Subscribe to Gizbot

ಕ್ಲಿಕ್ ಮಾಡಿದ ಕ್ಷಣವೇ ಫೋಟೋ ಪ್ರಿಂಟ್ ಮಾಡುವ ಕ್ಯಾಮೆರಾ ಬೆಲೆ ರೂ.5,999 ಎಂದರೇ ನಂಬಲೇ ಬೇಕು..!!!

Written By:

ಇಂದಿನ ದಿನದಲ್ಲಿ ಕ್ಯಾಮೆರಾ ಕ್ರೆಜ್ ಹೆಚ್ಚಾಗುತ್ತಿದೆ. ಅದರಲ್ಲಿಯೂ DSRL ಕ್ಯಾಮೆರಾ ಹೊಂದುವುದು ಪ್ರತಿಷ್ಠೆಯ ವಿಚಾರಗಳಲ್ಲಿ ಒಂದಾಗಿದೆ. ಆದರೆ ಇದೇ ಸಂದರ್ಭದಲ್ಲಿ ಕ್ಯಾಮೆರಾ ತಯಾರಿಕೆಯಲ್ಲಿ ದಶಕಗಳ ಪರಿಣಿತಿಯನ್ನ ಹೊಂದಿರುವ ಫೂಜಿಫಿಲ್ಮ ಕಂಪನಿಯು ಇದೇ ಮೊದಲ ಬಾರಿ ಮಿನಿ ಇನ್ಸ್ಟಾಕ್ಸ್ ಕ್ಯಾಮೆರಾವನ್ನು ಲಾಂಚ್ ಮಾಡಿದ್ದು, ಅದುವೇ ಕೈಗೆಟುವ ದರದಲ್ಲಿ.

ಕ್ಲಿಕ್ ಮಾಡಿದ ಕ್ಷಣವೇ ಫೋಟೋ ಪ್ರಿಂಟ್ ಮಾಡುವ ಕ್ಯಾಮೆರಾ ಬೆಲೆ ಕೇವಲ ರೂ.5,999

ಓದಿರಿ: 8 ತಿಂಗಳ ನಂತರ ಜಿಯೋ ವಿರುದ್ಧದ ಸಮರದಲ್ಲಿ ಜಯಿಸಿದ ಏರ್ಟೆಲ್..!!!

ಈ ಹಿಂದೆ ಇನ್ಸ್ಟಾಕ್ಸ್ ಕ್ಯಾಮೆರಾಗಳು ಹೆಚ್ಚು ಖ್ಯಾತಿಯನ್ನು ಪಡೆದಿದ್ದವೂ, ಆದರೆ ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ಮೂಲೆ ಗುಂಪಾಗಿತ್ತು. ಆದರೆ ಈಗ ಇನ್ಸ್ಟಾಕ್ಸ್ ಕ್ಯಾಮೆರಾಕ್ಕೆ ಹೊಸ ಸ್ಪರ್ಶ ನೀಡಿದ್ದು, ಪಾಪ್ ಅಪ್ ಕಲರ್ ನಲ್ಲಿ ಬಿಡುಗಡೆ ಮಾಡಿದೆ. ನೀವು ಚಿತ್ರ ತೆಗೆದ ಸ್ಥಳದಲ್ಲೇ ಅಲ್ಲೇ ಪ್ರಿಂಟ್ ಮಾಡಿಕೊಡುವ ಇನ್ಸ್ಟಾಕ್ಸ್ ಮಿನಿ 9 ಕ್ಯಾಮೆರಾವನ್ನು ಲಾಂಚ್ ಮಾಡಿರುವ ಫೂಜಿಫಿಲ್ಮ ರೂ.5,999ಕ್ಕೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಇನ್ಸ್ಟಾಕ್ಸ್ ಮಿನಿ 9 ಎಲ್ಲಿ ಲಭ್ಯ:

ಇನ್ಸ್ಟಾಕ್ಸ್ ಮಿನಿ 9 ಎಲ್ಲಿ ಲಭ್ಯ:

ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಯಲ್ಲಿ ಲಬ್ಯವಿರುವ ಈ ಕ್ಯಾಮೆರಾವೂ ವಿವಿಧ ಬಣ್ಣಗಳಲ್ಲಿ ದೊರೆಯಲಿದೆ. ಅಲ್ಲದೇ ಇದರಲ್ಲಿ ಸೆಲ್ಫಿ ಮಿರರ್ ಸಹ ಲಬ್ಯವಿದ್ದು, ಅಲ್ಲದೇ ಹತ್ತಿರದ ಚಿತ್ರಗಳನ್ನು ತೆಗೆಯಲು ಲೈನ್ಸ್ ಅಟ್ಯಾಚ್ ಮಾಡಿಕೊಳ್ಳುವ ಅವಕಾಶವನ್ನು ಇದು ಮಾಡಿಕೊಟ್ಟಿದೆ.

ಇನ್ಸ್ಟಾಕ್ಸ್ ಮಿನಿ 9 ವಿಶೇಷತೆಗಳು:

ಇನ್ಸ್ಟಾಕ್ಸ್ ಮಿನಿ 9 ವಿಶೇಷತೆಗಳು:

ಇನ್ಸ್ಟಾಕ್ಸ್ ಮಿನಿ 9 ಕ್ಯಾಮೆರಾ 62x46 ಎಂಎಂ ಸೈಜಿನಲ್ಲಿ ಫೋಟೋವನ್ನು ತೆಗೆದ ಕ್ಷಣದಲ್ಲೇ ಪ್ರಿಂಟ್ ಮಾಡಿಕೊಡಲಿದೆ. ಈ ಕ್ಯಾಮೆರಾ ಪೂರ್ಣ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಿಂದ ಮಾಡಲಾಗಿದ್ದು, ಫ್ಲಾಷ್ ಲೈಟ್ ಸಹ ಇದು ಹೊಂದಿದೆ. ಇದು AA ಸೈಜಿನ ಬ್ಯಾಟರಿಯಿಂದ ಇದು ಕಾರ್ಯಾನಿರ್ವಹಿಸಿಲಿದೆ. ಒಂದು ಬ್ಯಾಟರಿಯಲ್ಲಿ 100 ಫೋಟೋಗಳನ್ನು ತೆಗೆಯಬಹುದಾಗಿದೆ.

ಯುವ ಸಮುದಾಯವೇ ಟಾರ್ಗೆಟ್:

ಯುವ ಸಮುದಾಯವೇ ಟಾರ್ಗೆಟ್:

ಈ ಕ್ಯಾಮೆರಾವನ್ನು ಯುವ ಸಮುದಾಯವನ್ನು ಟಾರ್ಗೆಟ್ ಮಾಡಿ ನಿರ್ಮಿಸಲಾಗಿದ್ದು, ಟ್ರಿಪ್ ಹೋಗುವ ಸಂದರ್ಭದಲ್ಲಿ ಡಿಜಿಟಲ್ ಕ್ಯಾಮೆರಾದಲ್ಲಿ ಫೋಟೊ ತೆಗೆದು ಇಟ್ಟುಕೊಳ್ಳುವುದಕ್ಕಿಂತ ಈ ಕ್ಯಾಮೆರಾದಲ್ಲಿ ಪೋಟೋ ತೆಗೆದು ಅಲ್ಲದೇ ನೋಡಿ ನೆನಪಾಗಿ ಇಟ್ಟುಕೊಳ್ಳುವುದು ಹೆಚ್ಚು ಸಂತೋಷವನ್ನು ನೀಡಲಿದೆ. ಇದು ಪ್ರಯಾಣದ ನೆನಪನ್ನು ಸದಾ ಹಸಿರಾಗಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Fujifilm has launched its newest instant camera called the Instax Mini 9 in India, at a price of Rs. 5,999. The camera will go on sale soon via both online and offline channels across the country. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot