Subscribe to Gizbot

ಮಕ್ಕಳು ಇಂಟರ್‌ನೆಟ್ ದಾಸರಾಗುವುದನ್ನು ತಡೆಯಲು ಬಂದಿದೆ ಆಪ್!!

Written By:

ಇಂಟರ್‌ನೆಟ್ ಜಾಲಕ್ಕೆ ಮಕ್ಕಳು ದಾಸರಾಗುತ್ತಿರುವ ಭಯ ಎಲ್ಲ ಪೋಷಕರನ್ನು ಕಾಡುತ್ತಿದೆ. ನಮ್ಮ ಮಕ್ಕಳು ಇಂಟರ್‌ನೆಟ್ ಚಟಕ್ಕೆ ಬಿದ್ದು ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಾರೊ ಅಥವಾ ಇನ್ನಾವುದೇ ಕೆಟ್ದ ಕೆಲಸಕ್ಕೆ ಕೈ ಹಾಕುತ್ತಾರೊ ಎಂಬ ಭಯದ ಆಲೋಚನೆಯಲ್ಲಿಯೇ ಎಲ್ಲ ಪೋಷಕರು ಮುಳುಗಿಹೋಗಿದ್ದಾರೆ.!!

ಇನ್ನು ಈ ಸಮಸ್ಯೆಗೆ ಪರಿಹಾರ ಪಡೆಯಲು ಪೋಷಕರು ಮಾಡುತ್ತಿರುವ ವ್ಯರ್ಥ ಪ್ರಯತ್ನಗಳು ಸಹ ಕೈಗೂಡುತ್ತಿಲ್ಲ.! ಹಾಗಾಗಿಯೇ, ಪೋಷಕರಿಗೆ ತಮ್ಮ ಮಕ್ಕಳ ಇಂಟರರ್‌ನೆಟ್ ಬಳಕೆ ಮೇಲೆ ನಿಯಂತ್ರಣ ಹೇರಲು ಆಪ್ ಒಂದು ಬಿಡುಗಡೆಯಾಗಿದೆ.!! ಈ ಆಪ್‌ನಿಂದ ಮಕ್ಕಳ ಇಂಟರ್‌ನೆಟ್ ಬಳಕೆಗೆ ನಿಯಂತ್ರಣ ಹೇರಬಹುದಾಗಿದ್ದು, ಹಾಗಾದರೆ, ಆ ಆಪ್ ಯಾವುದು? ಅದರ ವಿಶೇಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ಇ-ಕವಚ್' ಆಪ್!!

'ಇ-ಕವಚ್' ಆಪ್!!

ಮಕ್ಕಳು ಇಂಟರ್‌ನೆಟ್‌ನಲ್ಲಿ ಏನು ನೋಡುತ್ತಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬುವದರ ಬಗ್ಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸುವ ಆಪ್ ಈ 'ಇ-ಕವಚ್' ಆಪ್!! ಮಕ್ಕಳಿಗೂ ಯಾರಿಗೂ ಅನುಮಾನ ಬರದಿರುವಂತೆ ಕಾರ್ಯನಿರ್ವಹಿಸುವ ಸ್ವದೇಶಿ ಆಪ್ ಇದಾಗಿದೆ.!!

'ಇ-ಕವಚ್' ಹುಟ್ಟಿಗೆ ಕಾರಣ ಇದು!!

'ಇ-ಕವಚ್' ಹುಟ್ಟಿಗೆ ಕಾರಣ ಇದು!!

ನಮ್ಮ ಮಕ್ಕಳು ಗಂಟೆ ಗಟ್ಟಲೆ ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುತ್ತಾರೆ. ಯಾವಾಗಲೂ ಬ್ರೌಸಿಂಗ್‌ನಲ್ಲಿಯೇ ತೊಡಗಿಕೊಳ್ಳುತ್ತಾರೆ. ಇದರಿಂದ ಆಗಬಹುದುದಾದ ಪರಿಣಾಮಗಳೇನು ಎಂಬುದನ್ನು ಗೂಗಲ್‌ನಲ್ಲಿ ಹುಡುಕುವ ಅಪ್ಪ ಅಮ್ಮಂದಿರೇ ಜಾಸ್ತಿ ಇದ್ದಾರೆ. ಹಾಗಾಗಿ, 'ಕವಚ್' ಆಪ್ ಸಮಸ್ಯೆಗಳ ಪರಿಹಾರಕ್ಕಾಗಿ ಬಿಡುಗಡೆಯಾಗಿದೆ.!!

'ಇ-ಕವಚ್' ಹರಿಕಾರ ನೂಪುರ್ ರಂಗನಾಥ್!!

'ಇ-ಕವಚ್' ಹರಿಕಾರ ನೂಪುರ್ ರಂಗನಾಥ್!!

ದೆಹಲಿ ಮೂಲದ ಸರ್ಟಸ್ ಟೆಕ್ನಾಲಜಿಸ್ 'ಕವಚ್' ಆಪ್ ಅಭಿವೃದ್ದಿ ಮಾಡಿದೆ. ಮಕ್ಕಳು ಸೈಬರ್ ಸುಳಿಯಲ್ಲಿ ಸಿಲುಕಿ ಹಾಳಾಗುತ್ತಿರುವುದನ್ನು ನೂಪುರ್ ರಂಗನಾಥ್ ಸುಲಭವಾದ ಆಪ್ ನಿರ್ಮಾಣಕ್ಕೆ ತೊಡಗಿ ಆಪ್ ನಿರ್ಮಿಸುವಲ್ಲಿ ಭಾರಿ ಶ್ರಮಿಸಿದ್ದಾರೆ. ಮಕ್ಕಳ ಸಮಯ ಹಗಾಲಾಗುವುದು ಒಂದೆಡೆಯಾದರೆ, ಅವರ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಈ ಆಪ್ ಹುಟ್ಟಿಗೆ ಮೂಲ ಪ್ರೇರೇಪಣೆಯಾಗಿದೆ.!!

ಕವಚದಂತೆ ಕಾಪಾಡುತ್ತದೆ 'ಇ-ಕವಚ್' !!

ಕವಚದಂತೆ ಕಾಪಾಡುತ್ತದೆ 'ಇ-ಕವಚ್' !!

ಇಂಟರ್‌ನಟ್‌ನಲ್ಲಿ ನಿಂತ್ರಣವನ್ನು ಹೇರಿ ಮಕ್ಕಳನ್ನು ಕಾಪಾಡುವ ಆಪ್ ಈ ಇ-ಕವಚ್.!! ಕೆಟ್ಟಸೈಟ್‌ಗಳಿಂದ ಮಕ್ಕಳನ್ನು ಕಾಪಾಡುವ ಆಪ್ ಇದಾದರಿಂದ ಈ ಆಪ್‌ಗೆ ‘ಕವಚ್' ಎಂಬ ಹೆಸರನ್ನು ಇಡಲಾಗಿದೆ. ಪ್ರೊ ಆಕ್ಟೀವ್ ಪರಿಷ್ಕಾರಗಳನ್ನು ಸೂಚಿಸುವ ಅತ್ಯಂತ ತಾಂತ್ರಿಕ ಆಪ್ ಇದಾಗಿದೆ.!!

ಹೇಗೆ ಕಾರ್ಯನಿರ್ವಹಿಸುತ್ತದೆ 'ಇ-ಕವಚ್'!?

ಹೇಗೆ ಕಾರ್ಯನಿರ್ವಹಿಸುತ್ತದೆ 'ಇ-ಕವಚ್'!?

ಈ ಆಪ್ ರಿಯಲ್ ಟೈಮ್ ಆಧಾರದಲ್ಲಿ ರಿಮೋಟ್ ಕಂಟ್ರೋಲ್ ಆಗಿ ಕಾರ್ಯ ನಿರ್ವಹಿಸುತ್ತದೆ. ಮಕ್ಕಳು ಗಂಟೆಗಟ್ಟಲೆ ಇಂಟರ್‌ನೆಟ್‌ನಲ್ಲಿ ಕಾಲಕಳೆದರೆ ತನ್ನಷ್ಟಕ್ಕೆ ತಾನೇ ಆಫ್ ಆಗುವಂತೆ ಪ್ರೋಗ್ರಾಂ ಮಾಡಬಹುದಾಗಿದೆ. ಇಷ್ಟೇ ಅಲ್ಲದೇ, ಕಾಲ ಕಾಲಕ್ಕೆ ಪೋಷಕರಿಗೆ ಸಂದೇಶಗಳನ್ನು ರವಾನಿಸುತ್ತದೆ. ಇಷ್ಟೇ ಅಲ್ಲದೇ, ಮಕ್ಕಳು ನೋಡಬಾರದ ಸೈಟ್‌ಗಳನ್ನು ಬ್ಲಾಕ್ ಮಾಡಬಹುದಾಗಿದೆ.

ಓದಿರಿ:ಒಂದೇ ವರ್ಷಕ್ಕೆ ಟೆಲಿಕಾಂ ದಿಗ್ಗಜನಾದ ಜಿಯೋ!..ಏರ್‌ಟೆಲ್‌ಗೆ ಮುಖಭಂಗ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
A Delhi-based technology start-up, Certus Technologies, has launched the pro version of its digital parental control application.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot