ಈ ಆರು ಮಾಲ್ವೇರ್‌ಗಳು ನಿಮ್ಮ ಮೊಬೈಲ್ ನಲ್ಲಿರುವ ಎಲ್ಲಾ ಮಾಹಿತಿಗಳನ್ನು ಕದಿಯಬಲ್ಲವು!

|

ಪ್ರಸಿದ್ಧ ಆಪ್ ಗಳಾದ ವಾಟ್ಸ್ ಆಪ್, ಫೇಸ್ ಬುಕ್, ಫೇಸ್ ಬುಕ್ ಮ್ಯಾನೇಜರ್ ಮತ್ತು ಸ್ನ್ಯಾಪ್ ಚಾಟ್ ಗಳು ಹ್ಯಾಕರ್ಸ್ ಗಳಿಂದ ಸೇಫ್ ಆಗಿಲ್ಲ ಎಂಬುದು ತಿಳಿದುಬಂದಿದೆ. ಹೊಸ ರೀತಿಯ ಮಾಲ್ವೇರ್ ಗಳನ್ನು ಬಳಸಿ ಹ್ಯಾಕರ್ ಗಳು ನಿಮ್ಮ ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಸೇರಿದಂತೆ ಇತರೆ ಪ್ರಮುಖ ಆಪ್ ಗಳಲ್ಲಿನ ಡಾಟಾವನ್ನು ಕದಿಯುತ್ತಿದ್ದಾರೆ.

ಡಾಟಾ ಕದಿಯುವಿಕೆ:

ಡಾಟಾ ಕದಿಯುವಿಕೆ:

ಟ್ರೆಂಡ್ ಮೈಕ್ರೋ ವರದಿಯೊಂದರ ಪ್ರಕಾರ ಹೊಸ ಮಾಲ್ವೇರ್ ವೊಂದನ್ನು ಕಂಡುಹಿಡಿಯಲಾಗಿದ್ದು ಪ್ರಸಿದ್ಧ ಆಂಡ್ರಾಯ್ಡ್ ಆಪ್ ಗಳಿಂದ ಬಳಕೆದಾರರ ಡಾಟಾವನ್ನು ಕದಿಯುವುದ್ದಾಗಿ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಆರು ಆಪ್ ಗಳು:

ಆರು ಆಪ್ ಗಳು:

2018 ರಲ್ಲಿ ಈ ಆಪ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿತ್ತು ಎಂಬುದಾಗಿ ಅಧ್ಯಯನ ಸಂಸ್ಥೆ ತಿಳಿಸಿದೆ ಮತ್ತು ವಿಶ್ವದಾದ್ಯಂತ ಈ ಆಪ್ ಗಳನ್ನು ಸುಮಾರು 1,000,000 ಮಂದಿ ಡೌನ್ ಲೋಡ್ ಕೂಡ ಮಾಡಿದ್ದಾರೆ.ಕಂಪೆನಿಯು ಇಂತಹ 6 ಆಪ್ ಗಳನ್ನು ಕಂಡುಹಿಡಿದಿದೆ ಅವುಗಳೆಂದರೆ ಫ್ಲಪ್ಪಿ ಬಿರ್ರ್ ಡಾಗ್(Flappy Birr Dog), ಫ್ಲ್ಯಾಶ್ ಲೈಟ್(FlashLight), HZಪರ್ಮಿಸ್ ಪ್ರೋ ಅರಬೇ( HZPermis Pro Arabe), ವಿನ್7ಇಮ್ಯುಲೇಟರ್(Win7imulator, ), ವಿನ್7ಲಾಂಚರ್(Win7Launcher) ಮತ್ತು ಫ್ಲಫ್ಫಿ ಬರ್ಡ್( Flappy Bird).

