ಬೆಂಗಳೂರಿನ ಕಿರಿಯ ಡೆವಲಪರ್ಸ್ ತಯಾರಿಸಿದ ಆಪ್: ಹಿರಿಯರನ್ನು ನಾಚಿಸುವಂತಿದೆ

ಬೆಂಗಳೂರಿನ ಹೈಸ್ಕೂಲ್ ವಿದ್ಯಾರ್ಥಿಗಳು ಹಿರಿಯರು ನಾಚಿಕೊಳ್ಳುವಂತೆ ಆಂಡ್ರಾಯ್ಡ್‌ ಆಪ್ ವೊಂದನ್ನು ತಯಾರಿಸಿ, ಆ ಮೂಲಕ ಸಮಾಜದ ಸೇವೆಗೆ ಮುಂದಾಗಿದ್ದಾರೆ.

|

ಬೆಂಗಳೂರು ಇಂದಿನ ದಿನದಲ್ಲಿ ತನ್ನ ಖ್ಯಾತಿಯನ್ನು ಪ್ರಪಂಚಾದ್ಯಂತ ವಿಸ್ತರಿಸಿಕೊಂಡಿದ್ದು, ದೇಶದ ಪ್ರಮುಖ ಐಟಿ ಹಬ್ ಎನ್ನುವ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಇದೇ ಬೆಂಗಳೂರಿನ ಹೈಸ್ಕೂಲ್ ವಿದ್ಯಾರ್ಥಿಗಳು ಹಿರಿಯರು ನಾಚಿಕೊಳ್ಳುವಂತೆ ಆಂಡ್ರಾಯ್ಡ್‌ ಆಪ್ ವೊಂದನ್ನು ತಯಾರಿಸಿ, ಆ ಮೂಲಕ ಸಮಾಜದ ಸೇವೆಗೆ ಮುಂದಾಗಿದ್ದಾರೆ.

ಬೆಂಗಳೂರಿನ ಕಿರಿಯ ಡೆವಲಪರ್ಸ್ ತಯಾರಿಸಿದ ಆಪ್

ಓದಿರಿ: ವಿಶ್ವದ ಅತೀ ವೇಗದ SD Card ಬಿಡುಗಡೆ ಮಾಡಿದ ಸೋನಿ

ಬೆಂಗಳೂರಿನ 13 ವರ್ಷದ ಪ್ರಿಯಲ್ ಜೈನ್, ಮತ್ತು 12 ವರ್ಷದ ಪ್ರತಿಕ್ ಮಹೇಶ್ ಎಂಬ ಇಬ್ಬರು ವಿದ್ಯಾರ್ಥಿಗಳು ಜೊತೆಯಾಗಿ vPledge ಎನ್ನುವ ಆಪ್‌ವೊಂದನ್ನು ತಯಾರು ಮಾಡಿದ್ದಾರೆ.

ಈ ಆಪ್ ಮೂಲಕ ಪರಿಸರ ಉಳಿಸಿ, ಆಹಾರ ದಾನ ಮಾಡಿ, ಬೀದಿ ನಾಯಿಗಳಿಗೆ ಆಹಾರ ನೀಡಿ, ಸಾರ್ವಜನಿಕ ಸಾರಿಗೆ ಬಳಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ, ಉತ್ತಮ ಶಿಕ್ಷಣ ಪಡೆಯಿರಿ ಎಂಬ ಎಲ್ಲಾ ಸಮಾಜ ಮುಖಿ ಕಾರ್ಯಗಳಿಗೆ ಬಳಕೆಯಾಗವ ಆಪ್‌ ಅನ್ನ ರೆಡಿ ಮಾಡಿದ್ದಾರೆ.

ಬೆಂಗಳೂರಿನ ಕಿರಿಯ ಡೆವಲಪರ್ಸ್ ತಯಾರಿಸಿದ ಆಪ್

ಓದಿರಿ: ಫೆ.26ರಂದು ನೋಕಿಯಾ ಪೋನ್ ಬಿಡುಗಡೆ ಮಾಡುವುದನ್ನು ನಿಮ್ಮ ಸ್ಮಾರ್ಟ್‌ಪೋನಿನಲ್ಲೇ ಲೈವ್ ನೋಡಿ..!

ಆಂಡ್ರಾಯ್ಡ್ ಫಾರ್‌ ಕಿಡ್ಸ್ ಎಂಬ ಟೆಕ್ ಸಮರ್ ಕ್ಯಾಂಪಿನಲ್ಲಿ ಈ ವಿದ್ಯಾರ್ಥಿಗಳು ಆಪ್‌ ಡೆವಲಪ್ ಮಾಡಿದ್ದಾರೆ ಎನ್ನಲಾಗಿದೆ. ಈ ಆಪ್‌ನಲ್ಲಿ ಸಮಾಜದ ಬೆಳವಣಿಗೆ ಕಾರಣವಾಗುವ ಅಂಶಗಳನ್ನು ಹಂಚಿಕೊಳ್ಳಬಹುದಾಗಿದ್ದು, ಇಲ್ಲಿ ಸ್ನೇಹಿತರನ್ನು ಕರೆತಂದು ಅವರನ್ನು ಸಮಾಜಮುಖಿ ಕಾರ್ಯದಲ್ಲಿ ಭಾಗಿಯಾಗುವಂತೆ ಪ್ರೇರೆಪಿಸಬಹುದಾಗಿದೆ.

13 ವರ್ಷದ ಪ್ರಿಯಲ್ ಜೈನ್ ಡೆಲ್ಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿದ್ದು, 12 ವರ್ಷದ ಪ್ರತಿಕ್ ಮಹೇಶ್ ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆಯ ವಿಧ್ಯಾರ್ಥಿಯಾಗಿದ್ದು ಇಬ್ಬರು ಸೇರಿ ಈ ಆಪ್‌ ತಯಾರು ಮಾಡಿದ್ದು, ಸಣ್ಣ ವಯಸ್ಸಿಗೆ ಎಲ್ಲರು ತಿರುಗಿ ನೋಡುವಂತಹ ಸಾಧನೆಯನ್ನು ಮಾಡಿದ್ದಾರೆ. ಈ ಆಪ್ ಡೌನ್‌ಲೋಡ್ ಮಾಡಿಕೊಂಡು ಬಳಸಲು ಇಲ್ಲಿ ಕ್ಲಿಕ್ ಮಾಡಿ.

Best Mobiles in India

Read more about:
English summary
Bengaluru developers aged 12 and 13 devise Android social app vPledge. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X