Just In
Don't Miss
- News
ಕೇಂದ್ರ ಬಜೆಟ್: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಜೆಟ್ ಬಗ್ಗೆ ಭಾರೀ ಮೆಚ್ಚುಗೆ!
- Lifestyle
ಬಜೆಟ್ 2023: ಆರೋಗ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ
- Sports
ಟಿ20 ರ್ಯಾಂಕಿಂಗ್: ಸೂರ್ಯಕುಮಾರ್ ಅಂಕದಲ್ಲಿ ಮತ್ತಷ್ಟು ಏರಿಕೆ
- Movies
'ಕಬ್ಜ', 'ಕೆಜಿಎಫ್' ಅಂಥಹಾ ಸಿನಿಮಾ ಮಾಡಲು ತಾಕತ್ ಇರಬೇಕು: ಆರ್ ಚಂದ್ರು
- Automobiles
ಭಾರತದಿಂದ ಬ್ರಿಟನ್ಗೆ ರಾಯಲ್ ಎನ್ಫೀಲ್ಡ್ ಸೂಪರ್ ಮಿಟಿಯೊರ್ 650 ರಫ್ತು ಪ್ರಾರಂಭ
- Finance
LIC Jeevan Lakshya: LIC ಜೀವನ್ ಲಕ್ಷ್ಯ ಯೋಜನೆ: ಪಾಲಿಸಿ ಪ್ರಯೋಜನವೇನು? ಆರ್ಥಿಕ ರಕ್ಷಣೆ ಹೇಗೆ? ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರೀತಿ ವ್ಯಕ್ತಪಡಿಸಲು ಫೇಸ್‌ಬುಕ್‌ನ ಹೊಸ ಫೀಚರ್ 'ಸಿಕ್ರೇಟ್ ಕ್ರಶ್'!
ಸದಾ ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಳ್ಳುತ್ತ ತನ್ನ ಗ್ರಾಹಕರಿಗೆ ಖುಷಿ ನೀಡುತ್ತಿರುವ ಫೇಸ್‌ಬುಕ್ ಇದೀಗ ಮತ್ತೆ ಅಚ್ಚರಿಯ ಫೀಚರ್ಸ್ ಒಂದನ್ನು ತನ್ನ ಸೇವೆಗಳ ವ್ಯಾಪ್ತಿಗೆ ಸೇರಿಸಲಿದೆ. ವಿಶ್ಬಮಟ್ಟದಲ್ಲಿ ಯುವಸಮೂಹ ಡೇಟಿಂಗ್ ಆಪ್‌ಗಳತ್ತ ಹೆಚ್ಚು ಆಸಕ್ತಿ ಹೊಂದುತ್ತಿದ್ದು, ಈ ದೃಷ್ಠಿಕೋನದಿಂದ ಫೇಸ್‌ಬುಕ್ ಡೇಟಿಂಗ್ ಪ್ರಿಯ ಬಳಕೆದಾರರನ್ನು ಆಕರ್ಷಿಸಲು ಡೇಟಿಂಗ್ ಫೀಚರ್ ಅನ್ನು ಪರಿಚಯಿಸಲು ಸಜ್ಜಾಗಿದೆ.

ಹೌದು, ಫೇಸ್‌ಬುಕ್ 'ಸಿಕ್ರೇಟ್ ಕ್ರಶ್' ಆಯ್ಕೆಯನ್ನು ಪರಿಚಯಿಸಿದ್ದು, ಈ ಆಯ್ಕೆಯ ಮೂಲಕ ಫೇಸ್‌ಬುಕ್ ಬಳಕೆದಾರರು ತಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿರುವ ಬಳಕೆದಾರರಲ್ಲಿ ಯಾರ ಮೇಲಾದರೂ ಕ್ರಶ್ ಆಗಿದ್ದರೇ, ಅದನ್ನು ವ್ಯಕ್ತಪಡಿಸಲು ಫೇಸ್‌ಬುಕ್‌ನ ಈ ಸಿಕ್ರೇಟ್ ಕ್ರಶ್ ಆಯ್ಕೆ ನೆರವಾಗಲಿದೆ. ಅಂದಹಾಗೇ 18ವರ್ಷ ಮೇಲ್ಪಟ್ಟ ಫೇಸ್‌ಬುಕ್ ಬಳಕೆದಾರರು ಮಾತ್ರ ಈ ಡೇಟಿಂಗ್ ಆಯ್ಕೆ ಲಭ್ಯವಾಗಲಿದೆ.

ಫೇಸ್‌ಬುಕ್ ಡೇಟಿಂಗ್ ಅಪ್ಲಿಕೇಶನ್ ದೊರೆಯಲಿದ್ದು, ಈ ಆಪ್ ಈಗಾಗಲೇ ಜನಪ್ರಿಯವಾಗಿರುವ ಡೇಟಿಂಗ್ ಆಪ್‌ಗಳಾದ Hinge ಮತ್ತು Tinder ನಂತೆಯೇ, ಡೇಟಿಂಗ್ ಫೀಚರ್ ಆಯ್ಕೆಗಳನ್ನು ಹೊಂದಿರಲಿದೆ. ಈಗಾಗಲೇ 19 ರಾಷ್ಟ್ರಗಳಲ್ಲಿ ಈ ಆಯ್ಕೆ ಪರಿಚಿತವಾಗಿದೆ. ಹಾಗಾದರೇ ಫೇಸ್‌ಬುಕ್ ಡೇಟಿಂಗ್ ಅಪ್ಲಿಕೇಶನ್ ಹೇಗಿರಲಿದೆ ಮತ್ತು ಈ ಆಪ್‌ನ ವಿಶೇಷ ಸಂಗತಿಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಏನಿದು ಸಿಕ್ರೇಟ್ ಕ್ರಶ್
ಡೇಟಿಂಗ್ ಆಪ್ ಈ ಫೀಚರ್‌ನಲ್ಲಿ ಬಳಕೆದಾರರು ತಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿರುವ ಯಾರ ಮೇಲಾದರೂ ಕ್ರಶ್ ಆಗಿದ್ದರೇ ಅದನ್ನು ವ್ಯಕ್ತಪಡಿಸಲು ಫೇಸ್‌ಬುಕ್ ಈ ಸಿಕ್ರೇಟ್ ಕ್ರಶ್ ಆಯ್ಕೆಯನ್ನು ಪರಿಚಯಿಸಿದೆ. ಹೀಗಾಗಿ ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿ ಇಷ್ಟವಾಗಿರುವ 9 ಜನರಿಗೆ ನಿಮ್ಮ ಕ್ರಶ್ ಇಂಗಿತವನ್ನು ತಿಳಿಸಲು ಈ ಆಯ್ಕೆ ಅವಕಾಶ ಮಾಡಿಕೊಡುತ್ತದೆ.

ಮ್ಯೂಚಲ್ ಕ್ರಶ್
ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿ ನಿಮಗೆ ಇಷ್ಟವಾಗಿರುವ 9 ಜನರಿಗೆ ಕ್ರಶ್ ಇಂಗಿತವನ್ನು ತಿಳಿಸಿದಾಗ ಆ ಒಂಬತ್ತು ಜನರಲ್ಲಿ ಯಾರಾದರೂ ಮರಳಿ ಅವರ ಕ್ರಶ್ ಇಂಗಿತವನ್ನು ತಿಳಿಸಿದರೇ ನಂತರ ಪರಸ್ಪರ ಮ್ಯೂಚಲ್ ಕ್ರಶ್ ಎಂದು ಪರಿಗಣಿಸಿಕೊಳ್ಳಬಹುದು. ನಿಮ್ಮ ಫ್ರೆಂಡ್‌ಲಿಸ್ಟ್‌ನಲ್ಲಿದ್ದವರೂ ಈ ಆಯ್ಕೆಯನ್ನು ಬಳಸದಿದ್ದರೂ ನೀವು ನಿಮ್ಮ ಕ್ರಶ್ ಇಂಗಿತವನ್ನು ತಿಳಿಸಿಬಹುದು.

ವಯಸ್ಕರಿಗೆ ಮಾತ್ರ
ಫೇಸ್‌ಬುಕ್‌ನ ಈ ಸಿಕ್ರೇಟ್ ಕ್ರಶ್ ಫೀಚರ್ ಅನ್ನು ಫೇಸ್‌ಬುಕ್ ಬಳಕೆದಾರರು ಬಳಕೆಮಾಡಬಹುದಾಗಿದ್ದು, ಆದರೆ 18 ವಯಸ್ಸು ಮತ್ತು 18 ವಯಸ್ಸಿಗಿಂತ ಮೇಲ್ಪಟ್ಟ ಬಳಕೆದಾರರು ಆಪ್ ಬಳಸಬಹುದಾಗಿದೆ. ಇದು ಪ್ರೀತಿಯ ವಿಷಯವಾಗಿದ್ದರಿಂದ ಫೇಸ್‌ಬುಕ್ ಈ ಆಪ್‌ನ ಸೇವೆಯನ್ನು ಕೇವಲ ವಯಸ್ಕರಿಗೆ ಮಾತ್ರ ಸೀಮಿತ ಮಾಡಿದೆ.

ಜಾಹಿರಾತು ಮುಕ್ತ
ಬಹುತೇಕ ಡೇಟಿಂಗ್ ಆಪ್‌ಗಳು ಜಾಹಿರಾತುಗಳು ಹೆಚ್ಚಾಗಿ ಕಂಡುಬರುತ್ತವೆ ಆದರೆ ಫೇಸ್‌ಬುಕ್‌ನ ಸಿಕ್ರೇಟ್ ಕ್ರಶ್ ಡೇಟಿಂಗ್ ಆಪ್ ಸಂಪೂರ್ಣ ಜಾಹಿರಾತು ಮುಕ್ತವಾಗಿದ್ದು, ಯಾವುದೇ ಪೇಯ್ಡ್ ಫೀಚರ್ಸ್‌ಗಳು ಸಹ ಇರುವುದಿಲ್ಲ ಎನ್ನಲಾಗಿದೆ.

19 ರಾಷ್ಟ್ರಗಳಲ್ಲಿ ಲಭ್ಯ
ಫೇಸ್‌ಬುಕ್‌ನ ಈ ಹೊಸ ಡೇಟಿಂಗ್ ಆಪ್ ಪ್ರಸ್ತುತ ಬ್ರೇಜಿಲ್, ಮೆಕ್ಸಿಕೊ, ಕೆನಡಾ, ಕೊಲಂಬಿಯಾ, ಥೈಲ್ಯಾಂಡ್, ಸಿಂಗಪೂರ್, ಮಲೇಷ್ಯಾ, ಮತ್ತು ಫಿಲಿಫೈನ್ಸ್ ರಾಷ್ಟ್ರಗಳನ್ನು ಒಳಗೊಂಡಂತೆ ಸುಮಾರು 19 ರಾಷ್ಟ್ರಗಳಲ್ಲಿನ ಬಳಕೆದಾರರಿಗೆ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ರಾಷ್ಟ್ರಗಳಿಗೂ ವಿಸ್ತರಿಸಲಿದೆ ಎನ್ನಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470