ನೀವು ಕ್ರಿಕೆಟ್ ಪ್ರೇಮಿಗಳಾಗಿದ್ದರೆ ಈ ಆಪ್ ಡೌನ್ ಲೋಡ್ ಮಾಡಿಕೊಳ್ಳಲೇ ಬೇಕು!

By Gizbot Bureau
|

ಫ್ಯಾಂಟಸಿ ಕ್ರಿಕೆಟ್ ಫ್ಲ್ಯಾಟ್ ಫಾರ್ಮ್ ಆಗಿರುವ ಕ್ರಿಕ್ ಪ್ಲೇ ಹೊಸ ಆಪ್ ನ್ನು ಪರಿಚಯಿಸಿದ್ದು ಇದು ಗೇಮರ್ ಗಳಿಗೆ ತಮ್ಮ ಸ್ವಂತ ಫ್ಯಾಂಟಸಿ ಟೀಮ್ ನ್ನು ಸೃಷ್ಟಿಸಲು ಅವಕಾಶ ನೀಡುತ್ತದೆ ಮತ್ತು ಕ್ಯಾಷ್ ಅವಾರ್ಡ್ ಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ.ಹೊಸ ಆಪ್ ಮೂರು ವಿಭಿನ್ನ ಫಾರ್ಮೇಟ್ ನಲ್ಲಿ ಲಭ್ಯವಾಗುತ್ತದೆ- ಫ್ಯಾಂಟಸಿ ಲೀಗ್ಸ್, ಸೂಪರ್ ಲೀಗ್ಸ್ ಮತ್ತು ಡೈಲಿ ಪ್ರಿಡಿಕ್ಷನ್ಸ್. ಆಂಡ್ರಾಯ್ಡ್ ಮತ್ತು ವೆಬ್ ಎರಡರಲ್ಲೂ ಕೂಡ ಇದು ಲಭ್ಯವಿದೆ.

ವರ್ಚುವಲ್ ಟೀಮ್ ಸೃಷ್ಟಿಸಲು ಅವಕಾಶ:

ವರ್ಚುವಲ್ ಟೀಮ್ ಸೃಷ್ಟಿಸಲು ಅವಕಾಶ:

ಫ್ಯಾಂಟಸಿ ಲೀಗ್ ಫಾರ್ಮೇಟ್ ನ ಅಡಿಯಲ್ಲಿ ಬಳಕೆದಾರರು ತಮ್ಮ ಸ್ವಂತ ವರ್ಚುವಲ್ ಟೀಮ್ ಸೃಷ್ಟಿಸಬಹುದು ಮತ್ತು ದೇಶದ ಯಾವುದೇ ಇತರೆ ಗೇಮರ್ ಗಳ ಜೊತೆಗೆ ಆಡಬಹುದು. ಅವರು ಹಣವನ್ನು ಕೂಡ ಗೆಲ್ಲಬಹುದು, ಪ್ರೈವೇಟ್ ಕಾಂಟೆಸ್ಟ್ ಗಳನ್ನು ಸೃಷ್ಟಿಸಬಹುದು ಮತ್ತು ತಮ್ಮ ಸ್ನೇಹಿತರನ್ನು ಆಮಂತ್ರಿಸಬಹುದು ಅಥವಾ ತಾವು ಕ್ರಿಯೇಟ್ ಮಾಡಿದ ಕಂಟೆಸ್ಟ್ ನಲ್ಲಿ ಸೇರಿಕೊಳ್ಳಬಹುದು ಮತ್ತು ಅವರೊಡನೆ ಸ್ಪರ್ಧಿಸಬಹುದು.

ಯಾವ ತಂಡಕ್ಕೆ ಹೆಚ್ಚು ಸ್ಕೋರ್?

ಯಾವ ತಂಡಕ್ಕೆ ಹೆಚ್ಚು ಸ್ಕೋರ್?

ಎರಡೂ ಕ್ರಿಕೆಟ್ ತಂಡದ ಪ್ಲೇಯರ್ ಗಳನ್ನು ತಮ್ಮ ಮುಂದಿನ ಮ್ಯಾಚಿನ ಆಟದ ತಂಡಕ್ಕಾಗಿ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿರುತ್ತದೆ. ಮ್ಯಾಚ್ ನ ಸಂದರ್ಬದಲ್ಲಿ ಆಯ್ಕೆ ಮಾಡಿದ ಪ್ರತಿ ಪ್ಲೇಯರ್ ನ ಪ್ರದರ್ಶನದ ಆಧಾರದಲ್ಲಿ ಪ್ರತಿ ತಂಡವು ಸ್ಕೋರ್ ಪಾಯಿಂಟ್ ಗಳನ್ನು ಗಳಿಸುತ್ತದೆ ಮತ್ತು ಯಾವ ತಂಡ ಅತೀ ಹೆಚ್ಚು ಅಂಕವನ್ನು ಗಳಿಸುತ್ತದೆಯೋ ಆ ತಂಡ ಜಯಶಾಲಿಯಾಗುತ್ತದೆ.

ಸೂಪರ್ ಲೀಗ್:

ಸೂಪರ್ ಲೀಗ್:

ಸೂಪರ್ ಲೀಗ್ ನಿಜವಾಗ ಗೇಮ್ ಪ್ಲೇ ಆಗಿದ್ದು ಇಲ್ಲಿ ಪ್ರತಿ ಗೇಮಿಗೂ ಇಲ್ಲಿ ಗಮೇರ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ಪವರ್ ಅಪ್ಸ್ ಗಳನ್ನು ಸೆಲೆಕ್ಟ್ ಮಾಡಿಕೊಳ್ಳಬಹುದು ಉದಾಹರಣೆಗೆ ಸಬ್ಸ್ಟಿಟ್ಯೂಷನ್, ಕ್ಯಾಪ್ಟನ್ ಚೇಂಜರ್ ಅಥವಾ ವೈಸ್ ಕ್ಯಾಪ್ಟನ್ ಚೇಂಜರ್ ಇತ್ಯಾದಿಗಳಿಂದ ಗೇಮಿನ ಅನುಭವವನ್ನು ಇನ್ನಷ್ಟು ರೋಚಕಗೊಳಿಸಿಕೊಳ್ಳಬಹುದು. ಮ್ಯಾಚ್ ಗೆ ಮುನ್ನವೇ ಗೆಲುವಿನ ಪ್ರಿಡಿಕ್ಷನ್ ಮಾಡಿ ಸರಿಯಾದ ರೀತಿಯಲ್ಲಿ ಹೇಳಿದವರು ಕ್ಯಾಷ್ ಪ್ರೈಸ್ ಗಳನ್ನು ಗೆಲ್ಲುವ ಅವಕಾಶವಿರುತ್ತದೆ.

ಕ್ರಿಕ್ ಪ್ಲೇ ಹೇಳಿಕೆ:

ಕ್ರಿಕ್ ಪ್ಲೇ ಹೇಳಿಕೆ:

ಕ್ರಿಕ್ ಪ್ಲೇ ನ ಬ್ಯುಸಿನೆಸ್ ಹೆಡ್ ಆಗಿರುವ ಗೌರವ್ ಸಾರಿನ್ ಅವರು ತಿಳಿಸಿರುವಂತೆ " ಕ್ರಿಕ್ ಪ್ಲೇ ಮೊದಲ ಅವತರಣಿಕೆಯನ್ನು ಬಿಡುಗಡೆಗೊಳಿಸಲು ನಾವು ಕಾತುರರಾಗಿದ್ದೇವೆ, ಇದು ಮೊದಲ ಉಚಿತ ಫ್ಯಾಂಟಸಿ ಕ್ರಿಕೆಟ್ ಆಪ್ ಆಗಿದೆ. ಕ್ರಿಕ್ ಪ್ಲೇ ಪ್ರಕಾರ ಕ್ರಿಕೆಟ್ ನಮ್ಮ ಭಾರತದಲ್ಲಿ ಅತೀ ಹೆಚ್ಚು ಇಷ್ಟಪಡುವ ಗೇಮ್ ಆಗಿರುವುದರಿಂದಾಗಿ ಈ ರೀತಿಯ ಆನ್ ಲೈನ್ ಗೇಮ್ಸ್ ಹೆಚ್ಚು ಸಂತೋಷ ನೀಡುತ್ತದೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳಿಂದ ನಮ್ಮ ಆಪ್ ಗೆ ಅತ್ಯುದ್ಭುತ ಪ್ರತಿಕ್ರಿಯೆ ಲಭ್ಯವಾಗಿದೆ. ಈಗಾಗಲೇ ಮಿಲಿಯನ್ ಗೂ ಅಧಿಕ ಮಂದಿ ಡೌನ್ ಲೋಡ್ ಮಾಡಿದ್ದಾರೆ ಮತ್ತು ಸದ್ಯಕ್ಕೆ ಭಾರತದಲ್ಲಿ ಅತೀ ಹೆಚ್ಚು ರೇಟಿಂಗ್ ಇರುವ ಭಾರತದ ಫ್ಯಾಂಟಸಿ ಗೇಮಿಂಗ್ ಆಪ್ ಇದಾಗಿದೆ. ಇನ್ನು ಹೆಚ್ಚಿನ ಅಭಿವೃದ್ಧಿಯನ್ನು ಆಪ್ ನಲ್ಲಿ ತರುವುದಕ್ಕಾಗಿ ನಮ್ಮ ತಂಡವು ಸತತ ಪ್ರಯತ್ನ ನಡೆಸುತ್ತಿದೆ" ಎಂದಿದ್ದಾರೆ.

ನಿಮಗೂ ಈ ಆಪ್ ಇಷ್ಟವಾಗಬಹುದು. ಒಮ್ಮೆ ಡೌನ್ ಲೋಡ್ ಮಾಡಿ ಟ್ರೈ ಮಾಡಬಹುದು.

Best Mobiles in India

Read more about:
English summary
CricPlay introduces India’s first-ever free fantasy cricket app

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X