Subscribe to Gizbot

ಜಿಯೋ ಬೇಡ ಎಂದು ಏರ್‌ಟೆಲ್‌ ಕಡೆಗೆ ಮುಖ ಮಾಡಲು ಇದೊಂದೇ ಕಾರಣ ಸಾಕು...!

Written By:

ಜಿಯೋ ದೇಶಿಯ ಟೆಲಿಕಾಂ ವಲಯದಲ್ಲಿ ಸಾಕಷ್ಟು ಹೊಸ ತನಗಳಿಗೆ ಕಾರಣವಾಗಿದೆ. ತನ್ನದೇ ಆದ ಆಪ್‌ಗಳನ್ನು ಬಿಡುಗಡೆ ಮಾಡುವುದಲ್ಲದೆ ತನ್ನದೇ ಹೊಸ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಬೇರೆ ಟೆಲಿಕಾಂ ಕಂಪನಿಗಳು ತಮ್ಮದೇ ಫೋನ್ ಮತ್ತು ಆಪ್‌ಗಳನ್ನು ಲಾಂಚ್ ಮಾಡಲು ಪ್ರೇರೆಪಿಸಿತ್ತು. ಈ ಬಾರಿ ಏರ್‌ಟೆಲ್‌ ಜಿಯೋವನ್ನು ಮೀರಿಸುವ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ.

 ಜಿಯೋ ಬೇಡ ಎಂದು ಏರ್‌ಟೆಲ್‌ ಕಡೆಗೆ ಮುಖ ಮಾಡಲು ಇದೊಂದೇ ಕಾರಣ ಸಾಕು...!

ಓದಿರಿ: ಜಿಯೋ ಬೆಸ್ಟ್ ಎಂದವರಿಗೆ ಶಾಕ್: ಐಡಿಯಾದಿಂದ ಆಲ್‌ಟೈಮ್‌ ಬೆಸ್ಟ್‌‌ ಆಫರ್...!

ಏರ್‌ಟೆಲ್ ಮುಂದಿನ ವರ್ಷದ ಆರಂಭದಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ, ಅಲ್ಲದೇ ಪೋಸ್ಟ್‌ಪೇಯ್ಡ್‌ ಬಳಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲು ಹೊಸದೊಂದು ಪ್ರಯೋಗಕ್ಕೆ ಮುಂದಾಗಿದೆ. ತನ್ನ ಪೋಸ್ಟ್‌ಪೇಯ್ಡ್‌ ಬಳಕೆದಾರರಿಗೆ ಏರ್‌ಟೆಲ್‌ ಅಮೆಜಾನ್ ಪ್ರೈಮ್ ವಿಡಿಯೋ ಚಂದದಾರಿಕೆಯನ್ನು ಉಚಿತವಾಗಿ ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.499 ಪ್ಲಾನ್‌ ಮೇಲ್ಪಟ್ಟು:

ರೂ.499 ಪ್ಲಾನ್‌ ಮೇಲ್ಪಟ್ಟು:

ಏರ್‌ಟೆಲ್‌ ಪೋಸ್ಟ್‌ಫೋಯ್ಡ್‌ ಗ್ರಾಹಕರು ರೂ.499ಕ್ಕಿಂತ ಹೆಚ್ಚಿನ ಬೆಲೆಯ ಪ್ಲಾನ್‌ಗಳನ್ನು ಹೊಂದಿದವರಿಗೆ ಅಮೆಜಾನ್ ಪ್ರೈಮ್ ವಿಡಿಯೋ ಚಂದದಾರಿಕೆಯನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ. ಇದನ್ನು ಏರ್‌ಟೆಲ್ TV ಆಪ್‌ ಮೂಲಕ ಪಡೆಯಬಹುದಾಗಿದೆ.

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
ಒಂದು ವರ್ಷದ ಚಂದದಾರಿಕೆ:

ಒಂದು ವರ್ಷದ ಚಂದದಾರಿಕೆ:

ಏರ್‌ಟೆಲ್ ತನ್ನ ಪೋಸ್ಟ್‌ಪೇಯ್ಡ್ ಬಳಕೆದಾರರಿಗೆ ರೂ.999 ಬೆಲೆಯ ಅಮೆಜಾನ್ ಪ್ರೈಮ್ ವಿಡಿಯೋ ಚಂದದಾರಿಕೆಯನ್ನು ಒಂದು ವರ್ಷಗಳ ಉಚಿತವಾಗಿ ನೀಡಲಿದೆ ಎನ್ನಲಾಗಿದ್ದು, ಈ ಮೂಲಕ ಜಿಯೋ ಸೇವೆಗೆ ಸೆಡ್ಡು ಹೊಡೆಯಲು ಮುಂದಾಗಿದೆ ಎನ್ನಲಾಗಿದೆ.

ಜಿಯೋ ಸೆಡ್ಡು:

ಜಿಯೋ ಸೆಡ್ಡು:

ಜಿಯೋ ತನ್ನ ಬಳಕೆದಾರರಿಗೆ ತನ್ನ ಆಪ್‌ ಸೇವೆಗಳ ಸಿನಿಮಾ ಮತ್ತು ಟಿವಿಯನ್ನು ವೆಬ್‌ನಲ್ಲಿಯೂ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿತ್ತು. ಅದಕ್ಕೆ ಸೆಡ್ಡು ಹೊಡೆಯುವಂತೆ ಏರ್‌ಟೆಲ್ ಈ ಆಪರ್ ಅನ್ನು ನೀಡಲು ಮುಂದಾಗಿದೆ.

ವೊಡಾಫೋನ್‌ ನಿಂದಲೂ ಆಫರ್:

ವೊಡಾಫೋನ್‌ ನಿಂದಲೂ ಆಫರ್:

ಇದಲ್ಲದೇ ವೊಡಾಫೋನ್ ತನ್ನ ಪ್ರೀಮಿಯಮ್ ಪೋಸ್ಟ್‌ಪೇಯ್ಡ್‌ ರೆಡ್‌ ಪ್ಲಾನ್‌ ಬಳಕೆದಾರರಿಗೆ ನೆಟ್‌ಫ್ಲಿಕ್ಸ್‌ ಬಳಕೆಯನ್ನು ಉಚಿತವಾಗಿ ನೀಡಿದ ಹಿನ್ನಲೆಯಲ್ಲಿ ಏರ್‌ಟೆಲ್ ಅಮೆಜಾನ್ ಪ್ರೈಮ್ ವಿಡಿಯೋ ಸದಸ್ಯತ್ವವನ್ನು ನೀಡದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Bharti Airtel Offering Free Subscription to Amazon Prime Video With myPlan Infinity Postpaid Plans Above Rs 499. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot