Subscribe to Gizbot

ಶೀಘ್ರವೇ ಗೂಗಲ್ ಮ್ಯಾಪ್ಸ್ ನಲ್ಲಿ ಬರಲಿದೆ ಈ 5 ಫೀಚರ್ ಗಳು!

Posted By: Tejaswini P G

ಗೂಗಲ್ ನ ಬಹು ಯಶಸ್ವೀ ಉತ್ಪನ್ನಗಳಲ್ಲಿ ಗೂಗಲ್ ಮ್ಯಾಪ್ಸ್ ಒಂದು. ಜಗತ್ತಿನಾದ್ಯಂತ 1 ಬಿಲಿಯನ್ ಗೂ ಅಧಿಕ ಬಳಕೆದಾರರನ್ನು ಹೊಂದಿದೆ ಈ ಆಪ್. ಈ ಪ್ಲಾಟ್ ಫಾರ್ಮ್ ನಿರಂತರವಾಗಿ ಬೆಳೆಯುತ್ತಿದ್ದು ದಿನದಿನವೂ ಹೊಸ ಫೀಚರ್ ಗಳನ್ನು ಪಡೆಯುತ್ತಿದೆ. ಈಗ ಆಂಡ್ರಾಯ್ಡ್ ಪೋಲೀಸ್ ಗೂಗಲ್ ಮ್ಯಾಪ್ಸ್ ನ 9.71 ಬೀಟಾ ಆವೃತ್ತಿ ಯ APK ಯನ್ನು ವಿಶ್ಲೇಷಿಸುತ್ತಾ ಕೆಲವು ಹೊಸ ಫೀಚರ್ ಗಳನ್ನು ಪತ್ತೆ ಹಚ್ಚಿದ್ದಾರೆ.

 ಶೀಘ್ರವೇ ಗೂಗಲ್ ಮ್ಯಾಪ್ಸ್ ನಲ್ಲಿ ಬರಲಿದೆ ಈ 5 ಫೀಚರ್ ಗಳು!

ಈ ಫೀಚರ್ ಗಳು ಯಾವಾಗ ನಮ್ಮ ಮೊಬೈಲ್ ಗಳಿಗೆ ಬರುತ್ತದೆ ಎಂದು ನಮಗೆ ತಿಳಿದಿಲ್ಲವಾದರೂ ಶೀಘ್ರವೇ ಬರಲಿದೆ ಎನ್ನುವುದು ನಮ್ಮ ಆಶಯ.ಈ ಲೇಖನದಲ್ಲಿ ಗೂಗಲ್ ಮ್ಯಾಪ್ಸ್ ನಲ್ಲಿ ಭವಿಷ್ಯದಲ್ಲಿ ಬರಲಿರುವ ಫೀಚರ್ ಗಳನ್ನೊಮ್ಮೆ ನೋಡೋಣ. ಇಷ್ಟೇ ಅಲ್ಲದೆ ಗೂಗಲ್ ಮ್ಯಾಪ್ಸ್ ನಲ್ಲಿ ಇನ್ನೂ ಅನೇಕ ಫೀಚರ್ಗಳಿರಲಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶೇರ್ ಬಟನ್ ನ ಬದಲಿಗೆ ಸ್ಕ್ರೀನ್ ಶಾಟ್ ಬಟನ್

ಶೇರ್ ಬಟನ್ ನ ಬದಲಿಗೆ ಸ್ಕ್ರೀನ್ ಶಾಟ್ ಬಟನ್

ಗೂಗಲ್ ಮ್ಯಾಪ್ಸ್ ನಲ್ಲಿ ಲೊಕೇಶನ್ ಶೇರ್ ಬಟನ್ ನ ಬದಲಿಗೆ ಸ್ಕ್ರೀನ್ ಶಾಟ್ ಬಟನ್ ಬಂದಿದೆ. ಕೆಲವು ಬಳಕೆದಾರರಿಗೆ ಈ ಫೀಚರ್ ಈಗಾಗಲೇ ಲಭ್ಯವಾಗಿದೆ. ಈ ಸ್ಕ್ರೀನ್ ಶಾಟ್ ಬಟನ್ ಹೇಗೆ ಕೆಲಸಮಾಡುತ್ತದೆ ಎಂದು ನಿಖರವಾಗಿ ತಿಳಿದಿಲ್ಲವಾದರೂ ಗೂಗಲ್ ಮ್ಯಾಪ್ಸ್ ನಲ್ಲಿ ಸಧ್ಯಕ್ಕೆ ಲಭ್ಯವಿರುವ ಲೊಕೇಶನ್ ಶೇರ್ ಬಟನ್ ನಂತೆಯೇ ಕಾರ್ಯನಿರ್ವಹಿಸಲಿದೆಯೆಂದು ನಮ್ಮ ಅನಿಸಿಕೆ.

ಲೊಕೇಶನ್ ಶೇರ್ ಮಾಡುವಾಗ ಬ್ಯಾಟರಿ ಸ್ಟೇಟಸ್ ಹಂಚಿಕೊಳ್ಳಿ

ಲೊಕೇಶನ್ ಶೇರ್ ಮಾಡುವಾಗ ಬ್ಯಾಟರಿ ಸ್ಟೇಟಸ್ ಹಂಚಿಕೊಳ್ಳಿ

ನೀವು ಗೂಗಲ್ ಮ್ಯಾಪ್ಸ್ ನಲ್ಲಿ ಇತರರೊಂದಿಗೆ ನಿಮ್ಮ ಲೊಕೇಶನ್ ಹಂಚಿಕೊಳ್ಳುವಾಗ, ಅದು ನಿಮ್ಮ ಮೊಬೈಲ್ ನ ಬ್ಯಾಟರಿ ಸ್ಟೇಟಸ್ ಅನ್ನು ಕೂಡ ಆ ವ್ಯಕ್ತಿಯೊಂದಿಗೆ ಹಂಚಿಕೊಳ್ಳುತ್ತದೆ. ಈ ಮೂಲಕ ಆ ವ್ಯಕ್ತಿಯೊಂದಿಗೆ ನೀವು ಎಷ್ಟು ಹೊತ್ತು ಸಂಪರ್ಕದಲ್ಲಿ ಇರಬಹುದೆಂಬುದನ್ನು ಅವರು ತಿಳಿಯಬಹುದು. ನಿಮ್ಮ ಬ್ಯಾಟರಿಯಲ್ಲಿ ಚಾರ್ಜ್ ಕಡಿಮೆ ಇರುವ ಸಂದರ್ಭಗಳಲ್ಲಿ ಆ ವ್ಯಕ್ತಿ ಅದನ್ನು ತಿಳಿಯಬಹುದಾಗಿದ್ದು ಅಂತಹ ಸಂದರ್ಭಗಳಲ್ಲಿ ಈ ಫೀಚರ್ ನಿಮಗೆ ಉಪಯುಕ್ತವೆನಿಸಲಿದೆ.

ನಿಮ್ಮ ಅಚ್ಚುಮೆಚ್ಚಿನ ಸ್ಟೇಶನ್ ಗಳಿಗೆ ಶಾರ್ಟ್ಕಟ್ ದಾರಿ ಸೆಟ್ ಮಾಡಿ

ನಿಮ್ಮ ಅಚ್ಚುಮೆಚ್ಚಿನ ಸ್ಟೇಶನ್ ಗಳಿಗೆ ಶಾರ್ಟ್ಕಟ್ ದಾರಿ ಸೆಟ್ ಮಾಡಿ

ನಿಮ್ಮ ಅಚ್ಚುಮೆಚ್ಚಿನ ಮೆಟ್ರೋ ಸ್ಟೇಶನ್ ಗಳಿಗೆ ಶಾರ್ಟ್ ಕಟ್ ಅಥವಾ ನಿಮ್ಮ ಆಯ್ಕೆಯ ದಾರಿಯನ್ನು ಸೆಟ್ ಮಾಡಲು ಅವಕಾಶಮಾಡಿಕೊಡುತ್ತದೆ ಗೂಗಲ್ ಮ್ಯಾಪ್ಸ್. ಈ ದಾರಿಗಳು ಅದೇ ಮೆಟ್ರೋ ಸ್ಟೇಶನ್ ಗೆ ತೆರಳುವ ಇತರ ಪ್ರಯಾಣಿಕರಿಗೂ ಲಭ್ಯವಾಗಲಿದ್ದು ಅವರೂ ಇದರ ಲಾಭ ಪಡೆಯಬಹುದಾಗಿದೆ.

ಆಗಮನದ ಸೂಚನೆ

ಆಗಮನದ ಸೂಚನೆ

ಗೂಗಲ್ ಮ್ಯಾಪ್ಸ್ ನಲ್ಲಿ ನೋಟಿಫಿಕೇಶನ್ ಗಳ ಮೂಲಕ ಸಂಚರಣೆಯ ಮಾರ್ಗ ಸೂಚಿಸುವ ಆಯ್ಕೆ ಇದೆ. ಈ ಅಪ್ಡೇಟ್ ಬಳಕೆದಾರರಿಗೆ ನೋಟಿಫಿಕೇಶನ್ ನೀಡುವುದಲ್ಲದೆ ಅಲ್ಲಿಗೆ ತಲುಪಲು ಬೇಕಾದ ಸಮಯವನ್ನು ನಿಖರವಾಗಿ ತಿಳಿಸಬಲ್ಲದು. ಇತರ ಫೀಚರ್ಗಳಂತೆ ಇದೂ ಕೂಡ ಬಹಳ ಉಪಯುಕ್ತವಾಗಿದೆ.

Do you know what all u can do by Downloading Hike Messenger app.?
ಇತರ ಬಳಕೆದಾರರೊಂದಿಗೆ ಟ್ರಿಪ್ ಶೇರ್ ಮಾಡಿ

ಇತರ ಬಳಕೆದಾರರೊಂದಿಗೆ ಟ್ರಿಪ್ ಶೇರ್ ಮಾಡಿ

ಹೊಸ ಗೂಗಲ್ ಮ್ಯಾಪ್ಸ್ ನ ವಿಶ್ಲೇಷಣೆಯ ಸಂದರ್ಭದಲ್ಲಿ ಇತರ ಬಳಕೆದಾರರೊಂದಿಗೆ ತಮ್ಮ ಟ್ರಿಪ್ ಶೇರ್ ಮಾಡಬಹುದಾದ ಫೀಚರ್ ಬೆಳಕಿಗೆ ಬಂದಿದೆ. ನೀವು ನಿಮ್ಮ ಗಮ್ಯಸ್ಥಾನದ ಮಾರ್ಗ ಮಧ್ಯೆ ಇರಬಹುದು ಅಥವಾ ಈಗಾಗಲೇ ತಲುಪಿದ್ದರೂ ನಿಮ್ಮ ಟ್ರಿಪ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
5 features that Google Maps will get soon. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot