ಅಮೇಜಾನ್ ಸೇಲ್ ನಲ್ಲಿ 99% ರಿಯಾಯಿತಿ- ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಮೋಸದ ಜಾಲ

|

ಒಂದು ವೇಳೆ ನೀವು ಅಮೇಜಾನ್ ನಲ್ಲಿ 99% ರಿಯಾಯಿತಿ ಸಿಗುತ್ತದೆ ಎಂಬ ಮೆಸೇಜ್ ನ್ನು ವಾಟ್ಸ್ ಆಪ್ ನಲ್ಲಿ ರಿಸೀವ್ ಮಾಡಿದ್ದರೆ ಕೂಡಲೇ ಆ ಮೆಸೇಜ್ ನ್ನು ಡಿಲೀಟ್ ಮಾಡಿ ಬಿಡಿ. ಈ ಮೆಸೇಜ್ ಗೆ ಮರುಳಾಗಿ ಓಪನ್ ಮಾಡಿಬಿಡಬೇಡಿ. ಯಾಕೆಂದರೆ ಇದೊಂದು ಫಿಶಿಂಗ್ ಮೆಸೇಜ್.

ವೈರಲ್ ಆದ ಫಿಶ್ಶಿಂಗ್ ಮೆಸೇಜ್:

ವೈರಲ್ ಆದ ಫಿಶ್ಶಿಂಗ್ ಮೆಸೇಜ್:

ಕಳೆದ ಕೆಲವು ದಿನಗಳಿಂದ ವಾಟ್ಸ್ ಆಪ್ ನಲ್ಲಿ ಈ ಮೆಸೇಜ್ ವೈರಲ್ ಆಗಿದೆ ಮತ್ತು ಈ ಮೆಸೇಜ್ ನಲ್ಲಿ ನೀಡಲಾಗಿರುವ ಲಿಂಕ್ ನ್ನು ಕ್ಲಿಕ್ಕಿಸಿದರೆ ಅಮೇಜಾನ್ ವೆಬ್ ಪೇಜ್ ನಂತಹ ವೆಬ್ ಸೈಟ್ ಪೇಜ್ ವೊಂದು ತೆರೆದುಕೊಳ್ಳುತ್ತದೆ. ಇದರಲ್ಲಿ ಹಲವಾರು ಪ್ರೊಡಕ್ಟ್ ಗಳಿಗೆ ಕೇವಲ 1 ರುಪಾಯಿ ಬೆಲೆಯನ್ನು ನಿಗದಿ ಪಡಿಸಲಾಗಿರುವ ಆಫರ್ ಪ್ರೈಸ್ ನ ವಿವರಗಳನ್ನು ನೀಡಲಾಗಿರುತ್ತದೆ. ಯಾವಾಗ ನೀವು ಇದನ್ನು ಖರೀದಿಸಲು ಬುಯ್ ನೌ ಆಯ್ಕೆಯನ್ನು ಕ್ಲಿಕ್ಕಿಸುತ್ತೀರೋ, ಆಗ ಇದು ನಿಮ್ಮ ಬ್ಯಾಂಕಿಂಗ್ ವಿವರ ಮತ್ತು ವಿಳಾಸ ಸೇರಿದಂತೆ ಹಲವು ವಿವರಗಳನ್ನು ಕೇಳುತ್ತದೆ. ಆ ಮೂಲಕ ಅವರು ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಕಲೆ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ.

ಫೇಕ್ ಲಿಂಕ್ ಗುರುತಿಸುವುದು ಹೇಗೆ?

ಫೇಕ್ ಲಿಂಕ್ ಗುರುತಿಸುವುದು ಹೇಗೆ?

