ವಾಟ್ಸ್ ಆಪ್ ನಲ್ಲಿ ಈ ಮೇಸೇಜ್ ಬಂದರೆ ದಯವಿಟ್ಟು ಓಪನ್ ಮಾಡಬೇಡಿ..

By GizBot Bureau
|

ಪ್ರತಿದಿನ ವಾಟ್ಸ್ ಆಪ್ ನಲ್ಲಿ ನೂರಕ್ಕೂ ಅಧಿಕ ಮೆಸೇಜ್ ಗಳು ಬರುತ್ತಲೇ ಇರುತ್ತವೆ. ನಾವು ಅದನ್ನು ಪಟ್ ಅಂತ ತೆರೆದು ಓದಿ ಬಿಡುತ್ತೇವೆ. ಅದು ನಮಗೆ ಬೇಕಾದ ಮೆಸೇಜಾ ಅಥವಾ ಇಲ್ಲವಾ ಎಂದು ಯೋಚಿಸುವಷ್ಟು ಸಮಯ ಕೊಡದೇ ಓಪನ್ ಮಾಡುವುದು ಹೆಚ್ಚಿನವರ ಗುಣ. ಆದರೆ ನೆನಪಿಡಿ. ವಾಟ್ಸ್ ಆಪ್ ನಲ್ಲೂ ಶುರುವಾಗಿದೆ ತೊಂದರೆ ಕೊಡುವ ಮೆಸೇಜ್ ಗಳ ಕಾಟ..

ವಾಟ್ಸ್ ಆಪ್ ನಲ್ಲಿ ಈ ಮೇಸೇಜ್ ಬಂದರೆ ದಯವಿಟ್ಟು ಓಪನ್ ಮಾಡಬೇಡಿ..


ಎಸ್,. ನಾವು ಹೇಳುತ್ತಿರುವುದು ನಿಜ. ವಾಟ್ಸ್ ಆಪ್ ನಲ್ಲಿ ಬರುವ ಎಲ್ಲಾ ಮೆಸೇಜ್ ಗಳನ್ನು ಒಮ್ಮೆಲೇ ಓಪನ್ ಮಾಡಿ ಬಿಡಬೇಡಿ..ಕೆಲವು ವಾಟ್ಸ್ ಆಪ್ ಮೆಸೇಜ್ ಗಳು ನಿಮ್ಮ ಫೋನ್ ನ್ನು ಹ್ಯಾಂಗ್ ಮಾಡುತ್ತೆ. ಜಸ್ಟ್ ವಾಟ್ಸ್ ಆಪ್ ನ ಕೆಲವು ಮೆಸೇಜ್ ಗಳನ್ನು ಮುಟ್ಟಿದರೆ ಸಾಕು, ನಿಮ್ಮ ಫೋನಿಗೆ ಗರ ಬಡಿದಂತಾಗುತ್ತೆ ಅರ್ಥಾತ್ ನಿಮ್ಮ ಪೋನಿನಲ್ಲಿ ಏನು ನಡೆಯುತ್ತಿದೆ ಎಂದು ನೀವು ಅರ್ಥ ಮಾಡಿಕೊಳ್ಳುವುದಕ್ಕೂ ಆಗದಂತೆ ಆಗಿ ಬಿಡುತ್ತೆ.

ವಾಟ್ಸ್ ಆಪ್ ಇತ್ತಿಚೆಗೆ ಅಂತರ್ಜಾಲ ಕಳ್ಳರ ಸುಲಭದ ಮಾರ್ಗವಾಗಿದೆ. ಅಂತರ್ಜಾಲ ಕ್ರಿಮಿಕೀಟಗಳನ್ನು ನಿಮ್ಮ ವಾಟ್ಸ್ ಆಪ್ ಗೆ ಹರಿಯಬಿಡುವ ಪ್ರಯತ್ನವನ್ನು ಅವರು ಮಾಡಲು ಶುರುಮಾಡಿದ್ದಾರೆ. ಈ ಕ್ರಿಮಿಗಳು ನಿಮ್ಮ ಫೋನನ್ನು ಕ್ರ್ಯಾಷ್ ಮಾಡಬಹುದು ಅಂದರೆ ಫೋನಿನ ಆಪರೇಟಿಂಗ್ ಸಿಸ್ಟಂಗೆ ತಲೆಸುತ್ತುವಿಕೆ ಸಮಸ್ಯೆ ಬರಬಹುದು ಅರ್ಥಾತ್ ಹ್ಯಾಂಗ್ ಆಗಬಹುದು ಅಥವಾ ಕೇವಲ ವಾಟ್ಸ್ ಆಪ್ ಹ್ಯಾಂಗ್ ಆಗಿ ನಿಮಗೆ ತೊಂದರೆ ನೀಡಬಹುದು.

ಕೆಲವರಿಗೆ ಈಗಾಗಲೇ ಇಂತಹ ಸಮಸ್ಯೆಗಳು ಎದುರಾಗಿದ್ದು, ಇದಕ್ಕೆ ಕಾರಣ ವೈರಸ್ ಗಳಿರುವ ಮೆಸೇಜ್ ಗಳು ಎಂಬುದು ತಿಳಿದುಬಂದಿದೆ. ಒಂದು ಹೊಸ ಮೆಸೇಜ್ ವಾಟ್ಸ್ ಆಪ್ ನಲ್ಲಿ ವೈರಲ್ ಆಗುತ್ತಿದೆ. ಇದನ್ನು ಟಚ್ ಮಾಡದೇ ಮೆಸೇಜ್ ಓಪನ್ ಮಾಡಿ, ಇದು ನಿಮ್ಮ ವಾಟ್ಸ್ ಆಪ್ ನ್ನು ಕ್ರ್ಯಾಷ್ ಮಾಡಲಿದೆ ಅಥವಾ ಈ ಕಪ್ಪು ಚುಕ್ಕಿಯನ್ನು ಒತ್ತಿ ಮ್ಯಾಜಿಕ್ ನೋಡಿ ಇಂತಹ ಇಂಗ್ಲೀಷಿನ ಕೆಲವು ಮೆಸೇಜ್ ಗಳನ್ನು ನೀವು ಯಾವುದೇ ಕಾರಣಕ್ಕೂ ತೆರೆಯಬೇಡಿ. ಜಸ್ಟ್ ಕಡೆಗಣಿಸಿಬಿಡಿ. ಯಾಕೆಂದರೆ ನೀವು ಈ ಮೆಸೇಜ್ ಗಳನ್ನು ಓಪನ್ ಮಾಡಿದರೆ ನಿಮ್ಮ ವಾಟ್ಸ್ ಆಪ್ ಇಲ್ಲವೇ ನಿಮ್ಮ ಫೋನ್ ಹ್ಯಾಂಗ್ ಆಗುವುದು ಗ್ಯಾರೆಂಟಿ..

ಇಂತಹ ಮೇಸೇಜ್ ಗಳು ಕೇವಲ ಕೆಲವೇ ಕೆಲವು ಫಾರ್ಮೇಟ್ ನಲ್ಲಿ ಬರುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವೊಂದು ಮೆಸೇಜ್ ಗಳಲ್ಲಿ ಐಕಾನ್ ನ್ನು ಟಚ್ ಮಾಡುವಂತೆ ಹೇಳಲಾಗುತ್ತೆ, ಕೆಲವು ಮೆಸೇಜ್ ಗಳಲ್ಲಿ ಕಪ್ಪು ಚುಕ್ಕಿಯನ್ನು ಒತ್ತುವಂತೆ ಸಂದೇಶಿಸಲಾಗಿದೆ, ಅದರ ಜೊತೆಗೆ ಒಂದು ಸಂದೇಶವೂ ಇರುತ್ತೆ. ಈ ಚುಕ್ಕಿಯನ್ನು ಮುಟ್ಟಬೇಡಿ ಇದು ನಿಮ್ಮ ವಾಟ್ಸ್ ಆಪ್ ನ್ನು ಕ್ರ್ಯಾಷ್ ಮಾಡಲಿದೆ ಎಂದು. ಮೇಸೇಜ್ ಹೀಗಿದೆ ಅಂದಾಗ ಕೂತೂಹಲ ಹೆಚ್ಚುವುದು ಮನುಷ್ಯನ ಸಹಜ ಗುಣ ಅಲ್ವಾ.. ಹಾಗಾಗಿ ಹೆಚ್ಚಿನವರು ಏನಿದೆ ಎಂದು ನೋಡಲು ಹೋಗಿ ಪರಿತಪಿಸುತ್ತಿದ್ದಾರೆ. ಆಜ್ ತಕ್.ಇನ್ ಸಂಸ್ಥೆ ಇಂತಹ ಮೇಸೇಜ್ ಒಂದನ್ನು ಪರೀಕ್ಷೆಗೆ ಒಳಪಡಿಸಿ ನೋಡಿದ್ದ, ಅವರ ಫೋನ್ ಹ್ಯಾಂಗ್ ಆಗಿರುವುದು ತಿಳಿದುಬಂದಿದೆ..

ಸ್ಮಾರ್ಟ್ ಫೋನಿನ ವೈಫೈಯನ್ನು ಅನೇಕ ಡಿವೈಸ್ ಗಳಿಗೆ ಬಳಸುವುದು ಹೇಗೆ?ಸ್ಮಾರ್ಟ್ ಫೋನಿನ ವೈಫೈಯನ್ನು ಅನೇಕ ಡಿವೈಸ್ ಗಳಿಗೆ ಬಳಸುವುದು ಹೇಗೆ?

ಇಂತಹ ಮೆಸೇಜ್ ಗಳನ್ನು ಸೃಷ್ಟಿಸಲು ಸ್ಪೆಷಲ್ ಸಾಫ್ಟ್ ವೇರ್ ಗಳನ್ನು ಬಳಸಲಾಗುತ್ತೆ. ಇಂತಹ ಮೆಸೇಜ್ ಗಳು ಮಿಲಿಯನ್ ಗಟ್ಟಲೆ ಗುರುತಿಸಲಾಗದ ನಂಬರ್ ಗಳನ್ನು, ಲೆಟರ್ ಗಳನ್ನು, ಚಿಹ್ನೆಗಳನ್ನು ಒಳಗೊಂಡಿರುತ್ತದೆ. ಮಿಲಿಯನ್ ಗಟ್ಟಲೆ ಗುರುತಿಸಲಾಗದ ಕೋಡಿಂಗ್ ಗಳ ಮುಖಾಂತರ ನಿಮ್ಮ ಫೋನಿಗೆ ಇವು ದಾಳಿ ಇಡುತ್ತೆ. ಆದರೆ ನಿಮ್ಮ ಫೋನಿಗೆ ಬರುವಾಗ ಸಣ್ಣ ಮೇಸೇಜ್ ಗಳಾಗಿ ಬಂದು, ದೊಡ್ಡ ಎಫೆಕ್ಟ್ ನೀಡಲಿದೆ. ಇದು ಹೇಗೆಂದರೆ ಸಣ್ಣ ಅಣುವೊಂದು ಡೈನೋಸಾರಸ್ ನಂತಹ ಕೆಲಸ ಮಾಡಿದ ಹಾಗೆ ಸರಿ.

ಈಗಾಗಲೇ ವಾಟ್ಸ್ ಆಪ್ 200 ಮಿಲಿಯನ್ ಗಟ್ಟಲೆ ಬಳಕೆದಾರರನ್ನು ಭಾರತದಲ್ಲಿ ಹೊಂದಿದೆ. ಹಾಗಿರುವಾಗ ಪ್ರತಿ ಸೆಕೆಂಡಿಗೆ ಒಬ್ಬ ವ್ಯಕ್ತಿಯಾದರೂ ಈ ಸಮಸ್ಯೆಗೆ ಸಿಲುಕಿದ್ದಾನೆ. ಇತ್ತೀಚೆಗೆ" this is very interesting........read more " ಎಂಬ ಮೇಸೇಜ್ ವೊಂದು ಇಂತಹದ್ದೇ ವೈರಸ್ ನಿಂದ ಕೂಡಿತ್ತು. ಸೋ ಬಿ ಕೇರ್ ಫುಲ್.. ವಾಟ್ಸ್ ಆಪ್ ನಲ್ಲಿ ಎಲ್ಲಾ ಮೇಸೇಜ್ ಗಳನ್ನು ಓಪನ್ ಮಾಡಬೇಡಿ. ಅನುಮಾನ ಹುಟ್ಟಿಸೋ, ಕುತೂಹಲ ಅನ್ನಿಸೋ, ಓಪನ್ ಮಾಡಬೇಡಿ ಎಂದಿರುವ ಮೇಸೇಜ್ ಗಳನ್ನು ಓಪನ್ ಮಾಡದೇ ಇರುವುದೇ ಲೇಸು.. ಆಗ ನೀವು ನಿಮ್ಮ ಫೋನ್ ಮತ್ತು ವಾಟ್ಸ್ ಆಪ್ ಎರಡನ್ನೂ ಸುರಕ್ಷಿತವಾಗಿಟ್ಟುಕೊಳ್ಳಬಹುದು..

Best Mobiles in India

Read more about:
English summary
Don’t open these messages in your whatsapp

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X