ಶಾಕಿಂಗ್ ನ್ಯೂಸ್!..ಒಂದು ಕೋಟಿ ಡೌನ್‌ಲೋಡ್ ಆಗಿರುವ ಈ ಜನಪ್ರಿಯ ಆಪ್ ನಕಲಿ!

|

ನಕಲಿ ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಅಧಿಕೃತ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಯದ ಕೋಟಿಗೂ ಹೆಚ್ಚು ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಬಳಕೆದಾರರ ಕಳ್ಳ ಆಪ್ ಒಂದನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ ಎಂದು ಎಚ್ಚರಿಕೆ ನೀಡಲಾಗಿದೆ. ಸ್ಮಾರ್ಟ್‌ಫೋನ್ ಬಳಕೆದಾರರ ಡೇಟಾ ಕಳ್ಳತನ ಮಾಡುವ ಹಲವಾರು ನಕಲಿ ಆಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿವೆ. ಇಂತಹುದೇ 'Updates for Samsung' ಎಂಬ ಕಳ್ಳ ಆಪ್ ಒಂದನ್ನು ಒಂದು ಕೋಟಿಗೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಎಚ್ಚರಿಸಿದೆ.

ಶಾಕಿಂಗ್ ನ್ಯೂಸ್!..ಒಂದು ಕೋಟಿ ಡೌನ್‌ಲೋಡ್ ಆಗಿರುವ ಈ ಜನಪ್ರಿಯ ಆಪ್ ನಕಲಿ!

ಹೌದು, ನವೀಕರಣಗಳಿಗೆ ಭರವಸೆ ನೀಡುವ ಈ ನಕಲಿ ಸ್ಯಾಮ್‌ಸಂಗ್ ಆಪ್ ಬಳಕೆದಾರಗೆ ಸುಲಭವಾಗಿ ಮೋಸ ಮಾಡುತ್ತಿದೆ. ವಾಸ್ತವದಲ್ಲಿ ಈ ಆಪ್ ಬಳಕೆದಾರರನ್ನು ಜಾಹೀರಾತು ತುಂಬಿದ ವೆಬ್‌ಸೈಟ್‌ಗೆ ಮರುನಿರ್ದೇಶಿಸುತ್ತದೆ ಮತ್ತು ಫರ್ಮ್‌ವೇರ್ ಡೌನ್‌ಲೋಡ್‌ಗಳಿಗೆ ಶುಲ್ಕಗಳನ್ನು ಕೇಳುತ್ತಿದೆ. ನಾನು ಗೂಗಲ್ ಪ್ಲೇ ಸ್ಟೋರ್ ಅನ್ನು ಸಂಪರ್ಕಿಸಿದ್ದೇನೆ ಮತ್ತು ಈ ಅಪ್ಲಿಕೇಶನ್ ಅನ್ನು ತೆಗೆದುಹಾಕುವ ಬಗ್ಗೆ ಯೋಚಿಸುವಂತೆ ಕೇಳಿಕೊಂಡಿದ್ದೇನೆ" ಎಂದು ಸಿಎಸ್ಐಎಸ್ ಸೆಕ್ಯುರಿಟಿ ಗ್ರೂಪ್ನ ಮಾಲ್ವೇರ್ ವಿಶ್ಲೇಷಕ ಅಲೆಕ್ಸೆಜ್ ಕುಪ್ರಿನ್ಸ್ ಅವರು ಹೇಳಿದ್ದಾರೆ.

ಶಾಕಿಂಗ್ ನ್ಯೂಸ್!..ಒಂದು ಕೋಟಿ ಡೌನ್‌ಲೋಡ್ ಆಗಿರುವ ಈ ಜನಪ್ರಿಯ ಆಪ್ ನಕಲಿ!

ಸ್ಯಾಮ್‌ಸಂಗ್ ಫೋನ್‌ಗಳಿಗಾಗಿ ಫರ್ಮ್‌ವೇರ್ ಮತ್ತು ಆಪರೇಟಿಂಗ್ ಸಿಸ್ಟಮ್ ನವೀಕರಣಗಳನ್ನು ಪಡೆಯುವಲ್ಲಿನ ತೊಂದರೆಯಿಂದ ಈ ಅಪ್ಲಿಕೇಶನ್ ಲಾಭ ಪಡೆಯುತ್ತದೆ. ಇದರಿಂದ ಹೆಚ್ಚಿನ ಸಂಖ್ಯೆಯ ಬಳಕೆದಾರರು ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಈ ಫೇಕ್ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿದ್ದರೆ, ಈ ಕೂಡಲೇ ಎಚ್ಚೆತ್ತುಕೊಂಡು ಈ ಆಪ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವುದು ಸೂಕ್ತ. ಹೀಗೆ ಆಪ್ ಡಿಲೀಟ್ ಆದ ಬಳಿಕ ನಿಮ್ಮ ಸ್ಮಾರ್ಟ್‌ಫೋನಿ ಆಪರೇಟಿಂಗ್ ಸಿಸ್ಟಂ ಅಪ್‌ಡೇಟ್ ಮಾಡಲು ತಜ್ಞರು ಎಚ್ಚರಿಸಿದ್ದಾರೆ.

ಶಾಕಿಂಗ್ ನ್ಯೂಸ್!..ಒಂದು ಕೋಟಿ ಡೌನ್‌ಲೋಡ್ ಆಗಿರುವ ಈ ಜನಪ್ರಿಯ ಆಪ್ ನಕಲಿ!

ಈ ಫೇಕ್ ಆಪ್ ಬಳಕೆದಾರರಿಗೆ ಜಾಹೀರಾತುಗಳನ್ನು ತೋರಿಸುವುದಲ್ಲದೇ, ಬಳಕೆದಾರರಿಗೆ 34.99 ಡಾಲರ್ (ಸುಮಾರು 2,500 ರೂಪಾಯಿ)ಮೌಲ್ಯದ ಫರ್ಮ್ ವೇರ್ ಡೌನ್‌ಲೋಡ್ ಮಾಡಲು ಸೂಚಿಸುತ್ತದೆ ಎಂದು ಈ ವರದಿಯಲ್ಲಿ ತಿಳಿಸಲಾಗಿದೆ. ಇದಕ್ಕಾಗಿ ಪೇಮೆಂಟ್ ಆಯ್ಕೆಯಲ್ಲಿ ಗೂಗಲ್ ಪ್ಲೇ ಸಬ್ಕ್ರಿಕ್ಷನ್ ಬಿಲ್ಲಿಂಗ್ ಮಾಡುವ ಬದಲು ಕ್ರೆಡಿಟ್ ಕಾರ್ಡ್ ವಿವರ ನೀಡುವಂತೆ ಕೇಳುತ್ತದೆ. ಇಷ್ಟೇ ಅಲ್ಲದೇ, ಗ್ರಾಹಕರಿಗೆ 19.99 ಡಾಲರ್( ಸುಮಾರು 1400 ರೂ)ಗೆ ಯಾವುದೇ ಸಿಮ್ ಅನ್‌ಲಾಕ್ ಮಾಡುವ ಭರವಸೆಯನ್ನು ಈ ಆಪ್ ನೀಡುತ್ತಿದೆ.

ಒಂದು ವೇಳೆ ಆಂಡ್ರಾಯ್ಡ್ ಯುದ್ಧದಲ್ಲಿ ಮೈಕ್ರೋಸಾಫ್ಟ್ ಗೆದ್ದಿದ್ದರೆ?..ನಮ್ಮ ಕಥೆ ಕ್ಲೋಸ್!ಒಂದು ವೇಳೆ ಆಂಡ್ರಾಯ್ಡ್ ಯುದ್ಧದಲ್ಲಿ ಮೈಕ್ರೋಸಾಫ್ಟ್ ಗೆದ್ದಿದ್ದರೆ?..ನಮ್ಮ ಕಥೆ ಕ್ಲೋಸ್!

ಸ್ಯಾಮ್‌ಸಂಗ್‌ಗೆ ಯಾವುದೇ ಸಂಬಂಧವಿಲ್ಲದ ಅಪ್ಲಿಕೇಶನ್, ವೆಬ್‌ವೀಕ್ಷಣೆ (ಆಂಡ್ರಾಯ್ಡ್ ಬ್ರೌಸರ್) ಘಟಕದಲ್ಲಿ ಅಪ್‌ಡೇಟೊ ಕಾಮ್ ಡೊಮೇನ್ ಅನ್ನು ಮಾತ್ರ ಲೋಡ್ ಮಾಡುತ್ತದೆ. ಸೈಟ್ ಉಚಿತ ಮತ್ತು ಪಾವತಿಸಿದಸ್ಯಾಮ್‌ಸಂಗ್ ಫರ್ಮ್‌ವೇರ್ ನವೀಕರಣಗಳನ್ನು ನೀಡುತ್ತದೆ, ಆದರೆ. ಅಪ್ಲಿಕೇಶನ್‌ನ ಮೂಲ ಕೋಡ್ ಅನ್ನು ಅಗೆದ ನಂತರ ವೆಬ್‌ಸೈಟ್‌ನಲ್ಲಿ ಸಿಗುವ ಉಚಿತ ಡೌನ್‌ಲೋಡ್‌ಗಳ ವೇಗವನ್ನು ಸೀಮಿತಗೊಳಿಸುತ್ತದೆ ಮತ್ತು ಫರ್ಮ್‌ವೇರ್ ಡೌನ್‌ಲೋಡ್‌ಗಳ ಸಮಯ ಮೀರಿದೆ ಎಂದು ತಿಳಿಸುತ್ತದೆ ಎಂದು ಕುಪ್ರಿನ್ಸ್ ಹೇಳಿದ್ದಾರೆ.

Best Mobiles in India

English summary
Fake Samsung firmware update app tricks more than 10 million Android users. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X