ಈ ಮಾಲ್ವೇರ್ ಗಳ ಬಗ್ಗೆ ಮಾಹಿತಿ ತಿಳಿದ ನಂತರ ಗೂಗಲ್ ಪ್ಲೇ ಸ್ಟೋರ್ ನಿಂದ ಇವುಗಳನ್ನು ರಿಮೂವ್ ಮಾಡಿದೆ.

ಯಾವೆಲ್ಲ ಮಾಹಿತಿ ಕದಿಯಬಲ್ಲವು?

ಯಾವೆಲ್ಲ ಮಾಹಿತಿ ಕದಿಯಬಲ್ಲವು?

ಟ್ರೆಂಡ್ ಮೈಕ್ರೋ ಹೇಳುವಂತೆ ಈ ಮಾಲ್ವೇರ್ ಗಳು ಬಳಕೆದಾರರ ಲೊಕೇಷನ್, ಎಸ್ಎಂಎಸ್ ಮಾತುಕತೆಗಳು, ಕಾಲ್ ಲಾಗ್ ಗಳು, ಕ್ಲಿಪ್ ಬೋರ್ಡ್ ಐಟಂಗಳು ಇತ್ಯಾದಿಗಳನ್ನು ಕದಿಯಲು ಅವಕಾಶ ನೀಡುತ್ತಿತ್ತು.

ಹೇಗೆ ಕೆಲಸ ಮಾಡುತ್ತದೆ?

ಹೇಗೆ ಕೆಲಸ ಮಾಡುತ್ತದೆ?

ಅಧಿಕೃತ ಬ್ಲಾಗ್ ನಲ್ಲಿ ಕಂಪೆನಿಯು ತಿಳಿಸುವಂತೆ ಈ ಮಾಲ್ವೇರ್ ಗಳು ತನ್ನ ಸರ್ವರ್ ಗೆ ಮಾಹಿತಿಗಳನ್ನು ಕಳುಹಿಸುವುದಕ್ಕಾಗಿ ಫೈಯರ್ ಬೇಸ್ ಕ್ಲೌಡ್ ಮೆಸೇಜಿಂಗ್ ನ್ನು ಕೂಡ ಬಳಕೆ ಮಾಡುತ್ತಿತ್ತು.ಒಮ್ಮೆ ದುರುದ್ದೇಶಪೂರಿತ ಅಪ್ಲಿಕೇಷನ್ ಲಾಂಚ್ ಆದರೆ ನಂತರ ಮಾಲ್ವೇರ್ ಗಳು ಡಿವೈಸ್ ನ ನೆಟ್ ವರ್ಕ್ ಲಭ್ಯತೆಯನ್ನು ಮೊದಲಿಗೆ ಪರೀಕ್ಷಿಸುತ್ತದೆ. ನಂತರ ತನ್ನ C&C ಸರ್ವರ್ ನಿಂದ XML ಸಂಚರನಾ ಕಡತವನ್ನು ಓದುತ್ತದೆ ಮತ್ತು ಪಾಸ್ ಮಾಡುತ್ತದೆ. ತಾನು ಸಂಗ್ರಹಿಸಿದ ಮಾಹಿತಿಯನ್ನು C&C ಸರ್ವರ್ ಗೆ ರವಾನಿಸುತ್ತದೆ ಮತ್ತು ಸಾಧನವನ್ನು ನೊಂದಣಿ ಮಾಡುತ್ತದೆ. ಒಮ್ಮೆ ಇದು ಮುಗಿದ ನಂತರ ತನ್ನ C&C ಸರ್ವರ್ ನಿಂದ FCM ಮೂಲಕ ಕಳುಹಿಸಲಾಗಿರುವ ಆಜ್ಞೆಗಳಿಗಾಗಿ ಈ ಮಾಲ್ವೇರ್ ಗಳು ಕಾಯುತ್ತವೆ.

ಡೇಂಜರಸ್ ಮಾಲ್ವೇರ್ ಗಳು:

ಡೇಂಜರಸ್ ಮಾಲ್ವೇರ್ ಗಳು:

ಮಾಲ್ವೇರ್ ಗಳು ಕಳುಹಿಸುವ ಕಮಾಂಡ್ ಗಳ ಆಧಾರದಲ್ಲಿ ಎಸ್ಎಂಎಸ್ ಮಾತುಕತೆಗಳು, ಕಾಂಟ್ಯಾಕ್ಟ್ ಲಿಸ್ಟ್ ಗಳು, ಫೈಲ್ಸ್ ಗಳು, ಕಾಲ್ ಲಾಗ್ ಮತ್ತು ಇತರೆ ಹಲವು ಮಾಹಿತಿಗಳನ್ನು ಕದಿಯುವುದಕ್ಕೆ ಸಾಧ್ಯವಾಗುತ್ತದೆ. ವಾಟ್ಸ್ ಆಪ್, ಫೇಸ್ ಬುಕ್ ಸೇರಿದಂತೆ ಇತರೆ ಆಪ್ ಗಳಲ್ಲಿ ಅಪ್ ಲೋಡ್ ಮಾಡಲಾಗಿರುವ ಫೈಲ್ ಗಳನ್ನು ಕದಿಯುವುದಕ್ಕೂ ಕೂಡ ಇದು ನೆರವು ನೀಡುತ್ತದೆ.

ಫಿಶ್ಶಿಂಗ್ ಅಟ್ಯಾಕ್ ಸಾಧ್ಯತೆ:

ಫಿಶ್ಶಿಂಗ್ ಅಟ್ಯಾಕ್ ಸಾಧ್ಯತೆ:

ಫೇಕ್ ಫೇಸ್ ಬುಕ್ ಅಕೌಂಟ್ ನ್ನು ಡಿಸ್ಪ್ಲೇ ಮಾಡುವ ಮೂಲಕ ಫಿಶ್ಶಿಂಗ್ ಅಟ್ಯಾಕ್ ಮಾಡುವುದಕ್ಕೂ ಕೂಡ ಇದು ನೆರವು ನೀಡುತ್ತದೆ ಮತ್ತು ಬಳಕೆದಾರರ ಅಕೌಂಟ್ ಗಳನ್ನ ಹ್ಯಾಕ್ ಮಾಡುವುದಕ್ಕೂ ಇದು ನೆರವು ನೀಡುತ್ತದೆ.

ರಕ್ಷಣೆ ಹೇಗೆ?

ರಕ್ಷಣೆ ಹೇಗೆ?

ಇಂತಹ ಯಾವುದೇ ಮಾಲ್ವೇರ್ ಗಳಿಂದ ನಿಮ್ಮ ನೀವು ರಕ್ಷಿಸಿಕೊಳ್ಲಬೇಕು ಎಂದರೆ ಟ್ರೆಂಡ್ ಮೈಕ್ರೋ ಹೇಳುವುದು ನಿಮಗೆ ಅಗತ್ಯವಿರುವ ಆಪ್ ಗಳನ್ನು ಮಾತ್ರವೇ ಇನ್ಸ್ಟಾಲ್ ಮಾಡಿಕೊಳ್ಳಿ. ಯಾವುದೇ ಆಪ್ ನ್ನು ಇನ್ಸ್ಟಾಲ್ ಮಾಡುವ ಮುನ್ನ ಬಳಕೆದಾರರು ಆ ಆಪ್ ನ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಅಂತರ್ಜಾಲದಲ್ಲಿ ಓದಿಕೊಳ್ಳಬೇಕು. ಇದರ ಜೊತೆಗೆ ಸೈಬರ್ ಸೆಕ್ಯುರಿಟಿ ಬಗೆಗಿನ ಎಲ್ಲಾ ವಿಚಾರಗಳನ್ನು ಬಳಕೆದಾರರು ತಿಳಿದುಕೊಂಡಿರಬೇಕು.

Best Mobiles in India

Read more about:
English summary
6 apps that can hack your Facebook, WhatsApp, Instagram data

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X