ಆನ್ ಲೈನ್ ಎಂಟರ್ಟೆನ್ ಮೈಂಟ್ ಟಿಕೇಟಿಂಗ್ ಫ್ಲಾಟ್ ಫಾರ್ಮ್ ಬುಕ್ ಮೈ ಶೋ ದಿನದಿಂದ ದಿನಕ್ಕೆ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಈ ಬಾರಿ 2017ರ ಬೆಸ್ಟ್ ಆಪ್ ಎನ್ನುವ ಖ್ಯಾತಿಯನ್ನು ಮುಡಿಗೇರಿಸಿಕೊಂಡಿದೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿಯೂ ಉತ್ತಮ ಆಪ್ ಎನ್ನುವ ಪಟ್ಟವನ್ನು ಪಡೆದುಕೊಂಡಿದೆ.

ಗೂಗಲ್ ಮತ್ತು ಆಪಲ್ ಗಳು ಬುಕ್ ಮೈ ಶೋ ಆಪ್ ಗೆ ಬೆಸ್ಟ್ ಎನ್ನುವ ಪಟ್ಟವನ್ನು ನೀಡಿದ್ದು, ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರು ಈ ಆಪ್ ಬಳಕೆಗೆ ಮನಸೋತಿದ್ದಾರೆ ಎನ್ನಲಾಗಿದೆ. ಇದಲ್ಲದೇ ಬುಕ್ ಮೈ ಶೋ ವೆಬ್ ಮತ್ತು ಆಪ್ ಎರಡು ಸೇವೆಯನ್ನು ನೀಡುತ್ತಿದ್ದು, ಆಪ್ ಸೇವೆಯೂ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ಬುಕ್ ಮೈ ಶೋ ಸಿನಿಮಾ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಟಿಕೇಟ್ ಗಳನ್ನು ಮಾರಾಟ ಮಾಡಲಿದೆ ಎನ್ನಲಾಗಿದ್ದು, ಈ ಮೂಲಕ ಹೆಚ್ಚಿನ ಜನರಿಗೆ ಹತ್ತಿರವಾಗಿದ್ದು, ಅಲ್ಲದೇ ಈ ಎರಡು ಆಪ್ ಸ್ಟೋರ್ ಪ್ಲಾಟ್ ಫಾರ್ಮ್ ಗಳಲ್ಲಿ ಈ ಬುಕ್ ಮೈ ಶೋ ಆಪ್ ಟ್ರೆಂಡಿಂಗ್ ನಲ್ಲಿತ್ತು ಎನ್ನಲಾಗಿದೆ.
ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಬುಕ್ ಮೈ ಶೋ ಸೇವೆಯನ್ನು ನೀಡುತ್ತಿದೆ ಎನ್ನಲಾಗಿದೆ. ಇರದಲ್ಲಿ ಟಿಕೇಟ್ ಬುಕ್ ಮಾಡುವುದು ಸುಲಭ ಸಾಧ್ಯವಾಗಿದ್ದು, ಈ ಹಿನ್ನಲೆಯಲ್ಲಿ ಹೆಚ್ಚಿನ ಮಂದಿ ಟಿಕೇಟ್ ಬುಕ್ ಮಾಡಲು ಬುಕ್ ಮೈ ಶೋ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಮಾರ್ಚ್ ನಲ್ಲಿ ಟಾಪ್ ಎಂಡ್ ಶಿಯೋಮಿ Mi 7 ಮತ್ತು Mi7 ಪ್ಲಸ್ ಸ್ಮಾರ್ಟ್ ಫೋನ್ ಲಾಂಚ್..!
ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಿನಿಮಾ ಟಿಕೇಟ್ ಬುಕ್ ಮಾಡುವ ಸಲುವಾಗಿ ಬುಕ್ ಮೈ ಶೋ ಬಳಕೆ ಮಾಡಿಕೊಳ್ಳುತ್ತಿದ್ದು, ಆಡ್ವಾನ್ಸ್ ಬುಕಿಂಗ್ ಸಾಧ್ಯವಿರುವುದು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಇದಲ್ಲದೇ ವಾಟ್ಸ್ ಆಪ್ ಬಿಸ್ನೆಸ್ ಆಕೌಂಟ್ ಸಹ ತೆರೆದಿರುವ ಬುಕ್ ಮೈ ಶೋ, ಗ್ರಾಹಕರಿಗರ SMS ಸೇವೆಯನ್ನು ಸಹ ನೀಡಲು ಮುಂದಾಗಿದೆ.
Gizbot ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿ.Subscribe to Kannada Gizbot.