದ ಬಳಕೆದಾರರ ಖಾಸಗಿ ಡೇಟಾ ಶೇರ್ ಆಗದೆ ಸೇಫ್ ಆಗಿರುತ್ತದೆ. ಇದು ಯಾವುದೇ ಅನಾಹುತ ಆಗದಂತೆ ಸುರಕ್ಷತೆಯನ್ನು ವದಗಿಸುತ್ತದೆ.

ಯುಬ್ಲಾಕ್ ಸೌಲಭ್ಯ

ಯುಬ್ಲಾಕ್ ಸೌಲಭ್ಯ

ಯುಬ್ಲಾಕ್ ಅನ್ನು ಎಕ್ಸ್ಟೆನ್ಶನ್ ಮಾಡಿಕೊಂಡರೆ ವೆಬ್ನಲ್ಲಿ ಅನಗತ್ಯವಾಗಿ ಕಿರಿಕಿರಿಯುಂಟುಮಾಡುವ ಕೂಕಿಸ್, ಮಾಲ್ವೆರ್, ಟ್ರ್ಯಾಕರ್ಗಳನ್ನ ಇದು ತಡೆಯುತ್ತದೆ. ಉದಾಹರಣೆಗೆ ನೀವೂ ಯೂಟ್ಯೂಬ್ ವಿಡಿಯೋ ವೀಕ್ಷಿಸುವಾಗ ಮೊದಲು ಜಾಹಿರಾತು ಕಾಣಿಸಿಕೊಳ್ಳುತ್ತದೆ. ಈ ಎಕ್ಸ್ಟೆನ್ಶನ್ನಿಂದ ಆ ಸಮಸ್ಯೆ ಇರುವುದಿಲ್ಲ. ಜೊತೆಗೆ ನಿಮ್ಮ ಮಾಹಿತಿ ಕಲೆಹಾಕಿ ಟ್ರಾಕ್ ಮಾಡಬಹುದಾದ ಅಪಾಯವನ್ನು ಸಹ ಇದು ತಡೆಯುತ್ತದೆ.

ಪ್ರೈವೆಸಿ ಬ್ಯಾಜರ್

ಪ್ರೈವೆಸಿ ಬ್ಯಾಜರ್

ಗೌಪ್ಯತೆಯ ಬ್ಯಾಜರ್ ಇದು ಇಈಈನ ಕೊಡುಗೆಯಾಗಿದೆ. ಈ ಎಕ್ಸ್ಟೆನ್ಶನ್ ಅಳವಡಿಸಿಕೊಳ್ಳುವುದರಿಂದ ಟ್ರ್ಯಾಕರ್ಸ್ ವಿರುದ್ಧ ಸುರಕ್ಷತೆ ನೀಡುವುದಲ್ಲದೆ ಆಡ್ ಬ್ಲಾಕರ್ ಆಗಿ ಕಾರ್ಯನಿರ್ವಹಿಸುತ್ತದೆ. ವೆಬ್ಬ್ರೌಸಿಂಗ್ನಲ್ಲಿ ಕಾಣಿಸುವ ಕೂಕಿಸ್ ಹಾಗೂ ಫಿಂಗರ್ಪ್ರಿಂಟ್ಗಳ ಮೂಲಕ ಟ್ರ್ಯಾಕ್ ಮಾಡಬಹುದಾದ ಆಪಾಯವನ್ನ ಇದು ತಡೆಯುತ್ತದೆ. ಈ ಮೂಲಕ ಪ್ರೈವೆಸಿ ಬ್ಯಾಜರ್ ವೆಬ್ಸೈಟ್ನ ಸುರಕ್ಷಾ ಕವಚವಾಗಿ ಕಾರ್ಯನಿರ್ವಹಿಸಿ ಟ್ರ್ಯಾಕರ್ಗಳಿಂದ ಆಗುವ ತೊಂದರೆಯನ್ನು ತಡೆಯುತ್ತದೆ.

How To Link Aadhaar With EPF Account Without Login (KANNADA)
ಕ್ಯಾನ್ವಾಸ್ ಬ್ಲಾಕರ್

ಕ್ಯಾನ್ವಾಸ್ ಬ್ಲಾಕರ್

ಜಾಹಿರಾತುದಾರರು ಬಳಕೆದಾರರ ಆಸಕ್ತಿಗಳನ್ನ ತಿಳಿದುಕೊಳ್ಳಲು ಫಿಂಗರ್ಪ್ರಿಂಟ್ ಟೆಕ್ನಿಕ್ ಮೊರೆ ಹೋಗ್ತಾರೆ. ವೆಬ್ಬ್ರೌಸಿಂಗ್ನಲ್ಲಿ ಬಳಕೆದಾರರು ಬ್ರೌಸ್ ಮಾಡುವಾಗ ಸ್ಕ್ರೀನ್ ಮೇಲೆ ಕೂಕಿಸ್, ಫೋಟೋಸ್, ಜಾಹಿರಾತುಗಳು ಕಾಣಿಸಿಕೊಳ್ಳುತ್ತವೆ. ಬಳಕೆದಾರರು ಅಪರೇಟ್ ಮಾಡುವ ಸಿಸ್ಟಮ್, ಸ್ಕ್ರೀನ್ ರೆಸೊಲ್ಯೂಶನ್, ಬ್ರೌಸರ್ ಆಪ್, ಟಚ್ ಪಾಯಿಂಟ್ಗಳ ಮೂಲಕ ಬಳಕೆದಾರರ ಆಸಕ್ತಿಗಳೇನು, ಬಳಕೆದಾರರು ಯಾರು ಎಂಬ ಮಾಹಿತಿ ಜಾಹಿರಾತು ಕಂಪನಿಗಳಿಗಳಿಗೆ ತಿಳಿಯುತ್ತದೆ. ಇದನ್ನು ತಡೆಯಲು ಫೈರ್ಫಾಕ್ಸ್ನ ಕ್ಯಾನ್ವಾಸ್ ಬ್ಲಾಕರ್ ಆಡ್-ಆನ್ ಮಾಡಿಕೊಂಡರೆ ನಿಮ್ಮ ಐಡಿ ಸುರಕ್ಷಿತವಾಗಿದ್ದು ಎಪಿಐ ಮೂಲಕ ಈ ಸಮಸ್ಯೆಯೂ ನಿವಾರಣೆಯಾಗುತ್ತದೆ. ಹೀಗೆ ಫೈರ್ಫಾಕ್ಸ್ ಆಡ್-ಆನ್ ಮೂಲಕ ನಿಮ್ಮ ವೆಬ್ಬ್ರೌಸಿಂಗ್ನ್ನು ಸೇಫ್ ಆಗಿ ಇಟ್ಟುಕೊಳ್ಳಬಹುದು.

Most Read Articles
Best Mobiles in India

Read more about:
English summary
The add-ons or extensions offers users an array of features such as privacy and security. Here are the best ones for privacy and security of your data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more