'ಮೆಸೆಂಜರ್‌ ಆಪ್' ಈ ಹೊಸ ಫೀಚರ್ ಪರಿಚಯಿಸಿದೆ.! ಏನದು ಗೊತ್ತಾ?

|

ವಾಟ್ಸಪ್‌ ನಂತರ ಅತೀ ಹೆಚ್ಚು ಜನಪ್ರಿಯವಾಗಿರುವ ಮೆಸೆಂಜಿಂಗ್ ಆಪ್‌ ಅಂದರೇ ಅದು 'ಫೇಸ್‌ಬುಕ್ ಮೆಸೆಂಜರ್'. ಅಪಾರ ಬಳಕೆದಾರರನ್ನು ಒಳಗೊಂಡಿರುವ ಮೆಸೆಂಜರ್ ಆಪ್, ಹೊಸ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುವುದರ ಮೂಲಕ ಬಳಕೆದಾರರ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಲೇ ಇದೆ. ಈ ಆಪ್ ಇದೀಗ ಮತ್ತೆ ಹೊಸ ಫೀಚರ್ ಒಂದನ್ನು ಸೇರಿಸಿಕೊಂಡಿದೆ.

'ಮೆಸೆಂಜರ್‌ ಆಪ್' ಈ ಹೊಸ ಫೀಚರ್ ಪರಿಚಯಿಸಿದೆ.! ಏನದು ಗೊತ್ತಾ?

ಹೌದು, ಜನಪ್ರಿಯ ಮೆಸೆಂಜರ್ ಆಪ್ 'ಡಾರ್ಕ್ ಮೋಡ್' ಆಯ್ಕೆಯನ್ನು ಪರಿಚಯಿಸಿದ್ದು, ಇದು ರಾತ್ರಿ ವೇಳೆ ಬಳಕೆದಾರರಿಗೆ ಅನುಕೂಲವಾಗಲಿದೆ. ಈಗಾಗಲೇ ಹಲವು ನೂತನ ಆಯ್ಕೆಗಳನ್ನು ಅಳವಡಿಸಿಕೊಂಡಿದ್ದು, ಅವೆಲ್ಲವು ಬಳಕೆದಾರರಿಗೆ ಇಷ್ಟವಾಗಿವೆ. ಅದೇ ರೀತಿ ಈ 'ಡಾರ್ಕ್ ಮೋಡ್' ಆಯ್ಕೆವು ಸಹ ಬಳಕೆದಾರರಿಗೆ ಉಪಯುಕ್ತವಾಗಲಿದೆ ಎಂದು ಹೇಳಲಾಗುತ್ತಿದೆ.

'ಮೆಸೆಂಜರ್‌ ಆಪ್' ಈ ಹೊಸ ಫೀಚರ್ ಪರಿಚಯಿಸಿದೆ.! ಏನದು ಗೊತ್ತಾ?

ಫೇಸ್‌ಬುಕ್ ಮೆಸೆಂಜರ್‌ ಅಪ್‌ಡೇಟ್‌ ವರ್ಷನ್‌ನಲ್ಲಿ ಹೊಸ ಡಾರ್ಕ್ ಮೋಡ್ ಫೀಚರ್ಸ್‌ ಆಯ್ಕೆ ಕಾಣಿಸಲಿದ್ದು, ಇದರ ಇನ್ನೊಂದು ವಿಶೇಷವೆಂದರೇ ಡಾರ್ಕ್ ಮೊಡ್ ಜೊತೆಗೆ ಚಂದಿರನ ಇಮೋಜಿ ಕಳುಹಿಸಬಹುದಾಗಿದೆ. ಆಪ್‌ನಲ್ಲಿ ಮೂನ್ ಇಮೋಜಿ ನಿಮ್ಮ ಗೆಳೆಯರಿಗೆ ಕಳುಹಿಸುವ ಮೂಲಕವೂ ನಿಮ್ಮ ಆಪ್‌ಅನ್ನು ಡಾರ್ಕ್‌ಮೋಡ್ ಆಯ್ಕೆಗೆ ಮೆಸೆಂಜರ್ ಬದಲಾಯಿಸಬಹುದಾಗಿದೆ.

ಕಳೆದ ಸೆಪ್ಟಂಬರ್‌ನಲ್ಲಿ ತಿಂಗಳಲ್ಲಿ 1.3 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದ ಫೇಸ್‌ಬುಕ್ ಮೆಸೆಂಜರ್ ಆಪ್, ಇದೀಗ ಆ ಗಡಿಯನ್ನು ದಾಟಿ ಮುನ್ನುಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಬ್ಬರಿಗೂ ಈ ಹೊಸ ಡಾರ್ಕ್ ಮೋಡ್ ಆಯ್ಕೆಯು ದೊರೆಯಲಿದೆ.

Best Mobiles in India

English summary
Dark mode is one of those functionalities that has been hogging the limelight time and again, but with no real rollout in sight.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X