Subscribe to Gizbot

ಜಿಯೋ ಬೆಸ್ಟ್ ಎಂದವರಿಗೆ ಶಾಕ್: ಐಡಿಯಾದಿಂದ ಆಲ್‌ಟೈಮ್‌ ಬೆಸ್ಟ್‌‌ ಆಫರ್...!

Written By:

ಸದ್ಯ ಟೆಲಿಕಾಂ ಮಾರುಕಟ್ಟೆಯಲ್ಲಿ ಭರ್ಜರಿ ದರ ಸಮರವು ನಡೆಯುತ್ತಿದ್ದು, ಪ್ರತಿಯೊಂದು ಟೆಲಿಕಾಂ ಕಂಪನಿ ಒಂದರ ಹಿಂದೆ ಒಂದರಂತೆ ಬಂಪರ್ ಆಫರ್‌ಗಳನ್ನು ನೀಡುತ್ತಿದೆ. ಜಿಯೋ ಹೊಸ ವರ್ಷದ ಅಂಗವಾಗಿ 1.2GB ಮತ್ತು 2GB ಡೇಟಾವನ್ನು 28 ದಿನಗಳ ಅವಧಿಗೆ ನೀಡಿದ ಮಾದರಿಯಲ್ಲಿ ಐಡಿಯಾ ಹೊಸದೊಂದು ಆಪರ್ ಅನ್ನು ಘೋಷಣೆ ಮಾಡಿದೆ.

ಜಿಯೋ ಬೆಸ್ಟ್ ಎಂದವರಿಗೆ ಶಾಕ್: ಐಡಿಯಾದಿಂದ ಆಲ್‌ಟೈಮ್‌ ಬೆಸ್ಟ್‌‌ ಆಫರ್...!

ಓದಿರಿ: ಫಾಸ್ಟ್‌ಚಾರ್ಜ್‌ ಇಲ್ಲದೇಯೂ ನಿಮ್ಮ ಫೋನ್‌ ಅನ್ನು ಫಾಸ್ಟಾಗಿ ಚಾರ್ಜ್ ಮಾಡಬಹುದು..! ಹೇಗೆ..?

ಐಡಿಯಾ ತನ್ನ ಬಳಕೆದಾರರಿಗೆ ಜಿಯೋಗಿಂತಲೂ ಒಂದು ಕೈ ಜಾಸ್ತಿಯಾದ ಆಫರ್ ಅನ್ನು ನೀಡಲು ಮುಂದಾಗಿದೆ. ಪ್ರತಿ ನಿತ್ಯ 1.5 GB ಡೇಟಾವನ್ನು ಬಳಕೆಗೆ ನೀಡಲಿದ್ದು, ಅಲ್ಲದೇ ಪ್ಲಾನ್‌ ಬೆಲೆಯಲ್ಲಿ ಏರಿಕೆಯನ್ನು ಮಾಡುತ್ತಿಲ್ಲ ಎನ್ನಲಾಗಿದೆ. ರೂ.309ಕ್ಕೆ ಅತೀ ಹೆಚ್ಚಿನ ಲಾಭವನ್ನು ಬಳಕೆದಾರರಿಗೆ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.309 ಪ್ಲಾನ್:

ರೂ.309 ಪ್ಲಾನ್:

ಐಡಿಯಾ ರೂ.309ಕ್ಕೆ ತನ್ನ ಬಳಕೆದಾರರಿಗೆ ಈ ಹಿಂದೆ ಪ್ರತಿ ನಿತ್ಯ 1GB ಡೇಟಾ ಬಳಕೆಯನ್ನು ನೀಡುತ್ತಿತ್ತು. ಆದರೆ ಈಗ ಶೇ.50% ಹೆಚ್ಚಿನ ಡೇಟಾವನ್ನು ಬಳಕೆಗೆ ನೀಡುತ್ತಿದೆ. ಇನ್ನು ಮುಂದೇ ಇದೇ ಪ್ಲಾನ್‌ನಲ್ಲಿ ಬಳಕೆದಾರರಿಗೆ 1.5GB ಡೇಟಾವನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ ಎನ್ನಲಾಗಿದೆ.

ಹೊಸ ವರ್ಷಕ್ಕೆ ಮತ್ತೊಂದು Jio Surprise Cashback ಆಫರ್!!
28 ದಿನಗಳ ಅವಧಿ:

28 ದಿನಗಳ ಅವಧಿ:

ಐಡಿಯಾ ರೂ.309ರ ಪ್ಲಾನ್‌ನಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳಲಿದ್ದು, ಈ ಸಂದರ್ಭದಲ್ಲಿ ಉಚಿತ ಕರೆ ಮಾಡುವ ಸೇವೆ ಹಾಗೂ ಎಸ್‌ಎಂಎಸ್‌ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ.

ಬೇರೆ ಎಲ್ಲಿಯೂ ಆಫರ್ ಇಲ್ಲ:

ಬೇರೆ ಎಲ್ಲಿಯೂ ಆಫರ್ ಇಲ್ಲ:

ಐಡಿಯಾ ಮಾದರಿಯ ಆಫರ್ ಅನ್ನು ಬೇರೆ ಯಾವುದೇ ಟೆಲಿಕಾಂ ಕಂಪನಿಗಳು ನೀಡಿಲ್ಲ ಎನ್ನಲಾಗಿದೆ. ಬೇರೆ ಕಂಪನಿಗಳು ಇನ್ನು ಹೆಚ್ಚಿನ ಬೆಲೆಗೆ ಇದಕ್ಕಿಂತ ಕಡಿಮೆ ಡೇಟಾವನ್ನು ಬಳಕೆಗೆ ನೀಡುತ್ತಿವೆ. ಹೀಗಾಗಿ ಐಡಿಯಾ ಬೆಸ್ಟ್ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea Is Now Offering 1.5GB Data Per Day, Bundled Calls at Rs. 309 to Beat Jio. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot