ನಿಮ್ಮ ಮಕ್ಕಳ ಫೋನ್‌ನಲ್ಲಿ ಈ ಆಪ್‌ ಹಾಕಿ: ಅಶ್ಲೀಲತೆ ಹುಡುಕಿದರೆ ದೇವರನಾಮ ಹಾಡಲಿದೆ...!

|

ದೇಶದಲ್ಲಿ ಇಂಟರ್‌ನೆಟ್ ಬಳಕೆಯೂ ಹೆಚ್ಚಾಗಿದ್ದು, ಅದರಲ್ಲಿಯೂ ಮೊಬೈಲ್ ಡೇಟಾ ಬಳಕೆ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದೆ. ಜೊತೆಗೆ ಸ್ಮಾರ್ಟ್‌ಫೋನ್ ಎನ್ನವುದು ಮಕ್ಕಳ ಕೈಗೆ ಬಹಳ ಸುಲಭವಾಗಿ ದೊರೆಯುತ್ತಿದ್ದು, ಅವರು ಸಹ ಇಂಟರ್‌ನೆಟ್ ಬಳಕೆಯನ್ನು ಹೆಚ್ಚು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಹಾದಿ ತಪ್ಪುವುದು ಹೆಚ್ಚಾಗುತ್ತಿದೆ.

ನಿಮ್ಮ ಮಕ್ಕಳ ಫೋನ್‌ನಲ್ಲಿ ಈ ಆಪ್‌ ಹಾಕಿ: ಅಶ್ಲೀಲತೆ ಹುಡುಕಿದರೆ ದೇವರನಾಮ ಹಾಡಲಿದೆ

ಓದಿರಿ: ಒನ್‌ಪ್ಲಸ್‌ 5T ಸ್ಮಾರ್ಟ್‌ಫೋನ್ ಲಾಂಚ್‌ಗೂ ಮುನ್ನ ನೀವು ತಿಳಿಯಲೇ ಬೇಕಾದ ವಿಷಯಗಳು...!

ಅದರಲ್ಲೂ ಹದಿಹರೆಯದವರು ಅಶ್ಲೀಲ ವಿಡಿಯೋಗಳ ವಿಕ್ಷಣೆ ಮಾಡುವುದು ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಸಲುವಾಗಿ ಬನರಸ್ ಹಿಂದೂ ವಿಶ್ವವಿದ್ಯಾನಿಲಯವು ಹರ ಹರ ಮಹಾದೇವ ಎನ್ನುವ ಆಪ್‌ವೊಂದನ್ನು ಲಾಂಚ್ ಮಾಡಿದೆ. ಈ ಆಪ್‌ ಇನ್‌ಸ್ಟಾಲ್ ಮಾಡಿಕೊಂಡಿರೆ ಅಶ್ಲೀಲ ವಿಡಿಯೋಗಳಿರುವ ತಾಣವನ್ನು ತೆರೆಯಲು ಹೊದರೆ ಜೋರಾಗಿ ದೇವರ ಗೀತೆಗಳನ್ನು ಪ್ರಸಾರ ಮಾಡಲಿದೆ.

ಹರ್ ಹರ್ ಮಹಾದೇವಾ:

ಹರ್ ಹರ್ ಮಹಾದೇವಾ:

ಈ ಆಪ್‌ ಅನ್ನು ಅಶ್ಲೀಲ ಜಾಲತಾಣಗಳನ್ನು ನಿಯಂತ್ರಿಸುವ ಸಲುವಾಗಿಯೇ ನಿರ್ಮಿಸಲಾಗಿದೆ ಎನ್ನಲಾಗಿದೆ. ಸುಮಾರು 3800 ವೆಬ್‌ಸೈಟ್‌ಗಳನ್ನು ಇದರಲ್ಲಿ ಸೇರಿಸಲಾಗಿದ್ದು, ಇವುಗಳನ್ನು ಪತ್ತೆ ಮಾಡಿ ಬ್ಲಾಕ್ ಮಾಡಲಿದೆ. ಓಪನ್ ಮಾಡಲು ಹೋದರೆ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಲಿದೆ.

ಸರ್ಚ್ ಇನ್ನು ಮುಂದೆ ಸುಲಭ:

ಸರ್ಚ್ ಇನ್ನು ಮುಂದೆ ಸುಲಭ:

ಈಗಾಗಲೇ ಆನ್‌ಲೈನಿನಲ್ಲಿ ಸರ್ಚ್ ಮಾಡುವ ಸಂದರ್ಭದಲ್ಲಿ ಅನೇಕ ಅಶ್ಲೀಲ ವೆಬ್ ತಾಣಗಳು ಅರಿವಿಲ್ಲದಂತೆ ತೆಗೆದುಕೊಳ್ಳುತ್ತದೆ ಇವುಗಳನ್ನು ಈ ಆಪ್ ನಿಯಂತ್ರಿಸಲಿದೆ ಎನ್ನಲಾಗಿದೆ. ಇದರಿಂದ ಸರ್ಚ್ ಇದರಿಂದ ಸುಲಭವಾಗಲಿದೆ.

ಮೊಬೈಲ್‌ನಲ್ಲಿ ಇರಬೇಕಾದ ಆಪ್‌:

ಮೊಬೈಲ್‌ನಲ್ಲಿ ಇರಬೇಕಾದ ಆಪ್‌:

ಸ್ಮಾರ್ಟ್‌ಫೋನ್ ನಲ್ಲಿ ಈ ಮಾದರಿಯ ಆಪ್‌ ಇರಲೇ ಬೇಕು ಎನ್ನಲಾಗಿದೆ, ಇದು ಕೇವಲ ಅಶ್ಲೀಲ ವಿಡಿಯೋ ಪ್ರಸಾರ ಮಾಡುವ ತಾಣಗಳು ಮಾತ್ರವಲ್ಲದೇ ಹಿಂಸಾಚಾರ ಮತ್ತು ಅಸಭ್ಯ ವಿಚಾರಗಳ ಪ್ರಸಾರಕ್ಕೂ ತಡೆ ಹಿಡಿಯಲಿದೆ.

Best Mobiles in India

English summary
App Blocks Porn On Campus, Plays Bhajan When Someone Searches Adult Content. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X