ಲೋಕಸಭಾ ಎಲೆಕ್ಷನ್ ಗಾಗಿ ಟ್ವೀಟರ್ ಖಾತೆ ತೆರೆದ ಭಾರತೀಯ ಚುನಾವಣಾ ಆಯೋಗ

By Gizbot Bureau
|

ಭಾರತದ 2019 ರ ಲೋಕಸಭೆ ಚುನಾವಣೆ ಗೆ ದಿನಾಂಕ ಫಿಕ್ಸ್ ಆಗಿದ್ದು ಎಪ್ರಿಲ್ 11 ರಿಂದ ಎಲೆಕ್ಷನ್ ಆರಂಭವಾಗುತ್ತಿದೆ. ದೇಶದ ಎಲೆಕ್ಷನ್ ಗೆ ಮುಂಚಿತವಾಗಿ ಭಾರತೀಯ ಚುನಾವಣಾ ಆಯೋಗವು ಟ್ವಿಟರ್ ಅಕೌಂಟ್ ಗೆ ಸೇರಿಕೊಂಡಿದ್ದು ಜನರಿಗೆ ಮತದಾನದ ಮಹತ್ವ ಸಾರುವ ಕೆಲಸವನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಡುವ ಕೆಲಸಕ್ಕೆ ಮುಂದಾಗಿದೆ. ಅಷ್ಟೇ ಅಲ್ಲ ಮುಂಬರುವ ಎಲೆಕ್ಷನ್ ಗೆ ಸಂಬಂಧಿಸಿದ ಕೆಲವು ವಿಚಾರಗಳನ್ನು ಕೂಡ ಟ್ವೀಟರ್ ನಲ್ಲಿ ಎಲೆಕ್ಷನ್ ಕಮಿಷನ್ ಹಂಚಿಕೊಳ್ಳಲು ಬಯಸಿದೆ.

ಲೋಕಸಭಾ ಎಲೆಕ್ಷನ್ ಗಾಗಿ ಟ್ವೀಟರ್ ಖಾತೆ ತೆರೆದ ಭಾರತೀಯ ಚುನಾವಣಾ ಆಯೋಗ

ಚುನಾವಣಾ ಆಯೋಗವನ್ನು ಟ್ವಿಟರ್ ಕೂಡ ಸ್ವಾಗತಿಸಿದ್ದು "Welcome Election Commission of India @ECISVEEP on Twitter! Look forward to raising voter awareness together #LokSabhaElections2019 #DeshKaMahaTyohar," ಎಂದು ಟ್ವೀಟಿಸಿದೆ.

ಚುನಾವಣಾ ಆಯೋಗದ ಟ್ವೀಟರ್ ಖಾತೆ:

ಚುನಾವಣಾ ಆಯೋಗದ ಟ್ವೀಟರ್ ಖಾತೆ:

ಭಾರತೀಯ ಚುನಾವಣಾ ಆಯೋಗವು ಟ್ವೀಟರ್ ಖಾತೆ ತೆರೆದ ನಂತರದಿಂದ ನಿರಂತರವಾಗಿ ಟ್ವೀಟರ್ ಬಳಕೆದಾರರಿಗೆ ಮುಂಬರುವ ಎಲೆಕ್ಷನ್ ನಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸುತ್ತಲೇ ಇದೆ. ಅಷ್ಟೇ ಅಲ್ಲ ಲೋಕಸಭಾ ಎಲೆಕ್ಷನ್ 2019 ರ ದಿನಾಂಕವನ್ನು ಕೂಡ ಜಿಐಎಫ್, ವೀಡಿಯೋ ಮತ್ತು ಗ್ರಾಫಿಕ್ಸ್ ಗಳ ಮೂಲಕ ತಿಳಿಸುತ್ತಿದೆ. ಇದರಲ್ಲಿ ಕೆಲವು

ಶಾರ್ಟ್ ಫಿಲ್ಮ್ ಬಿಡುಗಡೆ:

ಶಾರ್ಟ್ ಫಿಲ್ಮ್ ಬಿಡುಗಡೆ:

ಶಾರ್ಟ್ ಫಿಲ್ಮ್ ಮೂಲಕ ಮತವನ್ನು ಯಾಕೆ ಹಾಕಬೇಕು ಮತ್ತು ಹಾಕದೇ ಇದ್ದರೆ ಅದು ಹೇಗೆ ನಿಮಗೆ ತೊಂದರೆಯಾಗುತ್ತದೆ ಎಂಬ ಬಗ್ಗೆ ಚುನಾವಣಾ ಆಯೋಗ ಟ್ವೀಟರ್ ಮೂಲಕ ಜನರಿಗೆ ತಿಳಿಸುತ್ತಿದೆ.

ಜನಜಾಗೃತಿ ಕಾರ್ಯಕ್ರಮ:

ಜನಜಾಗೃತಿ ಕಾರ್ಯಕ್ರಮ:

ಟ್ವೀಟರ್ ಗೆ ಸೇರುವುದು ಮಾತ್ರವೇ ಅಲ್ಲ ಭಾರತೀಯ ಚುನಾವಣಾ ಆಯೋಗವು ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಷನ್ ಮತ್ತು ಎಲೆಕ್ಟ್ರಾಲ್ ಪಾರ್ಟಿಸಿಪೇಷನ್ ಪ್ರೋಗ್ರಾಮ್ (SVEEP) ನ್ನು ಮೈಕ್ರೋ ಬ್ಲಾಗಿಂಗ್ ಫ್ಲಾಟ್ ಫಾರ್ಮ್ ನಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಿದೆ.

ಮತದಾನ ಹೆಚ್ಚಿಸುವ ಉದ್ದೇಶ:

ಮತದಾನ ಹೆಚ್ಚಿಸುವ ಉದ್ದೇಶ:

ಮುಂಬರುವ ಎಲೆಕ್ಷನ್ ನಲ್ಲಿ ಬೇರೆಬೇರೆ ಹಂತದ ಮತದಾನದ ಬಗ್ಗೆ ಜನರಿಗೆ ತಿಳಿಸುವುದಕ್ಕೆ ಮತ್ತು ಒಟ್ಟಾರೆ ಮತದಾನ ಶೇಕಡಾವನ್ನು ಹೆಚ್ಚಿಸುವ ಉದ್ದೇಶವನ್ನು ಎಲೆಕ್ಷನ್ ಕಮಿಷನ್ ಹೊಂದಿದೆ.

ಟ್ವೀಟರ್ ಇಂಡಿಯಾ ಹೇಳಿಕೆ:

ಟ್ವೀಟರ್ ಇಂಡಿಯಾ ಹೇಳಿಕೆ:

"ಭಾರತವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಮುಂಬರುವ ಎಲೆಕ್ಷನ್ ಟ್ವೀಟರ್ ನ ಬಹುಮುಖ್ಯ ಆದ್ಯತೆಯ ವಿಚಾರವಾಗಿದೆ. ಕಳೆದ ಕೆಲವು ತಿಂಗಳುಗಳಿಂದ ನಾವು ನಮ್ಮಲ್ಲಿ ನಡೆಯುವ ಸಂಭಾಷಣೆಯ ಭದ್ರತೆ ಮತ್ತು ಅದರ ಮಹತ್ವದ ಬಗ್ಗೆ ಜೊತೆಗೆ ಒಟ್ಟಾರೆ ಫ್ಲ್ಯಾಟ್ ಫಾರ್ಮ್ ನಆರೋಗ್ಯದ ಬಗ್ಗೆ ಸಾಕಷ್ಟು ಹೆಜ್ಜೆಗಳನ್ನು ಕೈಗೊಂಡಿದ್ದೆ. ಚುನಾವಣಾ ಆಯೋಗವು ಈ ನಿಟ್ಟಿನಲ್ಲಿ ಟ್ವೀಟರ್ ಗೆ ಸೇರಿ ಜನರಿಗೆ ಮತದಾನದ ಅರಿವು ಮೂಡಿಸುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಟ್ವೀಟರ್ ಇಂಡಿಯಾದ ಡೈರೆಕ್ಟರ್ ಆಗಿರುವ ಮಹಿಮಾ ಕೌಲ್ ಹೇಳಿದ್ದಾರೆ.

ಹ್ಯಾಷ್ ಟ್ಯಾಗ್ ಗಳು:

ಹ್ಯಾಷ್ ಟ್ಯಾಗ್ ಗಳು:

ಇದೇ ಸಂದರ್ಬದಲ್ಲಿ ಟ್ವೀಟರ್ ಇಂಡಿಯಾ ಕೂಡ ಮುಂಬರುವ ಎಲೆಕ್ಷನ್ ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಸ್ಪೆಷಲ್ ಎಮೋಜಿಗಳನ್ನು ಬಿಡುಗಡೆಗೊಳಿಸಲಾಗಿದ್ದು ಅದು ಪಾರ್ಲಿಮೆಂಟ್ ನಂತೆ ಗೋಚರಿಸುತ್ತದೆ ಮತ್ತು ಅದರಲ್ಲಿರುವ ಹ್ಯಾಷ್ ಟ್ಯಾಗ್ ಗಳಿದೆ- -- #LokSabhaElections2019, #IndiaDecides2019, #IndiaElections2019 ಇನ್ನೂ ಹಲವು ಹ್ಯಾಷ್ ಟ್ಯಾಗ್ ಗಳಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇದು ಎತ್ತಿಹಿಡಿಯುವಂತಿದೆ. ಭಾರತದಲ್ಲಿ ಈ ಹ್ಯಾಷ್ ಟ್ಯಾಗ್ ಗಳು 12 ವಿಭಿನ್ನ ಭಾಷೆಗಳಲ್ಲಿ ಲಭ್ಯವಿದೆ ಅವುಗಳೆಂದರೆ ಇಂಗ್ಲೀಷ್ , ಹಿಂದಿ, ಉರ್ದು, ತಮಿಳು, ತೆಲುಗು ಮತ್ತು ಪಂಜಾಬಿ ಇನ್ನೂ ಹಲವು ಭಾಷೆಗಳು ಇದರಲ್ಲಿ ಸೇರಿವೆ.

Most Read Articles
Best Mobiles in India

Read more about:
English summary
Election Commission of India joins Twitter ahead of Lok Sabha Elections 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more