ಫಸ್ಟ್ ಲುಕ್ ನಲ್ಲಿ ಅಮೇಜಾನ್ ಪೇಜ್ ನಂತೆಯೇ ಇದು ಗೋಚರಿಸುತ್ತದೆ. ಆದರೆ ಯುಆರ್ಎಲ್ ನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ಮರೆಮಾಚಿರುವ ಮಾಹಿತಿಗಳು ನಿಮಗೆ ಲಭ್ಯವಾಗುತ್ತದೆ ಮತ್ತು ಇವು ಫೇಕ್ ಎಂಬುದನ್ನು ಸಾಬೀತುಪಡಿಸುತ್ತದೆ. ವಾಟ್ಸ್ ಆಪ್ ಚಾಟ್ ಆಪ್ ನಲ್ಲಿ ವೈರಲ್ ಆಗಿರುವ ಲಿಂಕ್ ನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ದಯವಿಟ್ಟು ಕ್ಲಿಕ್ಕಿಸಬೇಡಿ. "http://amzn.biggest -sale.live.in. "

ಈ URL ನ್ನು ಹತ್ತಿರದಿಂದ ನೋಡಿದಾಗ ನಿಮಗೆ ಇದು ಫೇಕ್ ಎಂದು ಗೊತ್ತಾಗುತ್ತದೆ. ಅಮೇಜಾನ್ URL ನಲ್ಲಿ amazon.in ಇರುತ್ತದೆ ಆದರೆ ಫೇಕ್ ನಲ್ಲಿ amzn.biggest ಇದೆ.

ಪೋಲೀಸರಿಗೆ ಮಾಹಿತಿ ನೀಡಿ:

ಪೋಲೀಸರಿಗೆ ಮಾಹಿತಿ ನೀಡಿ:

ಒಂದು ವೇಳೆ ನೀವು ಕೂಡ ಅಪರಿಚಿತ ನಂಬರ್ ನಿಂದ ಇಂತಹ ಮೆಸೇಜ್ ರಿಸೀವ್ ಮಾಡಿದ್ದಲ್ಲಿ ಆ ನಂಬರ್ ನ್ನು ಪೋಲೀಸರಿಗೆ ತಿಳಿಸುವುದಕ್ಕೆ ಸೂಚಿಸಲಾಗಿದೆ. ಈ ಮೆಸೇಜ್ ನ್ನು ಯಾವುದೇ ಕಾರಣಕ್ಕೂ ಯಾರಿಗೂ ಫಾರ್ವರ್ಡ್ ಮಾಡಬೇಡಿ ಮತ್ತು ಸ್ಪ್ಯಾಮ್ ನಂಬರ್ ಆಗಿ ಬದಲಾಯಿಸಿ ಆ ಮೂಲಕ ಚಾಟ್ ಕಂಪೆನಿಯು ದುರುದ್ದೇಶಪೂರಿತ ಲಿಂಕ್ ಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಚಾಟ್ ಫ್ಲಾಟ್ ಫಾರ್ಮ್ ನಿಂದ ಅವುಗಳನ್ನ ತೆಗೆದುಹಾಕುವುದಕ್ಕೆ ಅನುಕೂಲವಾಗುತ್ತದೆ.

ವಾಟ್ಸ್ ಆಪ್ ಗೋಲ್ಡ್ ಸ್ಕ್ಯಾಮ್:

ವಾಟ್ಸ್ ಆಪ್ ಗೋಲ್ಡ್ ಸ್ಕ್ಯಾಮ್:

ವಾಟ್ಸ್ ಆಪ್ ವಿಶ್ವದಾದ್ಯಂತ ಇರುವ ಅತ್ಯಂತ ಪ್ರಸಿದ್ಧವಾಗಿರುವ ಚಾಟ್ ಆಪ್ ಆಗಿದ್ದು ಹಲವಾರು ಸ್ಕ್ಯಾಮ್ ಗಳನ್ನು ಇದು ದುರ್ಬಲಗೊಳಿಸಿದೆ ಮತ್ತು ಮುಂದೆಯೂ ದುರ್ಬಲಗೊಳಿಸುತ್ತದೆ. ಇದಲ್ಲದೆ ವಾಟ್ಸ್ ಆಪ್ ಗೋಲ್ಡ್ ಅನ್ನೋ ಮತ್ತೊಂದು ಫಿಶ್ಶಿಂಗ್ ಮೆಸೇಜ್ ಕೂಡ ಸದ್ಯ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿದೆ. ಫೇಕ್ ಮೆಸೇಜ್ ವೀಡಿಯೋ ರೂಪದಲ್ಲಿ ಬರಲಿದ್ದು ವೈರಸ್ ಗಳ ವಾರ್ನಿಂಗ್ ಅಪ್ ಡೇಟ್ ನೀಡುವಂತೆಯೂ ಇರಬಹುದು.ವೀಡಿಯೋ ಕೂಡ ಮಾಲ್ವೇರ್ ನ್ನು ನಿಮ್ಮ ಫೋನ್ ನಲ್ಲಿ ಇನ್ಸ್ಟಾಲ್ ಮಾಡುತ್ತದೆ ಮತ್ತು ಆ ವೀಡಿಯೋ ಡೌನ್ ಲೋಡ್ ಆದ ನಂತರ ನಿಮ್ಮ ಡಿವೈಸ್ ನ್ನು ಅದು ಹ್ಯಾಕ್ ಮಾಡಿ ಬಿಡುತ್ತದೆ.

ಅಪ್ ಡೇಟ್ ಗಳು ಮೆಸೇಜ್ ರೂಪದಲ್ಲಿ ಇರುವುದಿಲ್ಲ:

ಅಪ್ ಡೇಟ್ ಗಳು ಮೆಸೇಜ್ ರೂಪದಲ್ಲಿ ಇರುವುದಿಲ್ಲ:

ವಾಟ್ಸ್ ಅಪ್ ಡೇಟ್ ಗಳು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ಮೂಲಕ ಬರುತ್ತದೆ ಹಾಗಾಗಿ ಫೇಕ್ ಮೆಸೇಜ್ ಗಳನ್ನು ಕಂಡುಹಿಡಿಯುವ ಮೊದಲ ಸೂಚನೆಯೇ ಇದಾಗಿರುತ್ತದೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.

ಫೇಕ್ ನ್ಯೂಸ್ ತಡೆಗೆ ಕ್ರಮಗಳು:

ಫೇಕ್ ನ್ಯೂಸ್ ತಡೆಗೆ ಕ್ರಮಗಳು:

ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿರುವ ಫೇಕ್ ನ್ಯೂಸ್ ಗಳ ಬಗ್ಗೆ ವಾಟ್ಸ್ ಆಪ್ ಸಂಸ್ಥೆ ಕೂಡ ಚಿಂತಿತವಾಗಿದೆ. ಕಳೆದ ವರ್ಷ ಮಾಧ್ಯಮಗಳಲ್ಲಿ ಸಂಪೂರ್ಣ ಪುಟಗಳಲ್ಲಿ ಈ ಬಗ್ಗೆ ಜಾಹೀರಾತುಗಳನ್ನು ಕೂಡ ಹಾಕಲಾಗಿತ್ತು. ಬೇರೆಬೇರೆ ರೇಡಿಯೋ ಸ್ಟೇಷನ್ ಗಳ್ಲಿ ರೇಡಿಯೋ ಕ್ಯಾಂಪೇನ್ ಕೂಡ ನಡೆಸಲಾಗಿತ್ತು. ಕಳೆದ ವರ್ಷ ಫಾರ್ವರ್ಡ್ ಮೆಸೇಜ್ ಗಳಿಗೆ ಫಾರ್ವರ್ಡ್ ಲೇಬಲ್ ನ ವಿಶೇಷ ವೈಶಿಷ್ಟ್ಯತೆಯನ್ನು ಕೂಡ ಬಿಡುಗಡೆಗೊಳಿಸಿ ಫೇಕ್ ನ್ಯೂಸ್ ಗಳ ತಡೆಗೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ವಾಟ್ಸ್ ಆಪ್ ಮುಂದಾಗಿದೆ.

Best Mobiles in India

English summary
Amazon sale 99 per cent discount going viral on WhatsApp is a scam, don't fall for it

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X