Subscribe to Gizbot

GIF ಬಳಸಿ ಕಾಮೆಂಟ್ ಮಾಡಿ: ಫೇಸ್‌ಬುಕ್‌ ನಿಂದ ಮತ್ತೊಂದು ಕೊಡುಗೆ..!!

Written By:

GIF ಕಾರ್ಯಾರಂಭಿಸಿ 30 ವರ್ಷಗಳಾದ ಸಂಭ್ರಮದಲ್ಲಿ ಫೇಸ್‌ಬುಕ್ ಹೊಸದೊಂದು ಆಯ್ಕೆಯನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ. ಇನ್ನು ಮುಂದೆ ನಿಮ್ಮ ಸ್ನೇಹಿತರ ಪೋಸ್ಟ್ ಗಳಿಗೆ ಕಾಮೆಂಟ್ ಹಾಕುವ ಸಂದರ್ಭದಲ್ಲಿ GIFಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

GIF ಬಳಸಿ ಕಾಮೆಂಟ್ ಮಾಡಿ: ಫೇಸ್‌ಬುಕ್‌ ನಿಂದ ಮತ್ತೊಂದು ಕೊಡುಗೆ..!!

ಓದಿರಿ: 8 ತಿಂಗಳ ನಂತರ ಜಿಯೋ ವಿರುದ್ಧದ ಸಮರದಲ್ಲಿ ಜಯಿಸಿದ ಏರ್ಟೆಲ್..!!!

ಇದೇ ಜೂನ್ 15ರಂದು GIF ಜನ್ಮ ಪಡೆದು 30 ವರ್ಷಗಳಾಗಲಿದ್ದು, ಗ್ರಾಫಿಕ್ಸ್ ಇಂಟರ್‌ಚೆಂಜ್ ಫಾರ್ಮೆಟ್ ಇದರ ವಿಸ್ತೃತ ರೂಪವಾಗಿದ್ದು, ಈ ಸಂಭ್ರಮದ ಸಂದರ್ಭವನ್ನು ಮತ್ತಷ್ಟು ಸ್ಮರಣಿಯವಾಗಿಸುವ ಸಲುವಾಗಿ ಫೇಸ್‌ಬುಕ್ ತನ್ನ ಬಳೆದಾರರ ಬಹುದಿನನ ಬೇಡಿಕೆಯಾಗಿದ್ದ ಕಾಮೆಂಟ್ ನಲ್ಲಿ GIF ಬಳಕೆಗೆ ಅವಕಾಶ ಮಾಡಿಕೊಟ್ಟಿದೆ.

ಈ ಹಿಂದೆ ಕಾಮೆಂಟ್ ನಲ್ಲಿ ಚಿತ್ರ ಹಾಕುವ, ಎಮೋಜಿಗಳನ್ನು ಬಳಸುವ ಅವಕಾಶವನ್ನು ಫೇಸ್‌ಬುಕ್ ಮಾಡಿಕೊಟ್ಟಿತ್ತು. ಈಗ ಅದೇ ಮಾದರಿಯಲ್ಲಿ GIF ಫೈಲ್‌ಗಳನ್ನು ಬಳಸಲು ಅನುವು ಮಾಡಿಕೊಟ್ಟಿದೆ. ಇದಕ್ಕಾಗಿ ಕಾಮೆಂಟ್ ವಿಭಾಗದಲ್ಲಿ GIF ಐಕಾನ್ ಸಹ ನೀಡಲಿದ್ದು, ಅಲ್ಲಿಯೇ ನೀವು GIF ಸರ್ಚ್ ಸಹ ಮಾಡಬಹುದಾಗಿದೆ.

GIF ಬಳಸಿ ಕಾಮೆಂಟ್ ಮಾಡಿ: ಫೇಸ್‌ಬುಕ್‌ ನಿಂದ ಮತ್ತೊಂದು ಕೊಡುಗೆ..!!

ಓದಿರಿ: ಕ್ಲಿಕ್ ಮಾಡಿದ ಕ್ಷಣವೇ ಫೋಟೋ ಪ್ರಿಂಟ್ ಮಾಡುವ ಕ್ಯಾಮೆರಾ ಬೆಲೆ ರೂ.5,999 ಎಂದರೇ ನಂಬಲೇ ಬೇಕು..!!!

ಈಗಾಗಲೇ GIFಗಳನ್ನು ವಾಟ್ಸ್ಆಪ್ ಚಾಟ್‌ಗಳಲ್ಲಿ ಮತ್ತು ಫೇಸ್‌ಬುಕ್ ಮೆಸೆಂಜರ್ ಗಳಲ್ಲಿ ಬಳಸುವ ಅವಕಾಶವನ್ನು ಮಾಡಿಕೊಡಲಾಗಿದ್ದು, ಈಗ ಕಾಮೆಂಟ್ ನಲ್ಲಿಯೂ GIFಗಳನ್ನು ಬಳಕೆ ಮಾಡಲು ಅವಕಾಶ ನೀಡಿರುವುದರಿಂದ ಪ್ರತಿ ಫೋಸ್ಟಿಗೆ ಹೆಚ್ಚಿನ ಕಾಮೆಂಟ್ ಗಳು ಬಿಳುವುದಂತೂ ಖಂಡಿತ.

Read more about:
English summary
15 June is the 30th anniversary of the Graphics Interchange Format (GIF). Facebook is celebrating the occasion in number of ways. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot