ವಿಂಡೋಸ್ ನಲ್ಲಿ ಬೇಕಿಲ್ಲದ ಫೈಲ್ ಗಳನ್ನು ಡಿಲೀಡ್ ಮಾಡುವುದು ಹೇಗೆ..?

By Precilla Dias
|

ಇಂದಿನ ದಿನದಲ್ಲಿ ಕಂಪ್ಯೂಟರ್ ನಲ್ಲಿ ಹೆಚ್ಚು ಜಾಗ ಬಳಕೆಗೆ ಸಿಗುತ್ತಿಲ್ಲ ಎಂದು ಹೇಳುವವರ ಸಂಖ್ಯೆಯೂ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ನಿಮ್ಮ ಕಂಪ್ಯೂಟರ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಜಾಗವನ್ನು ಅಲಕರಿಸಿಕೊಂಡಿರುವ ವಿಂಡೋಸ್ ನಲ್ಲಿರುವ ಕೇಲವು ಫೈಲ್ ಗಳನ್ನು ಡಿಲೀಟ್ ಮಾಡಿದ ಸಂದರ್ಭದಲ್ಲಿ ನೀವು ಹೆಚ್ಚಿನ ಜಾಗವನ್ನು ಬೇರೆ ಬಳಕೆಗಳಿಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಈ ಹಿನ್ನಲೆಯಲ್ಲಿ ನೀವು ಯಾವ ಫೈಲ್ ಗಳನ್ನು ಡಿಲೀಟ್ ಮಾಡಬಹುದು ಎಂಬುದರ ಬಗ್ಗೆ ಮಾಹಿತಿಯೂ ಇಲ್ಲಿದೆ.

ವಿಂಡೋಸ್ ನಲ್ಲಿ ಬೇಕಿಲ್ಲದ ಫೈಲ್ ಗಳನ್ನು ಡಿಲೀಡ್ ಮಾಡುವುದು ಹೇಗೆ..?

ಇಲ್ಲಿ ನೀಡಿರುವ ಫೈಲ್ ಗಳನ್ನು ಡಿಲೀಟ್ ಮಾಡಿದ ನಂತರದಲ್ಲಿಯೂ ನೀವು ಯಾವುದೇ ತೊಂದರೆಗಳಲ್ಲಿಲ್ಲದೇ ಕಂಪ್ಯೂಟರ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಮುಂದಿನ ಸ್ಲೈಡರ್ ಗಳಲ್ಲಿ ನೀವು ಯಾವ ಫೈಲ್ ಗಳನ್ನು ಡಿಲೀಟ್ ಮಾಡಬಹುದು ಎಂಬುದನ್ನು ತಿಳಿದುಕೊಳ್ಳಿ.

ದಿ ಹೈಬರ್ನೇಷನ್ ಫೈಲ್:

ನಿಮ್ಮ ಕಂಪ್ಯೂಟರ್ ನಲ್ಲಿ ನೀವು ದಿ ಹೈಬರ್ನೇಷನ್ ಮೋಡ್ ಅನ್ನು ಆನ್ ಮಾಡಿದ ಸಂದರ್ಭದಲ್ಲಿ ಬಳಕೆ ಮಾಡುವ ಡೇಟಾ ಗಳನ್ನು ಇದು ಸೇವ್ ಮಾಡಿಕೊಳ್ಳುತ್ತದೆ. ಆದರೆ ಇದು ಹೆಚ್ಚಾಗಿ ಉಪಯೋಗಕ್ಕೆ ಬರುವುದಿಲ್ಲ. ಈ ಹಿನ್ನಲೆಯಲ್ಲಿ ಈ ಫೈಲ್ ಗಳನ್ನು ಡಿಲೀಟ್ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಈ ಫೈಲ್ ಗಳನ್ನು ಡಿಲೀಟ್ ಮಾಡುವ ಸಲುವಾಗಿದೆ. ಕಾಮೆಂಡ್ ಪ್ರಾಮ್ಟ್ ನಲ್ಲಿ “powercfg.exe/hibernate off’ ಎಂದು ಟೈಪ್ ಮಾಡಿದರೆ ಸಾಕು ಫೈಲ್ ಗಳು ಡಿಲೀಟ್ ಆಗಲಿದೆ.

ದಿ ಟೆಪ್ ಫೋಲ್ಡರ್:

ಇದು ಟೆಪರವರಿ ವಿಂಡೋಸ್ ಫೈಲ್ ಗಳನ್ನು ಸೇವ್ ಮಾಡಿಕೊಳ್ಳಲಿದೆ. ಇದನ್ನು ಡಿಲೀಟ್ ಮಾಡಿದರೆ ಯಾವುದೇ ರೀತಿಯಲ್ಲಿಯೂ ತೊಂದರೆ ಯಾಗುವುದಿಲ್ಲ ಎನ್ನಲಾಗಿದೆ. ಈ ಫೈಲ್ ಗಳು ಸಿ ಡ್ರೈವ್ ನಲ್ಲಿ ಸೇವ್ ಆಗಿರುತ್ತದೆ. ಅವುಗಳನ್ನು ಒಮ್ಮೆಗೆ ಸೆಲೆಕ್ಟ್ ಮಾಡಿ ಡಿಲೀಟ್ ಮಾಡಿದರೆ ಎಲ್ಲಾ ಫೈಲ್ ಗಳು ಒಮ್ಮೆಗೆ ಡಿಲೀಟ್ ಮಾಡಬಹುದಾಗಿದೆ.

ರಿಸೈಕಲ್ ಬಿನ್:

ಇದು ನಿಮ್ಮ ಕಂಪ್ಯೂಟರ್ ನಿಂದ ಡಿಲೀಟ್ ಮಾಡಿದ ಎಲ್ಲಾ ಫೈಲ್ ಗಳು ಇಲ್ಲಿ ಬಂದು ಸೇವ್ ಆಗಲಿದೆ. ಇವುಗಳನ್ನು ಡೀಲ್ ಮಾಡಿದರೆ ಸಾಕಷ್ಟು ಪ್ರಮಾಣದ ಜಾಗವು ನಿಮ್ಮ ಕಂಪ್ಯೂಟರ್ ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಡೆಸ್ಕ್ ಟಾಪ್ ಮೇಲಿರುವ ರಿಸೈಕಲ್ ಬಿನ್ ಐಕಾನ್ ಮೇಲೆ ಲೆಫ್ಟ್ ಕ್ಲಿಕ್ ಮಾಡಿದರೆ ಎಂಟಿ ರಿಸೈಕಲ್ ಬಿನ್ ಎನ್ನುವ ಆಯ್ಕೆಯೂ ದೊರೆಯಲಿದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಫೈಲ್ ಡಿಲೀಟ್ ಆಗಲಿದೆ.

ವಿಂಡೋಸ್ ಒಲ್ಡ್ ಫೋಲ್ಡರ್:

ಒಮ್ಮೆ ನೀವು ವಿಂಡೋಸ್ ಅನ್ನು ಅಪ್ ಡೇಟ್ ಮಾಡಿದ ಸಂದರ್ಭದಲ್ಲಿ ಕಂಪ್ಯೂಟರ್ ನಲ್ಲಿ ವಿಂಡೋಸ್.ಓಲ್ಡ್ ಫೊಲ್ಡರ್ ವೊಂದು ಕ್ರಿಯೇಟ್ ಆಗಲಿದ್ದು, ಇದು ಹೆಚ್ಚಿನ ಪ್ರಮಾಣದ ಡೇಟಾವನ್ನು ಹೊಂದಿರಲಿದೆ. ಇದನ್ನು ಡಿಲೀಟ್ ಮಾಡಿದರೂ ಯಾವುದೇ ತೊಂದರೆ ಇಲ್ಲ.

ಡೌನ್ ಲೊಡ್ ಪ್ರೋಗ್ರಾಮ್ ಫೈಲ್ ಗಳು:

Riversong Jelly Kids GPS tracker hands-on - GIZBOT KANNADA

ಇದಲ್ಲದೇ ಇಂಟರ್ನೆಟ್ ಎಕ್ಸ್ ಪ್ಲೋರ್ ನ್ಲಲಿರುವ ಆಕ್ಟಿಕ್ ಎಕ್ಸ್, ಜಾವಾ ಆಲ್ಫಾಪ್ಲೈಟ್ಸ್ ಫೈಲ್ ಗಳು ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಅವುಗಳನ್ನು ಡಿಲೀಡ್ ಮಾಡಿದರೆ ಯಾವುದೇ ಹೆಚ್ಚಿನ ನಷ್ಟವಾಗುವುದಿಲ್ಲ.

Most Read Articles
Best Mobiles in India

English summary
Your Windows PC will be occupied by many files and folders. These files and folders are doing nothing but consuming space on your computer. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X