ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌

Written By:

ಫೇಸ್‌ಬುಕ್‌ ಅಪ್ಲಿಕೇಶನ್‌ ಬದಲಾಗಿ "ಫೇಸ್‌ಬುಕ್‌ ಲೈಟ್" ಅಪ್ಲಿಕೇಶನ್‌ ಅನ್ನು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗಾಗಿ 2015 ರ ಜೂನ್‌ನಲ್ಲಿ ಅಭಿವೃದ್ದಿ ಪಡಿಸಲಾಗಿತ್ತು. ಅದೇ ಅಪ್ಲಿಕೇಶನ್‌ಗೆ ಈಗ ಹೊಸ ಫೀಚರ್‌ಗಳನ್ನು ಅಭಿವೃದ್ದಿ ಪಡಿಸಿ ಇದೇ ತಿಂಗಳ (ಮಾರ್ಚ್‌ 2016) 6 ರಂದು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಈ ಮಾಹಿತಿ ಎಷ್ಟು ಜನರಿಗೆ ತಿಳಿದಿದೆಯೋ ತಿಳಿದಿಲ್ವೋ ಗೊತ್ತಿಲ್ಲಾ. ಆದ್ರೆ ಈಗ್ಲಾದ್ರು ಎಲ್ಲರೂ ಸಹ ಈ ಆಪ್‌ ಬಗ್ಗೆ ತಿಳಿಯಲೇಬೇಕು. ಯಾಕಂದ್ರೆ ಪ್ರತಿ ತಿಂಗಳು 100 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ತಲುಪುತ್ತಿದೆ. ಇನ್ನೊಂದು ವಿಶೇಷತೆ ಅಂದ್ರೆ "ಫೇಸ್‌ಬುಕ್‌" ಆಪ್‌ಗಿಂತ "ಫೇಸ್‌ಬುಕ್‌ ಲೈಟ್" ಆಪ್‌ ಅತಿ ಕಡಿಮೆ ಡೇಟಾವನ್ನು ಬಳಸಿಕೊಳ್ಳುತ್ತದೆ.

ಅಂದಹಾಗೆ "ಫೇಸ್‌ಬುಕ್‌ ಲೈಟ್" ಆಂಡ್ರಾಯ್ಡ್‌ ಬಳಕೆದಾರರಿಗಾಗಿ ಅಭಿವೃದ್ದಿಪಡಿಸಲಾದ ಫೇಸ್‌ಬುಕ್‌ನ ಹೊಸ ಆಪ್ಲಿಕೇಶನ್‌ ಆಗಿದ್ದು, ಇಂಟರ್ನೆಟ್‌ನ ಸಂಪರ್ಕದ ಯಾವುದೇ ಪರಿಸ್ಥಿತಿಯಲ್ಲು ಸಹ ಅತ್ಯುತ್ತಮವಾಗಿ ಬಳಸಲು ಅನುಕೂಲವಾಗಿರುವ ಆಪ್‌ ಇದಾಗಿದೆ. ಇದರ ಅತ್ಯುತ್ತಮ ವಿಶೇಷತೆಗಳಿಗಾಗಿ ಇಂದಿನ ಲೇಖನದ ಸ್ಲೈಡರ್‌ಗಳನ್ನು ಓದಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಡ್ರಾಯ್ಡ್‌ನ ಎಲ್ಲಾ ಮೊಬೈಲ್‌ಗಳಿಗಾಗಿ ಫೇಸ್‌ಬುಕ್‌ ಲೈಟ್‌

ಆಂಡ್ರಾಯ್ಡ್‌ನ ಎಲ್ಲಾ ಮೊಬೈಲ್‌ಗಳಿಗಾಗಿ ಫೇಸ್‌ಬುಕ್‌ ಲೈಟ್‌

ಫೇಸ್‌ಬುಕ್‌ ಲೈಟ್

ಫೇಸ್‌ಬುಕ್‌ ಲೈಟ್‌ ಆಪ್‌ ಆಂಡ್ರಾಯ್ಡ್‌ ವರ್ಸನ್‌ನ ಎಲ್ಲಾ ಮೊಬೈಲ್‌ಗಳಿಗೆ ಲಭ್ಯವಿದ್ದು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಬಹುದಾಗಿದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ
ಚಿತ್ರ ಕೃಪೆ: androidcentral

ಫೇಸ್‌ಬುಕ್‌ ಲೈಟ್‌ ಆಪ್‌ ಉಪಯೋಗವೇನು?

ಫೇಸ್‌ಬುಕ್‌ ಲೈಟ್‌ ಆಪ್‌ ಉಪಯೋಗವೇನು?

