ಭಾರತದ ಭದ್ರತೆಗೆ ನಡುಕ ಹುಟ್ಟಿಸಲಿದ್ಯಾ ಗೂಗಲ್ ಮ್ಯಾಪ್ ?

By Gizbot Bureau
|

ದೆಹಲಿ ಹೈಕೋರ್ಟ್ ವಿಶೇಷ ಸೂಚನೆಯೊಂದನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ.ಗೂಗಲ್ ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ಭಾರತದ ನಕ್ಷೆಗಳನ್ನು ಅಪ್ ಲೋಡ್ ಮಾಡುತ್ತಿರುವ ಬಗ್ಗೆ ಸೂಕ್ಷ್ಮವಾಗಿ ಪರೀಕ್ಷೆ ಮಾಡುವಂತೆ ಎಚ್ಚರಿಕೆ ನೀಡಿದೆ. ಯಾಕೆಂದರೆ ದೇಶದ ಭದ್ರತಾ ಹಿನ್ನೆಲೆಯಲ್ಲಿ ಇದನ್ನು ಕೈಗೊಳ್ಳಬೇಕಾಗಿದೆ ಎಂದು ಕೋರ್ಟ್ ತಿಳಿಸಿದೆ.

ನ್ಯಾಯಲಯದಲ್ಲಿ ನಡೆದಿದ್ದೇನು?

ನ್ಯಾಯಲಯದಲ್ಲಿ ನಡೆದಿದ್ದೇನು?

ನ್ಯಾಯಮೂರ್ತಿ ಕಿಸಲಯಾ ಶುಕ್ಲಾ ಅವರ ಮನವಿಯನ್ನು ಆಲಿಸುವಾಗ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಸಿ.ಹರಿಶಂಕರ್ ಅವರನ್ನೊಳಗೊಂಡ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಗೂಗಲ್ ನಲ್ಲಿನ ನಕ್ಷೆಗಳು ಮತ್ತು ಉಪಗ್ರಹ ಚಿತ್ರಗಳ ಮೂಲಕ ಜನರು ಸುಲಭವಾಗಿ ನಕ್ಷೆಯನ್ನು ಆಕ್ಸಿಸ್ ಮಾಡಬಹುದು. ಆದರೆ ಇದಕ್ಕಾಗಿ ರಕ್ಷಣಾ ಸಂಸ್ಥೆಗಳಿಗೆ ನಾಗರೀಕರ ಪ್ರವೇಶವನ್ನು ನಿರ್ಭಂಧಿಸುವುದರಲ್ಲಿ ಅರ್ಥವಿಲ್ಲ ಎಂದು ಶುಕ್ಲಾ ನ್ಯಾಯಾಲಯವನ್ನು ಕೋರಿದರು.

ಖಾಸಗಿ ಸಂಸ್ಥೆಗಳ ಅವಲಂಬನೆ ಬೇಡ:

ಖಾಸಗಿ ಸಂಸ್ಥೆಗಳ ಅವಲಂಬನೆ ಬೇಡ:

ನಿಜ ಹೇಳಬೇಕು ಅಂದರೆ ಭಾರತೀಯ ಸರ್ಕಾರಕ್ಕೆ ಮಾತ್ರವೇ ದೇಶದ ಸಂಪೂರ್ಣ ವಿವರವಾಗಿರುವ ನಕ್ಷೆಯನ್ನು ಇತರರಿಗೆ ನೀಡುವ ಅವಕಾಶವಿರುತ್ತದೆ. ಹೆಚ್ಚುವರಿಯಾಗಿ ತನ್ನ ಹೊಸ ನ್ಯಾವಿಕ್ ನೇವಿಗೇಷನ್ ವ್ಯವಸ್ಥೆಯನ್ನು ಆದಷ್ಟು ಬೇಗ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಲು ಸೂಚಿಸುವಂತೆ ಅವರು ಕೋರ್ಟ್ ನ್ನು ಕೇಳಿದರು ಮತ್ತು ಇದಕ್ಕಾಗಿ ಖಾಸಗಿ ಸಂಸ್ಥೆಗಳ ಸೇವೆಯನ್ನು ಅವಲಂಬಿಸಬೇಕಾಗಿಲ್ಲ ಎಂದು ಅವರು ವಾದಿಸಿದರು.

ಸರ್ಕಾರಕ್ಕೆ ಪ್ರಶ್ನೆ:

ಸರ್ಕಾರಕ್ಕೆ ಪ್ರಶ್ನೆ:

ಇದೇ ಕಾರಣಕ್ಕಾಗಿ ದೆಹಲಿ ಹೈಕೋರ್ಟ್ ಭಾರತದ ನಕ್ಷೆಗಳನ್ನು ಸಾರ್ವಜನಿಕರಿಗೆ ಲಭ್ಯಗೊಳಿಸುವುದಕ್ಕಾಗಿ ನಾವು ಗೂಗಲ್ ನ್ನು ಅವಲಂಬಿಸುವುದರ ಅಗತ್ಯತೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದೆ. ಒಂದು ವೇಳೆ ಅಗತ್ಯವೇ ಆಗಿದ್ದಲ್ಲಿ ಭಾರತೀಯ ಕಾನೂನುಗಳಿಗೆ ಅದು ಬದ್ಧವಾಗಿದೆಯೇ ಎಂಬುದಾಗಿ ಕೇಳಿದೆ.

ಭದ್ರತೆಯ ಭಯ:

ಭದ್ರತೆಯ ಭಯ:

ಇಲ್ಲಿರುವ ಪ್ರಮುಖ ವಿಚಾರವೇನೆಂದರೆ ಗೂಗಲ್ ಮ್ಯಾಪ್ಸ್ ಮತ್ತು ಗೂಗಲ್ ಅರ್ಥ್ ಅನಧಿಕೃತ ಆಕ್ಸಿಸ್ ಗೆ ಅವಕಾಶ ನೀಡಿದರೆ ಎಂಬುದಾಗಿದೆ. 2008 ರ ಮುಂಬೈ ಅಟ್ಯಾಕ್ ನಲ್ಲಿ ಭಯೋತ್ಪಾದಕರು ಗೂಗಲ್ ಇಮೇಜ್ ಗಳನ್ನು ಅಟ್ಯಾಕ್ ಮಾಡುವುದಕ್ಕಾಗಿ ಬಳಕೆ ಮಾಡಿದ್ದರು ಮತ್ತು ಸಿಟಿಯ ಸಂಪೂರ್ಣ ವಿವರವನ್ನು ಅಲ್ಲಿಂದಲೇ ಪಡೆದಿದ್ದರು ಎಂಬುದನ್ನು ನಮೂದಿಸಿದ್ದಾರೆ.

ಇದೇ ಕಾರಣಕ್ಕೆ ದೇಶದ ಭದ್ರತೆಗೆ ಗೂಗಲ್ ಮ್ಯಾಪ್ ಎಷ್ಟು ಬೆಂಬಲ ನೀಡುತ್ತದೆ ಎಂಬುದು ಯೋಚಿಸಬೇಕಾಗಿರುವ ಸಂಗತಿಯಾಗಿದೆ. ಹಾಗಾಗಿ ಕೋರ್ಟ್ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಇದನ್ನು ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಲಿದೆ ಮತ್ತು ಯಾವ ಹೆಜ್ಜೆಯನ್ನು ಕೈಗೊಳ್ಳಲಿದೆ ಕಾದುನೋಡಬೇಕು.

Best Mobiles in India

Read more about:
English summary
Delhi High Court Might Soon Stop Google From Uploading Maps Of India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X