ಜನಪ್ರಿಯ ಫೇಸ್‌ಬುಕ್ 'ಮೆಸೇಂಜರ್' ಆಪ್‌ನಲ್ಲಿ ಬಂದಿದೆ ಹೊಸ ಅಪ್‌ಡೇಟ್!!

|

ಜನಪ್ರಿಯ ಮೆಸೇಂಜರ್ ಆಪ್‌ನಲ್ಲೂ ಸಹ ಡಾರ್ಕ್ ಮೋಡ್‌ ಅನ್ನು ಪರಿಚಯಿಸುವ ಮೂಲಕ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಸಿಹಿಸುದ್ದಿ ನೀಡಿದೆ. ಎಣಿಸಲು ಸಾಧ್ಯವಾಗದ ಅರ್ಧಚಂದ್ರ ಎಮೋಜಿಗಳ ಜತೆಗೆ ಈಸ್ಟರ್ ಎಗ್ ಆಕ್ಟಿವೇಷನ್ ಮಾಡಿದ ತಿಂಗಳ ಬಳಿಕ ಜಗತ್ತಿನೆಲ್ಲೆಡೆಯ ಬಳಕೆದಾರರು ಮೆಸೆಂಜರ್‌ನಲ್ಲಿ ಡಾರ್ಕ್ ಮೋಡ್‌ ಅನ್ನು ಪರಿಚಯಿಸಲು ಹರ್ಷ ವ್ಯಕ್ತಪಡಿಸುತ್ತೇವೆ ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಫೇಸ್‌ಬುಕ್‌ ಕಂಪನಿ ತಿಳಿಸಿದೆ.

ಫೇಸ್‌ಬುಕ್‌ ಸಂಸ್ಥೆ ತನ್ನ ಮೆಸೆಂಜರ್‌ ಆಪ್‌ ಅನ್ನು ಫೇಸ್‌ಬುಕ್ ಆಪ್‌ನಲ್ಲೇ ವಿಲೀನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಆದರೆ, ಈ ವಿಚಾರದ ಬಗ್ಗೆ ಫೇಸ್‌ಬುಕ್‌ ಯಾವುದೇ ಸ್ಪಷ್ಟನೆ ನೀಡದ ಸಂಸ್ಥೆ, ಅದರ ಬದಲಾಗಿ ವಿಶ್ವದಾದ್ಯಂತ ಏಪ್ರಿಲ್ 16, 2019ರಂದು ಮೆಸೇಂಜರ್ ಆಪ್‌ನಲ್ಲಿ ಸಹ ಡಾರ್ಕ್ ಮೋಡ್‌ ಆಯ್ಕೆ ಪರಿಚಯಗೊಳ್ಳುತ್ತಿದೆ ಎಂಬ ಸುದ್ದಿಯನ್ನು ನೀಡಿದೆ. ಇದು ಮೆಸೇಂಜರ್ ಬಳಕೆದಾರರಿಗೆ ಸಿಹಿಸುದ್ದಿಯಾಗಿದೆ.

ಜನಪ್ರಿಯ ಫೇಸ್‌ಬುಕ್ 'ಮೆಸೇಂಜರ್' ಆಪ್‌ನಲ್ಲಿ ಬಂದಿದೆ ಹೊಸ ಅಪ್‌ಡೇಟ್!!

ಮೆಸೇಂಜರ್ ಆಪ್‌ನಲ್ಲಿನ ಸೆಟ್ಟಿಂಗ್ಸ್‌ನಲ್ಲಿ ಸುಲಭವಾಗಿ ಡಾರ್ಕ್ ಮೋಡ್ ಅನ್ನು ಬಳಕೆದಾರರು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದ್ದು, ಫೇಸ್‌ಬುಕ್‌ ಮೆಸೆಂಜರ್ ಆಪ್‌ ತೆರೆದು ಸೆಟ್ಟಿಂಗ್ಸ್ ಕ್ಲಿಕ್ ಮಾಡಿದ ನಂತರ ಡಾರ್ಕ್ ಮೋಡ್‌ ಸ್ವಿಚ್ ಅನ್ನು ಟಾಗಲ್‌ ಆನ್‌ ಮಾಡಿದರೆ ಮೆಸೇಂಜರ್ ಆಪ್‌ನ ಡಾರ್ಕ್ ಮೋಡ್ ಆಕ್ಟಿವೇಟ್ ಆಗುತ್ತದೆ. ಮೆಸೆಂಜರ್‌ನ ಡಾರ್ಕ್‌ ಮೋಡ್‌ ಕಡಿಮೆ ಹೊಳಪನ್ನು ಒದಗಿಸುತ್ತದೆ ಆದರೆ ಕಾಂಟ್ರಾಸ್ಟ್‌ ಮತ್ತು ವೈಬ್ರೆನ್ಸಿಯನ್ನು ನಿರ್ವಹಿಸುತ್ತದೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.

ಡಾರ್ಕ್‌ಮೋಡ್‌ ಆಯ್ಕೆಯಿಂದ ಕಣ್ಣಿಗೆ ಹಿತಕರ ಎನಿಸುತ್ತದೆ. ಇಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್‌ ಬ್ಯಾಟರಿ ಉಳಿಕೆಗೂ ಉಪಯುಕ್ತವಾಗಿದೆ. ಬ್ರೈಟ್‌ನೆಸ್‌ ಡಿಸ್‌ಪ್ಲೇ ಬಳಸಿಕೊಳ್ಳುವುದಕ್ಕಿಂತ ಕಡಿಮೆ ಬ್ಯಾಟರಿಯನ್ನು ಡಾರ್ಕ್‌ ಮೋಡ್ ಡಿಸ್‌ಪ್ಲೇ ಬಳಸಿಕೊಳ್ಳಲಿದೆ. ಈಗಾಗಲೇ ಫೇಸ್‌ಬುಕ್‌, ಯೂಟ್ಯೂಬ್ ಮತ್ತು ಟ್ವಿಟ್ಟರ್ ತಾಣಗಳು ಡಾರ್ಕ್‌ಮೋಡ್‌ ಆಯ್ಕೆಯನ್ನು ಅಳವಡಿಸಿಕೊಂಡಿವೆ, ಇದೀಗ ಫೇಸ್‌ಬುಕ್‌ ಮೆಸೆಂಜರ್ ಕೂಡ ಈ ಆಯ್ಕೆಯನ್ನು ಪಡೆದುಕೊಂಡಿದೆ.

ಜನಪ್ರಿಯ ಫೇಸ್‌ಬುಕ್ 'ಮೆಸೇಂಜರ್' ಆಪ್‌ನಲ್ಲಿ ಬಂದಿದೆ ಹೊಸ ಅಪ್‌ಡೇಟ್!!

ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಜನಪ್ರಿಯ ಇನ್‌ಸ್ಟಂಟ್ ಮೆಸೇಂಜರ್ ಆಪ್‌ಗಳಲ್ಲಿ ಒಂದಾದ ಫೇಸ್‌ಬುಕ್ 'ಮೆಸೇಂಜರ್ ಆಪ್' ಭಾರತದಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಗುತ್ತಿರುವ ಆಪ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚು ಡೌನ್‌ಲೋಡ್ ಆಗಿರುವ ಫೇಸ್‌ಬುಕ್ ಬಳಕೆ ಹೆಚ್ಚಿರುವುದರಿಂದಲೇ ಈ ಆಪ್‌ ಬಳಕೆ ಹೆಚ್ಚಾಗಿದೆ ಎನ್ನಬಹುದು. ಆದರೂ ಈ ಹೊಸ ಅಪ್‌ಡೇಟ್ ಮೆಸೇಂಜರ್ ಬಳಕೆದಾರರಿಗೆ ಸಿಹಿಸುದ್ದಿಯಾಗಿದೆ ಎಂದು ಹೇಳಬಹುದು.

ಓದಿರಿ: ಭಾರತದಲ್ಲಿ ಈಗ 'ಟಿಕ್‌ ಟಾಕ್' ಬ್ಯಾನ್!..ನೀವು ತಿಳಿಯಬೇಕಾದ ವಿಷಯಗಳು!!

Best Mobiles in India

English summary
Facebook Messenger dark mode has arrived − and it's now much easier to enable. To turn it on in the Messenger app, all you need to do is tap your profile picture to access Settings, and tap the Dark Mode toggle. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X