ಫೇಸ್‌ಬುಕ್‌ ಲೈಟ್‌

ಫೇಸ್‌ಬುಕ್‌ ಬಳಕೆದಾರರ ಮೊದಲ ಪ್ರಶ್ನೆ ಅಂದ್ರೆ ಫೇಸ್‌ಬುಕ್‌ ಲೈಟ್‌ ಆಪ್‌ನ ಉಪಯೋಗವೇನು ಎಂಬುದು. 2G ಇಂಟರ್ನೆಟ್‌ ವೇಗವನ್ನು ಬಳಸುವ ಆಂಡ್ರಾಯ್ಡ್ ಬಳಕೆದಾರರು ಈ ಆಪ್‌ ಉಪಯೋಗಿಸುವುದರಿಂದ ಫೇಸ್‌ಬುಕ್‌ ಅನ್ನು ಕಡಿಮೆ ಇಂಟರ್ನೆಟ್‌ ವೇಗದಲ್ಲೂ , ವೇಗವಾಗಿ ಉಪಯೋಗಿಸಬಹುದಾಗಿದೆ. ಅಲ್ಲದೇ ನಿಧಾನವಾದ ಇಂಟರ್ನೆಟ್‌ ಸಂಪರ್ಕದಲ್ಲೂ ಇದನ್ನು ಉತ್ತಮವಾಗಿ ಬಳಸಬಹುದಾಗಿದೆ.
* ಅತಿ ಕಡಿಮೆ ಡೇಟಾವನ್ನು ಬಳಸಿಕೊಳ್ಳುತ್ತದೆ.

 ಫೇಸ್‌ಬುಕ್‌ ಲೈಟ್‌ ವಿಶೇಷತೆ

ಫೇಸ್‌ಬುಕ್‌ ಲೈಟ್‌ ವಿಶೇಷತೆ

ಫೇಸ್‌ಬುಕ್‌ ಲೈಟ್‌

ಫೇಸ್‌ಬುಕ್‌ ಲೈಟ್‌ 50ಕ್ಕೂ ಅಧಿಕ ಭಾಷೆಯಲ್ಲಿ ಸಪೋರ್ಟ್‌ ಆಗುತ್ತದೆ. ಕೇವಲ 1MB ಆಪ್‌ ಗಾತ್ರವಿದ್ದು, 150 ಕ್ಕೂ ಹೆಚ್ಚು ದೇಶಗಳಲ್ಲಿ ಇದನ್ನು ಚಾಲನೆಗೊಳಿಸಿ ಬಳಕೆಗೆ ಅನುವು ಮಾಡಿಕೊಡಲಾಗಿದೆ.

ಫೇಸ್‌ಬುಕ್‌ ಲೈಟ್‌ನಲ್ಲಿನ ಹೊಸ ಫೀಚರ್‌ಗಳೇನು?

ಫೇಸ್‌ಬುಕ್‌ ಲೈಟ್‌ನಲ್ಲಿನ ಹೊಸ ಫೀಚರ್‌ಗಳೇನು?

ಫೇಸ್‌ಬುಕ್‌ ಲೈಟ್‌

* ಉತ್ತಮವಾಗಿ ವೀಡಿಯೋಗೆ ಸಪೋರ್ಟ್‌
* ಹಲವು ಫೋಟಗಳ ಅಪ್‌ಲೋಡ್‌
* ಪಿಂಚ್‌ ಜೂಮ್ ಫೋಟೋ
* ಎಮೋಜಿ

ಇಂಟರ್ನೆಟ್‌ ಸಂಪರ್ಕ ಮಂದಗತಿ

ಇಂಟರ್ನೆಟ್‌ ಸಂಪರ್ಕ ಮಂದಗತಿ

ಫೇಸ್‌ಬುಕ್‌ ಲೈಟ್

ಮಂದಗತಿಯ ಇಂಟರ್ನೆಟ್‌ ಸಂಪರ್ಕದಲ್ಲಿ ಆಂಡ್ರಾಯ್ಡ್‌ ಫೇಸ್‌ಬುಕ್‌ ಆಪ್‌ ಎಲ್ಲಾ ರೀತಿಯ ಫೀಚರ್‌ ಹಾಗೂ ಕಾರ್ಯಗಳನ್ನು ತೋರಿಸಲು ಸಾಧ್ಯವಿಲ್ಲ. ಆದರೆ "ಫೇಸ್‌ಬುಕ್‌ ಲೈಟ್‌" ಆಪ್‌ ಅತಿ ಕಡಿಮೆ ವೇಗದ ಇಂಟರ್ನೆಟ್‌ ಸಂಪರ್ಕದಲ್ಲೂ ಎಲ್ಲಾ ರೀತಿಯ ಸೌಲಭ್ಯ ನೀಡುತ್ತದೆ.
ಆಪ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook Lite is Faster Than Facebook App: Touches 100 Million Monthly Active Users. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot