ಎಚ್ಚರ.. ಎಚ್ಚರ..! ನಕಲಿ ಪಾಸ್‌ಪೋರ್ಟ್‌ ಆಪ್‌ಗಳಿವೆ ಎಚ್ಚರ..!

By Gizbot Bureau
|

ಕೇಂದ್ರ ಸರ್ಕಾರ ಇತ್ತೀಚೆಗೆ ಪಾಸ್‌ಪೋರ್ಟ್ ಸೇವಾ ಆಪ್‌ ಬಿಡುಗಡೆ ಮಾಡಿದ್ದು, ಈ ಆಪ್‌ ಆಂಡ್ರಾಯ್ಡ್ ಮತ್ತು ಐಒಎಸ್ ಸಿಸ್ಟಮ್‌ನಲ್ಲಿ ಲಭ್ಯವಿದೆ. ಆರನೇ ಪಾಸ್‌ಪೋರ್ಟ್‌ ಸೇವಾ ದಿವಸ್ ಅಂಗವಾಗಿ ಪಾಸ್‌ಪೋರ್ಟ್ ಸೇವಾ ಆಪ್‌ನ ಮೂಲಕ ಹೊಸ ರೀತಿಯ ಸೇವೆಯನ್ನು ವಿಸ್ತರಿಸಲಾಯಿತು. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಈಗ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ (ಆರ್‌ಪಿಒ) ಮತ್ತು ಪಾಸ್‌ಪೋರ್ಟ್‌ ಸೇವಾ ಕೇಂದ್ರ (ಪಿಎಸ್‌ಕೆ) ಅಥವಾ ಪೋಸ್ಟ್ ಆಫೀಸ್ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಆಯ್ದುಕೊಳ್ಳಬಹುದು.

ಎಚ್ಚರ.. ಎಚ್ಚರ..! ನಕಲಿ ಪಾಸ್‌ಪೋರ್ಟ್‌ ಆಪ್‌ಗಳಿವೆ ಎಚ್ಚರ..!

mPassport Seva App ಆಪ್‌ ಲಾಂಚಿಂಗ್‌ನಿಂದ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳ ಅವಶ್ಯಕತೆಯಿರುವುದಿಲ್ಲ. ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ ಎಂದು ಈ ಹಿಂದೆ ಕೇಂದ್ರದಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಹೇಳಿದ್ದರು. ದೇಶದಲ್ಲಿ ಕಳೆದ 48 ವರ್ಷಗಳಲ್ಲಿ ಕೇವಲ 77 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಇದ್ದವು. ಆದರೆ, ಕೇವಲ 48 ತಿಂಗಳಲ್ಲಿ 231 ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಸೇರ್ಪಡೆಗೊಂಡಿವೆ ಎಂದು ಸ್ವರಾಜ್‌ ಹೇಳಿದ್ದರು. ಇಷ್ಟೆಲ್ಲಾ ವಿಶೇಷತೆ ಇರೋ ಆಪ್‌ ಜನರಿಗೆ ಬಹಳಷ್ಟು ಸಹಾಯಕವಾಗಿದೆ. ಆದರೆ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ mPassport Seva Appನಂತೆಯೇ ನಕಲಿ ಆಪ್‌ಗಳು ಕಾಣಿಸಿಕೊಂಡಿದ್ದು, ಆ ಆಪ್‌ಗಳ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕಾಗಿರುವುದು ಅವಶ್ಯಕ. ಅಂತಹ ನಕಲಿ ಆಪ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ ನೋಡಿ.

ಆನ್‌ಲೈನ್ ಪಾಸ್‌ಪೋರ್ಟ್ ಸರ್ವಿಸ್‌ ಅಥವಾ ಸೇವಾ

ಆನ್‌ಲೈನ್ ಪಾಸ್‌ಪೋರ್ಟ್ ಸರ್ವಿಸ್‌ ಅಥವಾ ಸೇವಾ

ಈ ಆಪ್‌ನ್ನು ನೋಡಿದ ತಕ್ಷಣ ಇದು ನಿಜವಾದ ಆಪ್‌ ಎಂದೇನಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ನೀವು ಎಚ್ಚರಿಕೆಯಿಂದ ಪರಿಶೀಲಿಸಿದಾಗ ಮಾತ್ರ ಇದೊಂದು ನಕಲಿ ಆಪ್ ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಇದು ಅಧಿಕೃತ ಆಪ್ ಅಲ್ಲವಾದರೂ, ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಸಲು ನಾಗರಿಕರಿಗೆ ಸಹಾಯ ಮಾಡಲು ಆಪ್‌ನ್ನು ವಿನ್ಯಾಸಗೊಳಿಸಲಾಗಿದೆ.

Aadhaar PAN PNR Passport Seva

Aadhaar PAN PNR Passport Seva

ಈ ಆಪ್‌ನ್ನು 7 ವ್ಯಾಲಿ ಕಂಪನಿ ಅಭಿವೃದ್ಧಿಪಡಿಸಿದ್ದು, ಆಧಾರ್ ದಾಖಲಾತಿ, ಪ್ಯಾನ್ ಕಾರ್ಡ್ ಅರ್ಜಿ ಹಾಗೂ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಸಹಾಯ ಮಾಡುವುದಾಗಿ ಆಪ್‌ನ ವಿವರಣೆಯಲ್ಲಿ ಹೇಳಿಕೊಂಡಿದೆ. ಆದರೆ, ಇದು ಸರ್ಕಾರದ ಅಧಿಕೃತ ಆಪ್‌ ಅಲ್ಲ.

ಪಾಸ್‌ಪೋರ್ಟ್ ಸೇವಾ ಆನ್‌ಲೈನ್

ಪಾಸ್‌ಪೋರ್ಟ್ ಸೇವಾ ಆನ್‌ಲೈನ್

ಕ್ವಾಂಟಮ್ ಸೊಲ್ಯೂಸ್ ಅಭಿವೃದ್ಧಿಪಡಿಸಿದ ಆಪ್‌ ಇದಾಗಿದ್ದು, ವಿನ್ಯಾಸದಲ್ಲಿ ಅಧಿಕೃತ ಆಪ್‌ ತರಹವೇ ಕಾಣುತ್ತದೆ. ಆದರೆ, ಈ ಆಪ್‌ ನೈಜವಾದುದಲ್ಲ. ಇದಲ್ಲದೆ, ಬಳಕೆದಾರರ ಡೇಟಾದ ಸುರಕ್ಷತೆಯ ಕುರಿತು ಈ ಆಪ್ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ.

Passport service E-Seva

Passport service E-Seva

ಈ ಆಪ್‌ನ್ನು ಗ್ಯಾಲಕ್ಸಿ ಕಂಪನಿ ವಿನ್ಯಾಸಗೊಳಿಸಿದೆ. ಆದರೆ, ಈ ಆಪ್‌ ವೈರಸ್‌ಗೆ ತುತ್ತಾಗಿದೆ.

Passport Seva Check

Passport Seva Check

ಪಾಸ್‌ಪೋರ್ಟ್ ಸೇವಾ ಆಪ್ ಆಧಾರದ ಮೇಲೆ, ಪಾಸ್‌ಪೋರ್ಟ್‌ ಅರ್ಜಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಆಪ್ ಸಹಾಯ ಮಾಡುತ್ತದೆ. ಆದರೆ, ಈ ಆಪ್‌ ಬಳಸುವುದು ಕೂಡ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ.

Best Mobiles in India

Read more about:
English summary
5 Fake Passport Seva Apps That you Should Aware Of

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X