ನೀವು ಯಾವುದೇ ಕೆಲಸಕ್ಕೆ ಪ್ಲ್ಯಾನ್ ಮಾಡುವಾಗ ಈ ಆಪ್ಸ್ ನಿಮಗೆ ನೆರವಾಗಲಿವೆ!

|

ಯಾವುದೇ ಕೆಲಸವನ್ನು ಮಾಡಬೇಕಿದ್ದರೂ ಆ ಬಗ್ಗೆ ಪೂರ್ವ ಯೋಜನೆ ಸಿದ್ಧಪಡಿಸಬೇಕು. ಹೀಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ಮಾಡುವ ಕೆಲಸಗಳು ಕೈಕೊಡುವ ಸಾಧ್ಯತೆಗಳು ಬಹಳ ವಿರಳ. ಕೆಲವೊಮ್ಮೆ ಸ್ವಂತ ನಿರ್ಧಾರ ಕೈಗೊಳ್ಳುವ ಸಂದರ್ಭಗಳು ಬರುತ್ತವೆ. ಇನ್ನು ಕೆಲವೊಮ್ಮೆ ಯೋಜನೆ ರೂಪಿಸಲು ತಿಳಿದವರ ಮತ್ತು ಪರಿಚಯಸ್ಥರ ಸಲಹೆ ಪಡೆಯುವ ಅಗತ್ಯ ಇರುತ್ತದೆ. ಆದರೆ ಬಳಕೆದಾರರ ಕೈಗೊಳ್ಳುವ ಯೋಜನೆಗಳಿಗೆ ನೆರವಾಗಲು ಇದೀಗ ಅಪ್ಲಿಕೇಶನ್‌ಗಳು ಇವೆ ಎಂದರೇ ನೀವು ಅಚ್ಚರಿ ಪಡೆಬೇಕಿಲ್ಲ.

ಯೋಜನಯ/ಪ್ಲ್ಯಾನರ್

ಹೌದು, ಪ್ರಸ್ತುತ ಯಾವುದೇ ಕೆಲಸವಿರಲ್ಲಿ ಅದಕ್ಕೆ ಸಂಬಂಧಿತ ಅಪ್ಲಿಕೇಶನ್ ಲಭ್ಯ ಇವೆ. ಅವುಗಳಲ್ಲಿಗ ಯೋಜನಯ/ಪ್ಲ್ಯಾನರ್ ಆಪ್ಸ್‌ಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಈ ಆಪ್ಸ್‌ಗಳು ಬಳಕೆದಾರರಿಗೆ ಅವರ ಅಗತ್ಯ ಕೆಲಸಗಳ ಪ್ಲ್ಯಾನ್/ಯೋಜನೆ ಕುರಿತಾಗಿ ಸಲಹೆ ಒದಗಿಸಲು ನೆರವಾಗಿವೆ. ಮನೆ ಕೆಲಸ, ಗಾರ್ಡನ್ ಕೆಲಸ, ಮನೆಯ ಪ್ಲ್ಯಾನ್, ಸ್ಟಡಿ ಪ್ಲ್ಯಾನ್, ಟ್ರಾವೆಲ್ ಪ್ಲ್ಯಾನ್, ಬಜೆಟ್, ಊಟ, ನಿದ್ದೆ, ಹೀಗೆ ಎಲ್ಲ ವಿಷಯಗಳಿಗೂ ಪ್ಲ್ಯಾನರ್ ಆಪ್ಸ್‌ಗಳು ಲಭ್ಯ ಇವೆ. ನಿಮ್ಮ ಕೆಲಸಗಳಿಗೆ ನೆರವಾಗುವ ಅಂತಹ ಕೆಲವು ಪ್ಲ್ಯಾನರ್ ಆಪ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಮುಂದೆ ಓದಿರಿ.

ಫ್ಲೋರ್ ಪ್ಲ್ಯಾನ್ ಕ್ರಿಯೆಟರ್ ಆಪ್ಸ್

ಫ್ಲೋರ್ ಪ್ಲ್ಯಾನ್ ಕ್ರಿಯೆಟರ್ ಆಪ್ಸ್

ಮನೆಯನ್ನು ಕಟ್ಟಿಸುವುದು ಎಲ್ಲರ ಕನಸಾಗಿರುತ್ತದೆ. ಮನೆ ಕಟ್ಟಲು ಯೋಜನೆ ಮಾಡಿದಾಗಿನಿಂದ ಪೂರ್ಣಗೊಳ್ಳುವವರೆಗೂ ನೂರೆಂಟು ಪ್ಲ್ಯಾನ್ ತಲೆಯಲ್ಲಿ ಸುತ್ತುತ್ತಿರುತ್ತವೆ. ಇಂತಹ ಟೈಮ್‌ನಲ್ಲಿ ಮನೆಯ ಫ್ಲೋರ್ ಪ್ಲ್ಯಾನ್ ಕ್ರಿಯೆಟರ್ ಆಪ್ಸ್‌ ನೆರವಾಗಲಿದೆ. ಮನೆಯ ರಚನೆ, ಪ್ಲ್ಯಾನ್, ಫ್ಲೋರ್, ಡಿಸೈನ್, ಎಲ್ಲವುಗಳ ಬಗ್ಗೆ ಐಡಿಯಾ ಮತ್ತು ನೀಲಿ ನಕಾಶ ಒದಗಿಸುತ್ತವೆ. ಖಂಡಿತಾ ಈ ಆಪ್ ಮನೆಯ ಅಲಂಕಾರದ ಐಡಿಯಾಗಳಿಗೂ ಸೂಕ್ತ ಅನಿಸಲಿದೆ.

ಗಾರ್ಡನ್ ಪ್ಲ್ಯಾನರ್- ಫ್ರಮ್ ಸೀಡ್‌ ಟು ಸ್ಪೂನ್

ಗಾರ್ಡನ್ ಪ್ಲ್ಯಾನರ್- ಫ್ರಮ್ ಸೀಡ್‌ ಟು ಸ್ಪೂನ್

ಮನೆಯ ಮುಂದೆ, ಕಛೇರಿಯ ಮುಂದೆ ಒಂದು ಚೆಂದದ ಕೈ ತೋಟ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಬಣ್ಣ ಬಣ್ಣದ ಹೂ ಗಿಡಗಳನ್ನು ನೆಡುತ್ತಾರೆ ಟೈಮ್‌ ಟು ಟೈಮ್ ನೀರು ಹಾಕುತ್ತಾರೆ. ಆದರೆ ಬಹುತೇಕ ಜನರಿಗೆ ತೋಟಗಾರಿಕೆಯ ಗಿಡಗಳ ಬಗ್ಗೆ ಮಾಹಿತಿ ಹೆಚ್ಚಿರುವುದಿಲ್ಲ. ಆ ವೇಳೆಯಲ್ಲಿ ಫ್ರಮ್ ಸೀಡ್‌ ಟು ಸ್ಪೂನ್ ಆಪ್ ಸಹಕಾರಿ ಅನಿಸಲಿದೆ. ಈ ಆಪ್‌ ಸಸಿಗಳ ಬಗ್ಗೆ ಮಾಹಿತಿ, ಸಸಿಗಳನ್ನು ನೆಡುವ ಕ್ರಮ, ಸಸಿಗಳಿಗೆ ಅಗತ್ಯ ನೀರಿನ ಪ್ರಮಾಣ, ಹೀಗೆ ಹಲವು ಮಾಹಿತಿಗಳನ್ನು ನೀಡುತ್ತದೆ.

ವೆಡ್ಡಿಂಗ್ ಪ್ಲ್ಯಾನರ್- The Knot

ವೆಡ್ಡಿಂಗ್ ಪ್ಲ್ಯಾನರ್- The Knot

ಮದುವೆ ತಯಾರಿ ಅಂದರೇ ಸುಲಭದ ಮಾತೇ?..ಎಷ್ಟೆಲ್ಲ ಕೆಲಸಗಳು ಇರತ್ವೆ. ಅವಸರದಲ್ಲಿ ಕೆಲವೊಂದು ಕೆಲಸಗಳು ಮರೆತು ಹೋಗಿಬಿಡುತ್ತವೆ. ಮದುವೆ ಪ್ಲ್ಯಾನರ್ ಸಂಬಂಧಿಸಿದ Knot ಆಪ್‌ನಲ್ಲಿ ಮದುವೆಯ ಸಂಪೂರ್ಣ ತಯಾರಿ ಮಾಡಬಹುದು. ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ಊಟದ ವ್ಯವಸ್ಥೆ, ಫ್ಲವರ್ ಡೆಕೊರೇಶನ್ ಗಳಂತಹ ಕೆಲಸಗಳನ್ನು ಟ್ರಾಕ್ ಮಾಡಬಹುದು.

ರೂಟ್ ಪ್ಲ್ಯಾನರ್-ಗೂಗಲ್ ಮ್ಯಾಪ್

ರೂಟ್ ಪ್ಲ್ಯಾನರ್-ಗೂಗಲ್ ಮ್ಯಾಪ್

ಸದ್ಯ ಸ್ಮಾರ್ಟ್‌ಫೋನ್ ಮಂದಿ ಗೂಗಲ್ ಮ್ಯಾಪ್ ಬಳಕೆ ಮಾಡಿಕೊಳ್ಳುತ್ತಿದ್ದು, ಸ್ಥಳಗಳ ಅಂತರ ಎಷ್ಟು ಎಂಬುದನ್ನು ರೂಟ್ ಹಾಕಿ ಚೆಕ್ ಮಾಡುತ್ತಾರೆ. ಅದಾಗ್ಯೂ ಗೂಗಲ್ ಮ್ಯಾಪ್‌ನಲ್ಲಿ ರೂಟ್ ಪ್ಲ್ಯಾನ್ ಮಾಡುವ ಆಯ್ಕೆ ಇದೆ ಎನ್ನುವ ಬಗ್ಗೆ ಬಹುತೇಕರು ತಿಳಿದಿಲ್ಲ. ರೂಟ್ ಪ್ಲ್ಯಾನರ್ ಆಯ್ಕೆ ಮಾಡಿ ಆರಂಭದ ಪಾಯಿಂಟ್‌ನಿಂದ ಹೋಗ ಬೇಕೆಂದಿರುವ ಸ್ಥಳ ಪ್ಲ್ಯಾನ್ ಮಾಡಬಹುದು.

ಸ್ಟಡಿ ಪ್ಲ್ಯಾನರ್- ಮೈ ಸ್ಟಡಿ ಲೈಫ್

ಸ್ಟಡಿ ಪ್ಲ್ಯಾನರ್- ಮೈ ಸ್ಟಡಿ ಲೈಫ್

ಮೈ ಸ್ಟಡಿ ಲೈಫ್ ಆಪ್‌ ಹೈಸ್ಕೂಲ್, ಕಾಲೇಜ್ ವಿದ್ಯಾರ್ಥಿಗಳಿಗೆ ನೆರವಾಗಲಿದೆ ಹಾಗೂ ಶಿಕ್ಷಕರಿಗೂ ಅನುಕೂಲಕರವಾಗಿದೆ. ಈ ಆಪ್‌ ಅನ್ನು ಡೆಸ್ಕ್‌ಟಾಪ್, ಲ್ಯಾಪ್‌ಟಾಪ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿಯೂ ಬಳಸಬಹುದು. ಈ ಆಪ್ ವಿದ್ಯಾರ್ಥಿಗಳಿಗೆ ಹೋಮ್‌ವರ್ಕ್, ಅಸೈನಮೆಂಟ್‌, ಇತರೆ ಟಾಸ್ಕ್‌ಗಳನ್ನು ಟ್ರಾಕ್ ಮಾಡಲು ಅನುಕೂಲವಾಗಲಿದೆ.

ಟ್ರಾವೆಲ್ ಪ್ಲ್ಯಾನರ್-TripIt

ಟ್ರಾವೆಲ್ ಪ್ಲ್ಯಾನರ್-TripIt

ಪ್ರವಾಸ ಹೊರಡುವಾಗ ಒಂದು ಪಕ್ಕಾ ಪ್ಲ್ಯಾನ್ ಮಾಡಬೇಕಿರುತ್ತದೆ. ಬಸ್‌, ಟ್ರೈನ್, ವಿಮಾನಗಳ ಟಿಕೆಟ್ ಬುಕ್ಕಿಂಗ್, ಊಟ, ವಸತಿಗಳ ವ್ಯವಸ್ಥೆಗಳ ಬಗ್ಗೆ ಮೊದಲೆ ಸಿದ್ಧತೆಯ ಯೋಜನೆ ಅಗತ್ಯ ಇರುತ್ತದೆ. ಇಂತಹ ಕೆಲಸಗಳಿಗೆ ಟ್ರಿಪ್ಇಟ್ ಆಪ್ ಸಹಕಾರಿ ಆಗಲಿದೆ.

Most Read Articles
Best Mobiles in India

English summary
You get an idea of what you need to do, when you need to do it, and how much that thing costs.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X